• Home
  • »
  • News
  • »
  • national-international
  • »
  • Ramayan Express: ಸ್ವಾಮೀಜಿಗಳ ಒತ್ತಡಕ್ಕೆ ಮಣಿದು ಡ್ರೆಸ್ ಕೋಡ್ ಬದಲಿಸಿದ ಭಾರತೀಯ ರೈಲ್ವೆ

Ramayan Express: ಸ್ವಾಮೀಜಿಗಳ ಒತ್ತಡಕ್ಕೆ ಮಣಿದು ಡ್ರೆಸ್ ಕೋಡ್ ಬದಲಿಸಿದ ಭಾರತೀಯ ರೈಲ್ವೆ

ಡ್ರೆಸ್ ಕೊಡ್

ಡ್ರೆಸ್ ಕೊಡ್

ಸ್ವಾಮೀಜಿಗಳ ಒತ್ತಡಕ್ಕೆ ಮಣಿದು ಮಾಣಿಗಳ ಸಮವಸ್ತ್ರ (Dress code) ಬದಲಾಯಿಸಿದೆ ಭಾರತೀಯ ರೈಲ್ವೆ. ಭಾರತೀಯ ರೈಲ್ವೆಯು ತನ್ನ ಸಿಬ್ಬಂದಿಯ ಸಮವಸ್ತ್ರವನ್ನು ಸಾಮಾನ್ಯ ಶರ್ಟ್ ಮತ್ತು ಪ್ಯಾಂಟ್ ಹಾಗೂ ಸಾಂಪ್ರದಾಯಿಕ ಶಿರಸ್ತ್ರಾಣಕ್ಕೆ ಬದಲಾಯಿಸಿದೆ.

  • Share this:

ಭಾರತೀಯ ರೈಲ್ವೆ ತನ್ನ ರಾಮಾಯಣ ಎಕ್ಸ್‌ಪ್ರೆಸ್ ರೈಲಿನಲ್ಲಿ (Ramayan Express) ಹೊಸ ಪ್ರಯೋಗ ಮಾಡಲು ಮುಂದಾಗಿತ್ತು. ಇದರ ಅನುಸಾರವಾಗಿ ಇಲ್ಲಿ ಅಡಿಗೆ ಬಡಿಸುವ ಮಾಣಿಗಳು ನಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ (Tradition Dress) ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ರಾಮಾಯಣ ಎಕ್ಸ್‌ಪ್ರೆಸ್‌ ಮಾಣಿಗಳ ಹೊಸ ಅವತಾರಗಳ ಬಗ್ಗೆ ಕೆಲವು ಸ್ವಾಮೀಜಿಗಳು (Swamiji) ದೊಡ್ಡ ರಾಮಾಯಣವನ್ನೇ ಸೃಷ್ಠಿ ಮಾಡಿದ್ದರು. ಹಾಗಾಗಿ, ಈ ಮೊದಲು ಹೇಳಿದಂತೆ ಕೇಸರಿ ಉಡುಗೆ (saffron uniform), ರುದ್ರಾಕ್ಷಿ ಮಾಲೆ (Rudrakshi Mala) ಧರಿಸಿದ ಸಿಬ್ಬಂದಿಗಳನ್ನು (Staff) ನೀವು ಭಾರತೀಯ ರೈಲ್ವೆಯಲ್ಲಿ (Indian railways) ನೋಡಲು ಸಾಧ್ಯವಿಲ್ಲ.


ಸ್ವಾಮೀಜಿಗಳ ಒತ್ತಡಕ್ಕೆ ಮಣಿದ ಭಾರತೀಯ ರೈಲ್ವೆ

ಹೌದು, ಸ್ವಾಮೀಜಿಗಳ ಒತ್ತಡಕ್ಕೆ ಮಣಿದು ಮಾಣಿಗಳ ಸಮವಸ್ತ್ರ (Dress code) ಬದಲಾಯಿಸಿದೆ ಭಾರತೀಯ ರೈಲ್ವೆ. ಭಾರತೀಯ ರೈಲ್ವೆಯು ತನ್ನ ಸಿಬ್ಬಂದಿಯ ಸಮವಸ್ತ್ರವನ್ನು ಸಾಮಾನ್ಯ ಶರ್ಟ್ ಮತ್ತು ಪ್ಯಾಂಟ್ ಹಾಗೂ ಸಾಂಪ್ರದಾಯಿಕ ಶಿರಸ್ತ್ರಾಣಕ್ಕೆ ಬದಲಾಯಿಸಿದೆ. ಆದರೂ, ಮಾಣಿಗಳು ಕೇಸರಿ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಧರಿಸಲಿದ್ದಾರೆ ಎಂದು ಭಾರತೀಯ ರೈಲ್ವೆ ಮೂಲಗಳು ತಿಳಿಸಿವೆ.


ರೈಲು ನಿಲ್ಲಿಸುವುದಾಗಿ ಕೆಲವು ಸ್ವಾಮೀಜಿಗಳು ಬೆದರಿಕೆ

ಉಜ್ಜಯಿನಿಯ ಸ್ವಾಮೀಜಿಗಳು ಮಾಣಿಗಳ ಕೇಸರಿ ಉಡುಗೆ ವಿರೋಧಿಸಿದ ನಂತರ ಭಾರತೀಯ ರೈಲ್ವೆಯು IRCTC-ಚಾಲಿತ ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿನ ಸಿಬ್ಬಂದಿಯ (Railway Staff) ಸಮವಸ್ತ್ರ ಬದಲಾಯಿಸಿದೆ. ಡ್ರೆಸ್ ಕೋಡ್ ಹಿಂಪಡೆಯದಿದ್ದರೆ ಡಿಸೆಂಬರ್ 12ರಂದು ರೈಲು ನಿಲ್ಲಿಸುವುದಾಗಿ ಕೆಲವು ಸ್ವಾಮೀಜಿಗಳು (Seers) ಬೆದರಿಕೆ ಹಾಕಿದ್ದರು. ಪರಿಣಾಮವಾಗಿ, ರೈಲ್ವೆಯು ಸಮವಸ್ತ್ರವನ್ನು ಸಾಮಾನ್ಯ ಶರ್ಟ್ (Shirt) ಮತ್ತು ಪ್ಯಾಂಟ್ (Pant) ಹಾಗೂ ಸಾಂಪ್ರದಾಯಿಕ ಶಿರಸ್ತ್ರಾಣಕ್ಕೆ ಬದಲಾಯಿಸಿತು.


ಇದನ್ನೂ ಓದಿ:  ಸೋಶಿಯಲ್ ಮೀಡಿಯಾ ಹುಚ್ಚು: ರೈಲ್ವೇ ಟ್ರ್ಯಾಕ್ ಬಳಿ Live Video ಮಾಡುತ್ತಲೇ ಪ್ರಾಣ ಬಿಟ್ಟ ಯುವಕ


ಡ್ರೆಸ್ ಕೋಡ್ ಬದಲಿಸಿದ ರೈಲ್ವೇ

"ಸೇವಾ ಸಿಬ್ಬಂದಿಯ ವೃತ್ತಿಪರ ಉಡುಪಿನ ಲುಕ್ ಬದಲಾಯಿಸಲಾಗಿದೆ. ಉಡುಗೆಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ, ಈ ಬಗ್ಗೆ ಉಂಟಾದ ಅನಾನುಕೂಲತೆಗಾಗಿ ವಿಷಾದಿಸುತ್ತೇವೆ" ಎಂದು ಭಾರತೀಯ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.



Indian Railways changed the uniforms of its serving staff on board the Ramayan Express
ಹೊಸ ಡ್ರೆಸ್ ಕೋಡ್


ದಾರ್ಶನಿಕರಿಗೆ ಅವಮಾನ: ಅವದೇಶಪುರಿ ಆಕ್ರೋಶ

ರಾಮಾಯಣ ಎಕ್ಸ್‌ಪ್ರೆಸ್‌ನಲ್ಲಿ ಕೇಸರಿ ಬಣ್ಣದ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಳ್ಳುವ, ಉಪಾಹಾರ ಮತ್ತು ಊಟ ಬಡಿಸುವ ಮಾಣಿಗಳ ವಿರುದ್ಧ ನಮ್ಮ ಪ್ರತಿಭಟನೆಯನ್ನು ನಾವು 2 ದಿನಗಳ ಹಿಂದೆ ರೈಲ್ವೆ ಸಚಿವರಿಗೆ ತಿಳಿಸಿದ್ದೇವೆ. ಸಾಧುಗಳಂತೆ ವೇಷ ಧರಿಸಿ, ಶಿರಸ್ತ್ರಾಣದೊಂದಿಗೆ ಕೇಸರಿ ಉಡುಪನ್ನು ಧರಿಸುವುದು ಮತ್ತು ರುದ್ರಾಕ್ಷಿಯ ಮಾಲೆಗಳನ್ನು ಧರಿಸುವುದು ಹಿಂದೂ ಧರ್ಮ ಮತ್ತು ಅದರ ದಾರ್ಶನಿಕರಿಗೆ ಅವಮಾನವಾಗಿದೆ ಎಂದು ಉಜ್ಜಯಿನಿ ಅಖಾಡ ಪರಿಷತ್ತಿನ ಮಾಜಿ ಪ್ರಧಾನ ಕಾರ್ಯದರ್ಶಿ ಅವದೇಶಪುರಿ ಹೇಳಿದ್ದರು.


ಇದನ್ನೂ ಓದಿ:  Indian Railway: ಡಿಸೆಂಬರ್ 1 ರಿಂದ ಈ ರೈಲುಗಳ ಓಡಾಟ ಬಂದ್, ಯಾವ್ಯಾವುದು? ಫುಲ್ ಲಿಸ್ಟ್ ಇಲ್ಲಿದೆ

ವೇಟರ್‌ಗಳ ಕೇಸರಿ ಡ್ರೆಸ್ ಕೋಡ್ ಬದಲಾಯಿಸದಿದ್ದರೆ ದೆಹಲಿಯ ಸಫ್ದರ್‌ಜಂಗ್ ರೈಲು ನಿಲ್ದಾಣದಲ್ಲಿ ಸ್ವಾಮೀಜಿಗಳು ರೈಲನ್ನು ತಡೆ ಹಿಡಿಯಲಿದ್ದಾರೆ ಎಂದು ಅವರು ಹೇಳಿದ್ದರು.


17 ದಿನಗಳ ಪ್ರಯಾಣ

ಮೊದಲ ರಾಮಾಯಣ ಸರ್ಕ್ಯೂಟ್ ರೈಲು ನವೆಂಬರ್ 7ರಂದು ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ 17 ದಿನಗಳ ಪ್ರಯಾಣ ಪ್ರಾರಂಭಿಸಿತ್ತು. ಈ ರೈಲು ರಾಮನ ಜೀವನಕ್ಕೆ ಸಂಬಂಧಿಸಿದ 15 ಸ್ಥಳಗಳನ್ನು ಹಾದು ಹೋಗುತ್ತದೆ.


ರಾಮಯಾಣ  ಎಕ್ಸ್‌ಪ್ರೆಸ್ ಮಾರ್ಗ ಹೀಗಿದೆ

ಸುಮಾರು 7,500 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸುವ ಈ ರೈಲು ಯಾತ್ರಾರ್ಥಿಗಳನ್ನು ಅಯೋಧ್ಯೆ, ಪ್ರಯಾಗ, ನಂದಿಗ್ರಾಮ, ಜನಕಪುರ, ಚಿತ್ರಕೂಟ, ಸೀತಾಮರ್ಹಿ, ನಾಸಿಕ್, ಹಂಪಿ ಮತ್ತು ರಾಮೇಶ್ವರಂ ಮುಂತಾದ ಸ್ಥಳಗಳಿಗೆ ಕರೆದೊಯ್ಯುತ್ತದೆ. ರಾಮಾಯಣ ಎಕ್ಸ್‌ಪ್ರೆಸ್ ರೈಲು ಪ್ರಥಮ ದರ್ಜೆ ರೆಸ್ಟೋರೆಂಟ್‌ಗಳು, ಗ್ರಂಥಾಲಯ ಮತ್ತು ಶವರ್ ಕ್ಯುಬಿಕಲ್‌ಗಳನ್ನು ಹೊಂದಿದೆ.


Published by:Mahmadrafik K
First published: