• Home
  • »
  • News
  • »
  • national-international
  • »
  • Twitter: ಟ್ವಿಟರ್‌ನಿಂದ ವಜಾಗೊಂಡ ಭಾರತೀಯ ಉದ್ಯೋಗಗಳಿಗೆ H1B ವೀಸಾದಿಂದ ಸಂಕಷ್ಟ: ಹೊಸ ಉದ್ಯೋಗ ಹುಡುಕಲು 60 ದಿನಗಳ ಗಡುವು

Twitter: ಟ್ವಿಟರ್‌ನಿಂದ ವಜಾಗೊಂಡ ಭಾರತೀಯ ಉದ್ಯೋಗಗಳಿಗೆ H1B ವೀಸಾದಿಂದ ಸಂಕಷ್ಟ: ಹೊಸ ಉದ್ಯೋಗ ಹುಡುಕಲು 60 ದಿನಗಳ ಗಡುವು

ಎಲಾನ್‌ ಮಸ್ಕ್

ಎಲಾನ್‌ ಮಸ್ಕ್

ಭಾರತ ಸೇರಿದಂತೆ ಟ್ವಿಟರ್ ಎಲ್ಲಾ ಮಾರುಕಟ್ಟೆಗಳಿಂದ ಉದ್ಯೋಗಿಗಳನ್ನು ವಜಾಗೊಳಿಸಿದೆ. ಭಾರತದ ವಿಷಯದಲ್ಲಿ ಕಂಪನಿಯು 90% ಉದ್ಯೋಗಿಗಳನ್ನು ಕಡಿತಗೊಳಿಸಿದೆ ಎಂಬ ಮಾಹಿತಿ ಇದ್ದು ಸರಾಸರಿ 200 ಉದ್ಯೋಗಿಗಳನ್ನು ಕಂಪನಿ ತೆಗೆದುಹಾಕಿದೆ ಎಂದು ತಿಳಿದುಬಂದಿದೆ.

  • Share this:

    ಬಿಲಿಯನೇರ್ ಎಲಾನ್ ಮಸ್ಕ್ (Elon Musk) ಟ್ವಿಟರ್‌ (Twitter) ಅನ್ನು ವಶಪಡಿಸಿಕೊಂಡ ನಂತರ ಸಂಸ್ಥೆಯ ಸಾವಿರಾರು ಉದ್ಯೋಗಿಗಳು ಉದ್ಯೋಗ ಕಳೆದುಕೊಂಡಿದ್ದಾರೆ. ವಜಾಗೊಳಿಸುವಿಕೆಯ ಪರಿಣಾಮಕ್ಕೊಳಗಾದ ಉದ್ಯೋಗಿಗಳಿಗೆ ಕಂಪನಿ ಇಮೇಲ್‌ಗಳನ್ನು ಕಳುಹಿಸಿದೆ ಆದರೆ ಟರ್ಮಿನೇಶನ್ ಪತ್ರವನ್ನು ಇನ್ನೂ ಹಂಚಿಕೊಂಡಿಲ್ಲ ಇಲ್ಲವೇ ಸಂಸ್ಥೆಯಲ್ಲಿ ಉದ್ಯೋಗಿಗಳ ಕೊನೆಯ ದಿನದ ಮಾಹಿತಿಯನ್ನು ಬಹಿರಂಪಡಿಸಿಲ್ಲ. ವಜಾಗೊಂಡ ಉದ್ಯೋಗಿಗಳು ಟ್ವಿಟರ್‌ನಲ್ಲಿ ಉದ್ಯೋಗಿಗಳಾಗಿರುತ್ತಾರೆ ಹಾಗೂ ಜನವರಿ 2023 ರ ಮೊದಲ ವಾರದವರೆಗೆ ಪರಿಹಾರ ಅಂತೆಯೇ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಅದಾಗ್ಯೂ ಉದ್ಯೋಗಿಗಳಿಗೆ ಅವರ ಕೆಲಸದ ಕೊನೆಯ ದಿನ ಯಾವಾಗ ಬೇಕಾದರೂ ಬದಲಾಗಬಹುದು.


    H1B ವೀಸಾ ತಂದಿದೆ ಸಂಕಷ್ಟ


    ಭಾರತ ಸೇರಿದಂತೆ ಟ್ವಿಟರ್ ಎಲ್ಲಾ ಮಾರುಕಟ್ಟೆಗಳಿಂದ ಉದ್ಯೋಗಿಗಳನ್ನು ವಜಾಗೊಳಿಸಿದೆ. ಭಾರತದ ವಿಷಯದಲ್ಲಿ ಕಂಪನಿಯು 90% ಉದ್ಯೋಗಿಗಳನ್ನು ಕಡಿತಗೊಳಿಸಿದೆ ಎಂಬ ಮಾಹಿತಿ ಇದ್ದು ಸರಾಸರಿ 200 ಉದ್ಯೋಗಿಗಳನ್ನು ಕಂಪನಿ ತೆಗೆದುಹಾಕಿದೆ ಎಂದು ತಿಳಿದುಬಂದಿದೆ. ವಜಾಗೊಂಡ ಎಲ್ಲಾ ಉದ್ಯೋಗಿಗಳು ಅತ್ಯಂತ ಕಷ್ಟದ ಸಮಯವನ್ನು ಸಾಗಿಸುತ್ತಿದ್ದು ಹೊಸ ಉದ್ಯೋಗ ಹುಡುಕಾಟದಲ್ಲಿದ್ದಾರೆ ಹಾಗೂ ತಮ್ಮ ನೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.


    ಇದನ್ನೂ ಓದಿ: 7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರಿಗೆ ಬಂಪರ್!


    ಇನ್ನು ಈ ವಜಾಗೊಳಿಸುವಿಕೆಯ ಪರಿಣಾಮಕ್ಕೆ ಹೆಚ್ಚು ಒಳಗಾದವರು H1B ವೀಸಾಗಳನ್ನು ಹೊಂದಿರುವ ವಿದೇಶಿ ಪೌರರು, ಅಮೆರಿಕಾದಲ್ಲಿರುವ ಹೆಚ್ಚಿನ ಭಾರತೀಯರು. ಹೊಸ ಉದ್ಯೋಗವನ್ನು ಹುಡುಕಲು 60 ದಿನಗಳ ಗಡುವನ್ನು ನೀಡಲಾಗಿದೆ ಎಂಬ ದುಃಖಕರ ನೋವನ್ನು ಟ್ವಿಟರ್ ಹಾಗೂ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ H1B ವೀಸಾ ಹೊಂದಿರುವ ಉದ್ಯೋಗಿಗಳು ಅತಂತ್ರ ಸ್ಥಿತಿಯಲ್ಲಿರುವುದಾಗಿ ನೋವು ತೋಡಿಕೊಂಡಿದ್ದಾರೆ.


    60 ದಿನದೊಳಗೆ ಹೊಸ ಉದ್ಯೋಗದ ಬೇಟೆ


    H1B ವೀಸಾ ವಲಸೆ ರಹಿತ ವೀಸಾ ಆಗಿದ್ದು ಯುಎಸ್ ಆಧಾರಿತ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ಸಾಮಾನ್ಯವಾಗಿ ಮೂರರಿಂದ ಆರು ವರ್ಷಗಳವರೆಗೆ ನೇಮಿಸಿಕೊಳ್ಳಲು ಅವಕಾಶ ನೀಡುತ್ತದೆ. ಇದೇ ಸಂದರ್ಭದಲ್ಲಿ ಅನೇಕ H1B ವೀಸಾ ಹೊಂದಿರುವವರು ಟ್ವಿಟರ್‌ನಂತಹ ಸಂಸ್ಥೆಗಳಲ್ಲಿ ಉದ್ಯೋಗ ಹೊಂದಿದ್ದು ಇದೀಗ ವಜಾಗೊಳಿಸುವ ಸೂಚನೆಯ ಬೆನ್ನಲ್ಲೇ 60 ದಿನಗಳೊಳಗೆ ಬೇರೆ ಉದ್ಯೋಗ ಹುಡುಕಾವ ಒತ್ತಡದಲ್ಲಿ ಸಿಲುಕಿದ್ದಾರೆ. ಸಂಸ್ಥೆಯು ಇನ್ನೂ ಉದ್ಯೋಗಿ ಮುಕ್ತಾಯ ಪತ್ರವನ್ನು ನೀಡಿಲ್ಲ ಹಾಗೂ ವಜಾಗೊಳಿಸುವಿಕೆಯಿಂದ ಪ್ರಭಾವಿತರಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುವ ಇಮೇಲ್‌ಗಳನ್ನು ಮಾತ್ರ ಸ್ವೀಕರಿಸಿದ್ದಾರೆ.


    ಉದ್ಯೋಗ ಇಲ್ಲದಿದ್ದರೆ ತಾಯ್ನಾಡಿಗೆ ರವಾನೆ


    ಆದ್ದರಿಂದ, ತಮ್ಮ ಕೆಲಸವನ್ನು ಕಳೆದುಕೊಂಡಿರುವ ಎಲ್ಲಾ H1B ವೀಸಾ ಹೊಂದಿರುವವರು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುವುದನ್ನು ಮುಂದುವರಿಸಲು ಸರಿಸುಮಾರು 2 ತಿಂಗಳೊಳಗೆ ಉದ್ಯೋಗವನ್ನು ಪಡೆಯಬೇಕಾಗುತ್ತದೆ. ಉದ್ಯೋಗ ಕಂಡುಕೊಳ್ಳಲು ಅಸಮರ್ಥರಾದವರು ತಮ್ಮ ತಾಯ್ನಾಡಿಗೆ ಮರಳಿ ಹೋಗಬೇಕಾಗುತ್ತದೆ ಹಾಗೂ ಮೂಲ ಉದ್ಯೋಗದಾತರು (ಟ್ವಿಟರ್) ಉದ್ಯೋಗಿಯ ತಾಯ್ನಾಡಿಗೆ ಹೋಗುವ ವೆಚ್ಚವನ್ನು ಭರಿಸಬೇಕಾಗುತ್ತದೆ.


    ಇದನ್ನೂ ಓದಿ: Brainly Fires Employees: ಟ್ವಿಟ್ಟರ್, Byjus ಬಳಿಕ ಮತ್ತೊಂದು ಕಂಪನಿಯಿಂದ ಉದ್ಯೋಗಿಗಳಿಗೆ ಗೇಟ್​ಪಾಸ್​


    ಇಂತಹ ವೀಸಾ ಹೊಂದಿದವರಲ್ಲಿ ಭಾರತೀಯರು ಸೇರಿದ್ದಾರೆ. ತಮ್ಮ ಸಂಕಟ ಹಾಗೂ ಬೇರೆ ಉದ್ಯೋಗದ ಹುಡುಕಾಟವನ್ನರಸುತ್ತಾ ಟ್ವಿಟರ್ ಹಾಗೂ ಲಿಂಕ್ಡ್‌ನ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಟ್ವಿಟರ್‌ನ ಟೆಸ್ಟ್‌ 2 ನಲ್ಲಿ ಮಾಜಿ ಸಾಫ್ಟ್‌ವೇರ್ ಇಂಜಿನಿಯರ್ ರುಚಿತಾ ಪೆರೇರಾ ಲಿಂಕ್ಡ್‌ನ್‌ನಲ್ಲಿ ತಮ್ಮ ಪ್ರಸ್ತುತ ಸ್ಥಿತಿಗತಿಯನ್ನು ಹಂಚಿಕೊಂಡಿದ್ದು 60 ದಿನಗಳೊಳಗೆ ಉದ್ಯೋಗ ಹೊಂದಬೇಕಾದ ಅನಿವಾರ್ಯತೆ ಇರುವವರಲ್ಲಿ ತಾನೂ ಒಬ್ಬಳು ಎಂದು ತಿಳಿಸಿದ್ದಾರೆ. ದುರಾದೃಷ್ಟವಶಾತ್ ಟ್ವಿಟರ್‌ನ ಉದ್ಯೋಗಿ ವಜಾಗೊಳಿಸುವಿಕೆಯಿಂದ ಪ್ರಭಾವಿತರಾದ 50% ಉದ್ಯೋಗಿಗಳಲ್ಲಿ ನಾನೂ ಒಬ್ಬಳು. ನಾನು ಪ್ರಸ್ತುತ H1B ವೀಸಾದಲ್ಲಿದ್ದೇನೆ ಮತ್ತು ಇನ್ನೊಂದು ಉದ್ಯೋಗ ಅವಕಾಶವನ್ನು ಹುಡುಕಲು ಸೀಮಿತ ಸಮಯವನ್ನು ಹೊಂದಿದ್ದೇನೆ, ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.


    ಅಳಲು ತೋಡಿಕೊಳ್ಳುತ್ತಿರುವ ಟ್ವಿಟರ್ ಮಾಜಿ ಉದ್ಯೋಗಿಗಳು


    ಟ್ವಿಟರ್‌ನಲ್ಲಿ ಮಾಜಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಇನ್ನೊಬ್ಬ ಪ್ರಭಾವಿತ ಉದ್ಯೋಗಿ ಸುಶ್ಮಿತಾ ಎಸ್ ನಟರಾಜ್ ಕೂಡ ಕೆಲಸ ಕಳೆದುಕೊಂಡಿರುವ ಉದ್ಯೋಗಿಯಾಗಿದ್ದು ಸಾಮಾಜಿಕ ತಾಣದಲ್ಲಿ ಬೇರೆ ಉದ್ಯೋಗ ಅರಸುತ್ತಿರುವುದಾಗಿ ಹಾಗೂ ತಮ್ಮ ಹುಡುಕಾಟಕ್ಕೆ ನೆರವು ನೀಡಬೇಕಾಗಿ ವಿನಂತಿಸಿಕೊಂಡಿದ್ದಾರೆ. ಟ್ವಿಟರ್‌ನ ವಜಾಗೊಳಿಸುವ ಭಾಗವಾಗಿರುವೆ. ಹಾಗೂ ಟ್ವಿಟರ್‌ನಂತಹ ಸಂಸ್ಥೆಯಲ್ಲಿ ಮತ್ತು ಪ್ರತಿಭಾವಂತ ಜನರೊಂದಿಗೆ ಕೆಲಸ ಮಾಡುವ ಅವಕಾಶಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ - ನಾನು H1B ವೀಸಾದಲ್ಲಿದ್ದೇನೆ ಆದ್ದರಿಂದ ಹೊಸ ಅವಕಾಶವನ್ನು ಹುಡುಕಲು ನನಗೆ ಸುಮಾರು 60 ದಿನಗಳಿವೆ ಎಂದು ಸುಶ್ಮಿತಾ ಬರೆದುಕೊಂಡಿದ್ದಾರೆ.

    Published by:Precilla Olivia Dias
    First published: