News18 India World Cup 2019

ಕುಡಿದು ಪೊಲೀಸರಿಗೆ ತೊಂದರೆ ನೀಡುತ್ತಿದ್ದ ಭಾರತೀಯ ಮೂಲದ ಸಿಂಗಪೂರ್​ ವ್ಯಕ್ತಿಗೆ ಜೈಲು

news18
Updated:September 6, 2018, 3:51 PM IST
ಕುಡಿದು ಪೊಲೀಸರಿಗೆ ತೊಂದರೆ ನೀಡುತ್ತಿದ್ದ ಭಾರತೀಯ ಮೂಲದ ಸಿಂಗಪೂರ್​ ವ್ಯಕ್ತಿಗೆ ಜೈಲು
news18
Updated: September 6, 2018, 3:51 PM IST
ನ್ಯೂಸ್​ 18 ಕನ್ನಡ

ಸಿಂಗಪೂರ್​ (ಸೆ. 6): ವಲಸೆ ಕಚೇರಿಯಲ್ಲಿ ಬಾಂಬ್​ ಇಟ್ಟಿದ್ದೇನೆ ಎಂದು ಪೋಲಿಸರಿಗೆ ಕರೆ ಮಾಡಿ ಸುಳ್ಳು ಮಾಹಿತಿ ನೀಡಿ ತೊಂದರೆ ನೀಡುತ್ತಿದ್ದ ಭಾರತೀಯ ಮೂಲದ ಸಿಂಗಪೂರ್​​ ವ್ಯಕ್ತಿಗೆ ಅಲ್ಲಿನ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಗುರುಚರಣ್​ ಸಿಂಗ್​ (61) ಶಿಕ್ಷೆಗೆ ಒಳಗಾದ ವ್ಯಕ್ತಿ. ಮದ್ಯ ಸೇವನೆ ಮಾಡಿ ಈತ ಪೊಲೀಸರ ತುರ್ತು ಸಂಖ್ಯೆ 999ಕ್ಕೆ ಕರೆ ಮಾಡಿ ಹಲವಾರು ಭಾರೀ ತೊಂದರೆ ನೀಡಿದ್ದ.

ಜೂನ್​ನಲ್ಲಿ ಮೊದಲ ಬಾರಿ ಕರೆ ಮಾಡಿದ 15 ನಿಮಿಷಗಳ ಕರೆ ಮಾಡಿ ತೊಂದರೆ ನೀಡಿದ್ದ. ಜೂನ್​ 10ರಂದು ಸಾರ್ವಜನಿಕ ದೂರವಾಣಿಯಿಂದ ಕರೆ ಮಾಡಿದ್ದ . ಒಮ್ಮೆ ಕರೆ ಮಾಡಿದಾಗ ಪೊಲೀಸರಿಗೆ ನೀವು ಮೂರ್ಖರು ಎಂದು ಪೊಲೀಸರಿಗೆ ಬಾಯ್ದಿದ್ದ. ಮತ್ತೊಂದು ಕರೆಯಲ್ಲಿ ನಾನು ವಲಸೆ ಕಚೇರಿಯಲ್ಲಿ ಬಾಂಬ್​ ಇಟ್ಟಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದ.

ಈತನ ಕರೆ ಪತ್ತೆ ಮಾಡಿ ಆತನನ್ನು ವಶಲಕ್ಕೆ ಪಡೆದಿದ್ದರು. ಈ ವೇಳೆ ಆತ ಕುಡಿದಿದ್ದ ಖಾಲಿ ಬಿಯರ್​ ಬಾಟಲ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಲ್ಲಿನ ಸುದ್ದಿ ಮಾಧ್ಯಮ ವರದಿ ಮಾಡಿದೆ.

ಸಿಂಗ್​ಗೆ ಕುಡಿದದ ಚಟದಿಂದ ಅನೇಕ ತೊಂದರೆಗಳನ್ನು ಮಾಡುತ್ತಿದ್ದ. ಈತನ ದೊಡ್ಡ ಸಮಸ್ಯೆಗೆ ಕುಡಿತ. ಇದರಿಂದಲೇ ಈ ಸಮಸ್ಯೆಯಾಗುತ್ತಿದ್ದಂತೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ,
Loading...

 
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...