ದಿನೇ ದಿನೇ ಭಾರತದಲ್ಲಿ (India) ಹಠಾತ್ ಹೃದಯಾಘಾತಕ್ಕೊಳಗಾಗಿ (Cardiac Arrest) ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಹೃದಯಾಘಾತಕ್ಕೆ (Heart Attack) ಹೆಚ್ಚಾಗಿ ವಯಸ್ಕರು ಮತ್ತು ಮಧ್ಯವಯಸ್ಕರು ಬಲಿಯಾಗುತ್ತಿದ್ದಾರೆ. ಸದ್ಯ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ (Badminton Court) ಆಟವಾಡುತ್ತಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಹೌದು ಓಮನ್ನ ಮಸ್ಕತ್ನಲ್ಲಿ (Oman's Muscat) ಭಾರತೀಯ ಮೂಲದ ವ್ಯಕ್ತಿಯೊಬ್ಬರು ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಆಟವಾಡುತ್ತಿರುತ್ತಾರೆ ಈ ವೇಳೆ ಆಟದ ಮಧ್ಯೆಯೇ ಕುಸಿದುಬಿದ್ದು ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದಾರೆ. ಜನವರಿ 2 ರಂದು ಈ ಘಟನೆ ನಡೆದಿದೆ.
ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಕುಸಿದ ವ್ಯಕ್ತಿ
ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್ ಆಟವನ್ನು ಖುಷಿಯಿಂದ ಆಡುತ್ತಿರುತ್ತಾರೆ. ಈ ವೇಳೆ ಸಕ್ರಿಯವಾಗಿ ಆಟವಾಡುತ್ತಾ ಸ್ಮ್ಯಾಶ್ಗಳನ್ನು ಹೊಡೆಯುತ್ತಿರುತ್ತಾರೆ ಮತ್ತು ಷಟಲ್ ಅನ್ನು ನೆಟ್ಗೆ ಹತ್ತಿರವಾಗುವಂತೆ ಹೊಡೆಯುತ್ತಿರುತ್ತಾರೆ. ಈ ವೇಳೆ ಎದುರಾಳಿಯಾಗಿ ಆಟವಾಡುತ್ತಿದ್ದ ಸ್ನೇಹಿತರು ಕೂಡ ಇದೇ ರೀತಿ ಆಟವಾಡುತ್ತಿರುತ್ತಾರೆ. ಆದರೆ ಕೆಲವು ಸೆಕೆಂಡುಗಳ ಬಳಿಕ ವ್ಯಕ್ತಿ ಇದ್ದಕ್ಕಿದ್ದಂತೆ ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಕುಸಿದು ಬೀಳುತ್ತಾರೆ. ಕೂಡಲೇ ಸ್ನೇಹಿತರು ಸಹಾಯಕ್ಕೆ ಧಾವಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
2 Jan 2023 : Indian-origin man dies of 💔 attack💉 while playing on court in Muscat#heartattack2023 #heartattack #cardiacarrest #Myocarditis #ClotShotStrikesAgain pic.twitter.com/m96z2bYcAg
— Anand Panna (@AnandPanna1) January 10, 2023
ವ್ಯಕ್ತಿಯನ್ನು ಎಬ್ಬಿಸಲು ಸ್ನೇಹಿತರಿಂದ ಭಾರೀ ಪ್ರಯತ್ನ
ದುರಾದೃಷ್ಟವಶಾತ್ ಸ್ನೇಹಿತರು ಎಷ್ಟೇ ಬಾರಿ ಎಬ್ಬಿಸಿದರೂ ವ್ಯಕ್ತಿ ಮೇಲಕ್ಕೆ ಎದ್ದೇಳಲೇ ಇಲ್ಲ. ವ್ಯಕ್ತಿ ಬ್ಯಾಡ್ಮಿಂಟನ್ ಆಟವನ್ನು ಆಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿದೆ ಎಂದು ಟೈಮ್ಸ್ ಆಫ್ ಓಮನ್ ವರದಿ ಮಾಡಿದೆ.
ಆಟವಾಡುವಾಗ ಸ್ಪೋರ್ಟ್ಸ್ ಡ್ರೆಸ್ ಧರಿಸಿದ್ದ ವ್ಯಕ್ತಿ
ಮೃತ ವ್ಯಕ್ತಿ ಆಟವಾಡುವಾಗ ಸ್ಪೋರ್ಟ್ಸ್ ಡ್ರೆಸ್ ಧರಿಸಿದ್ದರು. ಎದುರಿನಿಂದ ಗಾಳಿಯಲ್ಲಿ ಬರುವ ಶಟಲ್ ಕಾಕ್ ಅನ್ನು ಜೋರಾಗಿ ಬ್ಯಾಟ್ನಿಂದ ಹೊಡೆಯುತ್ತಾರೆ. ಹೀಗೆ ನಗುತ್ತಾ ಆಟವನ್ನು ಆಡಿರುವುದನ್ನು ಬ್ಯಾಡ್ಮಿಂಟನ್ ಕಾಂಪ್ಲೆಕ್ಸ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ನೋಡಬಹುದಾಗಿದೆ.
38ನೇ ವಯಸ್ಸಿಗೆ ಸಾವನ್ನಪ್ಪಿದ ವ್ಯಕ್ತಿ ಕೇರಳ ಮೂಲದವರು
ವ್ಯಕ್ತಿಯ ಹೆಸರಿನ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದರೆ ಈತನಿಗೆ 38 ವರ್ಷವಾಗಿದ್ದು, ಕೇರಳ ಮೂಲದವರಾಗಿದ್ದಾರೆ ಮತ್ತು ಇವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲ್ಲದೇ ಮೃತ ವ್ಯಕ್ತಿ ಕ್ರೀಡಾ ಪ್ರೇಮಿಯಾಗಿದ್ದರು ಮತ್ತು ದೇಶೀಯ ಕ್ರಿಕೆಟ್ ಲೀಗ್ನಲ್ಲಿ ಆಗಾಗ ಆಟ ಆಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ರೀತಿ ಜಿಮ್ನಲ್ಲಿ ಕುಸಿದು ಬಿದ್ದಿದ್ದ ವ್ಯಕ್ತಿ
ಕಳೆದ ಕೆಲವು ತಿಂಗಳಿನಿಂದ ಜನರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ರಾಜಸ್ಥಾನದ ಕ್ಲಿನಿಕ್ವೊಂದರಲ್ಲಿ ವೈದ್ಯರಿಗಾಗಿ ಕಾಯುತ್ತಿದ್ದ ವ್ಯಕ್ತಿ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದರು. ಗಾಜಿಯಾಬಾದ್ನಲ್ಲಿ ಜಿಮ್ ತರಬೇತುದಾರರು ಜನರೊಂದಿಗೆ ಮಾತನಾಡುತ್ತಾ, ಕುರ್ಚಿಯ ಮೇಲೆ ಕುಳಿತುಕೊಂಡಾಗ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು.
ಮದುವೆ ಸಮಾರಂಭದಲ್ಲಿ ಕುಣಿಯುತ್ತಲೇ ಪ್ರಜ್ಞೆ ತಪ್ಪಿ ಬಿದ್ದಿದ್ದ ವ್ಯಕ್ತಿ
ಇಷ್ಟೇ ಅಲ್ಲದೇ ಮದುವೆ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇದರಿಂದ ಅವರ ಸಂಬಂಧಿಕರು ಭಾರೀ ಆಘಾತಕ್ಕೊಳಗಾಗಿದ್ದರು.
ಇದನ್ನೂ ಓದಿ: Viral Video: ಸ್ನೇಹಿತರೊಂದಿಗೆ ಮಾತನಾಡುವಾಗಲೇ ಹೃದಯಾಘಾತ, ಕುಸಿದು ಬಿದ್ದು ಯುವಕ ಸ್ಥಳದಲ್ಲೇ ಸಾವು!
ಭಾನುವಾರ ಮದುವೆ ನಡೆಯಬೇಕಿತ್ತು. ಆದರೆ ವಧುವಿನ ತಂದೆ ಶನಿವಾರವೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಅಲ್ಮೋರಾದಲ್ಲಿರುವ ವಧುವಿನ ಮನೆಯಲ್ಲಿಈ ಘಟನೆ ನಡೆದಿತ್ತು. ವಧುವಿನ ತಂದೆ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಡ್ಯಾನ್ಸ್ ಫ್ಲೋರ್ ಮೇಲೆ ಬಿದ್ದು ಸಾವನ್ನಪ್ಪಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ