• Home
  • »
  • News
  • »
  • national-international
  • »
  • Indians in Canada: ಕೆನಡಾದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧ; ಭಾರತೀಯ ಪ್ರಜೆಗಳಿಗೆ ಕೇಂದ್ರ ಎಚ್ಚರಿಕೆ

Indians in Canada: ಕೆನಡಾದಲ್ಲಿ ಹೆಚ್ಚುತ್ತಿರುವ ದ್ವೇಷ ಅಪರಾಧ; ಭಾರತೀಯ ಪ್ರಜೆಗಳಿಗೆ ಕೇಂದ್ರ ಎಚ್ಚರಿಕೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆನಡಾದಲ್ಲಿ ಮೊನ್ನೆ ಮೊನ್ನೆ ತಾನೇ ನಡೆದ ಕೆಲ ಘಟನೆಗಳನ್ನು ಗಮನಿಸಿದ ಭಾರತ ಸರ್ಕಾರ ತನ್ನ ನಾಗರೀಕರ ಕ್ಷೇಮದ ಬಗ್ಗೆ ಯೋಚಿಸಿ ಈ ಸಲಹೆಯನ್ನು ನೀಡಿದೆ. ಕೆನಡಾದಲ್ಲಿ ದ್ವೇಷದ ಅಪರಾಧಗಳು, ಹಿಂಸಾಚಾರ ಹಾಗೂ ಭಾರತ ವಿರೋಧಿ ಚಟುವಟಿಕೆಗಳ ಘಟನೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಹಾಗೂ ಸರ್ಕಾರ ಜಾಗರೂಕರಾಗಿರಿ ಎಂದು ಸಲಹೆ ನೀಡಿದೆ.

ಮುಂದೆ ಓದಿ ...
  • Share this:

ಕೆನಡಾದಲ್ಲಿರುವ (Canada) ತನ್ನ ನಾಗರಿಕರಿಗೆ ಮತ್ತು ಅಲ್ಲಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ (Students) ದ್ವೇಷ ಅಪರಾಧಗಳು, ಪಂಥೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳ ತೀವ್ರ ಹೆಚ್ಚಳ ಕುರಿತು ಎಚ್ಚರಿಸಿರುವ ಭಾರತ ಸರ್ಕಾರ (Indian Government) ಜಾಗರೂಕರಾಗಿರಿ ಎಂದು ಸಲಹೆ ನೀಡಿದೆ. ಮೊನ್ನೆ ಮೊನ್ನೆ ತಾನೇ ನಡೆದ ಕೆಲ ಘಟನೆಗಳನ್ನು ಗಮನಿಸಿದ ಭಾರತ ಸರ್ಕಾರ ತನ್ನ ನಾಗರೀಕರ ಕ್ಷೇಮದ ಬಗ್ಗೆ ಯೋಚಿಸಿ ಈ ಸಲಹೆಯನ್ನು ನೀಡಿದೆ. ಕೆನಡಾದಲ್ಲಿ ದ್ವೇಷದ ಅಪರಾಧಗಳು, ಹಿಂಸಾಚಾರ ಹಾಗೂ ಭಾರತ ವಿರೋಧಿ ಚಟುವಟಿಕೆಗಳ (Anti-Indian Activity) ಘಟನೆಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.


ಈ ಅಪರಾಧಗಳ ವಿರುದ್ಧ ತನಿಖೆ ಹಾಗೂ ಕ್ರಮ ಕೈಗೊಳ್ಳುವಂತೆ ನಾವು ಕೆನಡಾ ಅಧಿಕಾರಿಗಳನ್ನು ಕೇಳಿಕೊಂಡಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಅಪರಾಧಿಗಳ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಿದೇಶಾಂಗ ಸಚಿವಾಲಯ ವಿಷಾದ ವ್ಯಕ್ತಪಡಿಸಿದೆ.


ಕೆನಡಾದ ಭಾರತ ಪ್ರಜೆಗಳಿಗೆ ಕೇಂದ್ರ ಎಚ್ಚರಿಕೆ
ಹೇಳಿಕೆಯನ್ನು ಬಿಡುಗಡೆ ಮಾಡಿದ ಎಂಇಎ, ಕೆನಡಾದಲ್ಲಿ ದ್ವೇಷದ ಅಪರಾಧಗಳು, ಮತೀಯ ಹಿಂಸಾಚಾರ ಮತ್ತು ಭಾರತ ವಿರೋಧಿ ಚಟುವಟಿಕೆಗಳ ಘಟನೆಗಳು ಹೆಚ್ಚಾಗಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಕೆನಡಾದಲ್ಲಿರುವ ನಮ್ಮ ಹೈಕಮಿಷನ್/ಕಾನ್ಸುಲೇಟ್ ಜನರಲ್ ಅವರು ಕೆನಡಾದ ಅಧಿಕಾರಿಗಳೊಂದಿಗೆ ಈ ಘಟನೆಗಳನ್ನು ಚರ್ಚಿಸಿದ್ದಾರೆ. ಮತ್ತು ಅವರು ಹೇಳಿದ ಅಪರಾಧಗಳನ್ನು ತನಿಖೆ ಮಾಡಲು ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ವಿನಂತಿಸಿದ್ದಾರೆ.


ಕೆನಡಾದಲ್ಲಿ ಈ ಅಪರಾಧಗಳ ಅಪರಾಧಿಗಳನ್ನು ಇದುವರೆಗೆ ನ್ಯಾಯಾಂಗಕ್ಕೆ ತಂದಿಲ್ಲ. ಆದ್ದರಿಂದ ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದಿಂದ ವಿದ್ಯಾರ್ಥಿಗಳು ಮತ್ತು ಪ್ರಯಾಣ/ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳುತ್ತಿರುವವರು ಸರಿಯಾದ ಎಚ್ಚರಿಕೆಯನ್ನು ವಹಿಸಲು ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ ಎಂದು ಅದು ಹೇಳಿದೆ.


ಸುರಕ್ಷತೆ ದೃಷ್ಟಿಯಿಂದ ವೆಬ್‌ಸೈಟ್‌ಗಳಲ್ಲಿ ನೋಂದಾಯಿಸಿಕೊಳ್ಳಲು ಸಲಹೆ
ಭಾರತೀಯ ಪ್ರಜೆಗಳು ಮತ್ತು ಕೆನಡಾದಲ್ಲಿರುವ ಭಾರತದ ವಿದ್ಯಾರ್ಥಿಗಳು ತಮ್ಮ ವೆಬ್‌ಸೈಟ್‌ಗಳು ಅಥವಾ MADAD ಪೋರ್ಟಲ್ madad.gov.in ಮೂಲಕ ಒಟ್ಟಾವಾ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಸಚಿವಾಲಯ ಹೇಳಿದೆ. ಯಾವುದೇ ಅವಶ್ಯಕತೆ ಅಥವಾ ತುರ್ತು ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಸಂಪರ್ಕ ಸಾಧಿಸಲು ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ನೋಂದಣಿ ಸಹಾಯವಾಗಲಿದೆ ಎಂದು ಅದು ತಿಳಿಸಿದೆ.


ಇದನ್ನೂ ಓದಿ: Good News: ಮಗಳಿಗಾಗಿ ರೋಬೋ ತಯಾರಿಸಿದ ದಿನಗೂಲಿ ಕಾರ್ಮಿಕ!


ಇದೇ ಸೆಪ್ಟೆಂಬರ್ 19 ರಂದು, 100,000 ಕ್ಕೂ ಹೆಚ್ಚು ಕೆನಡಾದ ಸಿಖ್ಖರು ಒಂಟಾರಿಯೊದ ಬ್ರಾಂಪ್ಟನ್‌ನಲ್ಲಿ ಖಾಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕಾಗಿ ಮತದಾನದಲ್ಲಿ ಭಾಗವಹಿಸಿದರು, ಇದನ್ನು ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ (SFJ) ಆಯೋಜಿಸಿತ್ತು. ಖಲಿಸ್ತಾನ್ ಜನಾಭಿಪ್ರಾಯ ಸಂಗ್ರಹಕ್ಕೆ ಮತ ಹಾಕಲು ಅಪಾರ ಸಂಖ್ಯೆಯ ಪುರುಷರು, ಮಹಿಳೆಯರು ಸಾಲುಗಟ್ಟಿ ನಿಂತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಈ ಎಲ್ಲಾ ಗದ್ದಲದ ಮಧ್ಯೆಯೇ ಭಾರತೀಯರಿಗೆ ಈ ಸಲಹೆ ನೀಡಲಾಗಿದೆ.


ಇದೊಂದು ಪ್ರಹಸನ ಎಂದು ವಕ್ತಾರ ಅರಿಂದಮ್ ಬಾಗ್ಚಿ ಟೀಕೆ
ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಜನಾಭಿಪ್ರಾಯ ಸಂಗ್ರಹವನ್ನು ಉಗ್ರವಾದಿ ಮತ್ತು ತೀವ್ರಗಾಮಿ ಶಕ್ತಿಗಳಿಂದ ನಡೆಸಲಾದ ಪ್ರಹಸನ ಎಂದು ಕರೆದಿದ್ದಾರೆ. ಸೌಹಾರ್ದ ರಾಷ್ಟ್ರದಲ್ಲಿ ಇದಕ್ಕೆ ಅವಕಾಶ ನೀಡಿರುವುದು ತೀವ್ರ ಆಕ್ಷೇಪಾರ್ಹ ಎಂದು ಬಾಗ್ಚಿ ಹೇಳಿದ್ದಾರೆ.


ಪ್ರತ್ಯೇಕ ಸಿಖ್ ರಾಷ್ಟ್ರಕ್ಕಾಗಿ ಹೋರಾಡುತ್ತಿರುವ ಖಲಿಸ್ತಾನ್ ಉಗ್ರರು ಬ್ರಿಟನ್‌ನಲ್ಲಿ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದರೂ ಅಲ್ಲಿನ ಸರಕಾರ ಮಾತ್ರ ಏನು ಆಗಿಲ್ಲದಂತೆ ಕುಳಿತಿದೆ. ಕೆನಡಾದಲ್ಲಿ ಭಾರತ ವಿರೋಧಿ ಶಕ್ತಿಗಳು ಬೆಳೆಯುತ್ತಿರುವ ವಿರುದ್ಧ ಭಾರತ ಸರ್ಕಾರವು ಕೆನಡಾ ಸರ್ಕಾರಕ್ಕೆ ಈಗಾಗಲೇ ಎಚ್ಚರಿಕೆ ನೀಡಿದೆ. ಕೆಲವೇ ದಿನಗಳ ಹಿಂದೆ ಹಿಂದೂಗಳ ದೇಗುಲದ ಮೇಲೆ ಘೋಷಣೆಗಳನ್ನು ಬರೆದು ಮಂದಿರವನ್ನು ವಿರೂಪಗೊಳಿಸಲಾಗಿದೆ. ಈ ಘಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಭಾರತ ತ್ವರಿತ ಕ್ರಮಕ್ಕೆ ಅಧಿಕಾರಿಗಳನ್ನು ಆಗ್ರಹಿಸಿದರು.


ಇದನ್ನೂ ಓದಿ: Hindu: ಹಿಂದೂವಾಗಲು ಧರ್ಮ ಬದಲಾಯಿಸಬೇಕೆಂದಿಲ್ಲ, ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ: ಮೋಹನ್ ಭಾಗವತ್


ಇಂತದ್ದೇ ಇನ್ನೊಂದು ಪ್ರಕರಣ ಈ ವರ್ಷದ ಆಗಸ್ಟ್‌ನಲ್ಲಿ ಬೆಳಕಿಗೆ ಬಂದಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್‌ನ ಗೋಡೆಗಳ ಮೇಲೆ ಖಾಲಿಸ್ತಾನ್ ಘೋಷಣೆಗಳನ್ನು ಬರೆದಿದೆ ಎಂದು ಪಾಕಿಸ್ತಾನದ ಜಿಯೋ ನ್ಯೂಸ್ ಅನ್ನು ಉಲ್ಲೇಖಿಸಿ ANI ವರದಿ ಮಾಡಿತ್ತು.

Published by:Ashwini Prabhu
First published: