ಪಾಕಿಸ್ತಾನೀ ಸುದ್ದಿ ವಾಹಿನಿ Dawnನಲ್ಲಿ ತ್ರಿವರ್ಣ ಧ್ವಜ ಪ್ರಸಾರ; ಭಾರತೀಯ ಹ್ಯಾಕರ್ಸ್ ಮೋಡಿ

ಭಾರತದ ಹ್ಯಾಕರ್​ಗಳು ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿಯನ್ನು ಹ್ಯಾಕ್ ಮಾಡಿ ತ್ರಿವರ್ಣ ಧ್ವಜ ಹಾರಾಟದ ಪ್ರಸಾರ ಮಾಡಿದ್ಧಾರೆ. ಜೊತೆಗೆ ಸ್ವಾತಂತ್ರ್ಯ ದಿನಾಚರಣೆ ಸಂದೇಶವನ್ನೂ ಬಿತ್ತರಿಸಿದ್ದಾರೆನ್ನಲಾಗಿದೆ.

news18-kannada
Updated:August 3, 2020, 1:52 PM IST
ಪಾಕಿಸ್ತಾನೀ ಸುದ್ದಿ ವಾಹಿನಿ Dawnನಲ್ಲಿ ತ್ರಿವರ್ಣ ಧ್ವಜ ಪ್ರಸಾರ; ಭಾರತೀಯ ಹ್ಯಾಕರ್ಸ್ ಮೋಡಿ
ಪಾಕಿಸ್ತಾನದ ಡಾನ್ ಸುದ್ದಿ ವಾಹಿನಿಯ ಕಾರ್ಯಕ್ರಮ ಪ್ರಸಾರ ವೇಳೆ ಮಿಂಚಿ ಮರೆಯಾದ ತ್ರಿವರ್ಣ ಧ್ವಜ
  • Share this:
ನವದೆಹಲಿ(ಆ. 03): ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ದಿಢೀರನೇ ಭಾರತದ ತ್ರಿವರ್ಣ ಧ್ವಜ ಹಾರಾಡಿದರೆ ಹೇಗಿದ್ದೀತು? ಶಾಕ್ ಆಗುವುದು ನಿಶ್ಚಿತ. ಪಾಕಿಸ್ತಾನದ ಪ್ರಸಿದ್ಧ ನ್ಯೂಸ್ ಚಾನಲ್ ಡಾನ್ (Dawn) ನಲ್ಲಿ ಭಾನುವಾರ ಮಧ್ಯಾಹ್ನ ಕೆಲ ಹೊತ್ತು ತಿರಂಗ ಹಾರಾಡುತ್ತಿರುವ ವಿಡಿಯೋ ಪ್ರಸಾರವಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಇದು ಭಾರತದ ಹ್ಯಾಕರ್ಸ್ ಮಾಡಿದ ಸಾಹಸವಾಗಿತ್ತು.

ಡಾನ್ ಸುದ್ದಿ ಕಾರ್ಯಕ್ರಮ ಪ್ರಸಾರವಾಗುತ್ತಿರುವಾಗ ಪರದೆ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಾಡುತ್ತಿರುವುದು ಕಾಣಿಸಿತು. ಜೊತೆಗೆ, ಹ್ಯಾಪಿ ಇಂಡಿಪೆಂಡೆನ್ಸ್ ಡೇ ಎಂಬ ಸಂದೇಶವೂ ಬಿತ್ತರವಾಗಿದೆ. ಸ್ವಲ್ಪ ಹೊತ್ತು ಇದು ಇದ್ದು ನಂತರ ಮಾಯವಾಗಿದೆ.ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆ ವೈರಲ್ ಆಗಿದೆ. ಈ ಘಟನೆ ನಡೆದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಡಾನ್ ಟಿವಿ, ತಮ್ಮ ವಾಹಿನಿ ಹ್ಯಾಕ್ ಆಗಿತ್ತು ಎಂದು ಒಪ್ಪಿಕೊಂಡಿದೆ. ತಮ್ಮ ವೆಬ್​ಸೈಟ್​ನಲ್ಲಿ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಡಾನ್ ಸಂಸ್ಥೆ, ಘಟನೆಯ ತನಿಖೆ ನಡೆಸುತ್ತಿರುವುದಾಗಿ ಹೇಳಿದೆ.

ಭಾರತದ ಹ್ಯಾಕರ್​ಗಳು ಪಾಕಿಸ್ತಾನದ ಮೇಲೆ ಹ್ಯಾಕಥಾನ್ ಸಮರ ಸಾರುತ್ತಿರುವಂತೆ ತೋರುತ್ತಿದೆ. ಕೆಲ ದಿನಗಳಿಂದ ಪಾಕಿಸ್ತಾನದ ಹಲವು ಜಾಲತಾಣಗಳನ್ನು ಭಾರತದ ಹ್ಯಾಕರ್​ಗಳು ಭೇದಿಸಿರುವುದು ತಿಳಿದುಬಂದಿದೆ. ಈ ಹಿಂದೆ ಕೆಲ ಪಾಕಿಸ್ತಾನೀ ಹ್ಯಾಕರ್​ಗಳು ಭಾರತದ ಸರ್ಕಾರಿ ಜಾಲತಾಣಗಳನ್ನ ಹ್ಯಾಕ್ ಮಾಡಿದ ಉದಾಹರಣೆಗಳುಂಟು.
Published by: Vijayasarthy SN
First published: August 3, 2020, 1:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading