Indian Navy Recruitment 2019: 144 ಎಸ್​​ಎಸ್​ಸಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ

news18-kannada
Updated:November 23, 2019, 2:34 PM IST
Indian Navy Recruitment 2019: 144 ಎಸ್​​ಎಸ್​ಸಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ನೌಕಾಪಡೆ
  • Share this:
ಭಾರತೀಯ ನೌಕಾಪಡೆ 144 ಎಸ್​ಎಸ್​ಸಿ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅವಿವಾಹಿತ ಮಹಿಳೆ ಮತ್ತು ಪುರುಷ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನಿಸಿದೆ. ಡಿಸೆಂಬರ್​ 19, 2019ರೊಳಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ:

ಬಿ.ಇ/ಬಿ.ಟೆಕ್,ಎಂಬಿಎ/ಬಿ.ಎಸ್ಸಿ/ಬಿ.ಕಾಂ/ಪಿಜಿ ಡಿಪ್ಲೋಮಾ,ಎಂ.ಎಸ್ಸಿ ಮತ್ತು ಎಂಸಿಎ ವಿದ್ಯಾರ್ಹತೆಯನ್ನು ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅದರೆ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ:

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ವಯೋಮಿತಿಯ ವಿವರವನ್ನು ತಿಳಿಯಲು ಅಧಿಸೂಚನೆಯನ್ನು ಓದಿಕೊಳ್ಳಬಹುದು.

ವೇತನದ ವಿವರ:

ಎಸ್‌ಎಸ್‌ಸಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವೇತನವನ್ನು ನೀಡಲಾಗುವುದು.ಅರ್ಜಿ ಶುಲ್ಕ:

ಅರ್ಜಿ ಸಲ್ಲಿಸುವವರು ಅರ್ಜಿ ಶುಲ್ಕ ಪಾವತಿಸಬೇಕಿದ್ದು, ಸಾಮಾನ್ಯ / ಓಬಿಸಿ ಅಭ್ಯರ್ಥಿಗಳು 215/-ರೂ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಥವಾ ಮಾಜಿ ಸೈನಿಕ ಅಭ್ಯರ್ಥಿಗಳು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ:

ಎಸ್​​ಎಸ್​ಸಿ ಹುದ್ದೆಗಳಿಗೆ ಸೇರ ಬಯಸುವ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್‌ https://www.joinindiannavy.gov.in/ ಗೆ ಭೇಟಿ ನೀಡಿ. ಅಲ್ಲಿರುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಡಿಸೆಂಬರ್ 19,2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಆಭ್ಯರ್ಥಿ ಹುದ್ದೆ ಬಗ್ಗೆ ತಿಳಿಯಲು ಇದರ ಮೇಲೆ​ ಕ್ಲಿಕ್​ ಮಾಡಿ

ಇದನ್ನೂ ಓದಿ: ಐಷಾರಾಮಿ ಜೀವನ ಮಾಡೋ ಸಿದ್ಧರಾಮಯ್ಯನ ಸಮಾಜವಾದ ಎಲ್ಲಿ ಹೋಯ್ತು ; ಡಿ.ವಿ.ಸದಾನಂದಗೌಡ ಪ್ರಶ್ನೆ

ಇದನ್ನೂ ಓದಿ: ಬೆಂಗಳೂರಿನಲ್ಲಿ ಟೈಡಾಲ್ ಮಾತ್ರೆ​ ಸೇವಿಸಿ ಇಬ್ಬರು ಸಾವು; ಅಕ್ರಮ ಔಷಧ ಮಾರಾಟ ಮಾಡಿದ್ದ ಮೆಡಿಕಲ್ ಶಾಪ್ ಮಾಲೀಕನ ಬಂಧನ
First published: November 23, 2019, 2:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading