• Home
 • »
 • News
 • »
 • national-international
 • »
 • Crime News: ಹತ್ಯೆ ನಡೆಸಿ ಆಸ್ಟ್ರೇಲಿಯಾದಿಂದ ಪರಾರಿಯಾದ ಭಾರತೀಯ ನರ್ಸ್: ಮಾಹಿತಿ ನೀಡುವವರಿಗೆ ಬಂಪರ್ ಬಹುಮಾನ!

Crime News: ಹತ್ಯೆ ನಡೆಸಿ ಆಸ್ಟ್ರೇಲಿಯಾದಿಂದ ಪರಾರಿಯಾದ ಭಾರತೀಯ ನರ್ಸ್: ಮಾಹಿತಿ ನೀಡುವವರಿಗೆ ಬಂಪರ್ ಬಹುಮಾನ!

ಹತ್ಯೆ ನಡೆಸಿ ಆಸ್ಟ್ರೇಲಿಯಾದಿಂದ ಪರಾರಿಯಾದ ಭಾರತೀಯ ನರ್ಸ್

ಹತ್ಯೆ ನಡೆಸಿ ಆಸ್ಟ್ರೇಲಿಯಾದಿಂದ ಪರಾರಿಯಾದ ಭಾರತೀಯ ನರ್ಸ್

ಆಸ್ಟ್ರೇಲಿಯಾದ ಮಹಿಳೆಯೊಬ್ಬಳ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿ ಸಿಲುಕಿ ಹಾಕಿಕೊಂಡಿರುವ ಭಾರತ ಮೂಲದ ನರ್ಸ್ ಒಬ್ಬರನ್ನು ಈಗ ಆಸ್ಟ್ರೇಲಿಯನ್ ಪೊಲೀಸ್ ವಿಭಾಗವು ಶೋಧಿಸುತ್ತಿದ್ದು ಆ ನರ್ಸ್ ಕುರಿತು ಮಾಹಿತಿ ನೀಡುವವರಿಗಾಗಿ ಒಂದು ಮಿಲಿಯನ್ ನಗದು ಬಹುಮಾನವನ್ನು ಘೋಷಣೆ

 • Share this:

  ಕ್ಯಾನ್​ಬೆರಾ(ನ.23): ದುರದೃಷ್ಟಕರ ಬೆಳವಣಿಗೆಯೊಂದರಲ್ಲಿ ಆಸ್ಟ್ರೇಲಿಯಾದ ಮಹಿಳೆಯೊಬ್ಬಳ ಹತ್ಯೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿ ಸಿಲುಕಿ ಹಾಕಿಕೊಂಡಿರುವ ಭಾರತ ಮೂಲದ ನರ್ಸ್ ಒಬ್ಬರನ್ನು ಈಗ ಆಸ್ಟ್ರೇಲಿಯನ್ ಪೊಲೀಸ್ ವಿಭಾಗವು ಶೋಧಿಸುತ್ತಿದ್ದು ಆ ನರ್ಸ್ ಕುರಿತು ಮಾಹಿತಿ ನೀಡುವವರಿಗಾಗಿ ಒಂದು ಮಿಲಿಯನ್ ನಗದು ಬಹುಮಾನವನ್ನು ಘೋಷಿಸಿರುವುದಾಗಿ ಆಸ್ಟ್ರೇಲಿಯಾದ 7news.com ಮಾಧ್ಯಮವು ವರದಿ ಮಾಡಿದೆ. ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಪೊಲೀಸರು ಸಾರ್ವಜನಿಕರಿಗಾಗಿ ಈ ಭಾರಿ ಮೊತ್ತದ ಬಹುಮಾನವನ್ನು ಘೋಷಿಸಿರುವುದಾಗಿ ತಿಳಿದುಬಂದಿದೆ. ಅಷ್ಟಕ್ಕೂ ಅವರು ಮಹಿಳೆಯೋರ್ವರ ಹತ್ಯೆಯ ಪ್ರಕರಣದಲ್ಲಿ ಪ್ರಮುಖ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಹುಡುಕಾಟದಲ್ಲಿದ್ದು ಆ ವ್ಯಕ್ತಿ ಭಾರತಕ್ಕೆ ಪಲಾಯನ ಗೈದಿರುವ ಬಗ್ಗೆ ತಿಳಿದುಬಂದಿದೆ ಎನ್ನಲಾಗಿದೆ.


  ಏನಿದು ಪ್ರಕರಣ?


  2018 ರಲ್ಲಿ 24 ರ ಪ್ರಾಯದ ಟೊಯಾ ಕಾರ್ಡಿಂಗ್ಲೆ ಎಂಬ ಮಹಿಳೆಯು ಆಸ್ಟ್ರೇಲಿಯಾದ ಕೈರ್ನ್ಸ್ ಪ್ರದೇಶದ ಉತ್ತರಕ್ಕೆ 40 ಕಿ.ಮೀ ದೂರದಲ್ಲಿರುವ ವಾಂಗೆಟ್ಟಿ ಕಡಲ ತೀರದಲ್ಲಿ ತಮ್ಮ ನಾಯಿಯ ಜೊತೆ ವಾಕ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಆ ಮಹಿಳೆಯನ್ನು ಹತ್ಯೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಸ್ಫೈಲ್ ಎಂಬಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 38ರ ಪ್ರಾಯದ ರಾಜ್ವಿಂದರ್ ಸಿಂಗ್ ಮೇಲೆ ಪ್ರಮುಖ ಸಂದೇಹ ವ್ಯಕ್ತವಾಗಿತ್ತು. ಈ ನಡುವೆ ರಾಜ್ವಿಂದರ್ ಸಿಂಗ್ ಕೊಲೆಯಾದ ಎರಡೇ ದಿನಗಳಲ್ಲಿ ಏಕಾಏಕಿ ತಮ್ಮ ಕೆಲಸ ತೊರೆದು, ಹೆಂಡತಿ ಮಕ್ಕಳನ್ನು ಬಿಟ್ಟು ಪಲಾಯನಗೈದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.


  Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


  ಅತಿ ದೊಡ್ಡ ಮೊತ್ತ


  ಪ್ರಸ್ತುತ ಕ್ವೀನ್ಸ್ ಲ್ಯಾಂಡ್ ಪೊಲೀಸರು ಆರೋಪಿಯ ತೀವ್ರ ಶೋಧದಲ್ಲಿ ನಡೆಸುತ್ತಿದ್ದು ತನ್ನ ಸಾರ್ವಜನಿಕರನ್ನು ಕುರಿತು ಯಾವ ವ್ಯಕ್ತಿಯೇ ಆಗಲಿ ರಾಜ್ವಿಂದರ್ ಬಗ್ಗೆ ಮಾಹಿತಿ ನೀಡಿದಲ್ಲಿ ಅವರಿಗೆ ಒಂದು ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ. ಇದು ಇಲ್ಲಿಯವರೆಗೆ ಕ್ವೀನ್ಸ್ ಲ್ಯಾಂಡ್ ಪೊಲೀಸರು ಘೋಷಿಸಿರುವ ಬಹುಮಾನದ ಅತಿ ದೊಡ್ಡ ಮೊತ್ತವೆಂದೇ ಹೇಳಲಾಗಿದೆ.


  ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಡಿಟೆಕ್ಟಿವ್ ಸುಪರಿಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸೋನಿಯಾ ಸ್ಮಿತ್ ಅವರು ಮಾತನಾಡುತ್ತಾ, "ಈ ಬಹುಮಾನವು ಅತಿ ವಿಶಿಷ್ಟವಾಗಿದೆ. ನಮಗೆ ಸಿಂಗ್ ಆಸ್ಟ್ರೇಲಿಯಾವನ್ನು ಅಕ್ಟೋಬರ್ 22 ರಂದು ತೊರೆದು ಸಿಡ್ನಿಯ ಮೂಲಕ  ಭಾರತಕ್ಕೆ ಹೋಗಿರುವ ಬಗ್ಗೆ ತಿಳಿದಿದೆ, ಅಲ್ಲದೆ ಆತ ಭಾರತವನ್ನು ಪ್ರವೇಶಿಸಿರುವ ಬಗ್ಗೆಯೂ ನಮಗೆ ದೃಢೀಕರಣ ಸಿಕ್ಕಿದೆ" ಎಂದು ಹೇಳಿದ್ದಾರೆ.


  ಮುಂದುವರೆಸಿ ಮಾತನಾಡಿದ ಸೋನಿಯಾ ಅವರು, "ನಮಗೆ ಈಗಾಗಲೇ ಸಿಂಗ್ ಅವರ ಉಪಸ್ಥಿತಿಯಿರುವ ಕೊನೆಯ ಸ್ಥಳ ಭಾರತ ಎಂಬ ಮಾಹಿತಿ ಬಂದಿದ್ದು ಅವನ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆ ಹಾಕಲು ನಾವು ಕೈರ್ನ್ಸ್ ತನಿಖಾ ಕಚೇರಿಯನ್ನು ಸ್ಥಾಪಿಸಿದ್ದು ಅದರಲ್ಲಿ ಹಿಂದು ಹಾಗೂ ಪಂಜಾಬಿ ಎರಡೂ ಭಾಷೆಗಳನ್ನು ಮಾತನಾಡಬಲ್ಲ ಅಧಿಕಾರಿಗಳನ್ನು ಇರಿಸಿದ್ದೇವೆ" ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.


  ಭಾರತದ ಜನರು ಮಾಹಿತಿ ನೀಡಬಹುದು


  ಇದೇ ಸಂದರ್ಭದಲ್ಲಿ ಪೊಲೀಸ್ ವಿಭಾಗವು ತನ್ನ ಸಾಮಾಜಿಕ ಖಾತೆಯ ಮೂಲಕ ಭಾರತದಲ್ಲಿರುವವರೂ ಸಹ ರಾಜ್ವಿಂದರ್ ಬಗ್ಗೆ ಮಾಹಿತಿ ನೀಡಬೇಕೆಂದರೆ ಆನ್ಲೈನ್ ಪೋರ್ಟಲ್ ಇಲ್ಲವೇ ಟೋಲ್ ಸಂಖ್ಯೆಗೆ ಕರೆ ಮಾಡಲು ವಿನಂತಿಸಿ ಪೋಸ್ಟ್ ಮಾಡಿದೆ. ಅಲ್ಲದೆ, ಈಗಾಗಲೇ ತನಿಖಾ ಕಚೇರಿಯಲ್ಲಿ ನೇಮಿಸಲಾಗಿರುವ ಅಧಿಕಾರಿಗಳು ಭಾರತದಿಂದ ಯಾರೇ ಆಗಲಿ ಮಾಹಿತಿ ನೀಡಬಯಸಿದರೆ ಅದನ್ನು ಅವರು ಸುಲಭವಾಗಿ ವಾಟ್ಸಾಪ್ ಮೂಲಕ ಪಡೆಯುವಂತೆ ಮಾಡಲಾಗಿದೆ ಎಂದು ತಿಳಿದುಬಂದಿದೆ.


  ಇನ್ನು ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ವಿಭಾಗದ ಸಚಿವರಾದ ಮಾರ್ಕ್ ರಾಯನ್ ಅವರು ಮಾಧ್ಯಮ ವರದಿಗಾರರೊಂದಿಗೆ ಮಾತನಾಡುತ್ತಾ, "ನಮಗೆ ಜನರಿಗೆ ಈ ವ್ಯಕ್ತಿಯ ಬಗೆ ತಿಳಿದಿದೆ, ಆ ವ್ಯಕ್ತಿ ಎಲ್ಲಿದ್ದಾನೆ ಎಂಬುದರ ಬಗ್ಗೆಯೂ ತಿಳಿದಿದೆ ಅನ್ನುವ ವಿಷಯ ಗೊತ್ತಿದೆ, ನಾವು ಅವರನ್ನು ಸರಿಯಾದುದನ್ನು ಮಾಡಿ ಎಂದಷ್ಟೇ ಕೇಳುತ್ತಿದ್ದೇವೆ" ಎಂದು ಹೇಳಿದ್ದಾರೆ.


  ಈ ಹತ್ಯೆ ಪ್ರಕರಣ ಹಾಗೂ ಬಹುಮಾನಕ್ಕೆ ಸಂಬಂಧಿಸಿದಂತೆ ಉಪ ಆಯುಕ್ತರಾದ ಟ್ರೇಸಿ ಲಿನ್ ಫೋರ್ಡ್ ಅವರು ಮಾತನಾಡುತ್ತಾ, "ಇದೊಂದು ಅತ್ಯಂತ ಹೀನಾಯ ಕೃತ್ಯವಾಗಿದ್ದು ಇದರಿಂದ ಮೃತಳ ಕುಟುಂಬವು ತೀವ್ರವಾಗಿ ಆಘಾತಗೊಂಡಿದೆ. ಇದೇ ಮೊದಲ ಬಾರಿಗೆ ಈ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನು ಹಿಡಿಯಲು ಕ್ವೀನ್ಸ್ ಲ್ಯಾಂಡ್ ಪೊಲೀಸ್ ಇಷ್ಟು ದೊಡ್ಡ ಮೊತ್ತದ ಬಹುಮಾನವನ್ನು ಘೋಷಿಸಿದೆ" ಎಂದು ಹೇಳಿದ್ದಾರೆ.
  ಇದೇ ಸಂದರ್ಭದಲ್ಲಿ ಅವರು ಸರ್ಕಾರವನ್ನು ಇಷ್ಟು ದೊಡ್ಡ ಮೊತ್ತದ ಬಹುಮಾನಕ್ಕೆ ಅನುಮೋದನೆ ನೀಡಿರುವುದರ ಬಗ್ಗೆ ಶ್ಲಾಘಿಸಿದ್ದಾರೆ.


  ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


  ತಾಯಿಯ ಅಳಲು


  ಇನ್ನು, ಚಿಕ್ಕ ವಯಸ್ಸಿನವಳಾಗಿದ್ದ ಮಗಳನ್ನು ಕಳೆದುಕೊಂಡಿರುವ ಟೊಯಾ ಅವರ ತಾಯಿ ತಮ್ಮ ಮಗಳ ನೆನಪಿನಿಂದ ನೋವನುಭವಿಸುತ್ತಿದ್ದು ಅವಳು ಇನ್ನೆರಡು ದಿನಗಳಲ್ಲೇ ತನ್ನ ಪ್ರಥಮ ಕೆಲಸ ಆರಂಭಿಸಬೇಕಾಗಿತ್ತು, ಅಂಥದ್ದರಲ್ಲಿ ಅವಳು ಲೋಕವನ್ನೇ ತ್ಯಜಿಸಬೇಕಾಯಿತು ಎಂದು ದುಖವನ್ನು ತೋಡಿಕೊಂಡಿದ್ದಾರೆ. ಕ್ವೀನ್ಸ್ ಲ್ಯಾಂಡ್ ಪೊಲೀಸರು ಏನೇ ಆದರೂ ಅವರು ಈ ಪ್ರಕರಣಕ್ಕೆ ಬದ್ಧವಾಗಿದ್ದು ಶತಾಯ ಗತಾಯ ಪ್ರಯತ್ನ ಮಾಡಿಯಾದರೂ ರಾಜ್ವಿಂದರ್ ನನ್ನು ಹುಡುಕಿ ಬಂಧಿಸುವ ಮೂಲಕ ಟೊಯಾಗೆ ನ್ಯಾಯ ಕೊಡಿಸುವ ಪಣ ತೊಟ್ಟಿದ್ದಾರೆ.

  Published by:Precilla Olivia Dias
  First published: