Indian Railway: ಈ ಸೀಟ್​ನಿಂದ ನನ್ನ ಹಿಂಭಾಗಕ್ಕೆ​ ಡ್ಯಾಮೇಜ್ ಆಯ್ತು ಎಂದ ಪ್ರಯಾಣಿಕ!

ವೈರಲ್ ಪೋಸ್ಟ್

ವೈರಲ್ ಪೋಸ್ಟ್

Viral Post: ಮುಖ್ತಾರ್ ಅಲಿ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ರೈಲಿನ ಸೀಟಿನ ಮಧ್ಯೆ ಇರುವ ಒಂದು ಹ್ಯಾಂಡಲ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ.

  • Share this:

ಬೆಂಗಳೂರು: ದಿನ ಬೆಳಗಾದರೆ ಸಾಕು ನಮ್ಮ ಜನರು (Public) ತಮ್ಮ ಕೆಲಸಗಳಿಗಾಗಿ ಅಂತ ಈ ರೈಲಿನಲ್ಲಿ (Railway) ಮತ್ತು ಬಸ್ ಗಳಲ್ಲಿ (Bus) ಓಡಾಡುವಷ್ಟು ಬಹುಶಃ ಬೇರೆ ಯಾವ ಸಾರಿಗೆ ವ್ಯವಸ್ಥೆಯಲ್ಲೂ (Transport Service) ಓಡಾಡಲಿಕ್ಕಿಲ್ಲ. ಅದಕ್ಕೆ ಅನ್ಸುತ್ತೆ ನಮ್ಮ ಪ್ರಯಾಣಿಕರಿಗೆ (Passengers) ಈ ರೈಲು ಮತ್ತು ಬಸ್ ಗಳಲ್ಲಿನ ಮುರಿದ ಸೀಟ್, ಡ್ಯಾಮೇಜ್ ಆದ ಸೀಟ್ ಗಳು ಮತ್ತು ಇನ್ನಿತರೆ ಚಿಕ್ಕ-ಪುಟ್ಟ ಸಮಸ್ಯೆಗಳು ಪ್ರಯಾಣಿಕರ ಮನಸ್ಸಿಗೆ ಅನೇಕ ಬಾರಿ ತುಂಬಾನೇ ಕಿರಿಕಿರಿಯನ್ನು ಉಂಟು ಮಾಡುತ್ತವೆ. ಅದರಲ್ಲೂ ವಿಶ್ವಾದ್ಯಂತ ಲಕ್ಷಾಂತರ ಜನರಿಗೆ ರೈಲುಗಳು ಅತ್ಯಗತ್ಯ ಸಾರಿಗೆ ವಿಧಾನವಾಗಿದೆ. ಹಾಗಾಗಿ ಭಾರತೀಯ ರೈಲ್ವೆ (Indian Railway) ಈ ರೈಲುಗಳನ್ನು ತುಂಬಾನೇ ಅಚ್ಚುಕಟ್ಟಾಗಿ ಮತ್ತು ಪ್ರಯಾಣಿಕರಿಗೆ ಯಾವುದೇ ರೀತಿಯ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಲು ಶ್ರಮಿಸುತ್ತಿರುತ್ತದೆ.


ರೈಲಿನಲ್ಲಿ ಇರುವ ಸಮಸ್ಯೆಗಳಿಂದ ಪ್ರಯಾಣಿಕರಿಗೆ ಆಗುತ್ತಿದೆಯಂತೆ ಕಿರಿಕಿರಿ


ರೈಲ್ವೆ ಇಲಾಖೆ ಪ್ರಯಾಣಿಕರ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಸುಖಕರ ಪ್ರಯಾಣವನ್ನು ನೀಡಲು ಅನೇಕ ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಲೇ ಇರುತ್ತದೆ. ಭಾರತೀಯ ರೈಲ್ವೆ ವ್ಯವಸ್ಥೆಯು ಪ್ರತಿದಿನ ಲಕ್ಷಾಂತರ ಜನರನ್ನು ಸಂಪರ್ಕಿಸುತ್ತದೆ ಮತ್ತು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲವಾಗಿದೆ.


ಇಷ್ಟೊಂದು ದೊಡ್ಡ ಜಾಲವನ್ನು ಹೊಂದಿರುವ ರೈಲ್ವೆ ಇಲಾಖೆ ಆಗಾಗ್ಗೆ ಚಿಕ್ಕ-ಪುಟ್ಟ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತದೆ ಮತ್ತು ಇದರಿಂದಾಗಿ ಪ್ರಯಾಣಿಕರಿಗೂ ಕಿರಿಕಿರಿ ಅಂತ ಅನ್ನಿಸುತ್ತಿರುತ್ತದೆ.


Viral Post: ಮುಖ್ತಾರ್ ಅಲಿ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ರೈಲಿನ ಸೀಟಿನ ಮಧ್ಯೆ ಇರುವ ಒಂದು ಹ್ಯಾಂಡಲ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ


ಮುಖ್ಯವಾಗಿ ಭಾರತೀಯ ರೈಲ್ವೆ ತಮ್ಮ ಕಡಿಮೆ ಗುಣಮಟ್ಟದ ನಿರ್ವಹಣಾ ಅಭ್ಯಾಸಗಳಿಗಾಗಿ ಆಗಾಗ್ಗೆ ಟೀಕಿಸಲ್ಪಡುತ್ತದೆ. ಹಲವು ವರ್ಷಗಳಿಂದ, ಭಾರತೀಯ ರೈಲ್ವೆ ಅದೇ ಎಂಜಿನ್ ಗಳು, ಸೀಟುಗಳು, ಫ್ಯಾನ್ ಗಳು ಮತ್ತು ಇತರ ವಸ್ತುಗಳನ್ನು ಬದಲಾಯಿಸದೆ ಬಳಸುತ್ತಿದೆ. ಅವರಿಗೆ ಇದೆಲ್ಲವೂ ಹಣ ಉಳಿಸುವ ತಂತ್ರವಾಗಿದ್ದರೆ, ಇದರಿಂದ ಪ್ರಯಾಣಿಕರಿಗೆ ಆಗಾಗ್ಗೆ ತೊಂದರೆಯಾಗುತ್ತಿರುವುದಂತೂ ನಿಜ.


ಈ ಸಾಫ್ಟ್‌ವೇರ್ ಎಂಜಿನಿಯರ್ ಎದುರಿಸಿದ ಸಮಸ್ಯೆ ಏನು ನೋಡಿ


ಮುಖ್ತಾರ್ ಅಲಿ ಎಂಬ ಸಾಫ್ಟ್‌ವೇರ್ ಎಂಜಿನಿಯರ್ ರೈಲಿನ ಸೀಟಿನ ಮಧ್ಯೆ ಇರುವ ಒಂದು ಹ್ಯಾಂಡಲ್ ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಸೀಟಿನ ಮೇಲಿನ ಹ್ಯಾಂಡಲ್ ನಿಂದ ತನ್ನ ಪ್ಯಾಂಟ್ ಗೆ ಆದ ಡ್ಯಾಮೇಜ್ ಮತ್ತು ತನ್ನ ದೇಹಕ್ಕೆ ಉಂಟಾದ ಹಾನಿಯ ಬಗ್ಗೆ ಅವರು ರೈಲ್ವೆ ಸೇವಾಗೆ ದೂರು ನೀಡಿದ್ದಾರೆ.


ನಿರ್ದಿಷ್ಟವಾಗಿ, ಅವರು ಉತ್ತರಾಂಚಲ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (15036) ರೈಲಿನ ಸೀಟ್ ಸಂಖ್ಯೆ 29 ಸಿ 2 ಅನ್ನು ಉಲ್ಲೇಖಿಸಿದ್ದಾರೆ.


ಆ ಹ್ಯಾಂಡಲ್ ಎರಡು ಸೀಟ್ ಗಳ ಮಧ್ಯೆ ಅಂಟಿಕೊಂಡಿದ್ದರಿಂದ ಮುಖ್ತಾರ್ ಅಲಿ ಬಹುಶಃ ಅದನ್ನು ನೋಡದೆ ಅದರ ಮೇಲೆ ಕುಳಿತಿರಬಹುದು. ಅಲಿ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ, ರೈಲ್ವೆ ಸೇವಾ ಟ್ವಿಟರ್ ಖಾತೆಯು ಈ ಸಮಸ್ಯೆಯನ್ನು ಉತ್ತರ ಪ್ರದೇಶದ ಇಜ್ಜತ್ ನಗರ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ತಿಳಿಸಿದೆ.


ಪ್ರಯಾಣಿಕನ ಸಮಸ್ಯೆಗೆ ರೈಲ್ವೆ ಸೇವಾ ನೀಡಿರುವ ಪ್ರತಿಕ್ರಿಯೆ ಹೇಗಿದೆ ಗೊತ್ತೇ?


ಅಲಿ ಅವರ ಟ್ವೀಟ್ ಗೆ ರೈಲ್ವೆ ಸೇವಾ ವಾಡಿಕೆಯಂತೆ ಬೇಗನೆ ಪ್ರತಿಕ್ರಿಯಿಸಿದೆ. ಟ್ವೀಟ್ ನಲ್ಲಿ ರೈಲ್ವೆ ಸೇವಾ “ದಯವಿಟ್ಟು ನಿಮ್ಮ ಪಿಎನ್ಆರ್ / ಯುಟಿಎಸ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಯನ್ನು ಮೆಸೇಜ್ ಮಾಡಿ.



ಇದರಿಂದ ನಾವು ಅದನ್ನು ದೂರಾಗಿ ನೋಂದಾಯಿಸಬಹುದು. ತ್ವರಿತ ಪರಿಹಾರಕ್ಕಾಗಿ ನೀವು ನೇರವಾಗಿ http://railmadad.indianrailways.gov.in ಗೆ ಸಂಪರ್ಕಿಸಬಹುದು ಅಥವಾ 139 ಗೆ ಡಯಲ್ ಮಾಡಬಹುದು” ಅಂತ ಪ್ರತಿಕ್ರಿಯಿಸಿದೆ.


ರೈಲಿನಲ್ಲಿರುವ ಸೀಟುಗಳು, ಸೀಟ್ ಗಳ ಮಧ್ಯೆ ಇರುವ ಹ್ಯಾಂಡಲ್ ಗಳು ಆಗಾಗ್ಗೆ ಮುರಿಯುತ್ತವೆ ಮತ್ತು ಪ್ರಯಾಣಿಕರಿಗೆ ಈ ರೀತಿಯ ತೊಂದರೆ ಎದುರಿಸಬೇಕಾಗಿ ಬರುತ್ತದೆ.


ಹಲವು ಸಮಸ್ಯೆಗಳು


ಹಲವಾರು ಪ್ರಯಾಣಿಕರು ಮತ್ತು ಪ್ರವಾಸಿಗರು ಸಹ ರೈಲಿನಲ್ಲಿ ಪ್ರಯಾಣಿಸಿದಾಗ ಅಸುರಕ್ಷಿತ ಪರಿಸ್ಥಿತಿಗಳು, ಅಶುದ್ಧ ವಿಶ್ರಾಂತಿ ಕೊಠಡಿಗಳು ಅಥವಾ ಆಹಾರದೊಂದಿಗೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಿರುತ್ತಾರೆ ಮತ್ತು ರೈಲ್ವೆಯ ಗಮನಕ್ಕೆ ತಂದಿರುತ್ತಾರೆ.




ನಿರ್ವಹಣಾ ಅಭ್ಯಾಸಗಳನ್ನು ಸುಧಾರಿಸಲು ರೈಲ್ವೆ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಆಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಹೂಡಿಕೆಯ ಅವಶ್ಯಕತೆಯಿದೆ.

First published: