HOME » NEWS » National-international » INDIAN ECONOMY LIKELY TO BOUNCE BACK WITH 8 8 PC GROWTH IN 2021 PREDICTS IMF SNVS

ಮುಂದಿನ ವರ್ಷ ಚೀನಾವನ್ನೂ ಮೀರಿಸುತ್ತದೆ ಭಾರತದ ಆರ್ಥಿಕ ಬೆಳವಣಿಗೆ: ಐಎಂಎಫ್

2020ರಲ್ಲಿ ಚೀನಾ ಶೇ. 1.9, ಭಾರತ ಮೈನಸ್ 10.3 ಆರ್ಥಿಕ ಬೆಳವಣಿಗೆ ಸಾಧಿಸುತ್ತವೆ. 2021ರಲ್ಲಿ ಚೀನಾ ಶೇ. 8.2, ಭಾರತ ಶೇ. 8.8ರಷ್ಟು ಅಭಿವೃದ್ಧಿ ಸಾಧಿಸುತ್ತವೆ ಎಂದು ಐಎಂಎಫ್​ನ ವರದಿಯೊಂದರಲ್ಲಿ ತಿಳಿಸಲಾಗಿದೆ.

news18
Updated:October 13, 2020, 10:58 PM IST
ಮುಂದಿನ ವರ್ಷ ಚೀನಾವನ್ನೂ ಮೀರಿಸುತ್ತದೆ ಭಾರತದ ಆರ್ಥಿಕ ಬೆಳವಣಿಗೆ: ಐಎಂಎಫ್
ಐಎಂಎಫ್
  • News18
  • Last Updated: October 13, 2020, 10:58 PM IST
  • Share this:
ನವದೆಹಲಿ(ಅ. 13): ಕೊರೋನಾ ಮತ್ತು ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವ ಭಾರತೀಯರಿಗೆ ಒಂದು ಸಮಾಧಾನದ ವಿಚಾರ ಸಿಕ್ಕಿದೆ. ಲಾಕ್ ಡೌನ್​ನಿಂದಾಗಿ ಪ್ರಪಾತಕ್ಕೆ ಬಿದ್ದಿರುವ ಭಾರತದ ಆರ್ಥಿಕತೆ ಮುಂದಿನ ವರ್ಷ ಗಮನಾರ್ಹ ರೀತಿಯಲ್ಲಿ ಚೇತರಿಸಿಕೆ ಕಾಣುತ್ತದಂತೆ. 2021ರಲ್ಲಿ ಭಾರತದ ಜಿಡಿಪಿ ಶೇ. 8.8ರ ದರದಲ್ಲಿ ಬೆಳವಣಿಗೆ ಸಾಧಿಸುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಐಎಂಎಫ್ ಅಂದಾಜು ಮಾಡಿದೆ. ಈ ವರ್ಷ ಲಾಕ್​ಡೌನ್​ನಿಂದಾಗಿ ಆರ್ಥಿಕತೆ ಶೇ. 10.3ರಷ್ಟು ಕುಸಿಯುವ ಸಾಧ್ಯತೆ ಇದೆಯಾದರೂ ಮುಂದಿನ ವರ್ಷ ಮತ್ತೆ ಹಳಿಗೆ ಬಂದು ಶೇ. 8.8ರಷ್ಟು ಬೆಳವಣಿಗೆ ಸಾಧಿಸುತ್ತದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಗಮನಾರ್ಹ ಸಂಗತಿ ಎಂದರೆ ಚೀನಾ ಕೊರೋನಾ ಸಂಕಷ್ಟದಲ್ಲೂ ಈ ವರ್ಷ ವಿಶ್ವದೆಲ್ಲಾ ರಾಷ್ಟ್ರಗಳಿಗಿಂತಲೂ ಆರ್ಥಿಕವಾಗಿ ಆಶಾದಾಯಕ ಸ್ಥಿತಿ ಹೊಂದಿದೆ. ಶೇ. 1ರ ಆಸುಪಾಸಿನಲ್ಲಿ ಅದರ ಜಿಡಿಪಿ ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ. 2021ರಲ್ಲಿ ಚೀನಾ ಶೇ 8.2ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸಬಹುದು ಎಂದು ಅಂದಾಜು ಮಾಡಲಾಗಿದೆ. ಆದರೆ, ಭಾರತ ಶೆ. 8.8ರ ಜಿಡಿಪಿ ಪ್ರಗತಿ ದರದೊಂದಿಗೆ ಚೀನಾಗಿಂತಲೂ ವೇಗವಾಗಿ ಬೆಳವಣಿಗೆ ಸಾಧಿಸಲಿದೆ ಎಂದಾಯಿತು.

ಇದನ್ನೂ ಓದಿ: ಒಂದು ವರ್ಷದಿಂದ ಬಂಧಿಯಾಗಿದ್ದ ಮಾಜಿ ಕಾಶ್ಮೀರೀ ಸಿಎಂ ಮೆಹಬೂಬ ಮುಫ್ತಿ ಬಿಡುಗಡೆ

ಐಎಂಎಫ್​ನ ವರ್ಲ್ಡ್ ಎಕನಾಮಿಕ್ ಔಟ್​ಲುಕ್ ವರದಿಯಲ್ಲಿ ಈ ಮಾಹಿತಿ ಇದೆ. ಐಎಎಫ್ ಮತ್ತು ವಿಶ್ವ ಬ್ಯಾಂಕ್​ನ ವಾರ್ಷಿಕ ಸಭೆಗೆ ಮುನ್ನ ಬಿಡುಗಡೆಯಾಗಿರುವ ಈ ವರದಿಯ ಪ್ರಕಾರ ಕೋವಿಡ್ ಸಂಕಷ್ಟ ಎದುರಾಗಿರುವ 2020ರ ವರ್ಷದಲ್ಲಿ ಜಗತ್ತಿನ ಸರಾಸರಿ ಆರ್ಥಿಕತೆ ಶೇ. 4.4ರಷ್ಟು ಕುಸಿಯುವ ನಿರೀಕ್ಷೆ ಮಾಡಲಾಗಿದೆ. ಚೀನಾ ಮಾತ್ರವೇ ಶೇ. 1.9ರಷ್ಟು ಬೆಳವಣಿಗೆ ಸಾಧಿಸುತ್ತದೆ. ಉಳಿದೆಲ್ಲಾ ದೇಶಗಳ ಆರ್ಥಿಕತೆ ಕುಂಠಿತಗೊಳ್ಳುತ್ತದೆ. ಆದರೆ, 2021ರಲ್ಲಿ ಜಾಗತಿಕವಾಗಿ ಆರ್ಥಿಕತೆ ಶೇ. 5.2ರಷ್ಟು ಬೆಳವಣಿಗೆ ಸಾಧಿಸುತ್ತದೆ. ಅತ್ಯಂತ ಬಲವಾಗಿ ಕಂಬ್ಯಾಕ್ ಮಾಡುವ ದೇಶಗಳಲ್ಲಿ ಭಾರತ ಅಗ್ರಗಣ್ಯವೆನಿಸಲಿದೆಯಂತೆ.

ಐಎಂಎಫ್ ಈ ವರ್ಷ (2020) ಭಾರತದ ಆರ್ಥಿಕತೆ ಶೇ. 10.3ರಷ್ಟು ಕುಸಿಯಬಹುದು ಎಂದು ಅಂದಾಜು  ಮಾಡಿದ್ದರೆ, ವಿಶ್ವ ಬ್ಯಾಂಕ್ ಪ್ರಕಾರ ಭಾರತದ ಆರ್ಥಿಕತೆ ಶೇ. 9.6ರಷ್ಟು ಇಳಿಕೆ ಕಾಣಬಹುದು ಎಂದಿದೆ. ಕೋವಿಡ್ ನಿಯಂತ್ರಿಸಲು ಬಹಳ ಕಟ್ಟುನಿಟ್ಟಿನ ಲಾಕ್​ಡೌನ್ ಕ್ರಮ ಜರುಗಿಸಿದ ದೇಶಗಳಲ್ಲಿ ಭಾರತವೂ ಒಂದು. ಹೀಗಾಗಿ, 2020-21ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಶೇ. 23ರಷ್ಟು ಕುಸಿತ ಕಂಡಿತ್ತು. ಈಗ ಲಾಕ್​ಡೌನ್ ಬಹುತೇಕ ಸಡಿಲಗೊಂಡಿದೆ. ಆರ್ಥಿಕತೆ ಗರಿಗೆದರಿದೆ.
Published by: Vijayasarthy SN
First published: October 13, 2020, 10:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories