Suella Braverman: ಭಾರತೀಯ ಮೂಲದ ಸುಯೆಲ್ಲಾ ಬ್ರೆವರ್‌ಮನ್ ಬ್ರಿಟನ್​ನ ಹೊಸ ಗೃಹ ಕಾರ್ಯದರ್ಶಿ

ಸುಯೆಲ್ಲಾ ಬ್ರೆವರ್‌ಮನ್

ಸುಯೆಲ್ಲಾ ಬ್ರೆವರ್‌ಮನ್

ಬ್ಯಾರಿಸ್ಟರ್ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ಮಂಗಳವಾರ ಯುಕೆಯ ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಸುಯೆಲ್ಲಾ ಭಾರತೀಯ ಮೂಲದ ಪ್ರೀತಿ ಪಟೇಲ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

  • Share this:

ಭಾರತೀಯ ಮೂಲದ ಬ್ಯಾರಿಸ್ಟರ್ ಸುಯೆಲ್ಲಾ ಬ್ರೆವರ್‌ಮನ್ (Suella Braverman) ಅವರನ್ನು ಮಂಗಳವಾರ ಯುಕೆಯ ಹೊಸ ಗೃಹ ಕಾರ್ಯದರ್ಶಿಯಾಗಿ (Home Secretary) ನೇಮಕ ಮಾಡಲಾಗಿದ್ದು, ಸುಯೆಲ್ಲಾ ಭಾರತೀಯ ಮೂಲದ ಪ್ರೀತಿ ಪಟೇಲ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಬೋರಿಸ್ ಜಾನ್ಸನ್ (Boris Johnson) ನೇತೃತ್ವದ ಸರ್ಕಾರದಲ್ಲಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿರುವ ಆಗ್ನೇಯ ಇಂಗ್ಲೆಂಡ್‌ನ (South East England) ಫರೆಹ್ಯಾಮ್‌ನ ಸಂಸತ್ತಿನ 42 ವರ್ಷದ ಕನ್ಸರ್ವೇಟಿವ್ ಪಕ್ಷದ ಸದಸ್ಯೆಯಾದ ಸುಯೆಲ್ಲಾ, ಯುಕೆ ನಾಯಕ ಹಾಗೂ ಪ್ರಧಾನ ಮಂತ್ರಿಯಾಗಿ ಬೋರಿಸ್ ಜಾನ್ಸನ್ ಬದಲಿಗೆ ಪ್ರಧಾನ ಮಂತ್ರಿ (Prime Minister) ರೇಸ್‌ನಲ್ಲಿದ್ದ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.


ಹೊಸದಾಗಿ ನೇಮಕಗೊಂಡ ಪ್ರಧಾನಮಂತ್ರಿ ಲಿಜ್ ಟ್ರಸ್ ಅವರು ಬ್ರೆವರ್‌ಮನ್ ಅವರನ್ನು ಗೃಹ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ. ಈ ಮೂಲಕ ಲಿಜ್ ಮುಂದಿನ ಪ್ರಧಾನಿ ಹುದ್ದೆಯ ಅಭ್ಯರ್ಥಿಯೂ ಸಹ ಆಗಿದ್ದಾರೆ. ಮಾಜಿ ಪ್ರಧಾನಿ ಥೆರೆಸಾ ಮೇ ಅವರ ಬ್ರೆಕ್ಸಿಟ್ ಒಪ್ಪಂದವನ್ನು ಸಂಸತ್ತಿನಲ್ಲಿ ಮೂರು ಬಾರಿ ಮತ ಹಾಕಿದಾಗ ಅದನ್ನು ಬೆಂಬಲಿಸದ 28 ಟೋರಿ ಸಂಸದರಲ್ಲಿ ಸುಯೆಲ್ಲಾ ಅವರು ಒಬ್ಬರು.


ಭಾರತೀಯ ಮೂಲಕ ಸುಯೆಲ್ಲಾ ಬ್ರೆವರ್‌ಮನ್
ಇಬ್ಬರು ಮಕ್ಕಳ ತಾಯಿಯಾಗಿರುವ ಸುಯೆಲ್ಲಾ, ಹಿಂದು ತಮಿಳು ತಾಯಿ ಉಮಾ ಹಾಗೂ ಗೋವಾ ಮೂಲದ ಕ್ರಿಸ್ಟಿ ಫರ್ನಾಂಡಿಸ್ ಅವರ ಮಗಳಾಗಿದ್ದಾರೆ. ಸುಯೆಲ್ಲಾ ತಾಯಿ ಮಾರಿಷಸ್‌ನಿಂದ ಇಂಗ್ಲೆಂಡ್‌ಗೆ ವಲಸೆ ಹೋದವರು ಅಂತೆಯೇ ತಂದೆ 1960 ರ ದಶಕದಲ್ಲಿ ಕೀನ್ಯಾದಿಂದ ವಲಸೆ ಬಂದರು. ಕಾನೂನು ಸವಾಲುಗಳನ್ನು ಎದುರಿಸುತ್ತಿರುವ ರುವಾಂಡಾಕ್ಕೆ ಕೆಲವು ನೆರವುಗಳನ್ನು ಕೋರಿ ಕಳುಹಿಸುವ ಸರ್ಕಾರದ ಯೋಜನೆಗಳನ್ನು ಬ್ರೆವರ್‌ಮನ್‌ಗೆ ವಹಿಸಲಾಗುವುದು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.


ಬ್ರೆಕ್ಸಿಟ್‌ನ (ಐರೋಪ್ಯ ಒಕ್ಕೂಟದಿಂದ ಯುನೈಟೆಡ್ ಕಿಂಗ್‌ಡಮ್ ವಾಪಸಾತಿ) ಅವಕಾಶಗಳನ್ನು ಹೊಂದಿಸಲು ಬಯಸುತ್ತೇನೆ ಹಾಗೂ ಬಾಕಿ ಉಳಿದ ಸಮಸ್ಯೆಗಳನ್ನು ನಿವಾರಿಸಲು ಅಂತೆಯೇ ತೆರಿಗೆಗಳನ್ನು ಕಡಿತಗೊಳಿಸುವ ಸುಧಾರಣೆಗಳನ್ನು ಮಾಡಲು ಬಯಸುತ್ತೇನೆ ಎಂದು ಯುರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ (ECHR) ನಿಂದ ಇಂಗ್ಲೆಂಡ್ ಅನ್ನು ಹೊರತೆಗೆಯುವುದು ಸೇರಿದಂತೆ ಯುರೋಪ್‌ನಿಂದ ಸ್ಪಷ್ಟ ವಿರಾಮವನ್ನು ಬಯಸುವ, ಕನ್ಸರ್ವೇಟಿವ್‌ಗಳ ಬ್ರೆಕ್ಸಿಟ್ ಪರವಾದ ವಿಭಾಗದ ಪ್ರಮುಖ ಸದಸ್ಯೆಯಾಗಿರುವ ಬ್ರೆವರ್‌ಮನ್ ಹೇಳಿದ್ದಾರೆ.


ಇದನ್ನೂ ಓದಿ:  Kuldeep Yadav: 32 ವರ್ಷ ಪಾಕಿಸ್ತಾನ ಜೈಲಿನಲ್ಲಿದ್ರೂ ಸಿಗಲಿಲ್ಲ ನೆರವು! ಕರಾಳ ನೆನಪು ಬಿಚ್ಚಿಟ್ಟ ಭಾರತೀಯ


ಅವರು ಬ್ರಿಟನ್ ಅನ್ನು ಪ್ರೀತಿಸಿದರು. ಅವರಿಗೆ ಬ್ರಿಟನ್ ಹೊಸ ಭರವಸೆಯನ್ನು ನೀಡಿತು. ಭದ್ರತೆಯನ್ನು ನೀಡಿತು. ಈ ದೇಶವು ಅವರಿಗೆ ಅವಕಾಶವನ್ನು ಒದಗಿಸಿತು. ರಾಜಕೀಯಕ್ಕೆ ನನ್ನ ಕಾರ್ಯವಿಧಾನದಿಂದ ನನ್ನ ಕುಟುಂಬದ ಹಿನ್ನಲೆಯನ್ನು ತಿಳಿಯಬಹುದಾಗಿದೆ ಎಂಬುದಾಗಿ ಬ್ರೇವರ್‌ಮನ್ ತಮ್ಮ ನಾಯಕತ್ವ ಅಭಿಯಾನದ ವಿಡಿಯೋದಲ್ಲಿ ಪೋಷಕರ ಕುರಿತಾಗಿ ಹೇಳಿದ್ದಾರೆ.


ಯುಕೆಯ ಪ್ರಧಾನಿ ಲಿಜ್ ಟ್ರಸ್‌ಗೆ ಬೆಂಬಲ
ಅದಾಗ್ಯೂ ಯುಕೆಯ ಸಂಸದರ ಆರಂಭಿಕ ಮತದಾನದ ಎರಡನೇ ಸುತ್ತಿನಲ್ಲಿ ಸುಯೆಲ್ಲಾ ಹೊರಬಿದ್ದ ಸಂದರ್ಭದಲ್ಲಿ, ಯುಕೆಯ ಪ್ರಧಾನ ಮಂತ್ರಿಯಾದ ಲಿಜ್‌ ಟ್ರಸ್‌ಗೆ ಬೆಂಬಲವನ್ನು ನೀಡಿದರು ಅಂತೆಯೇ ಟ್ರಸ್ ಅವರು ಯುಕೆ ಸರ್ಕಾರದ ಅತ್ಯುನ್ನತ ಹುದ್ದೆಯನ್ನು ಸುಯೆಲ್ಲಾರಿಗೆ ನೀಡಿದ್ದಾರೆ.


ಲಿಜ್ ಅವರು ಪ್ರಧಾನ ಮಂತ್ರಿಯಾಗಲು ಇದೀಗ ಸಿದ್ಧರಾಗಿದ್ದು, ಅವರು ಹುದ್ದೆಯ ಕುರಿತು ಹೆಚ್ಚು ತಯಾರಾಗುವ ಅಗತ್ಯವಿಲ್ಲ. ಹುದ್ದೆಯು ಸವಾಲಿನದ್ದಾಗಿದೆ ಮತ್ತು ಕೆಲಸವು ಕಠಿಣವಾಗಿದೆ, ಸರಿಯಾಗಿ ಕೆಲಸವನ್ನು ಮುನ್ನಡೆಸಬೇಕಾಗಿದೆ. ಪಕ್ಷವು ಆರು ವರ್ಷಗಳ ಕಠಿಣತೆಯನ್ನು ಎದುರಿಸಿತ್ತು ಅಂತೆಯೇ ಸ್ಥಿರತೆಯನ್ನು ಕಾಪಾಡುವುದು ತುರ್ತಾಗಿ ಮತ್ತು ತ್ವರಿತವಾಗಿ ನಡೆಯಬೇಕಾಗಿದೆ ಎಂದು ಸುಯೆಲ್ಲಾ ಲಿಜ್ ಕುರಿತು ನುಡಿದಿದ್ದಾರೆ.


ರೇಲ್ ಬ್ರೆವರ್‌ಮನ್‌ ಯಾರು 
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಕಾನೂನು ಪದವೀಧರರಾಗಿರುವ ಸುಯೆಲ್ಲಾ 2018 ರಲ್ಲಿ ರೇಲ್ ಬ್ರೆವರ್‌ಮನ್‌ರನ್ನು ವಿವಾಹವಾದರು ಹಾಗೂ ತಮ್ಮ ಎರಡನೇ ಮಗುವಿಗೆ ಜನ್ಮ ನೀಡುವ ಸಮಯದಲ್ಲಿ ಆರು ತಿಂಗಳ ಪಾವತಿಯ ಹೆರಿಗೆ ರಜೆಯನ್ನು ಸುಯೆಲ್ಲಾ ಪಡೆದುಕೊಂಡಿದ್ದರು. ಈ ಹಿಂದೆ ಕ್ಯಾಬಿನೆಟ್ ಮಂತ್ರಿಗಳು ಹೆರಿಗೆ ಸಮಯದಲ್ಲಿ ರಾಜೀನಾಮೆ ನೀಡುತ್ತಿದ್ದ ಕಾನೂನು ಇದೇ ಸಮಯದಲ್ಲಿ ಬದಲಾವಣೆಗೊಂಡಿತು.


ಇದನ್ನೂ ಓದಿ: Rishi Sunak: ಬ್ರಿಟನ್ ಪ್ರಧಾನಿ ರೇಸ್​ನಲ್ಲಿ ಸೋತ ಬೆನ್ನಲ್ಲೇ ಮಹತ್ವದ ಸಂದೇಶ ಕೊಟ್ಟ ರಿಷಿ ಸುನಕ್!

top videos


    ಬ್ರೆವರ್‌ಮನ್ ಅವರು ಬೌದ್ಧ ಧರ್ಮದವರಾಗಿದ್ದಾರೆ, ಅವರು ಲಂಡನ್ ಬೌದ್ಧ ಕೇಂದ್ರಕ್ಕೆ ನಿಯಮಿತವಾಗಿ ಆಗಮಿಸುತ್ತಾರೆ. ಭಗವಾನ್ ಬುದ್ಧನ ಹೇಳಿಕೆಗಳ 'ಧಮ್ಮಪದ' ಗ್ರಂಥದ ಮೇಲೆ ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    First published: