• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Bullet Train: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ- ಭಾರತೀಯ ಇಂಜಿನಿಯರ್‌ಗಳಿಗೆ ಜಪಾನ್‌ನಿಂದ ತರಬೇತಿ

Bullet Train: ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆ- ಭಾರತೀಯ ಇಂಜಿನಿಯರ್‌ಗಳಿಗೆ ಜಪಾನ್‌ನಿಂದ ತರಬೇತಿ

ಬುಲೆಟ್ ರೈಲು ಯೋಜನೆ

ಬುಲೆಟ್ ರೈಲು ಯೋಜನೆ

"ಹೈ-ಸ್ಪೀಡ್ ರೈಲ್ ಯೋಜನೆಯಲ್ಲಿ ಟ್ರ್ಯಾಕ್‌ ವ್ಯವಸ್ಥೆ ನಿರ್ಣಾಯಕವಾಗಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಹೀಗಾಗಿಯೇ ಭಾರತೀಯ ಕಾರ್ಯಪಡೆಯನ್ನು ಎಲ್ಲಾ ರೀತಿ ಸಜ್ಜುಗೊಳಿಸಲು ಜಪಾನ್‌ ತನ್ನ ದೇಶದ ತಂತ್ರಜ್ಞಾನವನ್ನು ಕಲಿಸುತ್ತಿದೆ.

 • Trending Desk
 • 2-MIN READ
 • Last Updated :
 • New Delhi, India
 • Share this:

ಭಾರತದ ಬಹು ನಿರೀಕ್ಷಿತ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು (MAHSR) ಯೋಜನೆಗೆ ಭರದ ಸಿದ್ಧತೆ ನಡೆಯುತ್ತಿದೆ. ಹೈ-ಸ್ಪೀಡ್ ರೈಲು ಹಳಿ (High Speed Train Track) ವ್ಯವಸ್ಥೆಗಾಗಿ ಕೆಲಸ ಪ್ರಾರಂಭಿಸುವ ಮೊದಲು ಕೆಲ ಕ್ರಮಗಳನ್ನು ಕೈಗೊಂಡಿದ್ದು, ಭಾರತೀಯ ಇಂಜಿನಿಯರ್‌ಗಳಿಗೆ (Indian Engineers) ತರಬೇತಿ ನೀಡಲಾಗುತ್ತಿದೆ.


ಟ್ರ್ಯಾಕ್ ವ್ಯವಸ್ಥೆ.. 1,000 ಭಾರತೀಯ ಇಂಜಿನಿಯರ್‌ಗಳಿಗೆ ತರಬೇತಿ


ಮುಂಬೈ- ಅಹಮದಾಬಾದ್ ಹೈಸ್ಪೀಡ್ ರೈಲು ಕಾರಿಡಾರ್‌ಗಾಗಿ ಟ್ರ್ಯಾಕ್ ವ್ಯವಸ್ಥೆ ಮಾಡಬೇಕಿದ್ದು, ಅದಕ್ಕೂ ಮುನ್ನ 1,000 ಭಾರತೀಯ ಇಂಜಿನಿಯರ್‌ಗಳಿಗೆ ಜಪಾನಿನ ತಜ್ಞರು ತರಬೇತಿ ನೀಡಲು ಮುಂದಾಗಿದ್ದಾರೆ.


ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ ನಿಲುಭಾರ-ಕಡಿಮೆ ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್ ಅಥವಾ ಜೆ ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್ ಎಂದು ಕರೆಯಲಾಗುವ ತಂತ್ರಜ್ಞಾನವನ್ನು ಬಳಸಲಾಗುತ್ತದೆ.


ಈ ತಂತ್ರಜ್ಞಾನವನ್ನು ಜಪಾನ್‌ನ ಶಿಂಕನ್‌ಸೆನ್‌ ಹೈಸ್ಪೀಡ್ ರೈಲ್ವೇಗಳಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಭಾರತ ಅಳವಡಿಸಿಕೊಳ್ಳುತ್ತಿರುವ ಈ ವ್ಯವಸ್ಥೆಗೆ ಜಪಾನ್‌ ಪ್ರಸ್ತುತ ಭಾರತೀಯ ಇಂಜಿನಿರ್‌ಗಳಿಗೆ ತರಬೇತಿ ನೀಡುತ್ತಿದೆ.


ಜಪಾನ್‌ ತಂತ್ರಜ್ಞಾನ ಜೆ ಸ್ಲ್ಯಾಬ್ ಟ್ರ್ಯಾಕ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯಲ್ಲಿ ಅಳವಡಿಸಲು ಭಾರತೀಯ ಇಂಜಿನಿಯರ್‌ಗಳನ್ನು ತಯಾರು ಮಾಡಲಾಗುತ್ತಿದೆ.


"ಈ ಟ್ಯ್ರಾಕ್‌ ವ್ಯವಸ್ಥೆಗೆ ಪ್ರಾವೀಣ್ಯತೆಯ ತಂತ್ರಜ್ಞರ ಅಗತ್ಯವಿದೆ"


ಸ್ಲ್ಯಾಬ್ ಟ್ರ್ಯಾಕ್ ಪ್ರಿಕಾಸ್ಟ್ ಬಲವರ್ಧಿತ ಕಾಂಕ್ರೀಟ್ (RC) ಸ್ಲ್ಯಾಬ್ ಅನ್ನು ಒಳಗೊಂಡಿರುತ್ತದೆ, ಅದರ ಮೇಲೆ ಸಾಧನಗಳು ಮತ್ತು ಹಳಿಗಳನ್ನು ಅಳವಡಿಸಲಾಗುತ್ತದೆ.


"ಜಪಾನೀಯರ ಈ ಟ್ರ್ಯಾಕ್ ವ್ಯವಸ್ಥೆಗೆ ಜಾಗತಿಕವಾಗಿ ಬೇರೇ ಯಾವುದೂ ಸಾಟಿಯಿಲ್ಲ, ಮತ್ತು ಅದನ್ನು ಕಾರ್ಯಗತಗೊಳಿಸಲು ಅಸಾಧಾರಣ ಪ್ರಾವೀಣ್ಯತೆಯ ತಂತ್ರಜ್ಞರ ಅಗತ್ಯವಿದೆ" ಎಂದು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ತಿಳಿಸಿದೆ.


ಎನ್‌ಎಚ್‌ಎಸ್‌ಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ, ಜಪಾನಿನ ಎಚ್‌ಎಸ್‌ಆರ್ ಟ್ರ್ಯಾಕ್ ಸಿಸ್ಟಮ್‌ನ ತಂತ್ರಜ್ಞಾನ ವರ್ಗಾವಣೆಗೆ ದಾರಿ ಮಾಡಿಕೊಡುವ ಮೂಲಕ ಭಾರತೀಯ ಎಂಜಿನಿಯರ್‌ಗಳು, ಮೇಲ್ವಿಚಾರಕರು ಮತ್ತು ತಂತ್ರಜ್ಞರ ಕೌಶಲ್ಯವನ್ನು ತೀವ್ರ ತರಬೇತಿ ನೀಡುವ ಮೂಲಕ 20 ಜಪಾನೀ ತಜ್ಞರು ಪ್ರಮಾಣೀಕರಿಸುತ್ತಾರೆ ಎಂದು ಹೇಳಿದ್ದಾರೆ.


MAHSR ಯೋಜನೆಗಾಗಿ ಭಾರತೀಯ ಇಂಜಿನಿಯರ್‌ಗಳಿಗೆ ಜಪಾನ್ ಇಂಟರ್ನ್ಯಾಷನಲ್ ಕೋಆಪರೇಷನ್ ಏಜೆನ್ಸಿ (JICA) ನಾಮನಿರ್ದೇಶನಗೊಂಡ ಜಪಾನೀಸ್ ಲಾಭರಹಿತ ಸಂಸ್ಥೆ JARTS ತರಬೇತಿಯನ್ನು ನೀಡುತ್ತಿದೆ.


ಹಲವು ರೀತಿಯಲ್ಲಿ ತರಬೇತಿ


"ಹೈ-ಸ್ಪೀಡ್ ರೈಲ್ ಯೋಜನೆಯಲ್ಲಿ ಟ್ರ್ಯಾಕ್‌ ವ್ಯವಸ್ಥೆ ನಿರ್ಣಾಯಕವಾಗಿದ್ದು, ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಹೀಗಾಗಿಯೇ ಭಾರತೀಯ ಕಾರ್ಯಪಡೆಯನ್ನು ಎಲ್ಲಾ ರೀತಿ ಸಜ್ಜುಗೊಳಿಸಲು ಜಪಾನ್‌ ತನ್ನ ದೇಶದ ತಂತ್ರಜ್ಞಾನವನ್ನು ಕಲಿಸುತ್ತಿದೆ.


ತರಬೇತಿಯಲ್ಲಿ ಸುಮಾರು 15 ಕೋರ್ಸ್‌ಗಳು ಇದ್ದು, ಸ್ಲ್ಯಾಬ್ ತಯಾರಿಕೆ, ಟ್ರ್ಯಾಕ್ ಬೆಡ್ ನಿರ್ಮಾಣ, ಸಮೀಕ್ಷೆ, ಸ್ಥಾಪನೆ ಮತ್ತು ವೆಲ್ಡಿಂಗ್‌ನಂತಹ ಟ್ರ್ಯಾಕ್ ಕೆಲಸದ ಕೌಶಲ್ಯ, ಸೈಟ್ ನಿರ್ವಹಣೆ, CAM ಸ್ಥಾಪನೆ, ರೈಲ್ ವೆಲ್ಡಿಂಗ್, ಆರ್ಕ್ ವೆಲ್ಡಿಂಗ್ ಮತ್ತು ಟರ್ನ್‌ಔಟ್ ಸೇರಿ ಇತರೆ ಕೆಲಸದ ಬಗ್ಗೆ ತರಬೇತಿ ನೀಡಲಾಗುತ್ತದೆ.


ಇನ್ನೂ ಎನ್‌ಎಚ್‌ಎಸ್‌ಆರ್‌ಸಿಎಲ್ ವಕ್ತಾರರು ಈ ತರಬೇತಿಯನ್ನು ಎಲ್ಲರಿಗೂ ನೀಡಲು ಸಾಧ್ಯವಿಲ್ಲ. ಪ್ರಮಾಣೀಕೃತ ಎಂಜಿನಿಯರ್‌ಗಳು ಮಾತ್ರ ಸೈಟ್ ಟ್ರ್ಯಾಕ್ ನಿರ್ಮಾಣವನ್ನು ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.


ಭಾರತದ ಮೊದಲ ಬುಲೆಟ್ ರೈಲು ಯೋಜನೆ


ಭಾರತೀಯ ರೈಲ್ವೇ ಬುಲೆಟ್ ರೈಲು ಯೋಜನೆಯು ಅಧಿಕೃತವಾಗಿ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು (MAHSR) ಯೋಜನೆ ಎಂದು ಕರೆಯಲ್ಪಡುತ್ತದೆ.


ಇದು ಪ್ರಸ್ತಾವಿತ ಹೈಸ್ಪೀಡ್ ರೈಲು ಕಾರಿಡಾರ್ ಆಗಿದ್ದು ಅದು ಭಾರತದ ಮುಂಬೈ ಮತ್ತು ಅಹಮದಾಬಾದ್ ನಗರಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ.


ಭಾರತೀಯ ರೈಲ್ವೇ ಬುಲೆಟ್ ರೈಲು ಯೋಜನೆಯು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸಾರಿಗೆ ಮೂಲಸೌಕರ್ಯವನ್ನು ಸುಧಾರಿಸಲು ಮುಂಬೈ ಮತ್ತು ಅಹಮದಾಬಾದ್ ನಗರಗಳನ್ನು ಹೈಸ್ಪೀಡ್ ರೈಲುಗಳೊಂದಿಗೆ ಸಂಪರ್ಕಿಸಲು ಯೋಜಿಸಲಾಗಿದೆ. ಯೋಜನೆಯು ಆಗಸ್ಟ್ 2026 ರೊಳಗೆ ಪೂರ್ಣಗೊಳ್ಳಲಿದೆ.


ಈ ಯೋಜನೆ ಪೂರ್ಣಗೊಂಡರೆ, ಮುಂಬೈ ಮತ್ತು ಅಹಮದಾಬಾದ್ ನಡುವಿನ 508.17 ಕಿಮೀ ದೂರವನ್ನು ಕೇವಲ ಎರಡು ಗಂಟೆಗಳಲ್ಲಿ ಕ್ರಮಿಸಬಹುದು.

First published: