Salary hike: ಈ ಬಾರಿ ಕೂಡ ಖಾಸಗಿ ಉದ್ಯೋಗಿಗಳಿಗಿಲ್ಲ ವೇತನ ಹೆಚ್ಚಳ; ಆರ್ಥಿಕ ಸಂಕಷ್ಟದಲ್ಲೇ ಇವೆ ಕಂಪನಿಗಳು

ಕೊರೋನಾ ಹಾವಳಿಯಿಂದ ಬಹುತೇಕ ಕಂಪನಿಗಳ ಆದಾಯಕ್ಕೆ ಪೆಟ್ಟುಬಿದ್ದಿದೆ. ಕೊರೋನಾ ಹೊಡೆತಕ್ಕೆ ಮಾನವ ಸಂಪನ್ಮೂಲ ಅಧಿಕಾರಿಗಳ ಲೆಕ್ಕವೂ ಏರು-ಪೇರಾಗಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಕೆಲವು ವರ್ಷಗಳ ಹಿಂದೆ ಕಂಪನಿಗಳಲ್ಲಿ ಉತ್ತಮ ಕೆಲಸ ಮಾಡುವ ಉದ್ಯೋಗಿಗಳು ಬಹಳ ಖುಷಿಯಿಂದ ಕೆಲಸ ಮಾಡುತ್ತಿದ್ದರು. ಆದರೆ, ಕಂಪನಿಗಾಗಿ ಈಗ ಎಷ್ಟೇ ಕೆಲಸ ಮಾಡಿದರೂ ಕೂಡ ಭಯದ ವಾತಾವರಣ ಉದ್ಯೋಗಿಗಳಲ್ಲಿ ಶುರುವಾಗಿದೆ. ಏಕೆಂದರೆ, 2020ರ ಕೊರೊನಾ ಸೋಂಕಿನ ಹೊಡೆತಕ್ಕೆ ಸಾವಿರಾರು ಜನರು ಮೃತಪಟ್ಟರೇ ಹಲವು ಜನರು ಉದ್ಯೋಗವನ್ನು ಕಳೆದುಕೊಂಡರು. ಇದರಿಂದಾಗಿ ಸಹಸ್ರಾರು ಕಂಪನಿಗಳು ತನ್ನ ಉದ್ಯೋಗಿಗಳಿಗೆ ಸಂಬಳ ಹೆಚ್ಚಳ ಮಾಡುವ ಸಾಮರ್ಥ್ಯದಲ್ಲಿ ಇಲ್ಲ. ಏಕೆಂದರೆ, ಕೊರೋನಾ ಹಾವಳಿಯಿಂದ ಬಹುತೇಕ ಕಂಪನಿಗಳ ಆದಾಯಕ್ಕೆ ಪೆಟ್ಟುಬಿದ್ದಿದೆ. ಕೊರೋನಾ ಹೊಡೆತಕ್ಕೆ ಮಾನವ ಸಂಪನ್ಮೂಲ ಅಧಿಕಾರಿಗಳ ಲೆಕ್ಕವೂ ಏರು-ಪೇರಾಗಿದೆ. ಕಂಪನಿಗಳು ಕಠಿಣ ಸಮಯದಲ್ಲಿ ಇದ್ದರೂ ಲಾಕ್​ಡೌನ್​ ವೇಳೆ ಹಲವು ಉದ್ಯೋಗಿಗಳನ್ನು ಕಡಿತ ಮಾಡಬಾರದು. ಕಂಪನಿಯನ್ನು ಮುಚ್ಚಬಾರದು ಎಂದು ಉದ್ಯೋಗಿಗಳಿಗೆ ವರ್ಕ್​ ಫ್ರಮ್​ ಹೋಮ್ ಸೌಲಭ್ಯ ಮೂಲಕ ಕೆಲಸವನ್ನು ನೀಡಲಾಗಿದೆ. ಹಾಗಾಗಿ ಉದ್ಯೋಗಿಗಳು ಹೆಚ್ಚಿನ ನಿರೀಕ್ಷೆಯನ್ನು ಹೊಂದಬಾರದು. ಮನೆಯಲ್ಲಿ ಕೆಲಸ ಮಾಡಿದವರು ಕೂಡ ಕಂಪನಿ ನಮಗೆ ಹೈಕ್ ನೀಡುವುದಿಲ್ಲ ಎಂದು ಭಾವಿಸಬಾರದು ಎಂಬುದು ಹಲವು ಕಂಪನಿಗಳ ಮಾನವ ಸಂಪನ್ಮೂಲ ಅಧಿಕಾರಿಗಳ ಅಭಿಪ್ರಾಯ.

    ಆದರೆ, ಬೆಂಗಳೂರು ಮೂಲದ ಹೆಚ್ಆರ್ ಸಲಹೆಗಾರ ಸಾಹೀರ್ ಅಗರ್ವಾಲ್ ಹೇಳುವ ಪ್ರಕಾರ, 2018 ಅಥವಾ 2019ರಲ್ಲಿ ಕಂಪನಿಯಲ್ಲಿ ಉತ್ತಮ ಕೆಲಸ ಮಾಡಿದವರಿಗೆ ಶೇ.15-18ರಷ್ಟು ವೇತನ ಹೆಚ್ಚಿಗೆ ಪಡೆಯುತ್ತಿದ್ದರು. ಕೊರೋನಾ ಸೋಂಕಿನ ಕಾರಣದಿಂದಾಗಿ 2021ರಲ್ಲಿ ಉದ್ಯೋಗಿಗಳು ಶೇ. 8-9 ರಷ್ಟು ಮಾತ್ರ ವೇತನ ಹೆಚ್ಚಳ ಪಡೆಯಲಿದ್ದಾರೆ ಎಂದು ಹೇಳುತ್ತಾರೆ.

    ಭಾರತದಲ್ಲಿ 2021ರಲ್ಲಿ ಉತ್ತಮ ಉದ್ಯೋಗಿಗಳಿಗೆ ಶೇ.7.7ರಷ್ಟು ವೇತನ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ವೃತ್ತಿಪರ ಸೇವಾ ಸಂಸ್ಥೆಯಾದ ಅಯಾನ್ ತಿಳಿಸಿದೆ. 2021ರಲ್ಲಿ 88 ಪ್ರತಿಶತದಷ್ಟು ಕಂಪನಿಗಳು ಉದ್ಯೋಗಿಗಳ ವೇತನವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿವೆ. ಇನ್ನು, 2019ರ ಬಳಿಕ ಜಿಡಿಪಿ ಕುಸಿತದಿಂದಾಗಿ ಹೆಚ್ಚಿನ ಕಂಪನಿಗಳು ದೊಡ್ಡ ವೇತನ ಹೆಚ್ಚಳವನ್ನು ಮಾಡದೇ ಕಡಿಮೆ ವೇತನವನ್ನು ಹೆಚ್ಚಳ ಮಾಡುತ್ತಿದ್ದವು.

    ಇ-ಕಾಮರ್ಸ್, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೇತನ ಹೆಚ್ಚಳ!

    2018ರಲ್ಲಿ ಕಾರ್ಪೋರೆಟ್ ಕಂಪನಿ ಉದ್ಯೋಗಿಗಳು ಶೇ.10.1ರಷ್ಟು ವೇತನವನ್ನು ಹೆಚ್ಚಳ ಪಡೆದರೇ, 2019ರಲ್ಲಿ ಕಾರ್ಪೋರೆಟ್ ಕಂಪನಿ ಉದ್ಯೋಗಿಗಳ ಸಂಬಳ ಹೆಚ್ಚಳ ಶೇ.9.4ಕ್ಕೆ ಇಳಿಕೆಯಾಗಿತ್ತು. ಆದರೆ, 2020ರ ವೇಳೆ ಅಬ್ಬರಿಸಿದ ಕೊರೋನಾ ಹೊಡೆತಕ್ಕೆ ಹಲವು ಕಂಪನಿಗಳು ಆರ್ಥಿಕ ನಷ್ಟಕ್ಕೆ ಸಿಲುಕಿದವು. ಇದರಿಂದ ಕೆಲವು ಕಂಪನಿಗಳು ಚೇತರಿಸಿಕೊಂಡರೆ, ಇನ್ನು ಕೆಲವು ಕಂಪನಿಗಳು ನಷ್ಟದಿಂದ ಹೊರಬರಲು ಯತ್ನಿಸುತ್ತಿವೆ ಎಂದು RightEmploy HR Services ಪ್ರಧಾನ ವ್ಯವಸ್ಥಾಪಕ ಪರಿಕ್ಷಿತ್ ತಿವಾರಿ ಹೇಳಿದ್ದಾರೆ.

    ಇದನ್ನು ಓದಿ: ಕೃಷಿ ಸಾಲದ ಬಳಿಕ ಚಿನ್ನದ ಮೇಲಿನ ಸಾಲ ಮನ್ನಾ ಘೋಷಿಸಿದ ತಮಿಳುನಾಡು ಸಿಎಂ

    2019ರಲ್ಲಿ ಶೇಕಡಾ 10.5-11ರಷ್ಟು ವೇತನವನ್ನು ಇ-ಕಾಮರ್ಸ್ ಮತ್ತು ಮಾಹಿತಿ ತಂತ್ರಜ್ಞಾನದಂತಹ ಕಂಪನಿಗಳ ಉದ್ಯೋಗಿಗಳು ಪಡೆದುಕೊಂಡಿದ್ದರು. ಇದೇ ಕ್ಷೇತ್ರದ ಉದ್ಯೋಗಿಗಳಿಗೆ 2020ರ ವೇತನವನ್ನು ಶೇ.6.5ರಷ್ಟು ಹೆಚ್ಚಿಗೆ ವೇತನವನ್ನು ಕಂಪನಿಗಳು ನೀಡಿದ್ದವು. ಆದರೆ. 2021ರ ವೇಳೆಗೆ ಹಲವು ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಣೆ ಆಗದೇ ಇರುವುದರಿಂದಾಗಿ ಉದ್ಯೋಗಿಗಳ ವೇತನವನ್ನು ಹೆಚ್ಚಿಸಲು ಯೋಚಿಸುತ್ತಿವೆ.

    ಇನ್ನೂ ನಿಲ್ಲದ ಕೊರೋನಾ ಸೋಂಕು

    ಇನ್ನು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದಾಗಿ ಮುಂದಿನ ದಿನಗಳು ಹೇಗಿರಲಿವೆ ಎಂದು ಸ್ಪಷ್ಟವಾಗಿಲ್ಲ ಎಂದು ಕೋಲ್ಕತಾ ಮೂಲದ ಮಾನವ ಸಂಪನ್ಮೂಲ ಸಂಸ್ಥೆಯ ಜೆಮ್ಸ್ ಕರಿಯರ್ ಸರ್ವಿಸ್ನ ಹಿರಿಯ ಉಪಾಧ್ಯಕ್ಷೆ ಸುಜಾತಾ ದಸ್ತಿದಾರ್ ಹೇಳಿದ್ದಾರೆ.

    ಸದ್ಯ ಭಾರತದಲ್ಲಿ ಲಸಿಕೆ ಅಭಿಯಾನ ನಡೆಯುತ್ತಿದೆ. ದೇಶದಲ್ಲಿ ಎಲ್ಲರಿಗೆ ಲಸಿಕೆ ಸಿಗಲು ವರ್ಷ ಬೇಕಾಗಬಹುದು. ಆದರಿಂದ ಐಟಿ, ಮಾಹಿತಿ ತಂತ್ರಜ್ಞಾನ, ಇ-ಕಾಮರ್ಸ್ನಂತಹ ಕ್ಷೇತ್ರಗಳಲ್ಲಿ 2022ರ ನಡುವೆ ಶೇ.10-12ರಷ್ಟು ವೇತನ ಹೆಚ್ಚಳ ಆಗಬಹುದು. ಹಲವು ವಿಭಾಗದಲ್ಲಿ ವೇತನ ಹೆಚ್ಚಳ 2024ರ ಒಳಗೆ ಎರಡು ಸಂಖ್ಯೆಯ ಸಂಬಳ ಹೆಚ್ಚಳ ಪಡೆಯುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.
    Published by:Seema R
    First published: