• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • EzriCare Eye Drops: ಅಮೆರಿಕದಲ್ಲಿ ಸಾವಿಗೆ ಕಾರಣವಾಯ್ತು ಕಣ್ಣಿನ ಡ್ರಾಪ್​; ಭಾರತದ ಔಷಧಿ ಸಂಸ್ಥೆಯ ಉತ್ಪಾದನೆ ಸ್ಥಗಿತ!

EzriCare Eye Drops: ಅಮೆರಿಕದಲ್ಲಿ ಸಾವಿಗೆ ಕಾರಣವಾಯ್ತು ಕಣ್ಣಿನ ಡ್ರಾಪ್​; ಭಾರತದ ಔಷಧಿ ಸಂಸ್ಥೆಯ ಉತ್ಪಾದನೆ ಸ್ಥಗಿತ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾವಿನ ಪ್ರಕರಣಕ್ಕೆ ಸಂಬಂಧ ಹೊಂದಿರುವ ಔಷಧ, ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರಬಹುದೆಂದು ದೇಶದ ಆರೋಗ್ಯ ರಕ್ಷಣಾ ಸಂಸ್ಥೆ ಹೇಳಿದೆ. ಇದರ ಬೆನ್ನಲ್ಲೇ ಚೆನ್ನೈ ಮೂಲದ ಔಷಧಿ ಕಂಪನಿಯೂ ಯುಎಸ್ ಮಾರುಕಟ್ಟೆಯಿಂದ ಒಂದು ಶ್ರೇಣಿಯ ಕಣ್ಣಿನ ಹನಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.

  • Trending Desk
  • 3-MIN READ
  • Last Updated :
  • Share this:

ಈ ಹಿಂದೆ ಕೆಮ್ಮಿನ ಸಿರಪ್ (Cough Syrup) ಕುಡಿದಿದ್ದರಿಂದ ಮಕ್ಕಳು ಸಾವನ್ನಪ್ಪಿದ ಪ್ರಕರಣ ಮಕ್ಕಳಿಗೆ ಕೆಮ್ಮು ಬಂದರೆ ಸಿರಪ್ ಹಾಕಬೇಕೋ, ಬೇಡವೋ ಎಂಬ ಒಂದು ಸಂದೇಹ ಪೋಷಕರಲ್ಲಿ (Parents) ಮೂಡಿಸಿದ್ದಂತೂ ನಿಜ. ಮಕ್ಕಳ ಸಾವಿನ ನಂತರ ಕಲುಷಿತ ಔಷಧಿಗಳಿಂದ ಮಕ್ಕಳನ್ನು (Children) ರಕ್ಷಿಸಲು ವಿಶ್ವ ಆರೋಗ್ಯ ಸಂಸ್ಥೆ (World Health Organization) "ತಕ್ಷಣದ ಮತ್ತು ಸಂಘಟಿತ ಕ್ರಮ"ಕ್ಕೆ ಕರೆ ನೀಡಿದ್ದು ನಮಗೆಲ್ಲಾ ಗೊತ್ತೇ ಇದೆ. 2022 ರಲ್ಲಿ  ಗಾಂಬಿಯಾ, ಇಂಡೋನೇಷ್ಯಾ ಮತ್ತು ಉಜ್ಬೇಕಿಸ್ತಾನದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 300ಕ್ಕೂ ಹೆಚ್ಚು ಮಕ್ಕಳು ತೀವ್ರ ಮೂತ್ರಪಿಂಡದ ಸಮಸ್ಯೆಯಿಂದ ಸಾವನ್ನಪ್ಪಿದ್ದರು ಎಂದು ಡಬ್ಲ್ಯುಎಚ್ಒ (WHO) ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಇದನ್ನು ಮರೆಯುವಷ್ಟರಲ್ಲಿಯೇ ಇನ್ನೊಂದು ಔಷಧಿಯಿಂದ ಎಡವಟ್ಟು ನಡೆದು ಹೋಗಿದೆ.


ಕಣ್ಣಿಗೆ ಹಾಕಿಕೊಳ್ಳುವ ಈ ಡ್ರಾಪ್​​ ಉತ್ಪಾದನೆ ನಿಲ್ಲಿಸಿಲು ಸೂಚನೆ


ಭಾರತ ಮೂಲದ ಔಷಧಿ ಕಂಪನಿಯ ಐ ಡ್ರಾಪ್​ ಬಳಸಿ ಕಾರಣ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದು ಮತ್ತು ರಕ್ತಪ್ರವಾಹದ ಸೋಂಕಿನಿಂದ ಓರ್ವ ಸಾವನ್ನಪ್ಪಿದ್ದ ಪ್ರಕರಣದ ವರದಿಯಾಗಿದೆ. ಈ ಕೇಸ್​ಗೆ ಸಂಬಂಧ ಹೊಂದಿರುವ ಔಷಧ, ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡಿರಬಹುದೆಂದು ದೇಶದ ಆರೋಗ್ಯ ರಕ್ಷಣಾ ಸಂಸ್ಥೆ ಹೇಳಿದೆ. ಇದರ ಬೆನ್ನಲ್ಲೇ ಚೆನ್ನೈ ಮೂಲದ ಔಷಧಿ ಕಂಪನಿಯೂ ಯುಎಸ್ ಮಾರುಕಟ್ಟೆಯಿಂದ ಒಂದು ಶ್ರೇಣಿಯ ಕಣ್ಣಿನ ಹನಿಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.


ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ತಯಾರಿಸಿದ ಎಜ್ರಿಕೇರ್ ಆರ್ಟಿಫಿಶಲ್ ಟಿಯರ್ಸ್ ಎಂಬ ಕಣ್ಣಿಗೆ ಹಾಕಿಕೊಳ್ಳುವ ಹನಿಗಳ ತೆರೆಯದ ಬಾಟಲಿಗಳನ್ನು ಪರೀಕ್ಷಿಸುತ್ತಿದ್ದಾರೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಕಂಪನಿಯೂ ತಯಾರಿಸಿದ ಉತ್ಪನ್ನಗಳ ಆಮದನ್ನು ನಿರ್ಬಂಧಿಸಲು ಮುಂದಾಗಿದೆ ಎಂದು ಹೇಳಿದೆ.


ಎಜ್ರಿಕೇರ್ ಆರ್ಟಿಫಿಶಲ್ ಟಿಯರ್ಸ್


ಆರ್ಟಿಫಿಶಲ್ ಟಿಯರ್ಸ್ ನಿಂದ ಕಣ್ಣು, ಪ್ರಾಣ ಕಳೆದುಕೊಳ್ಳುವ ಅಪಾಯ


"ಸಂಭಾವ್ಯ ಬ್ಯಾಕ್ಟೀರಿಯಾ ಮಾಲಿನ್ಯದಿಂದಾಗಿ ಎಜ್ರಿಕೇರ್ ಆರ್ಟಿಫಿಶಲ್ ಟಿಯರ್ಸ್ ಅಥವಾ ಡೆಲ್ಸಮ್ ಫಾರ್ಮಾದ ಆರ್ಟಿಫಿಶಲ್ ಟಿಯರ್ಸ್ ಡ್ರಾಪ್ ಅನ್ನು ಖರೀದಿಸದಂತೆ ಎಫ್‌ಡಿಎ ಗ್ರಾಹಕರು ಮತ್ತು ಆರೋಗ್ಯ ಆರೈಕೆ ವೃತ್ತಿಪರರಿಗೆ ಎಚ್ಚರಿಕೆ ನೀಡಿದೆ.


ಕಲುಷಿತ ಆರ್ಟಿಫಿಶಲ್ ಟಿಯರ್ಸ್ ಡ್ರಾಪ್ ಕಣ್ಣಿನ ಸೋಂಕಿನ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಇದು ಕುರುಡುತನ ಅಥವಾ ಸಾವಿಗೆ ಕಾರಣವಾಗಬಹುದು" ಎಂದು ಸಂಸ್ಥೆ ಗುರುವಾರ ಹೇಳಿದೆ.


ಎಜ್ರಿಕೇರ್, ಎಲ್ಎಲ್‌ಸಿ ಮತ್ತು ಡೆಲ್ಸಮ್ ಫಾರ್ಮಾ ವಿತರಿಸಿದ ಆರ್ಟಿಫಿಶಿಯಲ್ ಟಿಯರ್ಸ್ ಲ್ಯೂಬ್ರಿಕೆಂಟ್ ಐ ಡ್ರಾಪ್ಸ್ ನ ಅವಧಿ ಮುಗಿಯುವ ಅವಧಿಯೊಳಗೆ ಕಂಪನಿಯು ಸ್ವಯಂಪ್ರೇರಣೆಯಿಂದ ಎಲ್ಲಾ ಲಾಟ್ ಗಳನ್ನು ಗ್ರಾಹಕರ ಕೈ ತಲುಪುವುದಕ್ಕಿಂತ ಮೊದಲೇ ಹಿಂತೆಗೆದುಕೊಳ್ಳುತ್ತಿದೆ ಎಂದು ಗ್ಲೋಬಲ್ ಫಾರ್ಮಾ ಹೆಲ್ತ್ ಕೇರ್ ಈ ಹಿಂದೆ ಹೇಳಿಕೆ ನೀಡಿತ್ತು.




ಏನಿದು ಸ್ಯೂಡೋಮೊನಾಸ್ ಎರುಗಿನೋಸಾ?


ಸ್ಯೂಡೋಮೊನಾಸ್ ಎರುಗಿನೋಸಾದ ಬಗ್ಗೆ ಈಗಾಗಲೇ ದೇಶಾದ್ಯಂತದ ವೈದ್ಯರಿಗೆ ಎಚ್ಚರಿಕೆ ನೀಡಲಾಗಿದೆ, ಇದು ಒಂದು 12 ರಾಜ್ಯಗಳಲ್ಲಿ ಕನಿಷ್ಠ 55 ಜನರ ಮೇಲೆ ಪರಿಣಾಮ ಬೀರಿದೆ. ಕನಿಷ್ಠ ಒಂದು ಸಾವು ಸಂಭವಿಸಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.


ಇಲ್ಲಿಯವರೆಗೆ, ತಮ್ಮ ಕಣ್ಣುಗಳಲ್ಲಿ ನೇರವಾಗಿ ಸೋಂಕುಗಳನ್ನು ಹೊಂದಿದ್ದ 11 ರೋಗಿಗಳಲ್ಲಿ ಕನಿಷ್ಠ ಐದು ಜನರು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ಸಿಡಿಸಿ ವಕ್ತಾರರು ನೆಟ್ವರ್ಕ್ ಗೆ ತಿಳಿಸಿದ್ದಾರೆ.


ಸ್ಯೂಡೋಮೊನಾಸ್ ಎರುಗಿನೋಸಾ ರಕ್ತ, ಶ್ವಾಸಕೋಶ ಅಥವಾ ಗಾಯದ ಸೋಂಕುಗಳಿಗೆ ಕಾರಣವಾಗಬಹುದು ಮತ್ತು ಪ್ರತಿಜೀವಕ ಪ್ರತಿರೋಧದಿಂದಾಗಿ ಇತ್ತೀಚಿನ ದಿನಗಳಲ್ಲಿ ರೋಗಾಣು ಚಿಕಿತ್ಸೆ ನೀಡುವುದು ಕಠಿಣವೆಂದು ಸಾಬೀತಾಗಿದೆ ಎಂದು Insider.com ವರದಿ ಮಾಡಿದೆ.


ಸಿಡಿಸಿ ಪ್ರಕಾರ, ಈ ಬ್ಯಾಕ್ಟೀರಿಯಾವು ಸಾಮಾನ್ಯವಾಗಿ ಆಸ್ಪತ್ರೆಗಳು ಅಥವಾ ಇತರ ಆರೋಗ್ಯ ವ್ಯವಸ್ಥೆಗಳಲ್ಲಿನ ಜನರಿಗೆ ಕಲುಷಿತ ನೀರು ಅಥವಾ ಮಣ್ಣಿಗೆ ಒಡ್ಡಿಕೊಂಡಾಗ ಹರಡುತ್ತದೆ.

Published by:Sumanth SN
First published: