ಬಟ್ಲಾ ಹೌಸ್​ ಎನ್​ಕೌಂಟರ್​ ಕೇಸ್: ತಲೆಮರೆಸಿಕೊಂಡಿದ್ದ ಇಂಡಿಯನ್ ಮುಜಾಹಿದ್ದೀನ್​ನ ಉಗ್ರ ಅರೆಸ್ಟ್


Updated:February 14, 2018, 4:30 PM IST
ಬಟ್ಲಾ ಹೌಸ್​ ಎನ್​ಕೌಂಟರ್​ ಕೇಸ್: ತಲೆಮರೆಸಿಕೊಂಡಿದ್ದ ಇಂಡಿಯನ್ ಮುಜಾಹಿದ್ದೀನ್​ನ ಉಗ್ರ ಅರೆಸ್ಟ್

Updated: February 14, 2018, 4:30 PM IST
-ನ್ಯೂಸ್ 18 ಕನ್ನಡ

ನವದೆಹಲಿ(ಫೆ.14): ದೆಹಲಿ ಪೊಲೀಸ್ ಇಲಾಖೆಯ ವಿಶೇಷ ತಂಡವು ಬಟ್ಲಾ ಹೌಸ್​ ಎನ್​ಕೌಂಟರ್​ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಂಡಿಯನ್ ಮುಜಾಹಿದ್ದೀನ್​ನ ವಾಂಟೆಡ್ ಉಗ್ರ ಆರಿಜ್​ ಖಾನ್​(ಜುನೈದ್) ನನ್ನು ಬಂಧಿಸಿದ್ದಾರೆ. ಭಾರತ- ನೇಪಾಳ ಗಡಿಯಲ್ಲಿ ಈ ವಾಂಟೆಡ್​ ಉಗ್ರನನ್ನು ನಾಲ್ಕು ದಿನಗಳ ಹಿಂದೆ ಪೊಲೀಸರು ಬಂಧಿಸಲಾಗಿದೆ. ಲಭ್ಯವಾದ ಮಾಹಿತಿಯನ್ವಯ ಉಗ್ರನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಬಂಧಿಯಾದ ಉಗ್ರ ಆರಿಜ್​ ಖಾನ್​(ಜುನೈದ್), ಜಾಮಿಯಾ ನಗರ್ ಇಲಾಖೆಯಲ್ಲಿ 2008ರ ಸಪ್ಟೆಂಬರ್ 13 ರಂದು ನಡೆದ ಬಟ್ಲಾ ಹೌಸ್​ ಎನ್​ಕೌಂಟರ್​ನಲ್ಲಿ ಶಾಮೀಲಾಗಿದ್ದ. ಬಂಧನದ ವೇಳೆ ತಪ್ಪಿಕೊಂಡಿದ್ದ ಈತನಿಗಾಗಿ ಕಳೆದ 10 ವರ್ಷಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು, ಈತನನ್ನು ಹುಡುಕಿಕೊಟ್ಟವರಿಗೆ NIA 10 ಲಕ್ಷ ಬಹುಮಾನ ಘೋಷಿಸಿದ್ದರೆ, ದೆಹಲಿ ಪೊಲೀಸರು 5 ಲಕ್ಷ ನೀಡುವುದಾಗಿ ಹೇಳಿದ್ದರು. ಉತ್ತರ ಪ್ರದೇಶದ ಆಜಮ್​ಗಢ್ ನಿವಾಸಿಯಾಗಿದ್ದ ಈ ಉಗ್ರನ ವಿರುದ್ಧ ಅಹಮದಾಬಾದ್, ಜೈಪುರ್, ದೆಹಲಿ ಸೇರಿದಂತೆ ದೇಶದ ಹಲವಾರು ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸಿರುವ ಆರೋಪವಿದೆ.

ಬಟ್ಲಾ ಹೌಸ್​ ಎನ್​ಕೌಂಟರ್ ವೇಳೆ ತಲೆಮರೆಸಿಕೊಂಡಿದ್ದ ಆರಿಜ್

2008ರ ಸಪ್ಟೆಂಬರ್​ನಲ್ಲಿ ನಡೆದ ಬಟ್ಲಾ ಎನ್​ಕೌಂಟರ್​ನಲ್ಲಿ ಶಾಮೀಲಾಗಿದ್ದ ಮೂವರು ಉಗ್ರರಲ್ಲಿ ಆರಿಜ್ ಕೂಡಾ ಒಬ್ಬ. ಈತನ ಇಬ್ಬರು ಸಹಚರರು ಮೊಹಮ್ಮದ್ ಆತಿಫ್ ಅಮೀನ್ ಹಾಗೂ ಮೊಹಮ್ಮದ್ ಸಾಜಿದ್ ಎನ್​ಕೌಂಟರ್​ನಲ್ಲಿ ಹತರಾಗಿದ್ದರು, ಆದರೆ ಈತ ಪರಾರಿಯಾಗಿದ್ದ.
First published:February 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ