ಶ್ರಮಿಕ್ ರೈಲಿನಲ್ಲಿನ್ನು 1,700 ಪ್ರಯಾಣಿಕರು, 3 ಕಡೆ ಸ್ಟಾಪ್; ಕಾರ್ಮಿಕರಿಗೆ ಅನುಕೂಲ ಕಲ್ಪಿಸಿದ ರೈಲ್ವೆ ಇಲಾಖೆ

Shramik Trains: ವಿಶೇಷ ಶ್ರಮಿಕ್ ರೈಲುಗಳಲ್ಲಿ 24 ಕೋಚ್​ಗಳಿರುತ್ತವೆ. ಒಂದೊಂದು ಕೋಚ್​ನಲ್ಲಿ 72 ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ಈ ಮೊದಲು ಶ್ರಮಿಕ್  ರೈಲುಗಳ ಒಂದು ಕೋಚ್​ನಲ್ಲಿ 54 ಜನರು ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ (ಮೇ 11): ದೇಶದ ನಾನಾ ಭಾಗಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಅವರವರ ಊರು ಸೇರಿಸುತ್ತಿರುವ ವಿಶೇಷ ಶ್ರಮಿಕ್ ರೈಲಿನ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ರೈಲುಗಳಲ್ಲಿ ಮೊದಲು 1,200 ಪ್ರಯಾಣಿಕರನ್ನು ಕರೆದುಕೊಂಡು ಹೋಗಲು ಅನುಮತಿ ನೀಡಲಾಗಿತ್ತು. ಈಗ ಆ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದು, ಒಂದು ರೈಲಿನಲ್ಲಿ 1,700 ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ರೈಲ್ವೆ ಇಲಾಖೆ, ಎಲ್ಲ ರೈಲ್ವೆ ಜೋನ್​ಗಳು ತಮ್ಮ ವ್ಯಾಪ್ತಿಯ ರೈಲುಗಳಲ್ಲಿ ಕೊನೆಯ ಸ್ಟಾಪ್ ಹೊರತುಪಡಿಸಿ 3 ಸ್ಟಾಪ್​ಗಳನ್ನು ನೀಡಬೇಕು ಎಂದು ಸೂಚಿಸಿದೆ. ಈ ವಿಶೇಷ ಶ್ರಮಿಕ್ ರೈಲುಗಳಲ್ಲಿ 24 ಕೋಚ್​ಗಳಿರುತ್ತವೆ. ಒಂದೊಂದು ಕೋಚ್​ನಲ್ಲಿ 72 ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು.

ಈ ಮೊದಲು ಶ್ರಮಿಕ್  ರೈಲುಗಳ ಒಂದು ಕೋಚ್​ನಲ್ಲಿ 54 ಜನರು ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗಿತ್ತು. ಆದರೆ, ಇನ್ನುಮುಂದೆ ಒಂದೊಂದು ಬೋಗಿಯಲ್ಲಿ 72 ಪ್ರಯಾಣಿಕರಿಗೆ ಅವಕಾಶ ನೀಡಲಾಗುವುದು. ಹಾಗೇ ಒಂದೊಂದು ರೈಲಿನಲ್ಲಿ ಹೆಚ್ಚುವರಿಯಾಗಿ 500 ವಲಸೆ ಕಾರ್ಮಿಕರನ್ನು ಕರೆದುಕೊಂಡು ಹೋಗಲು ಕೂಡ ಅನುಮತಿ ನೀಡಲಾಗಿದೆ.ಇದನ್ನೂ ಓದಿ: Indian Railways: ಇಂದಿನಿಂದ 15 ಪ್ಯಾಸೆಂಜರ್‌ ರೈಲಿನ ಬುಕ್ಕಿಂಗ್ ಆರಂಭ; ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಪ್ರಮುಖ ಅಂಶಗಳು

ಮೇ 1ರಿಂದ ಭಾರತೀಯ ರೈಲ್ವೆ ಇಲಾಖೆ ಒಟ್ಟಾರೆ 5 ಲಕ್ಷ ಪ್ರಯಾಣಿಕರನ್ನು ಕರೆದೊಯ್ದಿದೆ. ರೈಲ್ವೆ ಇಲಾಖೆ ಒಂದು ದಿನಕ್ಕೆ 300 ರೈಲುಗಳು ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ. ರೈಲುಗಳ ಸಂಖ್ಯೆಯನ್ನು ಇನ್ನೂ ಹೆಚ್ಚಿಸಬೇಕೆಂಬ ಗುರಿಯಿದೆ. ಮುಂದಿನ ಕೆಲವು ದಿನಗಳೊಳಗೆ ಎಷ್ಟು ಸಾಧ್ಯವೋ ಅಷ್ಟು ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡುತ್ತಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರಗಳ ಅನುಮತಿಯನ್ನೂ ಕೋರಿದ್ದೇವೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮುಂಬೈ ದಾಳಿ ರೀತಿಯಲ್ಲೇ ಭಾರತದಲ್ಲಿ ಮತ್ತೊಂದು ಕೃತ್ಯಕ್ಕೆ ಪಾಕ್​ ಸಂಚು; ದಾವೂದ್​ ಇಬ್ರಾಹಿಂ ಜೊತೆ ಕೈಜೋಡಿಸಿತಾ ಎಲ್​ಇಟಿ?

ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಆಯಾ ರಾಜ್ಯಗಳಿಗೆ ತಲುಪಿಸಲು ವಿಶೇಷ ಶ್ರಮಿಕ್ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ. ಭಾನುವಾರ ಕರ್ನಾಟಕದಿಂದ ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಮುಂತಾದ ರಾಜ್ಯಗಳಿಗೆ ಕಾರ್ಮಿಕರು ಪ್ರಯಾಣ ಮಾಡಿದ್ದಾರೆ. ತಮ್ಮ ಊರುಗಳಿಗೆ ಹೋಗಲು ಇಚ್ಛಿಸುವ ಕಾರ್ಮಿಕರು ಸೇವಾ ಸಿಂಧು ಪೋರ್ಟಲ್​ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆ ಕಾರ್ಮಿಕರ ರಾಜ್ಯಗಳಿಂದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುತ್ತದೆ. ಈ ಶ್ರಮಿಕ್ ರೈಲುಗಳಲ್ಲಿ ಪ್ರಯಾಣಿಸುವ ಕಾರ್ಮಿಕರಿಗೆ ಟಿಕೆಟ್ ದರ ಇರುವುದಿಲ್ಲ.
First published: