ಕೇಂದ್ರ ಲೋಕಸೇವಾ ಅಧಿಕಾರಿಗಳಿಗೆ ಕಹಿ ಸುದ್ದಿ; ಕಡ್ಡಾಯ ನಿವೃತ್ತಿ ಬಗ್ಗೆ ಹಬ್ಬಿದೆ ಹೀಗೊಂದು ವದಂತಿ

ಮತ್ತೊಬ್ಬ ಅಧಿಕಾರಿ ಮಾತನಾಡಿ, ನಾಗರಿಕ ಸೇವಾ ಅಧಿಕಾರಿಗಳ ಪರಿಷ್ಕೃತ ನಿವೃತ್ತಿ ದಿನಾಂಕದ ಪಟ್ಟಿ ಖಾಲಿ ಹುದ್ದೆಗಳ ಸಂಖ್ಯೆ ಮತ್ತು ವಿತ್ತೀಯ ಪರಿಣಾಮಗಳನ್ನು ಅಳೆಯುವ ಮಾನದಂಡ ಪ್ರಕ್ರಿಯೆಯ ಭಾಗವಾಗಿರಬಹುದು ಮತ್ತು ಐಆರ್​ಎಸ್​ ಅಧಿಕಾರಿಗಳ ಪಟ್ಟಿ ಹರಿದಾಡಿರುವುದರ ಹಿಂದೆ ಒಬ್ಬನ ಕೈವಾಡವಿರಬಹುದು ಎಂದು ಅಭಿಪ್ರಾಯಪಡುತ್ತಾರೆ

HR Ramesh | news18-kannada
Updated:September 23, 2019, 5:10 PM IST
ಕೇಂದ್ರ ಲೋಕಸೇವಾ ಅಧಿಕಾರಿಗಳಿಗೆ ಕಹಿ ಸುದ್ದಿ; ಕಡ್ಡಾಯ ನಿವೃತ್ತಿ ಬಗ್ಗೆ ಹಬ್ಬಿದೆ ಹೀಗೊಂದು ವದಂತಿ
ಪ್ರಾತಿನಿಧಿಕ ಚಿತ್ರ
  • Share this:
ಒಮ್ಮೆ ಸರ್ಕಾರಿ ಸೇವೆಗೆ ಸೇರಿದರೆ ಸೇವಾವಧಿ ಮತ್ತು ನಿವೃತ್ತಿ ವಯಸ್ಸಿನ ಅವಧಿ ನಿಶ್ಚಿತವಾಗಿರುತ್ತದೆ. ಆದರೆ, ಇಂದು ಈ ವಿಷಯ ಮಾತ್ರ ಅತ್ಯಂತ ಅನಿಶ್ಚಿತವಾಗಿದೆ. ಯಾವುದೇ ವಿಷಯ ಹಾಗೂ ರಂಗದಲ್ಲೂ ಅನಿಶ್ಚಿತ ವಿಷಯಗಳನ್ನು ನಿಶ್ಚಿತಗೊಳಿಸಬೇಕು. ಅಂದರೆ ತಪ್ಪನ್ನು ಸರಿಪಡಿಸಬೇಕು.

ಕೇಂದ್ರ ಸರ್ಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಸರ್ಕಾರ ಕಡಿಮೆ ಮಾಡಿದೆ ಎಂಬ ವಿಷಯ ಇಂದು ತಡವಾಗಿ ಹೆಚ್ಚು ಚರ್ಚೆಯಾಗುತ್ತಿದೆ. ನಿವೃತ್ತಿ ವಿಷಯವಾಗಿ ಹಲವು ಸುದ್ದಿಗಳು ದೇಶಾದ್ಯಂತ ಹರಿದಾಡುತ್ತಿವೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ವಿವಿಧ ಆಯಾಮಗಳಲ್ಲಿ ನಿವೃತ್ತಿಯ ವಯಸ್ಸಿನ ವಿಚಾರವಾಗಿ ಸುದ್ದಿಗಳನ್ನು ಹರಿದಾಡುತ್ತಿವೆ. ಅದರಲ್ಲಿ ಒಂದು ಹೀಗಿದೆ, "ಎಲ್ಲಾ ಸರ್ಕಾರಿ ನೌಕರರು 33 ವರ್ಷಗಳ ಸೇವೆ ಅಥವಾ 60 ವರ್ಷ ವಯಸ್ಸು ಯಾವುದು ಮೊದಲು, ಇವುಗಳನ್ನು ಪೂರೈಸಿದವರು ನಿವೃತ್ತಿಯಾಗುವ ಪ್ರಸ್ತಾವನೆಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಅಂತಿಮಗೊಳಿಸಿದ್ದು, ಈ ಪ್ರಸ್ತಾವನೆಯನ್ನು 2020 ಏಪ್ರಿಲ್​ 1ರಿಂದ ಅನುಷ್ಠಾನ ತರುವಂತೆ ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಿಕೊಟ್ಟಿದೆ." ಎಂಬ ಸುದ್ದಿ ಹರಿದಾಡಿದೆ.


ಆಶ್ಚರ್ಯಕರ ಸಂಗತಿಯೆಂದರೆ, ನಾಗರಿಕ ಸೇವೆಯ ಹಿರಿಯ ಅಧಿಕಾರಿಗಳ ಹೊಸ ನಿವೃತ್ತಿ ದಿನಾಂಕದ ಪಟ್ಟಿಯೊಂದು ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದರೆ, ಇನ್ನೂ ಕುತೂಹಲದ ವಿಷಯ ಏನೆಂದರೆ ಈ ಪಟ್ಟಿಯಲ್ಲಿರುವುದು ಕೇವಲ ಐಆರ್​ಎಸ್​ ಅಧಿಕಾರಿಗಳ ಹೆಸರು ಮಾತ್ರ. ಇವರನ್ನು ಹೆದರಿಸಲು ಯಾರೋ ಒಬ್ಬರು ಹೀಗೆ ಮಾಡಿರಬಹುದು ಎಂಬ ಚರ್ಚೆಯೂ ಇದರ ಜೊತೆಗೆ ನಡೆಯುತ್ತಿದೆ.ಕೇಂದ್ರ ಸರ್ಕಾರಿ ನೌಕಕರ ಸೇವಾ ವರದಿಯನ್ನು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಳಿದೆ ಎಂಬ ಶೀರ್ಷಿಕೆಯ ಮತ್ತೊಂದು ಸುದ್ದಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.


ಸರ್ಕಾರ ಘೋಷಿಸಿದೆ ಎನ್ನಲಾದ ಮಾಹಿತಿ ಮತ್ತು ದಾಖಲೆಗಳಲ್ಲಿ ತಿಳಿಸಲಾಗಿರುವ ನಿವೃತ್ತಿ ವಯಸ್ಸನ್ನು (60 ವರ್ಷದ ಅಥವಾ 33 ವರ್ಷ ಸೇವೆ) ಅಡಿಗೆರೆ ಹಾಕಲಾಗಿದೆ. ಬಹುಶಃ ಈ ಸುದ್ದಿ ನಿಜ ಆಗಿರಬಹುದು. ಇಲ್ಲ, ಕೇವಲ ವದಂತಿಯಷ್ಟೇ ಆಗಿರಬಹುದು. ಆದರೆ, ಸಾರ್ವಜನಿಕ ವಲಯದಲ್ಲಿ ಈ ವಿಚಾರ ಹೆಚ್ಚು ಚರ್ಚೆಗೆ ಒಳಪಟ್ಟಾಗ ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ಹೇಳಿಕೆ ನೀಡಬೇಕಿದೆ. ಉದಾಹರಣೆಗೆ ಗಣೇಶ ಹಾಲು ಕುಡಿದ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ಹಬ್ಬಿದಾಗ ಸರ್ಕಾರ ವಾಸ್ತವವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು.

ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಇಂಡಿಯನ್​ ಮ್ಯಾಂಡರಿನ್​ ಹಲವು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿತು. ಆದರೆ, ಇಂತಹ ಒಂದು ಆದೇಶ ಆಗಿರುವ ಬಗ್ಗೆ ಅವರಿಗೆ ಯಾವುದೇ ಖಚಿತತೆ ಇಲ್ಲ.


ದೆಹಲಿ ವಿಧಾನಸಭೆ ಚುನಾವಣೆಗೆ ಮುನ್ನ ಇಂತಹ ಸುದ್ದಿಹರಿಬಿಟ್ಟಿರುವುದರ ಹಿಂದೆ ಜನರ ಮನಸ್ಸನ್ನು ಬದಲಿಸುವ ತಂತ್ರ ಇರಬಹುದೇ ಎಂಬ ಅನುಮಾನವೂ ಕಾಡುತ್ತದೆ. ಏಕೆಂದರೆ ದೊಡ್ಡ ಮಟ್ಟದಲ್ಲಿ ಮತದಾರರು ಸೇವಾ ವರ್ಗದಿಂದ ಪ್ರಭಾವಿತರಾಗಿರುತ್ತಾರೆ. ಇದಕ್ಕೂ ಮುನ್ನ ದೆಹಲಿಯ ಚುನಾವಣೆಯ ಸಮಯದಲ್ಲಿ ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಸುದ್ದಿಗಳು ಹರಿದಾಡಿದ್ದವು.

ಮತ್ತೊಂದು ಆಯಾಮದಲ್ಲಿ ಇದನ್ನು ನೋಡುವುದಾದರೆ ಆರ್ಥಿಕತೆ ಕುಸಿದಿರುವುದರಿಂದ ಜನರ ಗಮನವನ್ನು ಬೇರೆಡೆಗೆ ಕೇಂದ್ರೀಕರಿಸಲು ಈ ರೀತಿಯ ಸುದ್ದಿಗಳನ್ನು ಹರಿಬಿಡಲಾಗಿದೆಯೇ ಎಂದು ಯೋಚಿಸಬಹುದು. ಕೇಂದ್ರ ಸರ್ಕಾರ ಆರ್​ಬಿಐನಿಂದ 1.76 ಲಕ್ಷ ಕೋಟಿ ಹಣವನ್ನು ಪಡೆದುಕೊಂಡಿದೆ. ಆರ್ಥಿಕ ಚೇತರಿಕೆಗಾಗಿ ಕಾರ್ಪೊರೆಟ್​ ತೆರಿಗೆಯನ್ನು ಕಡಿತಗೊಳಿಸಿದೆ. ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಇಂತಹ ಉಪಾಯವನ್ನು ಮಾಡಿರಬಹುದೇ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡಿದರೆ ಪ್ರತಿವರ್ಷ ಲಕ್ಷಾಂತರ ಮಂದಿಯನ್ನು ನೇಮಕಾತಿ ಮಾಡಿಕೊಳ್ಳಬಹುದು. ಆದರೆ, ಹೀಗೆ ಮಾಡಿದರೆ ಅದು ಸರ್ಕಾರಕ್ಕೆ ದೊಡ್ಡ ಮಟ್ಟದ ಹೊರೆಯಾಗಲಿದೆ. ಏಕೆಂದರೆ ನಿವೃತ್ತಿಯಾದವರಿಗೆ ಪಿಎಫ್​ ಮತ್ತು ಗ್ರಾಚ್ಯುಯಿಟಿ ಹಣವನ್ನು ನೀಡಬೇಕು.

ಇಂಡಿಯನ್ ಮ್ಯಾಂಡರಿನ್ಸ್​ ನೊಂದಿಗೆ ಮಾತನಾಡಿದ ಮತ್ತೊಬ್ಬ ಹಿರಿಯ ಐಎಎಸ್​ ಅಧಿಕಾರಿ, ನಮೋ ಆಡಳಿತದ ಸರ್ಕಾರ ಪ್ರಯೋಗಗಳ ಹಸಿವನ್ನು ಹೊಂದಿದೆ. ಇಲ್ಲಿ ಐಎಎಸ್​ ಪ್ರೊಬೆಷನರಿಗಳು ಕೂಡ ಭಾರತ ಸರ್ಕಾರದ ಸಹಾಯಕ ಕಾರ್ಯದರ್ಶಿಯಾಗುತ್ತಾರೆ. ಇಂತಹ ಹಸಿವುಗಳು ಒಳ್ಳೆಯದೇ ಆದರೆ, ಇದರ ಜೊತೆಗೆ ಅಷ್ಟೇ ಅಪಾಯಗಳು ಕೂಡ ಇವೆ. (ಉದಾಹರಣೆಗೆ ನೋಟು ಅಮಾನ್ಯೀಕರಣ, ಜಿಎಸ್​ಟಿ ಮತ್ತು ಆರ್ಟಿಕಲ್​ 370). ನಿವೃತ್ತಿ ವಯಸ್ಸಿಗೆ ಸಂಬಂಧಿಸಿದಂತೆ ಈಗ ನಡೆಯುತ್ತಿರುವ ವಾದಗಳು ಕೂಡ ನಮೋ ಆಡಳಿತದ ಯೋಜನೆಯ ಒಂದು ಭಾಗವಾಗಿದೆ. ಆದರೆ, ಇದು ಇನ್ನೂ ಹೊಸ ಆರಂಭಿಕ ಹಂತದಲ್ಲಿ ಇರುವಂತೆ ತೋರುತ್ತದೆ ಎಂದು ಹೇಳುತ್ತಾರೆ.


ಮತ್ತೊಬ್ಬ ಅಧಿಕಾರಿ ಮಾತನಾಡಿ, ನಾಗರಿಕ ಸೇವಾ ಅಧಿಕಾರಿಗಳ ಪರಿಷ್ಕೃತ ನಿವೃತ್ತಿ ದಿನಾಂಕದ ಪಟ್ಟಿ ಖಾಲಿ ಹುದ್ದೆಗಳ ಸಂಖ್ಯೆ ಮತ್ತು ವಿತ್ತೀಯ ಪರಿಣಾಮಗಳನ್ನು ಅಳೆಯುವ ಮಾನದಂಡ ಪ್ರಕ್ರಿಯೆಯ ಭಾಗವಾಗಿರಬಹುದು ಮತ್ತು ಐಆರ್​ಎಸ್​ ಅಧಿಕಾರಿಗಳ ಪಟ್ಟಿ ಹರಿದಾಡಿರುವುದರ ಹಿಂದೆ ಒಬ್ಬನ ಕೈವಾಡವಿರಬಹುದು ಎಂದು ಅಭಿಪ್ರಾಯಪಡುತ್ತಾರೆ.

2015ರಲ್ಲೂ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡಲಾಗುತ್ತಿದೆ ಎಂಬ ವದಂತಿ ಹಬ್ಬಿದಾಗ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಡಾ.ಜೀತೇಂದ್ರ ಸಿಂಗ್​ ಅವರು ರಾಜ್ಯಸಭೆಗೆ ಪತ್ರ ಬರೆದು, ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. "1997ರಲ್ಲಿ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಐದನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸಿನಂತೆ 58ರಿಂದ 60ಕ್ಕೆ ಏರಿಕೆ ಮಾಡಲಾಗಿದೆ. ಮತ್ತು ಈಗ ನಿವೃತ್ತಿಯ ವಯಸ್ಸನ್ನು 60ರಿಂದ 58ಕ್ಕೆ ಇಳಿಸುವ ಯಾವ ಪ್ರಸ್ತಾವನೆಯೂ ಸರ್ಕಾರದ ಮುಂದೆ ಇಲ್ಲ," ಎಂದು ಹೇಳುವ ಸ್ಪಷ್ಟಪಡಿಸಿದ್ದರು.

ಇದೀಗ ಮತ್ತೊಮ್ಮೆ ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಸಂಬಂಧದ ವದಂತಿಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇಂತಹ ಸಮಯದಲ್ಲಿ ನಮೋ ಸರ್ಕಾರ, ನಿವೃತ್ತಿ ವಯಸ್ಸು ಕಡಿಮೆಗೊಳಿಸುವ ಸಂಬಂಧದ ಪ್ರಸ್ತಾವನೆ ಸರ್ಕಾರದ ಮುಂದೆ ಇದೆಯೋ ಇಲ್ಲವೋ ಎಂಬುದನ್ನು ಅಧಿಕೃತ ಹೇಳಿಕೆ ನೀಡುವ ಮೂಲಕ ಸ್ಪಷ್ಟಪಡಿಸಬೇಕು.

ವಿಶೇಷ ಸೂಚನೆ: ಈ ಮೇಲಿನ ವರದಿ ಇಂಡಿಯನ್​ ಮ್ಯಾಂಡ್ರೇನ್​ ಡಿಜಿಟಲ್​ ಮಾಧ್ಯಮದಲ್ಲಿ ಪ್ರಕಟವಾಗಿದ್ದು, ಇದರ ಸತ್ಯಾಸತ್ಯತೆಯನ್ನು ನ್ಯೂಸ್​18 ಅವಲೋಕನ ಮಾಡಿಲ್ಲ. 

First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading