• Home
 • »
 • News
 • »
 • national-international
 • »
 • Indian Hackers: ನೂರಾರು ಡಾಲರ್ ಸಂಪಾದಿಸುವ ಭಾರತೀಯ ಹ್ಯಾಕರ್ಸ್: ರಹಸ್ಯ ವರದಿಯಲ್ಲಿ ಬೆಚ್ಚಿ ಬೀಳಿಸೋ ಮಾಹಿತಿ!

Indian Hackers: ನೂರಾರು ಡಾಲರ್ ಸಂಪಾದಿಸುವ ಭಾರತೀಯ ಹ್ಯಾಕರ್ಸ್: ರಹಸ್ಯ ವರದಿಯಲ್ಲಿ ಬೆಚ್ಚಿ ಬೀಳಿಸೋ ಮಾಹಿತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುಕೆ ಮೂಲದ ಸಂಡೇ ಟೈಮ್ಸ್ ಇನ್‌ಸೈಟ್ ತಂಡ ಹಾಗೂ ತನಿಖಾ ಪತ್ರಿಕೋದ್ಯಮ ಸಂಸ್ಥೆಯು ಭಾರತಕ್ಕೆ ರಹಸ್ಯ ವರದಿಗಾರರನ್ನು ಕಳುಹಿಸಿದ್ದು ಈ ವರದಿಗಾರರು, ಅಕ್ರಮ ಹ್ಯಾಕಿಂಗ್ ಉದ್ಯಮದಲ್ಲಿ ನುಸುಳಲು ಭಾರತದ ಕೆಲವು ಉನ್ನತ ಕಂಪ್ಯೂಟರ್ ಹ್ಯಾಕರ್‌ಗಳನ್ನು ನೇಮಿಸಿಕೊಳ್ಳಲು ಬಯಸುತ್ತಿರುವ ಮಾಜಿ MI6 ಏಜೆಂಟ್-ಕಾರ್ಪೊರೇಟ್ ತನಿಖಾಧಿಕಾರಿಗಳಂತೆ ನಟಿಸಿದ್ದರು.

ಮುಂದೆ ಓದಿ ...
 • Trending Desk
 • Last Updated :
 • New Delhi, India
 • Share this:

  ಖಾಸಗಿ ತನಿಖಾಧಿಕಾರಿಗಳ ಆದೇಶದ ಮೇರೆಗೆ ಸರ್ಕಾರ ಮತ್ತು ಪ್ರಮುಖ ವ್ಯಕ್ತಿಗಳ ಇಮೇಲ್‌ಗಳನ್ನು ಹ್ಯಾಕ್ ಮಾಡುವ ಮೂಲಕ ಭಾರತದಲ್ಲಿರುವ ಹ್ಯಾಕರ್‌ಗಳು (Indian Hackers) ವಿಶ್ವದ ಗಣ್ಯ ವ್ಯಕ್ತಿಗಳನ್ನೇ ತಮ್ಮ ಟಾರ್ಗೆಟ್ ಮಾಡಿಕೊಂಡು ಸಾವಿರಾರು ಡಾಲರ್‌ಗಳನ್ನು ಗಳಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಪರ್ವೇಜ್ ಮುಷರಫ್, ಮೈಕೆಲ್ ಪ್ಲಾಟಿನಿ, ಲಿಜ್ ಟ್ರಸ್ ಸಹಾಯಕ ಮಾರ್ಕ್ ಫುಲ್‌ಬ್ರೂಕ್, ಸ್ಟೀಫನ್ ಕ್ವಾಂಡ್ಟ್ ಮೊದಲಾದ ಗಣ್ಯರ ಪಟ್ಟಿಗಳನ್ನೇ ಹ್ಯಾಕರ್‌ಗಳು ಗುರಿಯಾಗಿಸಿಕೊಂಡಿದ್ದು, ಆದೇಶದ ಮೇರೆಗೆ ಹ್ಯಾಕರ್‌ಗಳು ಕಾರ್ಯನಿರ್ವಹಿಸುವುದಾಗಿ ತಿಳಿದುಬಂದಿದೆ.


  ರಹಸ್ಯ ವರದಿಗಾರರು ಸಂಗ್ರಹಿಸಿದ ಮಾಹಿತಿಗಳೇನು?


  ಯುಕೆ ಮೂಲದ ಸಂಡೇ ಟೈಮ್ಸ್ ಇನ್‌ಸೈಟ್ ತಂಡ ಹಾಗೂ ತನಿಖಾ ಪತ್ರಿಕೋದ್ಯಮ ಸಂಸ್ಥೆಯು ಭಾರತಕ್ಕೆ ರಹಸ್ಯ ವರದಿಗಾರರನ್ನು ಕಳುಹಿಸಿದ್ದು ಈ ವರದಿಗಾರರು, ಅಕ್ರಮ ಹ್ಯಾಕಿಂಗ್ ಉದ್ಯಮದಲ್ಲಿ ನುಸುಳಲು ಭಾರತದ ಕೆಲವು ಉನ್ನತ ಕಂಪ್ಯೂಟರ್ ಹ್ಯಾಕರ್‌ಗಳನ್ನು ನೇಮಿಸಿಕೊಳ್ಳಲು ಬಯಸುತ್ತಿರುವ ಮಾಜಿ MI6 ಏಜೆಂಟ್-ಕಾರ್ಪೊರೇಟ್ ತನಿಖಾಧಿಕಾರಿಗಳಂತೆ ನಟಿಸಿದ್ದರು.


  ಇದನ್ನೂ ಒದಿ:  Viral News: ಬೆಂಗಳೂರಿನ ಈ ಆಟೋ ಹತ್ತಿದ್ರೆ ಬಿಸ್ಕೆಟ್‌, ಸ್ಯಾನಿಟೈಸರ್‌, ನೀರಿನ ಬಾಟಲಿ ಫ್ರೀ!


  ಇಸ್ರೇಲಿ ಸಾಫ್ಟ್‌ವೇರ್ ಪೆಗಾಸಸ್ ಬಳಕೆ

  ಒಬ್ಬ ಹ್ಯಾಕರ್ ರಾಜಕೀಯ ರಂಗದಲ್ಲಿ ಬಿರುಗಾಳಿ ಎಬ್ಬಿಸಿದ ಇಸ್ರೇಲಿ ಸಾಫ್ಟ್‌ವೇರ್ ಪೆಗಾಸಸ್ ಅನ್ನು ಬಳಸಿಕೊಂಡಿರುವುದಾಗಿ ತಿಳಿಸಿದ್ದು ಇದರಿಂದ ಕಣ್ಗಾವಲು ಆರೋಪಗಳ ಕುರಿತು ಎಸ್‌ಸಿ ತನಿಖೆ ನಡೆಸುವಂತೆ ಪ್ರೇರೇಪಣೆಯನ್ನುಂಟು ಮಾಡಿತು. ಭಾರತ ಹಾಗೂ ಬ್ರಿಟನ್‌ನಲ್ಲಿ ಹ್ಯಾಕಿಂಗ್ ಕಾನೂನು ಬಾಹಿರವಾಗಿದೆ. ಇದಕ್ಕಾಗಿ ರಹಸ್ಯ ವರದಿಗಾರರು ಲಂಡನ್‌ನ ಮೇಫೇರ್‌ನಲ್ಲಿ ಬ್ಯೂಫೋರ್ಟ್ ಇಂಟೆಲಿಜೆನ್ಸ್ ಎಂಬ ನಕಲಿ ಕಾರ್ಪೊರೇಟ್ ತನಿಖಾ ಸಂಸ್ಥೆಯನ್ನು ಸ್ಥಾಪಿಸಿದರು.


  ತನಿಖೆಯ ಭಾಗವಾಗಿ ಈ ವರದಿಗಾರರು ಭಾರತದಲ್ಲಿನ ಕೆಲವು ಪ್ರಮುಖ ಹ್ಯಾಕರ್‌ಗಳನ್ನು ಸಂಪರ್ಕಿಸಿದರು. ತಮ್ಮ ಗ್ರಾಹಕರನ್ನು ಗುರಿಯಾಗಿಸಿಕೊಂಡು ಖಾಸಗಿ ಮಾಹಿತಿಯನ್ನು ಪಡೆಯಲು ಬಯಸಿದ್ದಾರೆ ಎಂಬುದಾಗಿ ವರದಿಗಾರರು ಹ್ಯಾಕರ್‌ಗಳಿಗೆ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.


  ಮಾಹಿತಿ ರವಾನೆಗಾಗಿ ಹ್ಯಾಕರ್‌ಗಳನ್ನು ನೇಮಿಸಿಕೊಳ್ಳಲಾಗಿದೆ


  ಅವರು ಕೇಳಿದ ಪ್ರಶ್ನೆಗಳಿಗೆ ಪ್ರತ್ಯುತ್ತರಗಳು ದೊರೆತೊಡನೆ ಅವರು ಭಾರತಕ್ಕೆ ಪ್ರಯಾಣಿಸಿದರು ಹಾಗೂ ರಹಸ್ಯವಾಗಿ ಈ ಹ್ಯಾಕರ್‌ಗಳನ್ನು ಸಂದರ್ಶಿಸಿ ಅದನ್ನು ವಿಡಿಯೋಮಾಡುವ ಮೂಲಕ ಅವರ ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದಾರೆ. ಬೆಂಗಳೂರಿನ ಉತ್ಕರ್ಷ್ ಭಾರ್ಗವ ದೆಹಲಿಯ ತಮ್ಮ ರಹಸ್ಯ ಕೊಠಡಿಯಲ್ಲಿ ರಹಸ್ಯ ವರದಿಗಾರರೊಂದಿಗೆ ಜೂಮ್‌ನಲ್ಲಿ ಮಾತನಾಡಿದ್ದು, ಟರ್ಕಿ, ಪಾಕಿಸ್ತಾನ, ಈಜಿಪ್ಟ್, ಕಾಂಬೋಡಿಯಾ ಮತ್ತು ಕೆನಡಾದ ಸರ್ಕಾರಗಳಲ್ಲಿನ ವಿವಿಧ ಸಚಿವಾಲಯಗಳ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಹ್ಯಾಕ್ ಮಾಡಲು ಅವರನ್ನು ನಿಯೋಜಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ನಮ್ಮ ಕೆಲಸ ಡೇಟಾವನ್ನು ಪಡೆಯುವುದು ಹಾಗೂ ಅದನ್ನು ರವಾನಿಸುವುದು ಎಂಬುದಾಗಿ ವರದಿಗಾರರಿಗೆ ಉತ್ಕರ್ಷ್ ತಿಳಿಸಿರುವುದು ವರದಿಯಾಗಿದೆ.


  ಭಾರತೀಯ ಹ್ಯಾಕರ್‌ಗಳು ಪಾಕಿಸ್ತಾನದ ರಾಜಕಾರಣಿಗಳು, ಜನರಲ್‌ಗಳು, ರಾಜತಾಂತ್ರಿಕ ಅಧಿಪತ್ಯದ ಕಂಪ್ಯೂಟರ್ ನಿಯಂತ್ರಣಗಳನ್ನು ವಶಪಡಿಸಿಕೊಂಡಿದ್ದು, ಖಾಸಗಿ ಸಂಭಾಷಣೆಗಳನ್ನು ಕದ್ದಾಲಿಕೆ ಮಾಡಿರುವುದನ್ನು ಸುದ್ದಿಪತ್ರಿಕೆ ಖಚಿತಪಡಿಸಿದೆ.


  ಹ್ಯಾಕರ್‌ಗಳು ಹೇಗೆ ಮೋಸಗೊಳಿಸುತ್ತಿದ್ದರು?


  ಭಾರತೀಯ ಹ್ಯಾಕರ್‌ಗಳಿಂದ ಟಾರ್ಗೆಟ್ ಆದವರು ಸ್ನೇಹ ಬೆಳೆಸಿಕೊಳ್ಳುತ್ತಿದ್ದರು ಹಾಗೂ ಹ್ಯಾಕರ್‌ಗಳು ಅವರಿಗೆ ತಿಳಿಯದಂತೆಯೇ ಆಸಕ್ತಿದಾಯಕ ಲಿಂಕ್‌ಗಳನ್ನು ನೀಡುವ ಮೂಲಕ ಅದನ್ನು ಕ್ಲಿಕ್ ಮಾಡುವಂತೆ ಹೇಳಿ ಕಂಪ್ಯೂಟರ್‌ಗೆ ಮಾಲ್‌ವೇರ್ ಡೌನ್‌ಲೋಡ್ ಮಾಡಿಕೊಳ್ಳುತ್ತಿದ್ದರು ಇದರಿಂದ ಹ್ಯಾಕರ್‌ಗಳು ಆ ವ್ಯಕ್ತಿಗಳ ಇಮೇಲ್ ಬಾಕ್ಸ್‌ಗೆ ಪ್ರವೇಶ ಗಿಟ್ಟಿಸಿಕೊಳ್ಳುತ್ತಿದ್ದರು ಎಂಬುದು ತಿಳಿದುಬಂದಿದೆ.


  ಇದುವರೆಗೆ ಸಿಕ್ಕಿಹಾಕಿಕೊಳ್ಳದ ಹ್ಯಾಕರ್ಸ್​

  ತಾವೆಷ್ಟೇ ತಪ್ಪುಮಾಡಿರೂ ಇದುವರೆಗೆ ಸಿಕ್ಕಿಹಾಕಿಕೊಂಡಿಲ್ಲ ಎಂದು ಹೇಳಿಕೊಂಡಿರುವ ಹ್ಯಾಕರ್‌ಗಳು ಸೈಬರ್ ಸೆಕ್ಯುರಿಟಿ ತಜ್ಞರಾಗಿ ಉದ್ಯಮ ಆರಂಭಿಸಿದರು ಎಂದು ವರದಿಗಾರರಿಗೆ ತಿಳಿಸಿದ್ದಾರೆ. ಪೆಗಾಸಸ್ ಬಳಸಿಕೊಂಡಿರುವ ಹ್ಯಾಕರ್, ಈಜಿಪ್ಟ್‌ಏರ್‌ಗಾಗಿ ಪ್ರಯಾಣಿಕರ ಪಟ್ಟಿಯನ್ನು ಹ್ಯಾಕ್ ಮಾಡಿರುವ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಭಾರತೀಯ ಪೊಲೀಸರು ಈ ವಿಷಯದ ಕುರಿತು ಕೂಲಂಕುಷ ತನಿಖೆ ನಡೆಸದ ಕಾರಣ ಹ್ಯಾಕರ್‌ಗಳನ್ನು ಯಾರಿಗೂ ಸೆರೆಹಿಡಿಯಲಾಗುತ್ತಿಲ್ಲ ಮತ್ತು ವಿಚಾರಣೆಗೆ ಒಳಪಡಿಸುತ್ತಿಲ್ಲ ಎಂಬುದು ವರದಿಗಾರರಿಂದ ತಿಳಿದುಬಂದ ಮಾಹಿತಿಯಾಗಿದೆ.


  ಇದನ್ನೂ ಓದಿ:  Video Viral: ಬದುಕು ಕಲಿಸಿದ ಗುರುವಿಗೆ ಕಣ್ಣೀರ ವಿದಾಯ! 30 ವರ್ಷಗಳ ಸೇವೆಯಿಂದ ನಿವೃತ್ತಿಯಾದ ಶಿಕ್ಷಕಿಗೆ ಭಾವನಾತ್ಮಕ ಬೀಳ್ಕೊಡುಗೆ

  ರಹಸ್ಯ ವರದಿಗಾರರು ಮಾಜಿ ಭಾರತೀಯ ಸೇನಾ ಬ್ರಿಗೇಡಿಯರ್, ಸೈಬರ್ ಗುಪ್ತಚರ ಕಂಪನಿ ಫ್ರೋನೆಸಿಸ್ ಸಂಸ್ಥಾಪಕ ರಾಮ್ ಛಿಲ್ಲರ್ ಅವರನ್ನು ಭೇಟಿಮಾಡಿದ್ದು, ಈ ವರದಿಗಳಿಂದ ಹಿಂದಿನ ಸೈಬರ್ ದಾಳಿಗಳು ಅಥವಾ ಕಾರ್ಪೊರೇಟ್ ಡೇಟಾ ಉಲ್ಲಂಘನೆಗಳಲ್ಲಿ ಕದ್ದಿರುವ ಜನರ ವೈಯಕ್ತಿಕ ಡೇಟಾವನ್ನು ಪಡೆಯಲು ಡಾರ್ಕ್ ವೆಬ್ ಅನ್ನು ಶೋಧಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.


  ಭಾರತೀಯ ಹ್ಯಾಕರ್​ಗಳ ಬಳಕೆ

  ಕೋಟಾದ ರಾಜಸ್ಥಾನ ತಾಂತ್ರಿಕ ವಿಶ್ವವಿದ್ಯಾಲಯದ ಪದವೀಧರ ತೇಜ್ ಸಿಂಗ್ ರಾಥೋಡ್ (28) ಅವರನ್ನು ದೆಹಲಿಯ ಲೀಲಾ ಪ್ಯಾಲೇಸ್‌ನಲ್ಲಿ ವರದಿಗಾರರು ಭೇಟಿಯಾಗಿದ್ದು, ಬ್ರಿಟಿಷ್ ಹಾಗೂ ಸಂಪೂರ್ಣ ಜಗತ್ತು ಭಾರತೀಯ ಹ್ಯಾಕರ್‌ಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಅವರ ಹೇಳಿಕೆಯನ್ನು ಬಹಿರಂಗಪಡಿಸಿದೆ. ಫಿಶಿಂಗ್ ಸಹಾಯದ ಮೂಲಕ ಪಾಸ್‌ವರ್ಡ್‌ಗಳನ್ನು ಆತ ಹೇಗೆ ಪಡೆದುಕೊಂಡಿದ್ದಾನೆ ಎಂಬುದನ್ನು ವಿವರಿಸಿರುವ ತೇಜ್ ಸಿಂಗ್, 90% ದಷ್ಟು ಖಾಸಗಿ ತನಿಖಾಧಿಕಾರಿಗಳು ಈ ರೀತಿಯ ಕೆಲಸಗಳನ್ನು ಮಾಡಲು ಭಾರತೀಯ ಹ್ಯಾಕರ್‌ಗಳನ್ನು ಬಳಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

  Published by:Precilla Olivia Dias
  First published: