ದೆಹಲಿ: ಭಾರತವು 75 ನೇ ಸ್ವಾತಂತ್ರ್ಯವನ್ನು (Independence Day) ಆಚರಿಸುತ್ತಿರುವ ಸಂದರ್ಭದಲ್ಲೇ ಭಾರತಕ್ಕೆ ಬಾಹ್ಯಾಕಾಶದಿಂದಲೂ ಶುಭಾಶಯ (Wish From Space ಹರಿದುಬಂದಿದೆ. ಇಟಾಲಿಯನ್ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋಗೆ ಗಗನಯಾನ ಯೋಜನೆಯ (ISRO Gaganyaan) ಕುರಿತು ಸಂದೇಶ ಕಳಿಸಿದ್ದಾರೆ. 2023 ರಲ್ಲಿ ಜರುಗಲಿರುವ ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಯಾತ್ರೆಯ ಕುರಿತು ಬಾಹ್ಯಾಕಾಶದಿಂದ ಅವರು ವೀಡಿಯೊ ಸಂದೇಶವನ್ನು ಕಳುಹಿಸಿದ್ದಾರೆ. 1 ನಿಮಿಷದ 13 ಸೆಕೆಂಡ್‌ಗಳ ವೀಡಿಯೊದಲ್ಲಿಕ್ರಿಸ್ಟೋಫೊರೆಟ್ಟಿ ಅವರು ನಾಸಾ ಮತ್ತು ಇಸ್ರೋ ನಡುವಿನ ಜಂಟಿ ಭೂ ವೀಕ್ಷಣೆ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ್ದಾರೆ. ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗಳಿಗಾಗಿ ನಾಸಾ ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಜೊತೆಗಿನ ಪಾಲುದಾರಿಕೆಯನ್ನು ವಿಸ್ತರಿಸುತ್ತಿದೆ ಎಂದು ಹೇಳಿದ್ದಾರೆ.
Sky is not the limit!
Good wishes from #space ISS @Space_Station as #India celebrates #75YearsofIndependence
Appreciate @AstroSamantha for the warm message. A true 🌎 p’ship @NASA @isro @esa
Delighted to share on birth anniv of #VikramSarabhai , father of 🇮🇳 space program pic.twitter.com/tT2OsoCjb4
— Taranjit Singh Sandhu (@SandhuTaranjitS) August 12, 2022
ನಮ್ಮೆಲ್ಲರ ಗುರಿ ಒಂದೇ!
ಇಸ್ರೋ ಜೊತೆಗಿನ ನಮ್ಮ ಪಾಲುದಾರಿಕೆಯನ್ನು ವಿಸ್ತರಿಸುವುದು ಮತ್ತು ಒಟ್ಟಿಗೆ ವಿಶ್ವವನ್ನು ಅನ್ವೇಷಿಸುವುದು ಭವಿಷ್ಯದ ಬಾಹ್ಯಾಕಾಶ ಪರಿಶೋಧನೆಗಾಗಿ ನಮ್ಮೆಲ್ಲರ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಕ್ರಮ್ ಸಾರಾಭಾಯಿ ವಿಡಿಯೋ ಹಂಚಿಕೆ
ಅಲ್ಲದೇ ಸಂಧು ಅವರು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಕ್ರಮ್ ಸಾರಾಭಾಯಿ ಅವರ ಜನ್ಮ ವಾರ್ಷಿಕೋತ್ಸವದ ಸಂದೇಶವನ್ನು ಹಂಚಿಕೊಂಡಿದ್ದಾರೆ.
'ಗಗನಯಾನ' ಸಿದ್ಧತೆಗಳು ಪೂರ್ಣಗೊಂಡಿದ್ದು, ಭಾರತೀಯರು ಮುಂದಿನ ವರ್ಷ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಳೆದ ತಿಂಗಳು ಹೇಳಿದ್ದಾರೆ. 2023 ರಲ್ಲಿ ನಡೆಯಲಿರುವ ಮಿಷನ್‌ನ ಪ್ರಯೋಗಗಳನ್ನು ಈ ವರ್ಷದ ಅಂತ್ಯದ ವೇಳೆಗೆ ನಡೆಸಲಾಗುವುದು ಎಂದು ಸಚಿವ ಜಿತೇಂದ್ರ ಸಿಂಗ್ ಘೋಷಿಸಿದ್ದರು.
ಇದನ್ನೂ ಓದಿ: PM Modi: ಪ್ರಧಾನಿ ಮೋದಿ ಎಷ್ಟು ಆಸ್ತಿ ಹೊಂದಿದ್ದಾರೆ? ಅವರ ಬಳಿಯಿರುವ ಹಣವೆಷ್ಟು? ಮಾಹಿತಿ ಬಿಡುಗಡೆ
"ಮುಂದಿನ ವರ್ಷ ಭಾರತೀಯ ಮೂಲದ ಒಬ್ಬರು ಅಥವಾ ಇಬ್ಬರು ಬಾಹ್ಯಾಕಾಶಕ್ಕೆ ಹೋಗುತ್ತಾರೆ. ನಮ್ಮ 'ಗಗನಯಾನ ಯೋಜನೆಗೆ" ಸಿದ್ಧತೆಗಳು ನಡೆದಿವೆ. ಅದಕ್ಕೂ ಮೊದಲು ಈ ವರ್ಷಾಂತ್ಯದೊಳಗೆ ಎರಡು ಪ್ರಯೋಗಗಳನ್ನು ನಡೆಸಲಾಗುವುದು. ಮೊದಲ ಪ್ರಯೋಗವು ಖಾಲಿಯಾಗಿರುತ್ತದೆ. ಎರಡನೇಯದರಲ್ಲಿ ಮಹಿಳಾ ರೋಬೋಟ್ (ಗಗನಯಾತ್ರಿ) ಅನ್ನು ಕಳುಹಿಸಲಾಗುವುದು, ಅದರ ಹೆಸರು ವ್ಯೋಮಿತ್ರ ಎಂದಾಗಿದೆ ಎಂದು ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ಎರಡು ಕಾರ್ಯಾಚರಣೆಗಳ ಆಧಾರದ ಮೇಲೆ, ನಮ್ಮ ಗಗನಯಾತ್ರಿಗಳು ಮೂರನೇ ಕಾರ್ಯಾಚರಣೆಗೆ ಹೋಗುತ್ತಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Independence Day 2022: ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಹೇಳೋದು ಹೇಗೆ? ಇಲ್ಲಿದೆ ನೋಡಿ!
'ಗಗನಯಾನ' ಮಿಷನ್‌ನೊಂದಿಗೆ ಯುಎಸ್ಎ, ರಷ್ಯಾ ಮತ್ತು ಚೀನಾ ನಂತರ ಮಾನವ ಬಾಹ್ಯಾಕಾಶ ಯಾನ ಮಿಷನ್ ಅನ್ನು ಪ್ರಾರಂಭಿಸುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲು ಭಾರತ ಗುರಿ ಹೊಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ