ಭಾರತೀಯ ರೈಲ್ವೆಗೆ ಹೊಸ ಗರಿಮೆ; ಸಮಯಪಾಲನೆಯಲ್ಲಿ ಪರ್ಫೆಕ್ಟ್ ಸಾಧನೆ

ಸಾಮಾನ್ಯ ದಿನಗಳಲ್ಲಿ ಭಾರತದಾದ್ಯಂತ 13 ಸಾವಿರ ರೈಲುಗಳು ಸಂಚರಿಸುತ್ತವೆ. ಆದರೆ, ಈಗ ಕೊರೋನಾ ಸಂಕಷ್ಟದಲ್ಲಿ 230 ರೈಲುಗಳ ಓಡಾಟ ಮಾತ್ರ ಇದೆ. ಈ 230 ರೈಲುಗಳಿಂದ ಇವತ್ತು ಪರ್ಫೆಕ್ಟ್ ಸಮಯಪಾಲನೆ ಆಗಿದೆ.

news18-kannada
Updated:July 2, 2020, 5:11 PM IST
ಭಾರತೀಯ ರೈಲ್ವೆಗೆ ಹೊಸ ಗರಿಮೆ; ಸಮಯಪಾಲನೆಯಲ್ಲಿ ಪರ್ಫೆಕ್ಟ್ ಸಾಧನೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ 02): ಭಾರತೀಯ ರೈಲ್ವೆ ತನ್ನ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದೆ. ಇದೇ  ಮೊದಲ ಬಾರಿಗೆ ಭಾರತೀಯ ರೈಲ್ವೆ ನೂರು ಪ್ತತಿಶತದಷ್ಟು ಸಮಯಪಾಲನೆ ಮಾಡಿದೆ. ಇವತ್ತು ಕಾರ್ಯ ನಿರ್ವಹಿಸಿದ ಎಲ್ಲಾ ರೈಲುಗಳು ಸರಿಯಾದ ಸಮಯಕ್ಕೆ ಹೊರಟು ತಮ್ಮ ಗಮ್ಯ ಸ್ಥಾನ ತಲುಪಿವೆಯಂತೆ. ಇಷ್ಟು ನಿಖರ ಸಮಯಪಾಲನೆಯ ಸಾಧನೆ ಇದೇ ಮೊದಲೆನ್ನಲಾಗಿದೆ. ಜೂನ್ 23ರಂದು ಶೇ. 99.54ರಷ್ಟು ಸಮಯಪಾಲನೆ ಆಗಿದ್ದು ಈವರೆಗಿನ ಸಾಧನೆ. ಕಳೆದ ತಿಂಗಳ ಆ ದಿನದಂದು ಒಂದೇ ಒಂದು ರೈಲು ತುಸು ವಿಳಂಬಗೊಂಡಿತ್ತು.

ಲಾಕ್​ಡೌನ್​ಗೆ ಮುನ್ನ ದೇಶಾದ್ಯಂತ 13,000 ರೈಲುಗಳು ಸಂಚಾರ ಮಾಡುತ್ತಿದ್ದವು. ಆದರೆ ಲಾಕ್​ಡೌನ್ ಆದ ಬಳಿಕ ಜೂನ್ ತಿಂಗಳಿಂದ 230 ರೈಲುಗಳನ್ನ ಮಾತ್ರ ಓಡಿಸಲಾಗುತ್ತಿದೆ. ಇಷ್ಟು ಕಡಿಮೆ ರೈಲುಗಳ ಸಂಚಾರವಾಗುತ್ತಿರುವುದರಿಂದ ಹಂಡ್ರೆಡ್ ಪರ್ಸೆಂಟ್ ಪಂಕ್ಚುವಾಲಿಟಿ ಇರಬೇಕೆಂದು ರೈಲ್ವೆ ಇಲಾಖೆ ಸೂಚನೆ ನೀಡಿತ್ತು. ಅದರಂತೆ ಇವತ್ತು ಆ ಸಾಧನೆ ಕೂಡ ಆಗಿಹೋಗಿದೆ.

ಇದೇ ವೇಳೆ, ಭಾರತೀಯ ರೈಲ್ವೆಯನ್ನ ಖಾಸಗಿಕರಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡುತ್ತಿದೆ. 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ರೈಲುಗಳ ನಿರ್ವಹಣೆಗೆ ಖಾಸಗಿ ಸಂಸ್ಥೆಗಳನ್ನ ಸರ್ಕಾರ ಆಹ್ವಾನಿಸಿದೆ. ಈ ಹೆಜ್ಜೆಯಿಂದ ಭಾರತೀಯ ರೈಲ್ವೆ ಕ್ಷೇತ್ರಕ್ಕೆ ಖಾಸಗಿ ವಲಯದಿಂದ 30 ಸಾವಿರ ಕೋಟಿ ಬಂಡವಾಳ ಹರಿದುಬರಲಿದೆ.

ಇದನ್ನೂ ಓದಿ: ಖಾಸಗೀಕರಣದತ್ತ ಭಾರತೀಯ ರೈಲ್ವೆ; ಖಾಸಗಿ ಹೂಡಿಕೆಗೆ ಕೇಂದ್ರ ಸರ್ಕಾರದಿಂದ ಮುಕ್ತ ಆಹ್ವಾನ

ರೈಲುಗಳನ್ನ ನಿರ್ವಹಿಸುವ ಖಾಸಗಿ ಕಂಪನಿಗಳು ರೈಲ್ವೆ ಇಲಾಖೆಗೆ ವಾಣಿಜ್ಯ ಸಾಗಣೆ ವೆಚ್ಚ, ಇಂಧನ ಶುಲ್ಕ ಹಾಗೂ ಒಟ್ಟಾರೆ ಆದಾಯದಲ್ಲಿ ನಿರ್ದಿಷ್ಟ ಪಾಲನ್ನು ನೀಡಬೇಕಾಗುತ್ತದೆ. ಇದರ ಬಿಡ್ಡಿಂಗ್ ಪ್ರಕ್ರಿಯೆ ಸದ್ಯದಲ್ಲೇ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ.
First published: July 2, 2020, 5:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading