Railway Ticket Reservation: ರೈಲಿನಲ್ಲಿ ಹಿರಿಯರಿಗೆ Lower Berth ಸೀಟುಗಳನ್ನೇ ಬುಕ್ ಮಾಡೋಕೆ ಆಗುತ್ತೆ, ಹೀಗೆ ಮಾಡಿ!

Train Ticket Reservation for Senior Citizens: ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ಕೆಳಗಿನ ಬರ್ತ್​ನಲ್ಲೇ ಅವರಿಗೆ ಟಿಕೆಟ್ ಕಾಯ್ದಿರಿಸುವ ಅವಕಾಶ ಭಾರತೀಯ ರೈಲ್ವೆಯಲ್ಲಿ ಇದೆ, ಆದರೆ ಅದಕ್ಕೆ ಕೆಲವು ನಿಯಮಗಳಿದ್ದು ಅದರಂತೆ ಟಿಕೆಟ್ ಬುಕಿಂಗ್ ಮಾಡಿಕೊಂಡರೆ ಯಾವುದೇ ಸಮಸ್ಯೆ ಇಲ್ಲದೆ ಕೆಳಗಿನ ಬರ್ತ್ ಪಡೆಯಬಹುದಾಗಿದೆ. ಈ ಸೌಲಭ್ಯ ಪಡೆಯಲು ಹೀಗೆ ಮಾಡಿ...

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Indian Railways: ಭಾರತೀಯ ರೈಲ್ವೆ ಆನ್ ಬುಕಿಂಗ್ ನಲ್ಲೇ ಹೆಚ್ಚು ಜನ ರೈಲಿನ ಟಿಕೆಟ್ ಗಳನ್ನು ಕಾಯ್ದಿರಿಸುತ್ತಾರೆ. ಇದರಲ್ಲಿ ಹಿರಿಯ ನಾಗರಿಕರಿಗೆ ಟಿಕೆಟ್ ಕಾಯ್ದಿರಿಸಲು ಅನುಕೂಲವಾಗಲಿ ಎಂದು ಕೆಳಗಿನ ಬರ್ತ್​ನ್ನೇ ಬುಕಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿದೆ. ಮೇಲಿನ ಬರ್ತ್ ನಲ್ಲಿ ಟಿಕೆಟ್ ದೊರೆತರೆ (Ticket Reservation) ಅವರಿಗೆ ಹತ್ತಿ ಇಳಿಯುವುದು ಬಹಳ ಸಮಸ್ಯೆ ಆಗುತ್ತದೆ, ಜೊತೆಗೆ ಅವರೊಂದಿಗೆ ಪ್ರಯಾಣಿಸುವ ಸಹ ಪ್ರಯಾಣಿಕರಿಗೂ ಇದು ಕಿರಿಕಿರಿ ಉಂಟು ಮಾಡಬಹುದು. ಆದ್ದರಿಂದ ಹಿರಿಯರು ಪ್ರಯಾಣಿಸುವಾಗ ಅವರು ಮೊದಲೇ ಕೆಳಗಿನ ಬರ್ತ್ (Lower Berth) ಕಾಯ್ದಿರಿಸಿಕೊಳ್ಳುವ ಅವಕಾಶವನ್ನು ಭಾರತೀಯ ರೈಲ್ವೆ ಕಲ್ಪಿಸಿದೆ. ಇದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೇಗೆ ಬುಕಿಂಗ್ ಮಾಡುವುದು (Booking Ticket) ಎನ್ನುವುದು ಕೂಡಾ ಹೆಚ್ಚಿನವರಿಗೆ ಮಾಹಿತಿ ಗೊತ್ತಿರುವುದಿಲ್ಲ. ಇದೇನೂ ಅಂಥಾ ಕಷ್ಟದ ಕೆಲಸವಲ್ಲ, ಹಿಇರಯ ನಾಗರಿಕರಿಗೆ ರೈಲಿನಲ್ಲಿ ಕೆಳಗಿನ ಬರ್ತ್ ಕಾಯ್ದಿರಿಸುವುದು ಹೇಗೆ ಎನ್ನುವ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

    ಇತ್ತೀಚೆಗೆ ಟ್ವಿಟರ್ ನಲ್ಲಿ ವ್ಯಕ್ತಿಯೊಬ್ಬರು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಇಲಾಖೆಯನ್ನು ಟ್ಯಾಗ್ ಮಾಡಿ ಈ ಸಂಬಂಧ ಪ್ರಶ್ನೆಯೊಂದನ್ನು ಕೇಳಿದ್ದರು. “ನಾನು ಇತ್ತೀಚೆಗೆ 3 ಹಿರಿಯ ನಾಗರಿಕರಿಗಾಗಿ ಕೆಳಗಿನ ಸೀಟುಗಳನ್ನು ಬುಕ್ ಮಾಡಿದ್ದೆ. ಆದ್ರೆ 102 ಬರ್ತ್ ಗಳು ಖಾಲಿ ಇದ್ದರೂ ಮಧ್ಯದ, ಮೇಲಿನ ಮತ್ತು ಬದಿಯಲ್ಲಿರುವ ಕೆಳಗಿನ ಬರ್ತ್​ ಗಳನ್ನು ಅವರಿಗೆ ನೀಡಲಾಗಿದೆ. ಇದು ಯಾವ ಪ್ರಯೋಜನಕ್ಕಾಗಿ? ನಿಮ್ಮ ಸೀಟ್ ಅಲೊಕೇಶನ್ ವ್ಯವಸ್ಥೆ ಇರೋದಾದರೂ ಏಕೆ?” ಎಂದು ನಾಗರಿಕರೊಬ್ಬರು ಖಾರವಾಗಿ ಪ್ರಶ್ನಿಸಿದ್ದರು.





    ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ ಇಲಾಖೆ ಸಿಬ್ಬಂದಿ ಹೇಗೆ ಮಾಡುವುದು ಎಂದೂ ವಿವರಣೆ ನೀಡಿದ್ದಾರೆ. ರೈಲಿನಲ್ಲಿ ಇರುವ ಕೆಳಗಿನ ಬರ್ತ್ 60 ವರ್ಷ ವಯಸ್ಸು ದಾಟಿದ ಪುರುಷ ಅಥವಾ 45 ವರ್ಷ ವಯಸ್ಸು ದಾಟಿದ ಮಹಿಳೆಗೆ ಮಾತ್ರವೇ ದೊರೆಯುತ್ತದೆ. ಈ ವ್ಯಕ್ತಿಗಳು ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಅಥವಾ ಒಟ್ಟಿಗೆ ಅಂದರೆ ಒಂದೇ ಸಲ ಎರಡು ಟಿಕೆಟ್​ಗಳನ್ನು ಬುಕ್ ಮಾಡಿಕೊಂಡಿದ್ದರೆ ಆಗ ಮಾತ್ರ ಅವರಿಗೆ ಈ ಸೌಲಭ್ಯ ದೊರೆಯುತ್ತದೆ.

    ಆದರೆ ಎರಡಕ್ಕಿಂತ ಹೆಚ್ಚಿನ ಹಿರಿಯ ನಾಗರಿಕರು ಒಟ್ಟಿಗೆ ಟಿಕೆಟ್ ಕಾಯ್ದಿರಿಸಲು ಪ್ರಯತ್ನ ಪಡುತ್ತಿದ್ದರೆ ಅಥವಾ ಒಬ್ಬ ಹಿರಿಯ ನಾಗರಿಕರ ಜೊತೆಗೆ ಮತ್ತೊಬ್ಬ ಸಾಮಾನ್ಯ ವ್ಯಕ್ತಿ ಅಥವಾ ಕಿರಿಯರು ಪ್ರಯಾಣ ಮಾಡುವ ಸಲುವಾಗಿ ಟಿಕೆಟ್ ಕಾಯ್ದಿರಿಸುತ್ತಿದ್ದರೆ ಆಗ ಈ ಸೌಲಭ್ಯವನ್ನು ಬಳಸಲು ಟಿಕೆ ಕಾಯ್ದಿರಿಸುವಿಕೆ ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ಅಂದರೆ ಈ ವ್ಯಕ್ತಿ ಮೂರು ಹಿರಿಯ ನಾಗರಿಕರಿಗೆ ಒಟ್ಟಿಗೆ ಟಿಕೆಟ್ ಕಾಯ್ದಿರಿಸದ್ದೇ ಸಮಸ್ಯೆಗೆ ಕಾರಣವಾಗಿದೆ. ಒಂದು ವೇಳೆ ಆತ ಎರಡು ಟಿಕೆಟ್ ಗಳನ್ನು ಒಟ್ಟಿಗೆ ಬುಕ್ ಮಾಡಿ ನಂತರ ಮತ್ತೊಂದು ಟಿಕೆಟ್ ನ್ನು ಬೇರೆಯಾಗಿ ಬುಕ್ ಮಾಡಿದ್ದರೆ ಬಹುಶಃ ಎಲ್ಲಾ ಮೂವರು ಹಿರಿಯರಿಗೂ ಲೋಯರ್ ಬರ್ತ್ ಅಥವಾ ಕೆಳಗಿನ ಸೀಟ್ ಸಿಗಲು ಸಾಧ್ಯವಿತ್ತು ಎನ್ನಲಾಗಿದೆ.

    ಇದನ್ನೂ ಓದಿ: Indian Railways: ನೀವು ಬುಕ್​ ಮಾಡಿದ ಟಿಕೆಟ್​ಅನ್ನು ನಿಮ್ಮ ಸಂಬಂಧಿಕರಿಗೂ ನೀಡಬಹುದು: ರೈಲ್ವೇ ಇಲಾಖೆಯ ಸಖತ್​ ಆಫರ್​

    ರೈಲ್ವೆ ಇಲಾಖೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಚುರುಕಾಗಿದ್ದು ಗ್ರಾಹಕರ ನಾನಾ ಪ್ರಶ್ನೆಗಳು ಮತ್ತು ಅನುಮಾನಗಳಿಗೆ ಪರಿಹಾರ ನೀಡುತ್ತದೆ. ಇದು ನೇರವಾಗಿ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗಿದೆ. ಒಬ್ಬರು ಕೇಳಿದ ಪ್ರಶ್ನೆಗೆ ರೈಲ್ವೆ ಅಧಿಕಾರಿಗಲು ನೀಡುವ ಉತ್ತರ ಅದೇ ಬಗೆಯ ಅನುಮಾನ ಅಥವಾ ಸಮಸ್ಯೆ ಎದುರಿಸುತ್ತಿರುವ ಅನೇಕರಿಗೆ ಪ್ರಯೋಜನವಾಗುತ್ತದೆ. ಇದು ಯಾವುದೇ ಸಮಸ್ಯೆ ಇಲ್ಲದೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡುವುದಿರಲಿ, ರೈಲ್ವೆ ಇಲಾಖೆ ವಿವಿಧ ಸೌಕರ್ಯಗಳ ಪ್ರಯೋಜನ ಪಡೆಯುವುದಿರಲಿ ಅಥವಾ ಅಲ್ಲಿರುವ ಯಾವುದೇ ಸಮಸ್ಯೆ ಬಗ್ಗೆ ಗಮನ ಸೆಳೆದು ಅದನ್ನು ಪರಿಹರಿಸುವುದರಿಲಿ, ಬೇಗನೇ ಆಗುವುದರಿಂದ ಜನ ಸಾಮಾನ್ಯರಿಗೆ ಬಹಳ ಪ್ರಯೋಜನಕಾರಿಯಾಗಿದೆ.
    Published by:Soumya KN
    First published: