MS Dhoni: ಎನ್​ಸಿಸಿ ಸಂಬಂಧ ರಕ್ಷಣಾ ಸಚಿವಾಲಯ ರಚಿಸಿದ 15 ಜನರ ಸಮಿತಿಯಲ್ಲಿ ಧೋನಿ ಹೆಸರು

ಭಾರತ ತಂಡದ ನಾಯಕರಾಗಿ ಟ್ವೆಂಟಿ ಕ್ರಿಕೆಟ್, ಏಕದಿನ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ಶ್ರೇಯ ಅವರಿಗೆ ಇದೆ. ಧೋನಿ ನಾಯಕನಾಗಿ ಅದ್ಭುತ ಯಶಸ್ಸು ಸಾಧಿಸಿದವರು. ಭಾರತೀಯ ಕ್ರಿಕೆಟ್‌ ತಂಡ ಮೂರೂ ಮಾದರಿಗಳಲ್ಲಿ ಅವರ ನಾಯಕತ್ವದಡಿಯಲ್ಲಿ ವಿಶ್ವದ ನಂ.1 ಎನಿಸಿತ್ತು.

ಎಂ.ಎಸ್. ಧೋನಿ

ಎಂ.ಎಸ್. ಧೋನಿ

 • Share this:
  ಕ್ರಿಕೆಟ್ ಐಕಾನ್ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ (Anand Mahindra) ಅವರನ್ನು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (NCC) ಯ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿದ 15 ಸದಸ್ಯರ ಸಮಿತಿಯಲ್ಲಿ ಗುರುವಾರ ಹೆಸರಿಸಲಾಗಿದೆ. ಮಾಜಿ ಶಾಸಕರಾದ ಬೈಜಯಂತ್ ಪಾಂಡ ಅವರ ನೇತೃತ್ವದಲ್ಲಿ ಕರ್ನಲ್ (ನಿವೃತ್ತ) ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯಸಭಾ ಸದಸ್ಯ ವಿನಯ್ ಸಹಸ್ರಬುದ್ಧೆ, ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪಕುಲಪತಿ ನಜ್ಮಾ ಅಖ್ತರ್ ಸೇರಿದ್ದಾರೆ. ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸುಧಾ ಕಾಮತ್, ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕನಿತ್ಕರ್, ಮೇಜರ್ ಜನರಲ್ (ನಿವೃತ್ತ) ಅಲೋಕ್ ರಾಜ್, ಎಸ್‌ಐಎಸ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಿತುರಾಜ್ ಸಿನ್ಹಾ ಮತ್ತು ಡಾಟಬುಕ್ ಸಿಇಒ ಆನಂದ್ ಶಾ ಸಹ ಸಮಿತಿಯ ಸದಸ್ಯರಾಗಿದ್ದಾರೆ.

  ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ (ಗೌರವ) ಆಗಿರುವ ಮಹೇಂದ್ರ ಸಿಂಗ್ ದೋನಿ ಅವರು ಭಾರತದ ಟಿ 20 ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕಗೊಂಡ ಕೆಲವು ದಿನಗಳ ನಂತರ ಇದೀಗ ಉನ್ನತ ಮಟ್ಟದ ಸಮಿತಿಯಲ್ಲಿ ಸೇರಿಸಲಾಗಿದೆ.

  ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎನ್​ಸಿಸಿಯನ್ನು ಹೆಚ್ಚು ಪ್ರಸ್ತುತವಾಗಿಸಲು ಸಮಗ್ರ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ. "ಸಮಿತಿಯ ಉಲ್ಲೇಖದ ನಿಯಮಗಳು, NCC ಕೆಡೆಟ್‌ಗಳು ರಾಷ್ಟ್ರ ನಿರ್ಮಾಣ ಮತ್ತು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಅಭಿವೃದ್ಧಿ ಪ್ರಯತ್ನಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೊಡುಗೆ ನೀಡಲು ಅಧಿಕಾರ ನೀಡುವ ಕ್ರಮಗಳನ್ನು ಸೂಚಿಸಲು ಒದಗಿಸುತ್ತದೆ" ಎಂದು ಅಧಿಕಾರಿಗಳು ಹೇಳಿದರು. ಒಟ್ಟಾರೆಯಾಗಿ ಸಂಸ್ಥೆಯ ಸುಧಾರಣೆಗಾಗಿ ಎನ್‌ಸಿಸಿ ಕೆಡೆಟ್‌ಗಳ ಲಾಭದಾಯಕ ಬಳಕೆಗಾಗಿ ಮತ್ತು ಯುವ ಸಂಘಟನೆಗಳ ಉತ್ತಮ ಅಭ್ಯಾಸಗಳನ್ನು ಶಿಫಾರಸು ಮಾಡುತ್ತದೆ. ಯುವ ನಾಗರಿಕರಲ್ಲಿ ಜಾತ್ಯತೀತ ದೃಷ್ಟಿಕೋನ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಬೆಳೆಸುವಲ್ಲಿ ಇದು ಮಹತ್ವದ್ದಾಗಿದೆ ಎಂದು ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ. ಈ ಸಮಿತಿ ಎಲ್ಲಾ ಹಂತಗಳಲ್ಲಿ ನಾಯಕತ್ವ ಗುಣಗಳನ್ನು ಹೊಂದಿರುವ ಸಂಘಟಿತ, ತರಬೇತಿ ಪಡೆದ ಮತ್ತು ಪ್ರೇರಿತ ಯುವ ಸಮೂಹವನ್ನು ರಚಿಸುವ ಗುರಿಯನ್ನು ಹೊಂದಿದೆ. ಎನ್​ಸಿಸಿಯನ್ನು ನ್ಯಾಷನಲ್ ಕೆಡಿಟ್ ಕಾರ್ಪ್ಸ್ ಕಾಯ್ದೆ 1984ರ ಅಡಿಯಲ್ಲಿ ರಚಿಸಲಾಗಿದೆ.

  ಇದನ್ನು ಓದಿ: Explained: 71 ಸಾವಿರ ದೀಪಗಳು, 14 ಕೋಟಿ ಪಡಿತರ ಕಿಟ್ ವಿತರಣೆ.. ಹೇಗಿರಲಿದೆ ನಾಳೆ ಪ್ರಧಾನಿ ಮೋದಿ ಜನ್ಮ ದಿನ ಸಂಭ್ರಮಾಚರಣೆ?

  ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕ ದೋನಿ

  ವಿಶ್ವ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ಧೋನಿ 07 ಜುಲೈ 1981ರಂದು ರಾಂಚಿಯಲ್ಲಿ ಜನಿಸಿದ್ದರು. 2004 ರಲ್ಲಿ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಅವರು ಮತ್ತೆ ಹಿಂದಿರುಗಿ ನೋಡಲೇ ಇಲ್ಲವೆನ್ನಬಹುದು. ಭಾರತ ತಂಡದ ನಾಯಕರಾಗಿ ಟ್ವೆಂಟಿ ಕ್ರಿಕೆಟ್, ಏಕದಿನ ಕ್ರಿಕೆಟ್ ನಲ್ಲಿ ವಿಶ್ವಕಪ್ ಗೆದ್ದ ಶ್ರೇಯ ಅವರಿಗೆ ಇದೆ. ಧೋನಿ ನಾಯಕನಾಗಿ ಅದ್ಭುತ ಯಶಸ್ಸು ಸಾಧಿಸಿದವರು. ಭಾರತೀಯ ಕ್ರಿಕೆಟ್‌ ತಂಡ ಮೂರೂ ಮಾದರಿಗಳಲ್ಲಿ ಅವರ ನಾಯಕತ್ವದಡಿಯಲ್ಲಿ ವಿಶ್ವದ ನಂ.1 ಎನಿಸಿತ್ತು. ನಾಯಕನಾಗಿ ಅವರು ಒಂದು ಟಿ-20, ಒಂದು ಏಕದಿನ ವಿಶ್ವಕಪ್‌ ಗೆದ್ದಿದ್ದಾರೆ. ಹಾಗೆಯೇ ಮಿನಿ ವಿಶ್ವಕಪ್‌ ಎಂದು ಕರೆಸಿಕೊಳ್ಳುವ ಚಾಂಪಿಯನ್ಸ್‌ ಟ್ರೋಫಿಯನ್ನೂ ಗೆದ್ದು ಕೊಟ್ಟಿದ್ದಾರೆ. ವಿಶ್ವದ ಬೇರಾವುದೇ ನಾಯಕ ಈ ಮೂರು ಕಿರೀಟಗಳನ್ನು ಗೆದ್ದ ಸಾಧನೆ ಮಾಡಿಲ್ಲ. ಇದೊಂದು ವಿಶ್ವದಾಖಲೆಯಾಗಿದೆ. ಮೇಲು ಕ್ರಮಾಂಕದ ಬ್ಯಾಟ್ಸ್‌ಮನ್​ನಿಂದ ಹಿಡಿದು ಕಡೆಯ ಹಂತದ ಬ್ಯಾಟ್ಸ್​ಮನ್‌ ಆಗಿ ಅವರು ಜಾಗತಿಕ ಖ್ಯಾತಿ ಗಳಿಸಿದ್ದಾರೆ.
  Published by:HR Ramesh
  First published: