ಕಳೆದ 15 ದಿನಗಳಿಂದ ದೇಶದಲ್ಲಿ ಪಂಜಾಬ್ ರಾಜಕೀಯ (Punjab Crisis) ಚರ್ಚೆಯಲ್ಲಿದೆ. ಈ ರಾಜಕೀಯ ಚದುರಂಗದಾಟದಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್ (Capt Amrinder Singh) ಮತ್ತು ನವಜೋತ್ ಸಿಂಗ್ ಸಿಧು (Navjot Singh Sidhu) ಹೆಸರುಗಳು ಹೆಚ್ಚು ಟ್ರೆಂಡಿಂಗ್ ನಲ್ಲಿವೆ. ಪ್ರತಿದಿನ ಹೊಸ ಬೆಳವಣಿಗೆಗಳಿಗೆ ಪಂಜಾಬ್ ಕಾಂಗ್ರೆಸ್ ಸಾಕ್ಷಿಯಾಗುತ್ತಿದೆ. ಆದ್ರೆ ಕೆಲವರು ಮಾಜಿ ಸಿಎಂ ಅಮರೀಂದರ್ ಸಿಂಗ್ ಬದಲಾಗಿ ಫುಟ್ಬಾಲ್ ಆಟಗಾರರೊಬ್ಬರಿಗೆ, ನಿಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. ಪಂಜಾಬ್ ರಾಜಕೀಯ ಮತ್ತು ಕ್ಯಾಪ್ಟನ್ ಅಮರೀಂದರ್ ಸಿಂಗ್ ಸುದ್ದಿಗಳಿಗೆ ತಮ್ಮನ್ನ ಟ್ಯಾಗ್ ಮಾಡುತ್ತಿರೋದನ್ನ ಕಂಡು ಫುಟ್ಬಾಲ್ ಆಟಗಾರ ಸ್ಪಷ್ಟನೆ ನೀಡಿದ್ದಾರೆ.
ಏನಿದು ಗೊಂದಲ? ಯಾರು ಈ ಆಟಗಾರ?
ಹೌದು, ಭಾರತದ ಫುಟ್ಬಾಲ್ ತಂಡದ ಗೋಲ್ ಕೀ ಪರ್ ಹೆಸರು ಅಮರೀಂದರ್ ಸಿಂಗ್ (Football Player, Goal Keeper Amrinder Singh). ಹಾಗಾಗಿ ಕೆಲ ನೆಟ್ಟಿಗರು ಕ್ಯಾಪ್ಟನ್ ಎಂದು ತಿಳಿದುಕೊಂಡು ಅಮರೀಂದರ್ ಸಿಂಗ್ ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಸಿಎಂ ಹೆಸರು ಕ್ಯಾಪ್ಟನ್ ಅಮರೀಂದರ್ ಸಿಂಗ್ ಅಂತ ಸ್ಪಷ್ಟವಾಗಿದ್ರೂ, ಕೆಲವರು ಗೊಂದಲಕ್ಕೆ ಒಳಗಾಗಿದ್ದಾರೆ. ಇನ್ನು ಆಟಗಾರನ ಟ್ವೀಟ್ ನೋಡಿದ ಅಭಿಮಾನಿಗಳು, ನೀವು ರಾಜಕೀಯಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.
ಅಮರೀಂದರ್ ಸಿಂಗ್ ಸ್ಪಷ್ಟನೆ:
ಪ್ರಿಯ ಮಾಧ್ಯಮ, ಪತ್ರಕರ್ತರೇ, ನಾನು ಅಮರೀಂದರ್ ಸಿಂಗ್, ಭಾರತ ಫುಟ್ಬಾಲ್ ತಂಡದ ಗೋಲ್ ಕೀಪರ್. ಪಂಜಾಬ್ ರಾಜ್ಯದ ಮಾಜಿ ಮುಖ್ಯಮಂತ್ರಿ ನಾನಲ್ಲ. ದಯವಿಟ್ಟು ರಾಜಕೀಯ ಸುದ್ದಿಗಳಿಗೆ ನನ್ನನ್ನು ಟ್ಯಾಗ್ ಮಾಡೋದನ್ನ ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಕ್ಯಾಪ್ಟನ್, ಈ ರೀತಿ ಗೊಂದಲ ಆಗಿದ್ದಕ್ಕೆ ಸಹನಾಭೂತಿ ಇದೆ ಯುವ ಗೆಳೆಯ. ನಿಮ್ಮ ಮುಂದಿನ ಕ್ರೀಡಾ ಜೀವನಕ್ಕೆ ಶುಭಾಶಯಗಳು ಎಂದು ಹಾರೈಸಿದ್ದಾರೆ. ಟ್ವಿಟರ್ ನಲ್ಲಿ ಅಮರೀಂದರ್ ಸಿಂಗ್ ಅಂತ ಟೈಪ್ ಮಾಡಿದ್ರೆ ಮತ್ತೋರ್ವ ನಾಯಕನ ಹೆಸು ಸಹ ಬರುತ್ತದೆ. ಅಮರೀಂದರ್ ಸಿಂಗ್ ರಾಜಾ ಸಹ ಕಾಂಗ್ರೆಸ್ ನಾಯಕರಾಗಿದ್ದು, ಪಂಜಾಬಿನ ಸಾರಿಗೆ ಸಚಿವರಾಗಿದ್ದಾರೆ.
Dear News Media, Journalists, I am Amrinder Singh, Goalkeeper of Indian Football Team 🇮🇳 and not the Former Chief Minister of the State Punjab 🙏😂 Please stop tagging me.
— Amrinder Singh (@Amrinder_1) September 30, 2021
ಇದನ್ನು ಓದಿ: ಮೊದಲ ಪುಸ್ತಕ ಬಿಡುಗಡೆ ಸಂಭ್ರಮದಲ್ಲಿ ಕನ್ನಡತಿ ನಟಿ ರಂಜನಿ ರಾಘವನ್
ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿಯೇ ಮನೆಯೊಂದು ಮೂರು ಬಾಗಿಲು ಮಾಡಿಕೊಂಡಿರುವ ಪಂಜಾಬ್ ಕಾಂಗ್ರೆಸ್ ಹೊಸ ಸಂಕಷ್ಟಗಳನ್ನು ಆಹ್ವಾನಿಸಿಕೊಳ್ಳುತ್ತಿದೆ. ಮುಂದಿನ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡೋಕೆ ಕ್ಯಾಪ್ಟನ್ ಮುಂದಾಗಿರೋದು ಕೈ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮತ್ತೊಂದು ಕಡೆ ಕಾಂಗ್ರೆಸ್ ಆಂತರಿಕ ಕಲಹ ಬಹಿರಂಗವಾಗಿದ್ದು, ಹಿರಿಯ ನಾಯಕ ಕಪಿಲ್ ಸಿಬಲ್, ಪಕ್ಷಕ್ಕೆ ಅಧ್ಯಕ್ಷರು ಇಲ್ಲದಿರೋದು ದೌರ್ಭಾಗ್ಯ ಎಂದು ಕಳವಳ ವ್ಯಕ್ತಪಡಿಸಿದ್ದರು. ಇತ್ತ ಕ್ಯಾಪ್ಟನ್ ರಾಜೀನಾಮೆ ಬಳಿಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಅನುಭವದ ಕೊರತೆ ಇದೆ ಎಂದು ವಾಗ್ದಾಳಿ ನಡೆಸಿದ್ದರು.
-ಮಹ್ಮದ್ ರಫೀಕ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ