ಮೊದಲು ಭಾರತೀಯ, ನಂತರ ತಮಿಳಿಗ: ಇಸ್ರೋ ಅಧ್ಯಕ್ಷ ಕೆ. ಸಿವನ್ ಹಳೆಯ ಸಂದರ್ಶನ ಈಗ ವೈರಲ್

2018ರ ಜನವರಿಯಲ್ಲಿ ಸನ್ ಟಿವಿ ವಾಹಿನಿಯೊಂದಿಗಿನ ಸಂದರ್ಶನದ ವೇಳೆ ಇಸ್ರೋ ಅಧ್ಯಕ್ಷರು ಭಾರತೀಯತೆಯ ಬಗ್ಗೆ ಮಾತನಾಡಿದ್ದರು.

Vijayasarthy SN | news18
Updated:September 11, 2019, 4:28 PM IST
ಮೊದಲು ಭಾರತೀಯ, ನಂತರ ತಮಿಳಿಗ: ಇಸ್ರೋ ಅಧ್ಯಕ್ಷ ಕೆ. ಸಿವನ್ ಹಳೆಯ ಸಂದರ್ಶನ ಈಗ ವೈರಲ್
ಕೆ. ಸಿವನ್
Vijayasarthy SN | news18
Updated: September 11, 2019, 4:28 PM IST
ಚಂದ್ರಯಾನ-2 ಯೋಜನೆ ಮೂಲಕ ಇಸ್ರೋ ಅಧ್ಯಕ್ಷ ಡಾ| ಕೈಲಾಸವಡಿವು ಸಿವನ್ ಅವರು ಹೆಚ್ಚೂಕಡಿಮೆ ಮನೆಮಾತಾಗಿದ್ದಾರೆ. ವಿಕ್ರಮ್ ಲ್ಯಾಂಡರ್ ಕೊನೆ ಕ್ಷಣಗಳಲ್ಲಿ ಸಂಪರ್ಕಕ್ಕೆ ಸಿಗದೇ ಹೋದಾಗ ಗದ್ಗದಿತಗೊಂಡ ಅವರಿಗೆ ಮೋದಿ ಸಂತೈಸಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದಾದ ಬಳಿಕ ಕೆ. ಸಿವನ್ ಅವರ ಜಾತಿಯ ಬಗ್ಗೆ ತಿಳಿದುಕೊಳ್ಳಲು ಆನ್​ಲೈನ್​ನಲ್ಲಿ ದೊಡ್ಡ ಹುಡುಕಾಟವೂ ನಡೆದಿದೆ. ಅದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ. ಇದರ ಬೆನ್ನಲ್ಲೆ ಇದೀಗ ಕೆ. ಸಿವನ್ ಅವರ ಒಂದೂವರೆ ವರ್ಷದ ಹಿಂದಿನ ಸಂದರ್ಶನವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಶೇರ್ ಆಗುತ್ತಿದೆ.

2018ರ ಜನವರಿಯಲ್ಲಿ ಸನ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಕೆ. ಸಿವನ್ ಅವರು ಮಾತನಾಡುತ್ತಾ, ತಾನು ಮೊದಲು ಭಾರತೀಯ, ನಂತರ ತಮಿಳಿಗ. ತಾನು ಇಸ್ರೋ ಸೇರಿಕೊಂಡಿದ್ದು ಭಾರತೀಯನಾಗಿಯೇ ಹೊರತು ತಮಿಳಿಗನಾಗಲ್ಲ ಎಂದು ಹೇಳಿದ್ದರು.

ನೀವು ಬಹಳ ಉನ್ನತ ಸ್ಥಾನ ಅಲಂಕರಿಸಿದ್ದೀರಿ. ಒಬ್ಬ ತಮಿಳಿಗನಾಗಿ ನೀವು ತಮಿಳುನಾಡಿನ ಜನರಿಗೆ ಏನನ್ನು ಹೇಳಲು ಬಯಸುತ್ತೀರಿ ಎಂದು ಸನ್ ಟಿವಿಯ ಸಂದರ್ಶಕರು ಪ್ರಶ್ನಿಸುತ್ತಾರೆ. ಇದಕ್ಕೆ ಕೆ. ಸಿವನ್ ನೀಡಿದ ಉತ್ತರ ಹೀಗಿತ್ತು: “ನಾನು ತಮಿಳಿಗನೋ, ಕನ್ನಡಿಗನೋ, ಮಲಯಾಳಿಯೋ ಎಂದು ಹೇಳಿಕೊಳ್ಳುವುದಿಲ್ಲ. ಮೊದಲಿಗೆ ನಾನೊಬ್ಬ ಭಾರತೀಯ. ನಾನೊಬ್ಬ ಭಾರತೀಯನಾಗಿ ಇಸ್ರೋ ಸೇರಿದೆ. ಇಸ್ರೋದಲ್ಲಿ ಎಲ್ಲಾ ಭಾಷೆಯ ಮತ್ತು ಧರ್ಮಗಳ ಜನರು ಬಂದು ಕೆಲಸ ಮಾಡುತ್ತಾರೆ. ಯಾವುದೋ ಒಂದು ಪ್ರದೇಶದವರ ಅಥವಾ ಭಾಷೆಯವರ ಕೊಡುಗೆ ಮಾತ್ರ ಇರುವುದಿಲ್ಲ. ಎಲ್ಲರದ್ದೂ ಕೊಡುಗೆ ಇರುತ್ತದೆ. ನಾನು ಈ ಊರಿನಿಂದ ಬಂದಿರುವ ಒಬ್ಬ ಭಾರತೀಯ ಅಷ್ಟೇ ಎಂದು ಹೇಳಬಯಸುತ್ತೇನೆ. ನನ್ನ ಬಗ್ಗೆ ಊರಿನ ಜನರು ಪ್ರೀತಿ ಇಟ್ಟುಕೊಂಡಿರುವುದು ನನಗೆ ಸಂತೋಷ ತರುತ್ತದೆ”.


Loading...


ಇಸ್ರೋ ಅಧ್ಯಕ್ಷರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಮೆಚ್ಚುಗೆ ಪಡೆದಿವೆ. ಎಲ್ಲದಕ್ಕಿಂತ ಹೆಚ್ಚಾಗಿ ತಾನು ಭಾರತೀಯ ಎಂದು ಹೇಳಿದ ಕೆ. ಸಿವನ್ ಅವರು ಒಬ್ಬ ಹೀರೋ ಎಂದು ಅನೇಕರು ಶ್ಲಾಘಿಸಿದ್ದಾರೆ.






ಇದೇ ವೇಳೆ, ಚಂದ್ರನ ಅಂಗಳದಲ್ಲಿ ಬಿದ್ದುಹೋಗಿರುವ ವಿಕ್ರಮ್ ಲ್ಯಾಂಡರ್ ಅನ್ನು ಮರುಸಂಪರ್ಕಿಸುವ ಕೆಲಸ ಐದು ದಿನವಾದರೂ ಯಶಸ್ವಿಯಾಗಿಲ್ಲ. ಇಸ್ರೋ ವಿಜ್ಞಾನಿಗಳು ಆ ಆಸೆಯನ್ನು ಬಹುತೇಕ ಕೈಬಿಟ್ಟಿದ್ದು, ಆರ್ಬಿಟರ್ ಮೂಲಕ ಚಂದ್ರನನ್ನು ಅಧ್ಯಯನ ಮಾಡುವತ್ತ ಗಮನ ಹರಿಸುತ್ತಿದ್ದಾರೆ.
First published:September 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...