ದೀಪಾವಳಿ ಧಮಾಕಾ: ಇನ್ಮುಂದೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು..!

zahir | news18
Updated:October 22, 2018, 9:02 PM IST
ದೀಪಾವಳಿ ಧಮಾಕಾ: ಇನ್ಮುಂದೆ ರೈಲಿನಲ್ಲಿ ಉಚಿತವಾಗಿ ಪ್ರಯಾಣಿಸಬಹುದು..!
  • News18
  • Last Updated: October 22, 2018, 9:02 PM IST
  • Share this:
-ನ್ಯೂಸ್ 18 ಕನ್ನಡ

ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಶುಭ ಸುದ್ದಿಯನ್ನು ನೀಡಿದೆ. ಇನ್ನೇನು ದೀಪಾವಳಿ ಹಬ್ಬ ಬರಲಿದ್ದು, ನೀವು ಕುಟುಂಬದವರನ್ನು ಭೇಟಿ ಮಾಡಲು ಬಯಸುತ್ತಿದ್ದರೆ ರೈಲಿನಲ್ಲಿ ಹೋಗುವುದು ಉತ್ತಮ. ಏಕೆಂದರೆ ಈ ಬಾರಿಯ ಹಬ್ಬದ ಋತುವಿನಲ್ಲಿ ರೈಲು ಟಿಕೆಟ್ ಮೇಲೆ ಭಾರೀ ರಿಯಾಯಿತಿ ಮತ್ತು ಉಚಿತ ಪ್ರಯಾಣದ ಸೌಲಭ್ಯ ನೀಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಭಾರತೀಯ ರೈಲ್ವೆಯು ಒಂದು ಪಟ್ಟಿಯನ್ನು ಸಿದ್ಧಪಡಿಸಲಿದ್ದು, ಈ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ಕೆಲವು ಷರತ್ತುಗಳನ್ನು ವಿಧಿಸಿದೆ. ನಿಮ್ಮ ಹೆಸರು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡರೆ ನಿಮ್ಮ ರೈಲು ಟಿಕೆಟ್​ ಮೇಲೆ ಶೇ. 25 ರಿಂದ ಶೇ.100 ರಷ್ಟು ರಿಯಾಯಿತಿ ಸಿಗಲಿದೆ.

ಉಚಿತ ಪ್ರಯಾಣ
ಇಂಡಿಯನ್ ರೈಲ್ವೆ ಮಾಡಲಿರುವ ಈ ಲೀಸ್ಟ್​ನಲ್ಲಿ ಸ್ಥಾನ ಪಡೆದ ವ್ಯಕ್ತಿಯು ಒಬ್ಬರೆ ಪ್ರಯಾಣಿಸುತ್ತಿದ್ದರೆ, ಅಥವಾ ಕ್ಯಾನ್ಸರ್​ನಿಂದ ಬಳಲುತ್ತಿರುವ ವ್ಯಕ್ತಿಯೊಂದಿಗೆ, ಇಲ್ಲ ಆಪ್ತರ ಚಿಕಿತ್ಸೆಗಾಗಿ ಪಯಣಿಸುತ್ತಿದ್ದರೆ ಅವರಿಗೆ ಟಿಕೆಟ್​ ದರದಲ್ಲಿ ಶೇ.100 ರಷ್ಟು ರಿಯಾಯಿತಿ ನೀಡಲಿದೆ. ಈ ಉಚಿತ ಪ್ರಯಾಣವನ್ನು ಎಸಿ ಕೋಚ್ ಅಥವಾ ಸ್ಲೀಪರ್ ಕ್ಲಾಸ್​ನಲ್ಲೂ ಪಡೆಯಬಹುದು. ಇದಲ್ಲದೆ ಸೆಕೆಂಡ್ ಮತ್ತು ಫಸ್ಟ್​ ಕ್ಲಾಸ್​ ಎಸಿ ಚೇರ್​ ಕಾರ್​ ಟಿಕೆಟ್​ ಮೇಲೆ ಶೇ.75ರಷ್ಟು ರಿಯಾಯಿತಿ ಪಡೆಯಬಹುದು.

ಇದನ್ನೂ ಓದಿ: ಬೆಳ್ಳಗಿರುವುದೆಲ್ಲಾ ಹಾಲಲ್ಲ: ನೀವು ಕುಡಿಯುತ್ತಿರುವುದು ರಾಸಾಯನಿಕ ವಿಷ..!

ಭಾರತೀಯ ರೈಲ್ವೆ ಇಲಾಖೆಯಲ್ಲಿ ಈ ಹಿಂದೆ ಕೂಡ ವಿನಾಯಿತಿ ನೀಡಲಾಗಿದ್ದು ವಿಕಲಚೇತನರಿಗೆ ಮತ್ತು ಗಂಭೀರ ಖಾಯಿಲೆಯಿಂದ ಬಳಲುತ್ತಿರುವವರಿಗೆ ರಿಯಾಯಿತಿ ಸೌಲಭ್ಯ ಒದಗಿದೆ. ಅಲ್ಲದೆ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ವಿಶೇಷ ವಿನಾಯಿತಿ ನೀಡಲಾಗುತ್ತದೆ.
First published:October 22, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading