ರಷ್ಯಾದಲ್ಲಿ ಕಾರಿಗೆ ಬಸ್​ ಡಿಕ್ಕಿ: ಭಾರತ ಮೂಲದ ಪುಟ್​ಬಾಲ್​ ಅಭಿಮಾನಿಯೋರ್ವ ಸಾವು..!

news18
Updated:July 1, 2018, 5:53 PM IST
ರಷ್ಯಾದಲ್ಲಿ ಕಾರಿಗೆ ಬಸ್​ ಡಿಕ್ಕಿ: ಭಾರತ ಮೂಲದ ಪುಟ್​ಬಾಲ್​ ಅಭಿಮಾನಿಯೋರ್ವ ಸಾವು..!
news18
Updated: July 1, 2018, 5:53 PM IST
ನ್ಯೂಸ್ 18 ಕನ್ನಡ

ರಷ್ಯಾ (ಜುಲೈ 01): ಫಿಫಾ ವಿಶ್ವಕಪ್ ವೀಕ್ಷಣೆಗಾಗಿ ರಷ್ಯಾಕ್ಕೆ ತೆರಳಿದ್ದ ಭಾರತ ಮೂಲದ ಪುಟ್​ಬಾಲ್​ ಅಭಿಮಾನಿಯೊಬ್ಬ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ನಿನ್ನೆ ಶನಿವಾರ ನಡೆದ ಪೋರ್ಚುಗಲ್ ಹಾಗೂ ಉರುಗ್ವೆ ನಡುವಣ ಪಂದ್ಯ ವೀಕ್ಷಿಸಿ ರೂಮಿಗೆ ತೆರಳುವ ವೇಳೆ ರಷ್ಯಾದ ಕೂಬನ್​ ಎಂಬ ಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.

ಮೃತ ದುರ್ದೈವಿ ಆದಿತ್ಯ ರಂಜನ್ ಅವರು ಭಾರತ ಮೂಲದವರು ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 7 ಗಂಟೆ ವೇಳೆಗೆ ತಾನು ಚಲಿಸುತ್ತಿದ್ದ ಕಾರಿಗೆ ಬಸ್ ಡಿಕ್ಕಿ ಹೊಡೆದು​ ಅಪಘಾತ ಸಂಭವಿಸಿದೆ ಎನ್ನುತ್ತಿವೆ ಮೂಲಗಳು. ದುರಂತದಲ್ಲಿ ಆದಿತ್ಯ ಸೇರಿದಂತೆ ಚಾಲಕ ಕೂಡ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪೊಲೀಸ್​ ತಪಾಸಣೆ ನಂತರ ಕಾನೂನು ಕ್ರಮಗಳನ್ನು ಮುಗಿಸಿ ಆದಿತ್ಯ ಅವರ​ ಮೃತದೇಹವನ್ನು ತವರಿಗೆ ಕಳಿಸಿಕೊಡಲಾಗುವುದು ಎಂದು ರಷ್ಯಾದ ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಆದಿತ್ಯ ಅವರ ಅಗಲಿಕೆಯಿಂದ ಕುಟುಂಬದ ಆಂಕ್ರದನ ಮುಗಿಲುಮುಟ್ಟಿದೆ.

 

First published:July 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...