Taliban| ತಾಲಿಬಾನ್ ಜೊತೆ ಮೊದಲ ಅಧಿಕೃತ ಸಭೆ ನಡೆಸಿದ ಭಾರತ; ಶಾಂತಿ, ಶಿಕ್ಷಣ ಮತ್ತು ಪ್ರವಾಸೋದ್ಯಮದ ಬಗ್ಗೆ ಚರ್ಚೆ

ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್ ಅವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತಾಲಿಬಾನ್ ನಾಯಕರು.

ತಾಲಿಬಾನ್ ನಾಯಕರು.

 • Share this:
  ದೋಹಾ (ಆಗಸ್ಟ್​ 31); ತಾಲಿಬಾನ್ ಉಗ್ರರು ಅಫ್ಘಾನಿಸ್ತಾನನ್ನು (Afghanistan) ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ತಾಲಿಬಾನಿಗಳ (Taliban) ಕ್ರೌರ್ಯಕ್ಕೆ ಇಡೀ ಅಫ್ಘನ್ ಜನ ನಲುಗಿ ಹೋಗಿದ್ದಾರೆ. ಪರಿಣಾಮ ವಿಶ್ವದ ನಾನಾ ದೇಶಗಳು ಅಫ್ಘನ್​ನಲ್ಲಿರುವ ತಮ್ಮ ಪ್ರಜೆಗಳನ್ನು ವಾಪಾಸ್ ಕರೆಸಿಕೊಳ್ಳುತ್ತಿದೆ. ಅಫ್ಘನ್ನರೂ ಸಹ ದೇಶ ತೊರೆಯಲು ಮುಂದಾಗಿದ್ದಾರೆ. ಈ ನಡುವೆ ಭಾರತ ತಮ್ಮ ಪ್ರಜೆಗಳನ್ನು ಸ್ಥಳಾಂತರಿಸಿದ್ದರೂ ಸಹ ಇನ್ನೂ ಅಪಾರ ಸಂಖ್ಯೆಯ ಭಾರತೀಯರು ಅಫ್ಘನ್​ನಲ್ಲೇ ಇದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಭಾರತೀಯರ ರಕ್ಷಣೆ, ಸುರಕ್ಷಿತ ಸ್ಥಳಾಂತರ ಕಾಬೂಲ್​ನಲ್ಲಿ (Kabul) ಶಾಂತಿ, ಶಿಕ್ಷಣ ಮತ್ತು ಪ್ರವಾಸೋದ್ಯಮ ವನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಇದೇ ಮೊದಲ ಬಾರಿಗೆ ತಾಲಿಬಾನ್ ಜೊತೆಗೆ ಭಾರತ ಅಧಿಕೃತ ಸಭೆಯನ್ನು ನಡೆಸಿದೆ ಎಂದು ತಿಳಿದುಬಂದಿದೆ.

  ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರನ್ನು ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್ ಅವರು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

  ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪತ್ರಿಕಾ ಪ್ರಕಟಣೆಯಲ್ಲಿ ಈ ಸಭೆಯನ್ನು ದೋಹಾದಲ್ಲಿರುವ ಭಾರತದ ರಾಯಭಾರ ಕಚೇರಿಯಲ್ಲಿ ನಡೆಸಲಾಗಿದೆ ಎಂದು ತಿಳಿಸಿದೆ.

  ಶೇರ್ ಮೊಹಮ್ಮದ್ ಸ್ಟಾನೆಕ್‌ಜಾಯ್, ಪಶ್ತೂನ್ ಜನಾಂಗದವರಾಗಿದ್ದು, ಶೀತಲ ಸಮರದ ಸಂದರ್ಭದಲ್ಲಿ ಅಫ್ಘಾನ್ ಸೈನ್ಯದ ಅಧಿಕಾರಿಯಾಗಿ ತರಬೇತಿ ಪಡೆದವರಾಗಿದ್ದಾರೆ. ಅವರು ಭಾರತದೊಂದಿಗೆ ಸಾಮಾನ್ಯ ವಾಣಿಜ್ಯ, ರಾಜತಾಂತ್ರಿಕ ಮತ್ತು ರಾಜಕೀಯ ಸಂಬಂಧವನ್ನು ಕೋರಿ ಮೂರು ದಿನಗಳ ಹಿಂದೆ ಒಂದು ಹೇಳಿಕೆಯನ್ನು ನೀಡಿದ್ದರು.

  ಆದರೆ, ಆರಂಭದಲ್ಲಿ ಮೌನವಾಗಿದ್ದ ಭಾರತ, ಅಮೆರಿಕಾವು ಕಾಬೂಲ್‌ನಿಂದ ತನ್ನ ಸೈನ್ಯವನ್ನು ಸ್ಥಳಾಂತರ ಮಾಡಿದ ಗಂಟೆಗಳ ನಂತರ ಸಭೆ ಈ ನಡೆಸಿದೆ. ಭಾರತವು “ಎಲ್ಲಾ ಪಾಲುದಾರರೊಂದಿಗೆ” ಸಂಪರ್ಕವನ್ನು ಉಳಿಸಿಕೊಂಡಿದೆ ಎಂದು ಸಮರ್ಥಿಸಿಕೊಂಡಿತ್ತಾ ದರೂ, ಸಭೆ ನಡೆಸಿದ್ದೇವೆ ಎಂದು ಅಧೀಕೃತವಾಗಿ ಘೋಷಿಸಿದ್ದು ಇದೇ ಮೊದಲು.

  ಇದನ್ನೂ ಓದಿ: West Bengal| ಪ. ಬಂಗಾಳದಲ್ಲಿ ಮುಂದುವರೆದ ಪಕ್ಷಾಂತರ ಪರ್ವ; ಟಿಎಂಸಿ ಸೇರಿದ ಮತ್ತೊಬ್ಬ ಬಿಜೆಪಿ ಶಾಸಕ, ಕಮಲಕ್ಕೆ ಭಾರೀ ಹಿನ್ನಡೆ

  ತಾಲಿಬಾನಿಗಳು ಅಫ್ಘನ್​ ಭೂಮಿಗಾಗಿ ಕಳೆದ ಎರಡು ದಶಕಗಳಿಂದ ಭೂಗತವಾಗಿ ಹೋರಾಟ ನಡೆಸುತ್ತಲೇ ಇದ್ದರು. ಅಫ್ಘನ್ ನಾಯಕರು ಅಮೆರಿಕದ ಸಹಾಯದಿಂದ 20 ವರ್ಷ ಪ್ರಜಾಪ್ರಭುತ್ವವನ್ನು ಜಾರಿಗೆ ತರಲು ಯಶಸ್ವಿಯಾಗಿದ್ದರು.

  ಆದರೆ, ಅಫ್ಘನ್ ಭೂಮಿ ಇದೀಗ ಮತ್ತೆ ಉಗ್ರರ ವಶವಾಗಿದೆ. ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯಲು ಆರಂಭಿಸುತ್ತಿದ್ದಂತೆ ತಾಲಿಬಾನಿಗಳ ಕೈ ಮತ್ತೆ ಮೇಲಾಗಲು ಶುರುವಾಯಿತು. ಪರಿಣಾಮ ಕೇವಲ ಒಂದೇ ವಾರದಲ್ಲಿ ತಾಲಿಬಾನಿಗಳು ಅಫ್ಘನ್​ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪರಿಣಾಮ ಮಧ್ಯ ಪ್ರಾಚ್ಯದ ಈ ನೆಲ ಮತ್ತೆ ಹಿಂಸಾಚಾರಕ್ಕೆ ಗುರಿಯಾಗುತ್ತಿರುವುದು ವಿಷಾಧನೀಯ.

  ಇದನ್ನೂ ಓದಿ: Yogi Aditynath| ಉತ್ತರ ಪ್ರದೇಶದ ಮಥುರಾದಲ್ಲಿ ಮದ್ಯ, ಮಾಂಸ ಸಂಪೂರ್ಣ ನಿಷೇಧಿಸಿ ಆದೇಶಿಸಿದ ಯೋಗಿ ಸರ್ಕಾರ

  ಹೀಗಾಗಿ ಇಡೀ ವಿಶ್ವ ರಾಷ್ಟ್ರಗಳು ಅಫ್ಘನ್​ನಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವಿಶ್ವ ಸಂಸ್ಥೆಯೂ ಈ ಕೆಲಸಕ್ಕೆ ಮುಂದಾಗಿದೆ. ಅಲ್ಲದೆ, ಭಾರತದಲ್ಲೂ ಸಹ ಸರ್ವ ಪಕ್ಷಗಳು ಸಭೆ ನಡೆಸಲಾಗಿದ್ದು, ಭಾರತವೂ ಅಫ್ಘನ್​ನಲ್ಲಿ ಶಾಂತಿ ನೆಲೆಸುವಂತೆ ಮಾಡಲು ಶ್ರಮಿಸಬೇಕು ಎಂದು ಎಲ್ಲಾ ಪಕ್ಷಗಳು ಒಕ್ಕೊರಲಿನಿಂದ ಕೇಂದ್ರಕ್ಕೆ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಇಂದು ಭಾರತದ ಅಧಿಕಾರಿಗಳು ಮತ್ತು ತಾಲಿಬಾನಿಗಳ ನಡುವಿನ ಮೊದಲ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: