Indian Railway: ಡಿಸೆಂಬರ್ 1 ರಿಂದ ಈ ರೈಲುಗಳ ಓಡಾಟ ಬಂದ್, ಯಾವ್ಯಾವುದು? ಫುಲ್ ಲಿಸ್ಟ್ ಇಲ್ಲಿದೆ

12 Trains cancelled 3 months : ಪಶ್ಚಿಮ ರೈಲ್ವೆಯು ಡಿಸೆಂಬರ್ 1, 2021 ರಿಂದ ಫೆಬ್ರವರಿ 28, 2022 ರವರೆಗೆ ಒಟ್ಟಾರೆ ಒಟ್ಟು 12 ರೈಲುಗಳನ್ನು ರದ್ದುಗೊಳಿಸುವುದಾಗಿ ಹೇಳಿದೆ. ಆದ್ರೆ ಸ್ಥಗಿತವಾದ ರೈಲುಗಳು ಮಾರ್ಚ್ 1, 2022 ರಿಂದ ಮತ್ತೆ ಸಂಚಾರ ಪುನರಾರಂಭ ಮಾಡಲಿವೆ.

ರೈಲು

ರೈಲು

 • Share this:
  ಕೊರೋನಾ (Corona)ಮಹಾಮಾರಿ ಅಬ್ಬರದ ಹಿನ್ನೆಲೆ ಕಳೆದ ವರ್ಷ ಹಾಗೂ ಈ ವರ್ಷದ ಮಧ್ಯಭಾಗದವರೆಗೂ ರೈಲು(Train) ಸಂಚಾರವನ್ನು ಸ್ಥಗಿತ ಮಾಡಲಾಗಿತ್ತು.ಈ ವೇಳೆ ರೈಲು ಸಂಚಾರ ಸ್ಥಗಿತವಾದ್ದರಿಂದ ಸಾವಿರಾರು ಸಂಖ್ಯೆಯ ಪ್ರಯಾಣಿಕರು ತಮ್ಮ ಊರುಗಳಿಗೆ ಹೋಗಲು ಕಷ್ಟ ಪಡಬೇಕಾದ ಸ್ಥಿತಿ ಉಂಟಾಗಿತ್ತು...ಬಳಿಕ ಸೋಂಕಿನ ಪ್ರಕರಣಗಳು ಇಳಿಮುಖವಾದ ಹಿನ್ನೆಲೆಯಲ್ಲಿ ಹಂತಹಂತವಾಗಿ ಭಾರತೀಯ ರೈಲ್ವೆ(Indian Railway) ಇಲಾಖೆಯ ರೈಲು ಸಂಚಾರವನ್ನು ಆರಂಭ ಮಾಡುತ್ತಾ ಬಂದಿದೆ.ಅಲ್ಲದೆ ಕಾರ್ಮಿಕರ(Workers) ತಮ್ಮ ಊರುಗಳಿಗೆ ಹೋಗಲು ಸರ್ಕಾರ(Government) ವಿಶೇಷ ರೈಲುಗಳ ವಿಶೇಷ ವ್ಯವಸ್ಥೆ ಮಾಡಿತ್ತು.. ಅಂದಿನಿಂದ ಪ್ರತಿನಿತ್ಯ ರೈಲುಗಳ ಸಂಚಾರ ದೇಶದ ಮೂಲೆ ಮೂಲೆಯಲ್ಲಿಯೂ ಪ್ರಾರಂಭವಾಗಿದೆ. ಆದ್ರೆ ಪರಿಸ್ಥಿತಿ ಹೀಗಿರುವಾಗ ಭಾರತೀಯ ರೈಲ್ವೆ ಇಲಾಖೆ ಮತ್ತೊಮ್ಮೆ ರೈಲ್ವೇ ಪ್ರಯಾಣಿಕರಿಗೆ ಶಾಕ್(Shock) ನೀಡಲು ಮುಂದಾಗಿದ್ದು, ಡಿಸೆಂಬರ್ 1, 2021 ರಿಂದ ಫೆಬ್ರವರಿ 2022 ರವರೆಗೆ ಕೆಲವು ರೈಲುಗಳನ್ನು ರದ್ದುಗೊಳಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ.

  12 ವಿಶೇಷ ರೈಲುಗಳ ಸಂಚಾರ ಸ್ಥಗಿತ

  ಸದ್ಯ ಭಾರತೀಯ ರೈಲ್ವೆ ಇಲಾಖೆಯಲ್ಲಿ 600ಕ್ಕೂ ಹೆಚ್ಚು ವಿಶೇಷ ರೈಲುಗಳು ಇವೆ. ಕೊರೊನಾ ವೇಳೆ, ಹಾಗೂ ಹಬ್ಬದ ಸಂದರ್ಭದಲ್ಲಿ ಈ ವಿಶೇಷ ರೈಲುಗಳು ಮಹಾರಾಷ್ಟ್ರ ಹಾಗೂ ಉತ್ತರಪ್ರದೇಶ ಸೇರಿ ಹಲವು ರಾಜ್ಯಗಳಲ್ಲಿ ಸಂಚಾರ ಮಾಡಿದ್ದವು.. ಆದ್ರೆ ಈಗ ಚಳಿಗಾಲ ಪ್ರಾರಂಭವಾಗಿರುವುದರಿಂದ ಪಶ್ಚಿಮ ರೈಲ್ವೆಯು ಡಿಸೆಂಬರ್ 1, 2021 ರಿಂದ ಫೆಬ್ರವರಿ 28, 2022 ರವರೆಗೆ ಒಟ್ಟಾರೆ ಒಟ್ಟು 12 ರೈಲುಗಳನ್ನು ರದ್ದುಗೊಳಿಸುವುದಾಗಿ ಹೇಳಿದೆ. ಆದ್ರೆ ಸ್ಥಗಿತವಾದ ರೈಲುಗಳು ಮಾರ್ಚ್ 1, 2022 ರಿಂದ ಮತ್ತೆ ಮತ್ತೆ ಪುನರಾರಂಭ ಮಾಡಲಿವೆ..

  ಡಿ.1ರಿಂದ ಫೆ.28ರವರೆಗೆ ಸ್ಥಗಿತಗೊಂಡಿರುವ 12 ರೈಲುಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ

  1)ರೈಲು ಸಂಖ್ಯೆ- 09017, ಬಾಂದ್ರಾ ಟರ್ಮಿನಸ್ - ಹರಿದ್ವಾರದ ನಡುವೆ ಪ್ರತಿ ಬುಧವಾರ ಸಂಚಾರ ಮಾಡುತ್ತಿದ್ದ ವಿಶೇಷ ರೈಲು ಡಿಸೆಂಬರ್ 1, 2021 ರಿಂದ ಫೆಬ್ರವರಿ 23, 2022 ರವರೆಗೆ ರದ್ದುಗೊಳ್ಳಲಿದೆ .

  2)ರೈಲು ಸಂಖ್ಯೆ-09018, ಹರಿದ್ವಾರ - ಬಾಂದ್ರಾ ಟರ್ಮಿನಸ್ ನಡುವೆ ಪ್ರತಿ ಗುರುವಾರದ ಸಂಚಾರ ಮಾಡುತ್ತಿದ್ದ ವಿಶೇಷ ರೈಲು ಡಿಸೆಂಬರ್ 2, 2021 ರಿಂದ ಫೆಬ್ರವರಿ 24, 2022 ರವರೆಗೆ ರದ್ದುಗೊಳ್ಳುತ್ತದೆ.

  ಇದನ್ನೂ ಓದಿ :ಸಸ್ಯಾಹಾರಿ ಪ್ರಯಾಣಿಕರಿಗೆ ಸಿಹಿಸುದ್ದಿ! ಇನ್ಮುಂದೆ ರೈಲುಗಳಲ್ಲಿ ದೊರೆಯಲಿದೆ ಶುದ್ಧ ವೆಜ್ ಫುಡ್..!

  3) ರೈಲು ಸಂಖ್ಯೆ- 09403, ಅಹಮದಾಬಾದ್ - ಸುಲ್ತಾನ್‌ಪುರ್ ನಡುವೆ ಪ್ರತಿ ಪ್ರತಿ ಮಂಗಳವಾರ ಸಂಚಾರ ಮಾಡುತ್ತಿದ್ದ ವಿಶೇಷ ರೈಲು ಡಿಸೆಂಬರ್ 7, 2021 ರಿಂದ ಫೆಬ್ರವರಿ 22, 2022 ರವರೆಗೆ ರದ್ದುಗೊಳ್ಳಲಿದೆ.

  4)ರೈಲು ಸಂಖ್ಯೆ- 09404, ಸುಲ್ತಾನ್‌ಪುರ - ಅಹಮದಾಬಾದ್ ನಡುವೆ ಪ್ರತಿ ಬುದುವಾರ ಸಂಚಾರ ಮಾಡುತ್ತಿದ್ದ ರೈಲು ಡಿಸೆಂಬರ್ 8, 2021 ರಿಂದ ಫೆಬ್ರವರಿ 23, 2022 ರವರೆಗೆ ರದ್ದಾಗಿರುತ್ತದೆ.

  5)ರೈಲು ಸಂಖ್ಯೆ- 09407, ಅಹಮದಾಬಾದ್ - ವಾರಣಾಸಿ ನಡುವೆ ಗುರುವಾರ ಸಂಚಾರ ಮಾಡುತ್ತಿದ್ದ ರೈಲು ಡಿಸೆಂಬರ್ 2, 2021 ರಿಂದ ಫೆಬ್ರವರಿ 24, 2022 ರವರೆಗೆ ರದ್ದಾಗಿರುತ್ತದೆ.

  6)ರೈಲು ಸಂಖ್ಯೆ- 09408, ವಾರಣಾಸಿ - ಅಹಮದಾಬಾದ್ ಪ್ರತಿ ಶನಿವಾರದಂದು ಓಡಾಡುತ್ತಿದ್ದ ರೈಲು ಡಿಸೆಂಬರ್ 4, 2021 ರಿಂದ ಫೆಬ್ರವರಿ 26, 2022 ರವರೆಗೆ ರದ್ದಾಗಿರುತ್ತದೆ.

  ಇದನ್ನೂ ಓದಿ :PUC ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ಸಲ್ಲಿಸಲು ಹೀಗೆ ಮಾಡಿ

  7)ರೈಲು ಸಂಖ್ಯೆ- 09111, ವಲ್ಸಾದ್ - ಹರಿದ್ವಾರದ ನಡುವೆ ಮಂಗಳವಾರ ಸಂಚರಿಸುತ್ತಿದ್ದ ಡಿಸೆಂಬರ್ 7, 2021 ರಿಂದ ಫೆಬ್ರವರಿ 23, 2022 ರ ವರೆಗೆ ರದ್ದುಗೊಳ್ಳುತ್ತದೆ.

  8) ರೈಲು ಸಂಖ್ಯೆ- 09112, ಹರಿದ್ವಾರ - ವಲ್ಸಾದ್ ನಡುವೆ ಪ್ರತಿ ಬುಧವಾರದಂದು ಸಂಚಾರ ಮಾಡುತ್ತಿದ್ದ ಡಿಸೆಂಬರ್ 8, 2021 ರಿಂದ ಫೆಬ್ರವರಿ 23, 2022 ರವರೆಗೆ ರದ್ದಾಗಿರುತ್ತದೆ.

  9)ರೈಲು ಸಂಖ್ಯೆ- 04309, ಉಜ್ಜಯಿನಿ - ಡೆಹ್ರಾಡೂನ್ ನಡುವೆ ಪ್ರತಿ ಬುಧವಾರ ಮತ್ತು ಗುರುವಾರ ಸಂಚಾರ ಮಾಡುತ್ತಿದ್ದ ರೈಲು ಡಿಸೆಂಬರ್ 2, 2021 ರಿಂದ ಫೆಬ್ರವರಿ 24, 2022 ರವರೆಗೆ ರದ್ದಾಗಿರುತ್ತದೆ.

  10)ರೈಲು ಸಂಖ್ಯೆ-04310, ಡೆಹ್ರಾಡೂನ್ - ಉಜ್ಜಯಿನಿ ನಡುವೆ ಪ್ರತಿ ಮಂಗಳವಾರ ಮತ್ತು ಬುಧವಾರ ಸಂಚಾರ ಮಾಡುತ್ತಿದ್ದ ರೈಲು ಡಿಸೆಂಬರ್ 1, 2021 ರಿಂದ ಫೆಬ್ರವರಿ 23, 2022 ರವರೆಗೆ ರದ್ದಾಗಿರುತ್ತದೆ.
  Published by:ranjumbkgowda1 ranjumbkgowda1
  First published: