Indian Flag: ಪಾಕಿಸ್ತಾನಿ ವಿದ್ಯಾರ್ಥಿಗಳ ಜೀವ ಉಳಿಸಿದ ಭಾರತದ ತ್ರಿವರ್ಣ ಧ್ವಜ! ಇದಕ್ಕೇ ಹೇಳೋದು ಐ ಲವ್ ಮೈ ಇಂಡಿಯಾ

Russia vs Ukraine War: ಟ್ಯಾಕ್ಸಿ ಇನ್ನಿತರ ವಾಹನಗಳಿಗೆ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಹಾಕಿಕೊಂಡು ಬರುತ್ತಿದ್ದರು. ಆಗ ರಷ್ಯಾದ ಯಾವೊಬ್ಬ ಸೈನಿಕರು ವಾಹನವನ್ನು ತಡೆಯುತ್ತಿರಲಿಲ್ಲ ಮತ್ತು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಭಾರತದ ಹೆ್ಮೆಯ ತ್ರಿವರ್ಣ ಧ್ವಜ

ಭಾರತದ ಹೆ್ಮೆಯ ತ್ರಿವರ್ಣ ಧ್ವಜ

  • Share this:
ಯುದ್ಧ ಭೂಮಿ ಉಕ್ರೇನ್‌ನಲ್ಲಿ (Russia sv Ukraine War) ಭಾರತೀಯರು ಮತ್ತು ನೆರೆಹೊರೆಯ ದೇಶದ ವಿದ್ಯಾರ್ಥಿಗಳನ್ನು ರಕ್ಷಿಸಲು ನಮ್ಮ ಭಾರತ ದೇಶದ ತ್ರಿವರ್ಣ ಧ್ವಜ (Indian Flag) ನೆರವಾಗಿದೆ. ಸ್ವತ: ಇದರ ಬಗ್ಗೆ ಅಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಹೇಳಿದ್ದಾರೆ. ಭಾರತದ ರಾಷ್ಟ್ರೀಯ ತ್ರಿವರ್ಣ ಧ್ವಜವು ಉಕ್ರೇನ್‌ನಲ್ಲಿದ್ದ ಭಾರತೀಯರಲ್ಲದೇ ಬೇರೆ ದೇಶದ ನಾಗರಿಕರು ಸಹ ಅಲ್ಲಿಂದ ಸುರಕ್ಷಿತವಾಗಿ ಪಾರಾಗಲು ನೆರವಾಗಿದೆ. ಉಕ್ರೇನ್‌ನಿಂದ ಹೊರಗೆ ದಾಟಲು ಪಾಕಿಸ್ತಾನ ಮತ್ತು ಟರ್ಕಿ ವಿದ್ಯಾರ್ಥಿಗಳಿಗೂ (Pakistan And Turkey Students) ಸಹ ರಾಷ್ಟ್ರೀಯ ತ್ರಿವರ್ಣ ಧ್ವಜ ರಕ್ಷಣೆ ನೀಡಿದೆ.

ಉಕ್ರೇನ್‌ನಿಂದ ರೊಮೇನಿಯಾದ ಬುಚಾರೆಸ್ಟ್ ನಗರಕ್ಕೆ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು, ಯುದ್ಧ ಪೀಡಿತ ದೇಶದ ವಿವಿಧ ಚೆಕ್‌ಪೋಸ್ಟ್‌ಗಳನ್ನು ಸುರಕ್ಷಿತವಾಗಿ ದಾಟಲು ರಾಷ್ಟ್ರೀಯ ತ್ರಿವರ್ಣ ಧ್ವಜವು ತಮಗೆ ಮತ್ತು ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ಆಪರೇಶನ್ ಗಂಗಾ ಸಹಾಯ
ಅಕ್ಷರಶಃ ಯುದ್ಧ ಭೂಮಿ ಆಗಿರುವ ಉಕ್ರೇನ್‌ನಿಂದ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಆಪರೇಷನ್ ಗಂಗಾ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇದರಡಿಯಲ್ಲಿ ಈಗಾಗ್ಲೇ ನೂರಾರು ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಶೇಷ ಸ್ಥಳಾಂತರಿಸುವ ವಿಮಾನಗಳನ್ನು ಹಾರಿಸುತ್ತಿವೆ.

'ಆಪರೇಷನ್ ಗಂಗಾ' ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಸ್ಥಳಾಂತರಿಸುವ ವಿಮಾನಗಳನ್ನು ತಲುಪಲು ಭಾರತೀಯ ವಿದ್ಯಾರ್ಥಿಗಳು ರೊಮೇನಿಯನ್ ನಗರಕ್ಕೆ ಆಗಮಿಸಬೇಕಾಗಿತ್ತು. ಹೀಗಾಗಿ ಅಲ್ಲಿಂದ ಟ್ಯಾಕ್ಸಿ ಇನ್ನಿತರ ವಾಹನಗಳಿಗೆ ವಿದ್ಯಾರ್ಥಿಗಳು ಭಾರತದ ತ್ರಿವರ್ಣ ಧ್ವಜ ಹಾಕಿಕೊಂಡು ಬರುತ್ತಿದ್ದರು. ಆಗ ರಷ್ಯಾದ ಯಾವೊಬ್ಬ ಸೈನಿಕರು ವಾಹನವನ್ನು ತಡೆಯುತ್ತಿರಲಿಲ್ಲ ಮತ್ತು ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Putin Love Life: ಉಕ್ರೇನ್ ಮೇಲೆ ದಾಳಿ ಮಾಡ್ತಿರೋ ರಷ್ಯಾ ಅಧ್ಯಕ್ಷನ ಪ್ರೇಮಕಥೆ..! ಪುಟಿನ್ ಮನಸು ಕದ್ದ ಅಲೀನಾ

ಭಾರತದ ಬಾವುಟ ತಯಾರಿಸಲು ಸ್ಪ್ರೇ ಪೇಂಟ್‌ಗಳನ್ನು ಖರೀದಿಸಿದ ಬಗ್ಗೆ ವಿದ್ಯಾರ್ಥಿಗಳು ವಿವರಿಸಿದ್ದಾರೆ. "ನಾನು ಮಾರುಕಟ್ಟೆಗೆ ಹೋಗಿ, ಕೆಲವು ಬಣ್ಣದ ಸ್ಪ್ರೇಗಳನ್ನು ಖರೀದಿಸಿದೆ ಮತ್ತು ಅದನ್ನು ಕರ್ಟನ್ ಮೇಲೆ ಸ್ಪ್ರೇ ಮಾಡಿ ನಂತರ ಕರ್ಟನ್ ಅನ್ನು ಸರಿಯಾಗಿ ಕಟ್ ಮಾಡಿ ಅದರಲ್ಲಿ ನಾವು ಭಾರತದ ತ್ರಿವರ್ಣ ಧ್ವಜ ತಯಾರಿಸಿದೆವು” ಎನ್ನುತ್ತಾರೆ.

ಕೆಲವು ಪಾಕಿಸ್ತಾನಿ ಮತ್ತು ಟರ್ಕಿಶ್ ವಿದ್ಯಾರ್ಥಿಗಳು ಕೂಡ ಭಾರತೀಯ ಧ್ವಜವನ್ನು ಬಳಸಿಕೊಂಡು ಚೆಕ್‌ಪೋಸ್ಟ್‌ಗಳನ್ನು ದಾಟಿದ್ದರ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಪಾಕಿಸ್ತಾನಿ, ಟರ್ಕಿಶ್ ವಿದ್ಯಾರ್ಥಿಗಳಿಗೂ ಉಕ್ರೇನ್‌ನಿಂದ ಸ್ಥಳಾಂತರಗೊಳ್ಳಲು ಭಾರತದ ಧ್ವಜ ಉತ್ತಮ ಸಹಾಯ ಮಾಡಿತು. ಭಾರತ ಧ್ವಜ ನೋಡಿದಾಕ್ಷಣ ರಷ್ಯಾ ಹಾಗೂ ಉಕ್ರೇನ್ ಸೈನಿಕರು ಏನೂ ಮಾಡುತ್ತಿರಲಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಉಚಿತ ವ್ಯವಸ್ಥೆ
"ನಾವು ಒಡಿಶಾದಿಂದ ಬಸ್ ಅನ್ನು ಬುಕ್ ಮಾಡಿದ್ದೇವೆ. ಮೊಲೊಡೋವಾ ಗಡಿಗೆ ಬಂದೆವು. ಮೊಲೊಡೋವನ್ ನಾಗರಿಕರು ತುಂಬಾ ಒಳ್ಳೆಯವರಾಗಿದ್ದರು. ಅವರು ನಮಗೆ ಉಚಿತ ವಸತಿ ಮತ್ತು ಟ್ಯಾಕ್ಸಿಗಳನ್ನು ಒದಗಿಸಿದರು. ಮೊಲೊಡೊವಾದಲ್ಲಿ ಹೆಚ್ಚು ಸಮಸ್ಯೆ ನಮಗೆ ಎದುರಾಗಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

“ರಾಯಭಾರ ಕಚೇರಿಯ ಅಧಿಕಾರಿಗಳು ನಮಗೆ ಆಹಾರ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿಯೊಬ್ಬರು ಇಲ್ಲಿಗೆ ಆಗಮಿಸಿದಾಗ, ಅವನನ್ನು ಮೊದಲು ಸರಿಯಾದ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ.

ಇದನ್ನೂ ಓದಿ: Explained: ಯಾವ್ಯಾವ ಧರ್ಮದಲ್ಲಿ ಮಹಿಳೆಯರಿಗೆ ಏನೇನು ಹಕ್ಕುಗಳಿವೆ?

ನೋಂದಣಿ ತೆಗೆದುಕೊಳ್ಳುವಾಗ ಆಶ್ರಯ ಮತ್ತು ಆಹಾರವನ್ನು ಒದಗಿಸಲಾಗುತ್ತದೆ. ನಂತರ ಅವರನ್ನು ಸ್ಥಳಾಂತರಿಸುವ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ರಾಯಭಾರಿ ಕಚೇರಿ ಹೆಚ್ಚು ಕಾಳಜಿ ವಹಿಸಿದೆ ಎಂದು ವಿದ್ಯಾರ್ಥಿಗಳು ಭಾರತೀಯ ರಾಯಭಾರಿ ಕಚೇರಿಗೆ ಕೃತಜ್ಞತೆ ಸಲ್ಲಿಸಿದರು.

ಉಕ್ರೇನ್‌ನಿಂದ ರೊಮೇನಿಯಾಕ್ಕೆ ಬಸ್ ಮೂಲಕ ಹಾಗೂ ಅಲ್ಲಿಂದ ಬುಚಾರೆಸ್ಟ್ ನಗರಕ್ಕೆ ಕರೆತಂದ ಭಾರತದ ರಾಯಭಾರ ಕಚೇರಿಯವರು, ಬಳಿಕ ವಿಮಾನದಲ್ಲಿ ವಿದ್ಯಾರ್ಥಿಗಳನ್ನು ಭಾರತಕ್ಕೆ ಏರ್‌ಲಿಫ್ಟ್ ಮಾಡಿದ್ದಾರೆ.
Published by:guruganesh bhat
First published: