ಉದ್ಯೋಗಿಗಳಿಗೆ ಗುಡ್ ನ್ಯೂಸ್: 2021ರಲ್ಲಿ ಭಾರತೀಯ ಕಂಪನಿಗಳಿಂದ ಶೇ.7.7ರಷ್ಟು ವೇತನ ಹೆಚ್ಚಳ!

ಈ ಸಮೀಕ್ಷೆಯ ಪ್ರಕಾರ ಇ-ಕಾಮರ್ಸ್ ಮತ್ತು ವೆಂಚರ್ ಕ್ಯಾಪಿಟಲ್, ಹೈಟೆಕ್/ಮಾಹಿತಿ ತಂತ್ರಜ್ಞಾನ, ಐಟಿಇಎಸ್, ಲೈಫ್ ಸೈನ್ಸಸ್ ಕಂಪನಿಗಳು ಉದ್ಯೋಗಿಗಳಿಗೆ ವೇತನ ಹೆಚ್ಚಿಸಿವೆ. ಇದಕ್ಕೆ ತದ್ವಿರುದ್ಧವಾಗಿ ಹಾಸ್ಪಿಟ್ಯಾಲಿಟಿ/ ರೆಸ್ಟೋರೆಂಟ್‌ಗಳು, ರಿಯಲ್ ಎಸ್ಟೇಟ್/ಮೂಲಸೌಕರ್ಯ, ಎಂಜಿನಿಯರಿಂಗ್ ಸೇವೆಯಲ್ಲಿ ಅತಿಕಡಿಮೆ ವೇತನ ಹೆಚ್ಚಳ ಮಾಡಿರುವ ಕ್ಷೇತ್ರಗಳಾಗಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  2021ರಲ್ಲಿ ಭಾರತೀಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಶೇ.7.7ರಷ್ಟು ವೇತನ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಈ ಪ್ರಮಾಣದ ವೇತನ ಪರಿಷ್ಕರಣೆ BRIC ರಾಷ್ಟ್ರಗಳ ಪೈಕಿ ಅತಿ ಹೆಚ್ಚಿನದ್ದಾಗಿರಲಿದ್ದು, 2020ರಲ್ಲಿ ಮಾಡಲಾಗಿದ್ದ ಶೇ.6.1ರಷ್ಟು ವೇತನ ಹೆಚ್ಚಳಕ್ಕಿಂತಲೂ ಅಧಿಕವಾಗಿರಲಿದೆ ಎಂದು ಸಮೀಕ್ಷೆ ತಿಳಿಸಿದೆ.

  ಜಾಗತಿಕ ವೃತ್ತಿಪರ ಸೇವಾಸಂಸ್ಥೆ ಏಯಾನ್ ಪಿಎಲ್‌ಸಿ ಮಂಗಳವಾರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಭಾರತೀಯ ಕಂಪನಿಗಳ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.88ರಷ್ಟು ಕಂಪನಿಗಳು ವೇತನ ಹೆಚ್ಚಳಕ್ಕೆ ಒಲವು ತೋರಿವೆ. 2020ರಲ್ಲಿ ಶೇ.75 ರಷ್ಟು ಕಂಪನಿಗಳಷ್ಟೇ ವೇತನ ಹೆಚ್ಚಳ ಮಾಡುವತ್ತ ಒಲವು ತೋರಿದ್ದವು ಎಂದು ಸಮೀಕ್ಷೆ ತಿಳಿಸಿದೆ.

  20ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿರುವ ಸುಮಾರು 1,200 ಕಂಪನಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ವೇತನ ಹೆಚ್ಚಳಕ್ಕೆ ಕಂಪನಿಗಳು ಚಿಂತನೆ ನಡೆಸಿರುವುದು ಚೇತರಿಕೆಯ ಲಕ್ಷಣವಾಗಿದ್ದು, ಇದೇ ವೇಳೆ ಕಾರ್ಮಿಕ ವೇತನ ಸಂಹಿತೆಗಳೂ ಸಹ ಪರಿಸ್ಥಿತಿಗಳನ್ನು ಬದಲಾವಣೆ ಮಾಡಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಂಬರುವ ಬದಲಾವಣೆ ಹಾಗೂ ಅಸ್ಥಿರತೆಗಳಿಗೆ ಸಂಬಂಧಿಸಿದಂತೆ 2021ರ ವೇತನ ಹೆಚ್ಚಳ ದೀರ್ಘಾವಧಿಯಲ್ಲಿ ಪರಿಣಾಮ ಹೊಂದಿರಲಿದೆ ಎಂದು ಏಯಾನ್ ಪಿಎಲ್‌ಸಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತಿನ್ ಸೇಥಿ ಹೇಳಿದ್ದಾರೆ.

  ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ ವೇತನದ ಪ್ರಸ್ತಾಪಿತ ಪರಿಷ್ಕರಣೆಯು ಗ್ರ್ಯಾಚುಟಿ, ರಜೆ ಪಡೆದುಕೊಳ್ಳುವುದು ಮತ್ತು ಭವಿಷ್ಯ ನಿಧಿಯಂತಹ ಬೆನಿಫಿಟ್ ಯೋಜನೆಗಳಿಗೆ ಹೆಚ್ಚಿನ ನಿಬಂಧನೆಗಳ ರೂಪದಲ್ಲಿ ಹೆಚ್ಚುವರಿ ಪರಿಹಾರದ ಬಜೆಟ್‌ಗೆ ಕಾರಣವಾಗಬಹುದು ಎಂದು ಸೇಥಿ ತಿಳಿಸಿದ್ದಾರೆ.

  ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಪ್ರಶಸ್ತಿ ಪ್ರದಾನ ಮಾಡಿದ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

  ‘ಲೇಬರ್ ಕೋಡ್‌ಗಳ ನಿಖರ ಆರ್ಥಿಕ ಪರಿಣಾಮವು ತಿಳಿದ ನಂತರವಷ್ಟೇ ಕಂಪನಿಗಳು ತಮ್ಮ ಪರಿಹಾರದ ಬಜೆಟ್‌ಗಳನ್ನು ವರ್ಷದ ದ್ವಿತೀಯಾರ್ಧದಲ್ಲಿ ಪರಿಶೀಲಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ. ವೇತನದ ಹೊಸ ಪರಿಷ್ಕರಣೆಯ ಮೇಲೆ ಹೆಚ್ಚಿನ ಭವಿಷ್ಯ ನಿಧಿ(ಪಿಎಫ್) ಕೊಡುಗೆ ಪಾವತಿಸಲು ಕಂಪನಿಗಳು ನಿರ್ಧರಿಸಿದರೆ, ಉದ್ಯೋಗಿಗಳ ಟೇಕ್ ಹೋಮ್ ಸ್ಯಾಲರಿ ಕಡಿಮೆಯಾಗಬಹುದು’ ಎಂದು ಅವರು ತಿಳಿಸಿದ್ದಾರೆ.

  ಈ ಸಮೀಕ್ಷೆಯ ಪ್ರಕಾರ ಇ-ಕಾಮರ್ಸ್ ಮತ್ತು ವೆಂಚರ್ ಕ್ಯಾಪಿಟಲ್, ಹೈಟೆಕ್/ಮಾಹಿತಿ ತಂತ್ರಜ್ಞಾನ, ಐಟಿಇಎಸ್, ಲೈಫ್ ಸೈನ್ಸಸ್ ಕಂಪನಿಗಳು ಉದ್ಯೋಗಿಗಳಿಗೆ ವೇತನ ಹೆಚ್ಚಿಸಿವೆ. ಇದಕ್ಕೆ ತದ್ವಿರುದ್ಧವಾಗಿ ಹಾಸ್ಪಿಟ್ಯಾಲಿಟಿ/ ರೆಸ್ಟೋರೆಂಟ್‌ಗಳು, ರಿಯಲ್ ಎಸ್ಟೇಟ್/ಮೂಲಸೌಕರ್ಯ, ಎಂಜಿನಿಯರಿಂಗ್ ಸೇವೆಯಲ್ಲಿ ಅತಿಕಡಿಮೆ ವೇತನ ಹೆಚ್ಚಳ ಮಾಡಿರುವ ಕ್ಷೇತ್ರಗಳಾಗಿವೆ. 2020ರಲ್ಲಿ ಕಠಿಣ ಲಾಕ್‌ಡೌನ್‌ ಹೊರತಾಗಿಯೂ ಭಾರತವು ಬ್ರಿಕ್ ರಾಷ್ಟ್ರಗಳಲ್ಲಿಯೇ ಅತಿಹೆಚ್ಚು ವೇತನ ಹೆಚ್ಚಳ ಮುಂದುವರೆಸಿದೆ ಎಂದು ಸಮೀಕ್ಷೆ ತಿಳಿಸಿದೆ.

  ಕಳೆದ ವರ್ಷದಂತೆಯೇ 2021ರಲ್ಲಿಯೂ ಕೂಡ ಮಾಹಿತಿ ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಶಕ್ತಗೊಂಡ ಸೇವೆಗಳು, ಲೈಫ್ ಸೈನ್ಸಸ್, ಇ-ಕಾಮರ್ಸ್ ಮತ್ತು ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್’ ಕ್ಷೇತ್ರಗಳೇ ಉದ್ಯೋಗಿಗಳಿಗೆ ಅತಿ ಹೆಚ್ಚಿನ ವೇತನ ನೀಡಿವೆ ಎಂದು ಏಯಾನ್ ‌ನ ಭಾರತೀಯ ಹ್ಯೂಮನ್ ಕ್ಯಾಪಿಟಲ್ ಬ್ಯುಸಿನೆಸ್ ಪಾಲುದಾರ ರೂಪಾಂಕ್ ಚೌಧರಿ ತಿಳಿಸಿದ್ದಾರೆ.

  ‘ಚಿಲ್ಲರೆ ವ್ಯಾಪಾರ, ಹಾಸ್ಪಿಟ್ಯಾಲಿಟಿ ಮತ್ತು ರಿಯಲ್ ಎಸ್ಟೇಟ್ ನಂತಹ ಕ್ಷೇತ್ರಗಳ ಮೇಲೆ ಕೋವಿಡ್-19 ಸಾಂಕ್ರಾಮಿಕವು ಪರಿಣಾಮ ಬೀರಿದೆ. ಈ ಕ್ಷೇತ್ರಗಳು ಈಗ ಶೇ. 5-6ರಷ್ಟು ಆರೋಗ್ಯಕರ ಹೆಚ್ಚಳ ತೋರಿಸುತ್ತಿವೆ ಎಂಬುದು ಗಮನಾರ್ಹವಾಗಿದೆ’ ಎಂದು ಚೌಧರಿ ಹೇಳಿದ್ದಾರೆ.
  Published by:Latha CG
  First published: