ಕೇರಳ ಜಲಪ್ರವಾಹ: ಸಂತ್ರಸ್ತರು ಸೇಫ್​, ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸಿದ ನೌಕಾಪಡೆ


Updated:August 23, 2018, 8:48 AM IST
ಕೇರಳ ಜಲಪ್ರವಾಹ: ಸಂತ್ರಸ್ತರು ಸೇಫ್​, ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸಿದ ನೌಕಾಪಡೆ

Updated: August 23, 2018, 8:48 AM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​.23): ಜಲಪ್ರವಾಹಕ್ಕೆ ಕೊಚ್ಚಿಹೋಗಿದ್ದ ಕೇರಳದಲ್ಲಿ ಸತತ ಎರಡು ವಾರಗಳಿಂದ ನಡೆಯುತ್ತಿದ್ದ ರಕ್ಷಣಾ ಕಾರ್ಯಾಚರಣೆ  ಮುಕ್ತಾಯಗೊಳಿಸಿದೆ. ಸುಮಾರು 14 ದಿನಗಳಲ್ಲಿ 16,005 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿರುವ ನೌಕಾಪಡೆಯು ಅಧಿಕೃತವಾಗಿ ಬುಧವಾರ ಕಾರ್ಯಾಚರಣೆ ಅಂತ್ಯಗೊಳಿಸಿದ್ಧಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಜನರು ತತ್ತರಿಸಿ ಹೋಗಿದ್ದರು. ಭೀಕರ ಮಳೆಯಿಂದ ನೀರು ತುಂಬಿ ಹರಿಯುತ್ತಿತ್ತು. ಸದ್ಯ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಕಾರ್ಯಾಚರಣೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ನೌಕಾಪಡೆ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ನೌಕಾಪಡೆಯ ಆದೇಶದಂತೆ ಸಂತ್ರಸ್ತರನ್ನು ರಕ್ಷಿಸಲು ಆಪರೇಷನ್​ ಮದಾದ್​ ಹೆಸರಿನಲ್ಲಿ ಆಗಸ್ಟ್​ 9ರಂದು ಕಾರ್ಯಾಚರಣೆ ಪ್ರಾರಂಭಿಲಾಯ್ತು. ಮೊದಲಿನಂತೇ ಸಂತ್ರಸ್ತರನ್ನು ರಕ್ಷಿಸುವಂತೆ ಮನವಿಗಳು ಬರುತ್ತಿದ್ದವು. ಆದರೆ, ಇದೀಗ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಯಾರಿಂದಲೂ ಮನವಿ ಬಾರದ ಕಾರಣ ನಿಲ್ಲಿಸುತ್ತಿದ್ದೇವೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನಾ ಸಿಬ್ಬಂದಿಸೇರದಿಂತೆ ವಾಯುಪಡೆಗಳು, ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ಮೀನುಗಾರರೂ ಭಾಗಿಯಾಗಿದ್ದರು ಎನ್ನಲಾಗಿದೆ. ಅಲ್ಲದೇ ನೌಕಾಪಡೆಯೂ ಕಾರ್ಯಾಚರಣೆ ಮುಕ್ತಾಯಗೊಳಿಸಿದೆ.

ಪ್ರವಾಹ ಕಾರಣಕ್ಕೆ ನೀರಿನಿಂದ ಮುಳುಗಿ ಹೋಗಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಆಗಸ್ಟ್ 15 ರಿಂದ ಮುಚ್ಚಲ್ಪಟ್ಟಿತ್ತು. ಪ್ರಸ್ತುತ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಆಗಸ್ಟ್ 29 ರಂದು ಸರ್ಕಾರ ಪುನಃ ವಿಮಾನ ನಿಲ್ದಾಣವನ್ನು ತೆರೆಯಲಿದೆ ಎನ್ನಲಾಗಿದೆ.

ಅಲ್ಲದೇ 'ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಕೇರಳ ಸರ್ಕಾರ ತೀರ್ಮಾನಿಸಿದೆ. ಈ ಸಲುವಾಗಿ ಆಗಸ್ಟ್‌ 26 ರಂದು ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಿದೆ  ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.
Loading...

ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಜಗತ್ತಿನ ಮೂಲೆ ಮೂಲೆಗಳಿಂದ ನೆರವು ಹರಿದುಬರುತ್ತಿವೆ. ಆದರೆ, ಕೇಂದ್ರ ಸರ್ಕಾರವು ವಿದೇಶಗಳಿಂದ ಬರುವ ಆರ್ಥಿಕ ಸಹಾಯವನ್ನು ಒಪ್ಪಿಕೊಳ್ಳದಿರುವ ದೀರ್ಘಕಾಲದ ನೀತಿಗೆ ಬದ್ಧವಾಗಿರಲು ತೀರ್ಮಾನಿಸಿತ್ತು.

ವಿದೇಶಗಳಿಂದ ಯಾವುದೇ ರೀತಿಯ ಹಣಕಾಸು ನೆರವನ್ನು ವಿನಮ್ರತೆಯಿಂದ ನಿರಾಕರಿಸುವಂತೆ ಜಗತ್ತಿನಾದ್ಯಂತ ಇರುವ ತನ್ನ ರಾಯಭಾರಿಗಳಿಗೆ ನಿರ್ದೇಶನ ನೀಡಿರುವ ಕೇಂದ್ರ ಸರ್ಕಾರ, ಈ ಸವಾಲನ್ನು ಎದುರಿಸಲು ಆಂತರಿಕ ಪ್ರಯತ್ನಗಳ ಮೇಲೆಯೇ ಅವಲಂಬಿತವಾಗಲು ನಿರ್ಧರಿಸಿದೆ.

ಪ್ರವಾಹ ಪೀಡಿತ ಕೇರಳಕ್ಕೆ 700 ಕೋಟಿ ಆರ್ಥಿಕ ನೆರವು ಕೊಟ್ಟ ಯುಎಇ ಪ್ರವಾಹಕ್ಕೆ ಸಿಲುಕಿದ ಜನರು ಮತ್ತು ಪ್ರದೇಶಗಳಿಗೆ ಅಗತ್ಯವಿರುವ ನೆರವು ನೀಡಲು ದೇಶದ ಜನತೆ ಹಾಗೂ ಸರ್ಕಾರವು ಈಗ ಸಮರ್ಥವಾಗಿದೆ ಎಂಬುದನ್ನು ಆಯಾ ದೇಶಗಳಿಗೆ ಮನವರಿಕೆ ಮಾಡುವಂತೆ ರಾಯಭಾರಿಗಳಿಗೆ ಸೂಚಿಸಲಾಗಿದೆ.
First published:August 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ