ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್, ಮನನೊಂದ ಹುಡುಗಿ ಆತ್ಮಹತ್ಯೆಗೆ ಯತ್ನ..!

ಈ ಬಗ್ಗೆ ವೀಡಿಯೊ ಮಾಡಿ ಮಧ್ಯರಾತ್ರಿ ಲೈವ್​ ಸೂಸೈಡ್​ ಮಾಡುವುದಾಗಿ ತಿಳಿಸಿ ಪೋಸ್ಟ್​ ಹಾಕಿದ್ದರು.

zahir | news18
Updated:December 22, 2018, 6:36 PM IST
ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ಕಮೆಂಟ್, ಮನನೊಂದ ಹುಡುಗಿ ಆತ್ಮಹತ್ಯೆಗೆ ಯತ್ನ..!
ಸಾಂದರ್ಭಿಕ ಚಿತ್ರ
zahir | news18
Updated: December 22, 2018, 6:36 PM IST
ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಿದ್ದಾರೆಂದು ಹುಡುಗಿಯೊಬ್ಬಳು ಆತ್ಮಹತ್ಯೆಗೆ ಮುಂದಾದ ಘಟನೆ ದುಬೈನಲ್ಲಿ ನಡೆದಿದೆ. ಇತ್ತೀಚೆಗೆ ಹಾಕಿದ ಫೋಟೋವೊಂದನ್ನು ನೆಟ್ಟಿಗರು ಅಪಹಾಸ್ಯ ಮಾಡಿದ್ದರು. ಇದರಿಂದ ಮನನೊಂದ 20ರ ಹರೆಯದ ಹುಡುಗಿ ಲೈವ್ ಸ್ಟ್ರೀಮಿಂಗ್​ ಮೂಲಕ ಆತ್ಮಹತ್ಯೆ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದ್ದಳು.

ಈ ಹುಡುಗಿಯು ಭಾರತೀಯ ಮೂಲದವಳು ಎಂದು ಖಲೀಜ್​ ಟೈಮ್ಸ್​ ಮಾಡಿರುವ ವರದಿಯಲ್ಲಿ ತಿಳಿಸಿದ್ದು, ಇವರು ಹಾಕುತ್ತಿದ್ದ ಫೋಟೋಗಳನ್ನು ಬಳಸಿ ಟ್ರೋಲ್​ ಮಾಡಲಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ಹುಡುಗಿಯು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವೀಡಿಯೊ ಮಾಡಿ ಮಧ್ಯರಾತ್ರಿ ಲೈವ್​ ಸೂಸೈಡ್​ ಮಾಡುವುದಾಗಿ ತಿಳಿಸಿ ಪೋಸ್ಟ್​ ಹಾಕಿದ್ದರು. ಈ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಇದನ್ನು ಗಮನಿಸಿದ ದುಬೈ ಕ್ರೈಮ್​ ಪೊಲೀಸರು ಹುಡುಗಿಯ ಪತ್ತೆಗೆ ಕಾರ್ಯಪ್ರವೃತ್ತರಾಗಿದ್ದಾರೆ.

ಸೈಬರ್​ ಕ್ರೈಂ ಸಹಾಯದಿಂದ ಹುಡುಗಿ ವಾಸಿಸುತ್ತಿದ್ದ ಸ್ಥಳವನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಂತೆ ಶಾರ್ಜಾದ ಅಲ್​ ನಹದಾ ಪ್ರದೇಶಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ಹುಡುಗಿಯ ಫ್ಲಾಟ್​ನ್ನು ತಲುಪಿದ್ದಾರೆ. ಪೊಲೀಸರನ್ನು ನೋಡಿ ಗಲಿಬಿಲಿಗೊಂಡ ತಂದೆಯೊಂದಿಗೆ ಮಗಳ ಆತ್ಮಹತ್ಯೆ ವಿಷಯನ್ನು ತಿಳಿಸಿದರು.

ಕೋಣೆಯೊಳಗೆ ಪ್ರವೇಶಿಸಿದಾಗ, ಅದಾಗಲೇ ಆತ್ಮಹತ್ಯೆಗೆ ತಯಾರಿ ಮಾಡಿಕೊಳ್ಳುತ್ತಿದ್ದ ಹುಡುಗಿಯನ್ನು ಪೊಲೀಸರು ವಶಕ್ಕೆ ಪಡೆದರು. ಅಲ್ಲದೆ ಅವಳನ್ನು ಸಮಾಧಾನ ಪಡಿಸಿ ದೈರ್ಯ ತುಂಬಿ ಆತ್ಮಹತ್ಯೆ ನಿರ್ಧಾರವನ್ನು ಕೈ ಬಿಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಈ ವೇಳೆ ಪೊಲೀಸರೊಂದಿಗೆ ಮಾತನಾಡಿದ ಹುಡುಗಿಯು ತನ್ನ ಫೋಟೋಗಳಿಗೆ ಬರುತ್ತಿರುವ ಕೆಟ್ಟ ಕಮೆಂಟ್​ಗಳಿಂದ ಮತ್ತು ಅಪಹಾಸ್ಯದಿಂದ ಆತ್ಮಹತ್ಯೆ ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾಳೆ. ಹೀಗಾಗಿ ತೀವ್ರ ಖಿನ್ನತೆಯಿಂದ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಲು ಹುಡುಗಿ ಮುಂದಾಗಿದ್ದಳು ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದರು.

First published:December 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ