ಭಾರತದಲ್ಲೂ ಐಸಿಸ್​ ಹೆಜ್ಜೆಗುರುತು: ಉಗ್ರರನ್ನು ಬಂಧಿಸಿದ ಗುಪ್ತಚರ ದಳ

ಖೋರಸಾನಿಯು ಈ ಹಿಂದೆ ಅಫ್ಘಾನಿಸ್ತಾನದ  ಖೊರಾಸಾನ್‌ನಲ್ಲಿದ್ದನೆಂದು ಭಾವಿಸಲಾಗಿತ್ತು, ನಂತರ ಭಾರತೀಯ ಮತ್ತು ವಿದೇಶಿ ಏಜೆನ್ಸಿಗಳ ಸಹಾಯದಿಂದ ಅನಂತ್‌ನಾಗ್ ಜಿಲ್ಲೆಯ ಅಚಬಲ್ ಎಂಬ ಸಣ್ಣ ಪಟ್ಟಣದಲ್ಲಿ ನೆಲೆಗೊಂಡಿರುವುದು ಕಂಡುಹಿಡಿಯಲಾಗಿತ್ತು.

ಬಂಧಿತ ಉಗ್ರರು

ಬಂಧಿತ ಉಗ್ರರು

 • Share this:
  ಸಿಎನ್‌ಎನ್-ನ್ಯೂಸ್ 18 ಎಕ್ಸ್‌ಕ್ಲೂಸಿವ್‌ ಸುದ್ದಿ ಇದಾಗಿದ್ದು, ಭಾರತೀಯ ಗುಪ್ತಚರ ಸಂಸ್ಥೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಷೇಧಿತ ಭಯೋತ್ಪಾದಕ ಗುಂಪು ಐಸಿಸ್‌ನ  ಹೆಜ್ಜೆಗುರುತನ್ನು ಕಂಡುಹಿಡಿದಿದೆ. ಅದರ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕಾಸಿಮ್ ಖೋರಸಾನಿ ಮತ್ತು ಅವರ ಇಬ್ಬರು ಸಹಚರರನ್ನು ಸೋಮವಾರ ಬಂಧಿಸಲಾಗಿದೆ. ಭಾರತೀಯ ಗುಪ್ತಚರ ಸಂಸ್ಥೆ ಕಳೆದ ಒಂದು ವರ್ಷದಿಂದ ಅವರ ಚಲನವಲನವನ್ನು  ಗಮನಿಸುತ್ತಿತ್ತು.

  ಏಪ್ರಿಲ್ 2020 ರಲ್ಲಿ, ಜಮ್ಮು ಮತ್ತು ಕಾಶ್ಮೀರದ ಐಸಿಸ್ ಮಾದರಿ ಸಂಘಟನೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಉಮರ್ ನಿಸಾರ್ ಭಟ್ ಅಕಾ ಕಾಸಿಮ್ ಖೋರಸಾನಿ,  ಇವರುಗಳು ತಮ್ಮ ಸಂಘಟನೆಗೆ ಯುವಕರನ್ನು ನೇಮಕ ಮಾಡಿಕೊಳ್ಳುವಲ್ಲಿ ತೊಡಗಿಸಿಕೊಂಡಿದ್ದರು.

  ಈ ವಿಚಾರವನ್ನು ಮೆಸೇಜಿಂಗ್ ಅಪ್ಲಿಕೇಶನ್‌ ಮೂಲಕ ಭಾರತೀಯ ಗುಪ್ತಚರ ಸಂಸ್ಥೆ ಕಂಡುಹಿಡಿದು ಈಗ ಮಟ್ಟ ಹಾಕಿದೆ . ಖೋರಸಾನಿಯು ಈ ಹಿಂದೆ ಅಫ್ಘಾನಿಸ್ತಾನದ  ಖೊರಾಸಾನ್‌ನಲ್ಲಿದ್ದನೆಂದು ಭಾವಿಸಲಾಗಿತ್ತು, ನಂತರ ಭಾರತೀಯ ಮತ್ತು ವಿದೇಶಿ ಏಜೆನ್ಸಿಗಳ ಸಹಾಯದಿಂದ ಅನಂತ್‌ನಾಗ್ ಜಿಲ್ಲೆಯ ಅಚಬಲ್ ಎಂಬ ಸಣ್ಣ ಪಟ್ಟಣದಲ್ಲಿ ನೆಲೆಗೊಂಡಿರುವುದು ಕಂಡುಬಂದಿದೆ, ಟೆಲಿಗ್ರಾಮ್‌ನಲ್ಲಿ  ತನ್ನ ಸಂಘಟನೆಯ ಸದಸ್ಯರೊಂದಿಗೆ ಸ್ವಾತ್ ಅಲ್-ಹಿಂದ್ (ವಾಯ್ಸ್ ಆಫ್ ಹಿಂದ್),  ನಿಯತಕಾಲಿಕೆಯ ಮುದ್ರಣ ಮತ್ತು ಚಾಟ್ ಮಾಡಲಾಗುತ್ತಿತ್ತು. ಈ ಮ್ಯಾಗಜೀನ್​ ವಿಲಾಯತ್ ಅಲ್-ಹಿಂದ್ (ಭಾರತದ ಇಸ್ಲಾಮಿಕ್ ಸ್ಟೇಟ್ ಪ್ರಾಂತ್ಯ)ದ ಕಲ್ಪನೆಯನ್ನು ಪ್ರಚಾರ ಮಾಡುತ್ತದೆ.

  ಭಾರತದಲ್ಲಿ ನಿರ್ದಿಷ್ಟವಾದ ‘ಚಟುವಟಿಕೆಗಳನ್ನು’ ಕೇಂದ್ರೀಕರಿಸಲು ವಿಲಾಯತ್ ಅಲ್-ಹಿಂದ್ (ಭಾರತದ ಇಸ್ಲಾಮಿಕ್ ಸ್ಟೇಟ್ ಪ್ರಾಂತ್ಯ) ಅನ್ನು 2019 ರಲ್ಲಿ ಸ್ಥಾಪಿಸಲಾಯಿತು. ಭಾರತೀಯ ಮುಸ್ಲಿಮರನ್ನು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಬಾಬರಿ ಮಸೀದಿ ಧ್ವಂಸ ಮತ್ತು ಕಾಶ್ಮೀರ ದೌರ್ಜನ್ಯಕ್ಕೆ ಪ್ರತೀಕಾರ ತೀರಿಸುವುದು ಇದರ ರಚನೆಯ ಹಿಂದಿನ ಆಲೋಚನೆಯಾಗಿತ್ತು. ಖೋರಾಸನ್, ಸಿರಿಯಾ ಮತ್ತು ಇರಾಕ್ ಮತ್ತು ಭಾರತೀಯ ಮುಜಾಹಿದ್ದೀನ್ ಭಾರತದಲ್ಲಿ ದಾಳಿ ನಡೆಸಿದ್ದಕ್ಕಾಗಿ ಭಾರತೀಯ ಭಯೋತ್ಪಾದಕರನ್ನು ಶ್ಲಾಘಿಸಿತ್ತು.

  ಈ ಸಂಘಟನೆ ಘಜ್ವಾ-ಎ-ಹಿಂದ್ ಅನ್ನು ಸಹ ತನ್ನ ಕೆಲಸಗಳಿಗೆ ಆಹ್ವಾನಿಸಿತು, ಇದರರ್ಥ ‘ಭಾರತದ ವಿರುದ್ಧ ಪವಿತ್ರ ಯುದ್ಧ’. ಘಜ್ವಾ-ಎ-ಹಿಂದ್ ಪ್ರಕಾರ, ಸಿರಿಯಾದಿಂದ ಕಪ್ಪು ಧ್ವಜಗಳನ್ನು ಹೊಂದಿರುವ ಪಡೆಗಳು ಭಾರತದ ಕಡೆಗೆ ಮೆರವಣಿಗೆ ಬಂದು ದೇಶವನ್ನು ವಶಪಡಿಸಿಕೊಂಡು ಇಸ್ಲಾಮಿಕ್ ರಾಷ್ಟ್ರವಾಗಿ ಪರಿವರ್ತಿಸುವುದು ಎಂದಾಗಿದೆ.

  ಫೆಬ್ರವರಿ 2020 ರಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ - ಖುರಾಸನ್ (ಐಎಸ್‌ಕೆಪಿ) ಹ್ಯಾಂಡ್ಲರ್‌ಗಳ ಮಾರ್ಗದರ್ಶನದಲ್ಲಿ ಸ್ವಾತ್ ಅಲ್-ಹಿಂದ್ (ವಾಯ್ಸ್ ಆಫ್ ಇಂಡಿಯಾ) ನಿಯತಕಾಲಿಕವನ್ನು ಪ್ರಾರಂಭಿಸಿತು. ಈವರೆಗೆ ಪತ್ರಿಕೆಯ 17 ಸಂಚಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಸಂಚಿಕೆಯನ್ನು ಅಲ್-ಕ್ವಿಟಲ್​ ಚಾನಲ್​ ಮೂಲಕ ಪ್ರಾರಂಭ ಮಾಡಲಾಯಿತು  ಮತ್ತು "ರಾಷ್ಟ್ರೀಯತೆ ಒಂದು ರೋಗ" ಎಂಬ ಕಲ್ಪನೆಯ ವಿಚಾರವಾಗಿ ಚರ್ಚೆ ಮಾಡಲಾಯಿತು. ಇದು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ತೀವ್ರವಾಗಿ ಖಂಡಿಸಿತು ಮತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಗುರಿಯಾಗಿಸಿಕೊಂಡಿತ್ತು.

  ಇದೇ ಸಂಚಿಕೆಯಲ್ಲಿ, ಅಖಿಲ ಭಾರತ ಮಜ್ಲಿಸ್-ಇ-ಇಟ್ಟೇಹದುಲ್-ಮುಸ್ಲೀಮೀನ್ (ಎಐಐಎಂಐಎಂ) ಮುಖ್ಯಸ್ಥ ಅಸದುದ್ದೀನ್ ಒವೈಸಿ ಮತ್ತು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ದೆಹಲಿ ಪೊಲೀಸರು 2016 ರಲ್ಲಿ ದೇಶದ್ರೋಹ ಆರೋಪದಡಿ ಬಂಧಿಸಿದ್ದು, ಭಾರತದ ಮುಸ್ಲಿಂಮರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿತ್ತು.

  ಈ ನಿಯತಕಾಲಿಕೆ ಮೂಲಕ ಭಾರತೀಯ ಮುಸ್ಲಿಂ ವಿದ್ವಾಂಸರಾದ ಮಹಮೂದ್ ಮದನಿ ಮತ್ತು ಮೌಲಾನಾ ಅರ್ಷದ್ ಮದನಿ ಅವರ ಮೇಲೂ ದಾಳಿ ನಡೆಸಲಾಗಿತ್ತು.

  ಇದನ್ನೂ ಓದಿ: ಸ್ಟಾನ್​ ಸ್ವಾಮಿ ಅವರ ಸಾವನ್ನು ನಿರೀಕ್ಷಿಸಿರಲಿಲ್ಲ ಎಂದ ಬಾಂಬೆ ಹೈಕೋರ್ಟ್​

  ಬಂಧಿತರಾದ ಇಬ್ಬರು 35 ವರ್ಷದೊಳಗಿನವರಾಗಿದ್ದು ತನ್ವೀರ್ ಅಹ್ಮದ್ ಭಟ್ ಮತ್ತು ರಮೀಜ್ ಲೋನ್ ಲೋನ್  ಎಂಬುವರಾಗಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: