ಹಿಂದೂ ಮಹಾಸಾಗರದ ಪೂರ್ವ ಟಿಮೋರ್ ಭಾಗದಲ್ಲಿ 6.1ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು ಇದರಿಂದ ಸುನಾಮಿ ಏಳುವ ಸಾಧ್ಯತೆ ಇದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೇ (United States Geological Survey) ಎಚ್ಚರಿಕೆ ನೀಡಿದೆ. ಭೂಕಂಪವು ಹಿಂದೂ ಮಹಾಸಾಗರ ಪ್ರದೇಶದ ಮೇಲೆ ಪರಿಣಾಮ ಬೀರುವ ಸುನಾಮಿಯನ್ನು ಉಂಟುಮಾಡುವ ಸಾಮರ್ಥ್ಯವನ್ನು (Tsunami warning in Indian Ocean region )ಹೊಂದಿದೆ ಎಂದು ವರದಿಯಾಗಿದೆ. ಸದ್ಯ ಯಾವ ಭಾಗದಲ್ಲೂ ಭೂಕಂಪನ ಅಥವಾ ಸುನಾಮಿಯಿಂದ ಹಾನಿ ಉಂಟಾದ ವರದಿಯಾಗಿಲ್ಲ. ಪೂರ್ವ ಟಿಮೋರ್ (East Timor) ಮತ್ತು ಇಂಡೋನೇಷ್ಯಾ (Indonesia) ನಡುವೆ ವಿಭಜನೆಯಾಗಿರುವ ಟಿಮೋರ್ ದ್ವೀಪದ ಪೂರ್ವ ತುದಿಯಿಂದ 51.4 ಕಿಮೀ (32 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು USGS ಹೇಳಿದೆ.
ಹಿಂದೂ ಮಹಾಸಾಗರದ ಸುನಾಮಿ ಎಚ್ಚರಿಕೆ ಮತ್ತು ತಗ್ಗಿಸುವಿಕೆ ವ್ಯವಸ್ಥೆ (IOTWMS) ಈ ಪ್ರದೇಶಕ್ಕೆ ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಆದರೆ ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ಅದರ ಸಾಧ್ಯತೆಯನ್ನು ತಳ್ಳಿಹಾಕಿದೆ.
ಭೂಕಂಪದ ತೀವ್ರತೆ ಹೇಗಿದೆ?
ಭೂಕಂಪವು 10 ಕಿ.ಮೀ ಸಮುದ್ರದ ಆಳದಲ್ಲಿ ಸಂಭವಿಸಿದೆ. ಲೊಸ್ಪಾಲೋಸ್‌ನ ಪೂರ್ವ ಆಗ್ನೇಯಕ್ಕೆ ಸುಮಾರು 29 ಕಿ.ಮೀ ದೂರದಲ್ಲಿ ಸಂಭವಿಸಿದೆ ಎಂದು EMSC ಹೇಳಿದೆ. ಭೂಕಂಪದ ತೀವ್ರತೆ 6.1 ಮತ್ತು 50 ಕಿ.ಮೀ ಆಳದವರೆಗೂ ಉಂಟಾಗಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.
ಆಸ್ಟ್ರೇಲಿಯಾ ನಿವಾಸಿಗಳಿಗೆ ಭೂಕಂಪದ ಅನುಭವ
ಆಸ್ಟ್ರೇಲಿಯಾದ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ನಿವಾಸಿಗಳ ಪೋಸ್ಟ್‌ಗಳ ಪ್ರಕಾರ 700 ಕಿಮೀ ದೂರದಲ್ಲಿರುವ ಆಸ್ಟ್ರೇಲಿಯಾದ ಡಾರ್ವಿನ್‌ನಲ್ಲಿನ ನಿವಾಸಿಗಳು ಭೂಕಂಪದ ಅನುಭವ ಆಗಿದೆ ಎಂದು ತಿಳಿಸಿದ್ದಾಗಿ ವರದಿಯಾಗಿದೆ.
Cream Bun: ಬನ್ನಲ್ಲಿ ಕ್ರೀಂ ಇಲ್ಲ ಎಂದು ಬೇಕರಿ ಮಾಲೀಕನ ಕೈ ಮುರಿದ ಪುಂಡರು
ಇಂಡೋನೇಷ್ಯಾದೊಂದಿಗೆ ಪೂರ್ವ ಟಿಮೋರ್ ಪೆಸಿಫಿಕ್ "ರಿಂಗ್ ಆಫ್ ಫೈರ್" ಮೇಲಿದೆ. ಇದು ತೀವ್ರವಾದ ಭೂಕಂಪನ ಚಟುವಟಿಕೆಯನ್ನು ಸಾಮಾನ್ಯವಾಗಿ ಆಗ್ನೇಯ ಏಷ್ಯಾದ ಮೂಲಕ ಮತ್ತು ಪೆಸಿಫಿಕ್ ಸಾಗರದವರೆಗೂ ವಿಸ್ತರಿಸುತ್ತದೆ.
ಫೆಬ್ರವರಿಯಲ್ಲಿ, ಇಂಡೋನೇಷ್ಯಾದ ಉತ್ತರ ಸುಮಾತ್ರಾದಲ್ಲಿ 6.2 ತೀವ್ರತೆಯ ಭೂಕಂಪದಿಂದ 12 ಜನರು ಮೃತಪಟ್ಟಿದ್ದರು ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದು.
2004 ರಲ್ಲಿ 9.1 ತೀವ್ರತೆಯ ಭೂಕಂಪವು ಸುಮಾತ್ರಾ ಕರಾವಳಿಯನ್ನು ಅಪ್ಪಳಿಸಿತ್ತು. ಇಂಡೋನೇಷ್ಯಾದಲ್ಲಿ ಸುಮಾರು 170,000 ಸೇರಿದಂತೆ ಪ್ರದೇಶದಾದ್ಯಂತ 220,000 ಜನರು ಸುನಾಮಿಯ ದಾಳಿಯಿಂದ ಮೃತಪಟ್ಟಿದ್ದರು.
ಸಣ್ಣ ದೇಶಗಳಲ್ಲಿ ಒಂದು ಪೂರ್ವ ಟಿಮೋರ್
ಪೂರ್ವ ಟಿಮೋರ್ 1.3 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಆಗ್ನೇಯ ಏಷ್ಯಾದ ಸಣ್ಣ ದೇಶಗಳಲ್ಲಿ ಪೂರ್ವ ಟಿಮೋರ್ ಸಹ ಒಂದಾಗಿದೆ. ಇತ್ತೀಚೆಗೆ ಇಂಡೋನೇಷ್ಯಾದಿಂದ ಸ್ವಾತಂತ್ರ್ಯ ಪಡೆದ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹೆಚ್ಚಾಗಿ ಗ್ರಾಮೀಣ ದೇಶದ ಆರ್ಥಿಕತೆಯು ಕೆಟ್ಟ ರೀತಿಯಲ್ಲಿ ಪರಿಣಾಮ ಬೀರಿದೆ. ವಿಶ್ವಬ್ಯಾಂಕ್ ಪ್ರಕಾರ ಜನಸಂಖ್ಯೆಯ 42 ಪ್ರತಿಶತದಷ್ಟು ಜನರು ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ.
ಪೂರ್ವ ಟಿಮೋರ್ ಇತಿಹಾಸವೇನು?
ಪೂರ್ವ ಟಿಮೋರ್ ಬಹಳ ಹಿಂದೆ ಪೋರ್ಚುಗೀಸ್ ವಸಾಹತು ಆಗಿತ್ತು. 24 ವರ್ಷಗಳ ನಂತರ 2002 ರಲ್ಲಿ ಇಂಡೋನೇಷ್ಯಾದಿಂದ ಸ್ವತಂತ್ರವಾಯಿತು. ನೊಬೆಲ್ ಪ್ರಶಸ್ತಿ ವಿಜೇತ ಜೋಸ್ ರಾಮೋಸ್ ಹೊರ್ಟಾ, 72 ವರ್ಷ ವಯಸ್ಸಿನ ಕ್ರಾಂತಿಕಾರಿ ನಾಯಕ ಚುನಾವಣೆಯಲ್ಲಿ ಗೆದ್ದ ನಂತರ ಈ ತಿಂಗಳ ಆರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸ್ವಾತಂತ್ರ್ಯದ ನಂತರ ರಾಮೋಸ್ ಹೋರ್ಟಾ ದೇಶದ ಎರಡನೇ ಪ್ರಧಾನ ಮಂತ್ರಿಯೂ ಆಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ