HOME » NEWS » National-international » INDIAN DEPOSITS IN SWISS BANKS RISE TO OVER RS 20700 CRORE HIGHEST IN 13 YEARS MAK

Swiss Bank: ಸ್ವಿಸ್ ಬ್ಯಾಂಕ್​ನಲ್ಲಿನ ಭಾರತೀಯರ ಠೇವಣಿ 20,700 ಕೋಟಿಗೆ ಏರಿಕೆ; ಕಳೆದ 13 ವರ್ಷದಲ್ಲೇ ಅತಿ ಹೆಚ್ಚು!

2020 ರ ಕೊನೆಯಲ್ಲಿ ಅವರ ಭಾರತೀಯ ಗ್ರಾಹಕರ ಕಾರಣದಿಂದಾಗಿ ಸ್ವಿಸ್‌ ಬ್ಯಾಂಕಿಗೆ 4,000 ಕೋಟಿ ರೂ. ಹಣ ಹರಿದಿದೆ. ಅಂತೆಯೇ ಗ್ರಾಹಕರ ಠೇವಣಿಗಳಲ್ಲಿ, ಇತರ ಬ್ಯಾಂಕುಗಳ ಮೂಲಕ 3,100 ಕೋಟಿಗಿಂತ ಹೆಚ್ಚು ಹಣ ಜಮಾವಣೆ ಆಗಿದೆ ಎಂದು ತಿಳಿದುಬಂದಿದೆ.

news18-kannada
Updated:June 19, 2021, 3:48 PM IST
Swiss Bank: ಸ್ವಿಸ್ ಬ್ಯಾಂಕ್​ನಲ್ಲಿನ ಭಾರತೀಯರ ಠೇವಣಿ 20,700 ಕೋಟಿಗೆ ಏರಿಕೆ; ಕಳೆದ 13 ವರ್ಷದಲ್ಲೇ ಅತಿ ಹೆಚ್ಚು!
ನಿರ್ಮಲಾ ಸೀತಾರಾಮನ್-ನರೇಂದ್ರ ಮೋದಿ.
  • Share this:
ಪ್ರಧಾನಿ ನೇಂದ್ರ ಮೋದಿ 201ರ ಲೋಕಸಭಾ ಚುನಾವಣೆಯ ಸಂದರ್ಭ ದಲ್ಲಿ ಸ್ವಿಟ್ಜರ್ಲ್ಯಾಂಡ್ ಸ್ವಿಸ್ ಬ್ಯಾಂಕುಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರುವ ಆಶ್ವಾಸನೆ ನೀಡಿದ್ದರು. ಚುನಾವಣಾ ಫಲಿತಾಂಶದ ವೇಳೆ ಆ ಆಶ್ವಾಸನೆ ಫಲ ನೀಡಿತ್ತು. ಆದರೆ, 7 ವರ್ಷಗಳಾದರೂ ಕಪ್ಪು ಹಣ ಮಾತ್ರ ಭಾರತಕ್ಕೆ ಹಿಂದಿರುಗಿ ಬಂದಿಲ್ಲ. ಈ ನಡುವೆ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇರಿಸಿರುವ ಹಣದ ಮೊತ್ತ 20,700 ಕೋಟಿಗೆ ಏರಿಕೆಯಾಗಿದೆ. ಇದು ಕಳೆದ 13 ವರ್ಷಗಳಲ್ಲೆ ಭಾರತದಿಂದ ಸ್ವಿಸ್‌ ಬ್ಯಾಂಕಿಗೆ ಹರಿದ ಅತಿ ಹೆಚ್ಚಿನ ಮೊತ್ತ ಎಂದು ಸ್ವಿಟ್ಜರ್ಲ್ಯಾಂಡ್‌ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ.

2014 ರ ಲೋಕಸಭಾ ಚುನಾವಣೆಯ ವೇಳೆ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಹಣದ ಬಗ್ಗೆ ಭಾರೀ ಚರ್ಚೆಯಾಗಿತ್ತು. ಬಿಜೆಪಿಯು ನರೇಂದ್ರ ಮೋದಿ ಅಧಿಕಾರಕ್ಕೆ ಬಂದರೆ ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತೀಯ ಹಣವನ್ನು ಭಾರತಕ್ಕೆ ತರುವುದಾಗಿ ಭರವಸೆಗಳನ್ನು ನೀಡಿತ್ತು. ಆದರೆ, ಇದೀಗ ಬಿಜೆಪಿಯ ಮೋದಿ ನೇತೃತ್ವವು ಎರಡನೆ ಬಾರಿಗೆ ಆಡಳಿತ ನಡೆಸುತ್ತಿದೆ. ಆದರೂ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯ ಜನರ, ಸಂಘ-ಸಂಸ್ಥೆಗಳು ಇರಿಸಿರುವ ಹಣದ ಮೊತ್ತ 20,700 ಕೋಟಿ ರೂ.ಗೆ ಏರಿಕೆಯಾಗಿದೆ ಎಂಬುದು ಆತಂಕಕ್ಕೆ ಕಾರಣವಾಗಿದೆ.

2019 ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣದ ಪ್ರಮಾಣದಲ್ಲಿ ಕುಸಿತವಾಗಿತ್ತು. ಆದರೆ 2020ರ ಅಂತ್ಯಕ್ಕೆ ಈ ಪ್ರಮಾಣ 13 ವರ್ಷಗಳಲ್ಲೇ ಗರಿಷ್ಟ ಪ್ರಮಾಣಕ್ಕೆ ಏರಿಕೆಯಾಗಿದೆ. ಎಸ್‌ಎನ್‌ಬಿ ವಿವರಗಳ ಅನ್ವಯ ಸಿಎಚ್‌ಎಫ್ ನಲ್ಲಿ ಪ್ರಸ್ತುತ ಒಟ್ಟು 20,706 ಕೋಟಿ ರೂ. ಭಾರತೀಯರ ಹಣವಿದೆ.

ಇದನ್ನೂ ಓದಿ: RIP Milkha Singh: ಫ್ಲೈಯಿಂಗ್​ ಸಿಖ್​ ಮಿಲ್ಕಾ ಸಿಂಗ್​ ನಿಧನ: ಪ್ರಧಾನಿ ಸೇರಿದಂತೆ ಗಣ್ಯರಿಂದ ಸಂತಾಪ..!

ಸ್ವಿಸ್ ಬ್ಯಾಂಕುಗಳ ‘ಒಟ್ಟು ಹೊಣೆಗಾರಿಕೆಗಳು’ ಅಥವಾ 2020 ರ ಕೊನೆಯಲ್ಲಿ ಅವರ ಭಾರತೀಯ ಗ್ರಾಹಕರ ಕಾರಣದಿಂದಾಗಿ ಸ್ವಿಸ್‌ ಬ್ಯಾಂಕಿಗೆ 4,000 ಕೋಟಿ ರೂ. ಹಣ ಹರಿದಿದೆ. ಅಂತೆಯೇ ಗ್ರಾಹಕರ ಠೇವಣಿಗಳಲ್ಲಿ, ಇತರ ಬ್ಯಾಂಕುಗಳ ಮೂಲಕ 3,100 ಕೋಟಿಗಿಂತ ಹೆಚ್ಚು ಹಣ ಜಮಾವಣೆ ಆಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Rahul Gandhi: ರಾಹುಲ್​ ಗಾಂಧಿ ಜನ್ಮದಿನವನ್ನು ಸೇವಾದಿನವಾಗಿ ಆಚರಿಸಿದ ಕಾಂಗ್ರೆಸ್​ ನಾಯಕರು

ವಿಶ್ವಾಸಾರ್ಹರು ಅಥವಾ ಟ್ರಸ್ಟ್‌ಗಳ ಮೂಲಕ 16.5 ಕೋಟಿ ರೂ ಮತ್ತು ಸುಮಾರು 13,500 ಕೋಟಿಗೂ ಅಧಿಕ ಹಣ ಗ್ರಾಹಕರ ಬಾಂಡ್‌ಗಳು, ಸೆಕ್ಯುರಿಟೀಸ್ ಮತ್ತು ಇತರ ಹಣಕಾಸು ಸಾಧನಗಳ ರೂಪದಲ್ಲಿ ಬ್ಯಾಂಕ್‌ಗೆ ಸೇರ್ಪಡೆಯಾಗಿದೆ ಎಂದು ತಿಳಿದುಬಂದಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 19, 2021, 3:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories