MiG-21 Crash: ವಾಯುಪಡೆಯ ಮಿಗ್-21 ಯುದ್ಧವಿಮಾನ ಪತನ; ಪೈಲಟ್ ಸಾವು

IAF aircraft crash during training: ತರಬೇತಿ ನೀಡುವ ವೇಳೆ ಭಾರತೀಯ ವಾಯುಪಡೆಗೆ ಸೇರಿದ ಮಿಗ್-21 ಯುದ್ಧವಿಮಾನ ರಾಜಸ್ಥಾನದ ಜೈಸಲ್ಮೇರ್​ನಲ್ಲಿ ಮರಳುಗಾಡಿನಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ.

ಮಿಗ್ ವಿಮಾನ ದುರಂತ

ಮಿಗ್ ವಿಮಾನ ದುರಂತ

  • News18
  • Last Updated :
  • Share this:
    ಜೈಪುರ್, ಡಿ. 24: ಭಾರತೀಯ ವಾಯುಪಡೆಗೆ (Indian Air Force) ಸೇರಿದ ಯುದ್ಧವಿಮಾನವೊಂದು ರಾಜಸ್ಥಾನದ ಜೈಸಲ್ಮೇರ್​ನಲ್ಲಿ (Jaisalmer, Rajasthan) ಪತನಗೊಂಡ ಘಟನೆ ವರದಿಯಾಗಿದೆ. ಇಂದು ರಾತ್ರಿ 8:30ರ ಸುಮಾರಿಗೆ ತರಬೇತಿಯ ವೇಳೆ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಜೈಸಲ್ಮೇರ್​ನ ಡೆಸರ್ಟ್ ನ್ಯಾಷನಲ್ ಪಾರ್ಕ್ ಪ್ರದೇಶದಲ್ಲಿ ಮಿಗ್-21 ಯುದ್ಧವಿಮಾನ (MiG-21 Aircraft) ಪತನಗೊಂಡಿದೆ ಎಂದು ಜೈಸಲ್ಮೇರ್ ನಗರದ ಎಸ್​ಪಿ ಅಜಯ್ ಸಿಂಗ್ ತಿಳಿಸಿದ್ದಾರೆ. ಈ ದುರಂತದಲ್ಲಿ ಪೈಲಟ್ ಮೃತಪಟ್ಟಿರುವುದು ದೃಢಪಟ್ಟಿದೆ. ಭಾರತೀಯ ವಾಯುಪಡೆ ಅಧಿಕೃತ ಹೇಳಿಕೆ ನೀಡಿ ಪೈಲಟ್ ದುರಂತ ಸಾವನ್ನು ಖಚಿಪಡಿಸಿದೆ.

    ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದದ್ದು ಸಾಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಸಾಮ್ ಪೊಲೀಸ್ ಠಾಣೆ ಮುಖ್ಯಸ್ಥ ದಲಪತ್ ಸಿಂಗ್ ಅವರು ನೀಡಿದ ಮಾಹಿತಿ ಪ್ರಕಾರ, ಮಿಗ್-21 ಯುದ್ಧವಿಮಾನವು ಮರಳಿನ ಹೊದಿಕೆಯ ಮೇಲೆ ಬಿದ್ದಿದೆ ಎನ್ನಲಾಗಿದೆ.

    ಘಟನಾ ಸ್ಥಳದಲ್ಲಿ ಮೃತದೇಹದ ಮಾಂಸದ ತುಂಡುಗಳು ಸಿಕ್ಕಿರುವುದು ಬೆಳಕಿಗೆ ಬಂದಿದೆ. ಇದು ವಿಮಾನ ಚಲಾಯಿಸುತ್ತಿದ್ದ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ (Wing Commander Harshith Sinha) ಅವರ ಮೃತದೇಹ ಎಂದು ಗುರುತಿಸಲಾಗಿದೆ.

    ಭಾರತೀಯ ವಾಯುಪಡೆ ಈ ಸಂಬಂಧ ಟ್ವೀಟ್ ಮಾಡಿದ್ದು, ಹೆಚ್ಚಿನ ವಿವರ ನಿರೀಕ್ಷಿಸುತ್ತಿರುವುದಾಗಿ ತಿಳಿಸಿದೆ.

    ಇದನ್ನೂ ಓದಿ: Climate Alerts- ಹವಾಮಾನ ಇಲಾಖೆ ಘೋಷಿಸುವ ರೆಡ್, ಗ್ರೀನ್, ಯೆಲ್ಲೋ ಅಲರ್ಟ್​ಗಳ ಅರ್ಥವೇನು?

    “ಇವತ್ತು ಸಂಜೆ 8:30ರ ವೇಳೆಯಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧವಿಮಾನವು ತರಬೇತಿ ಸಂದರ್ಭದಲ್ಲಿ ಪಶ್ಚಿಮ ವಲಯದಲ್ಲಿ ಹಾರಾಡುವಾಗ ಅಪಘಾತಕ್ಕೊಳಗಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸುತ್ತಿದ್ದೇವೆ. ಈ ದುರಂತ ಘಟನೆ ಸಂಬಂಧ ತನಿಖೆ ಕೈಗೊಳ್ಳಲಿದ್ದೇವೆ” ಎಂದು ವಾಯುಪಡೆ ಟ್ವೀಟ್ ಮಾಡಿದೆ.

    ನಂತರ ಮತ್ತೊಂದು ಟ್ವೀಟ್ ಮಾಡಿದ ಐಎಎಫ್, ತನ್ನ ಪೈಲಟ್ ಸಾವನ್ನಪ್ಪಿರುವುದನ್ನು ಖಚಿತಪಡಿಸಿದೆ.

    ಇದನ್ನೂ ಓದಿ: Ludhiana Court Blast: ಗ್ಯಾಂಗ್​ಸ್ಟರ್ಸ್, ಜೈಲು ನೆಟ್ವರ್ಕ್ ಬಳಸಿ ದಾಳಿಗೆ ಪಾಕಿಸ್ತಾನ್ ಸಂಚು; ಹೈ ಅಲರ್ಟ್

    “ವಿಮಾನ ಹಾರಾಡಿಸುವ ಸಂದರ್ಭದಲ್ಲಿ ಅಪಘಾತವಾಗಿ ವಿಂಗ್ ಕಮಾಂಡರ್ ಹರ್ಷಿತ್ ಸಿನ್ಹಾ ಮೃತಪಟ್ಟಿದ್ದಾರೆಂದು ತಿಳಿಸಲು ವಿಷಾದಿಸುತ್ತೇವೆ. ಇವರ ಕುಟುಂಬಕ್ಕೆ ಬೆಂಬಲವಾಗಿ ನಾವು ಇದ್ದೇವೆ” ಎಂದು ಇಂಡಿಯನ್ ಏರ್ ಫೋರ್ಸ್ ತನ್ನ ಟ್ವೀಟ್​ನಲ್ಲಿ ತಿಳಿಸಿದೆ.
    Published by:Vijayasarthy SN
    First published: