ಐತಿಹಾಸಿಕ ಸಾಧನೆ: 32 ಕಿ.ಮೀ ದೂರದಿಂದಲೇ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯರು

ಈ ತಂತ್ರಜ್ಞಾನವನ್ನು ಬಳಸಿ ನಾವು 32 ಕಿ.ಮೀ ದೂರದಿಂದ ಚಿಕಿತ್ಸೆಯನ್ನು ನೀಡಿದ್ದೇವೆ.

zahir | news18
Updated:December 5, 2018, 8:40 PM IST
ಐತಿಹಾಸಿಕ ಸಾಧನೆ: 32 ಕಿ.ಮೀ ದೂರದಿಂದಲೇ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯರು
Dr Tejas Patel
zahir | news18
Updated: December 5, 2018, 8:40 PM IST
ಅಹಮದಾಬಾದ್: 16 ವರ್ಷಗಳ ಹಿಂದೆ, 16 ಸೆಪ್ಟೆಂಬರ್ 2002 ರಂದು ಗುಜರಾತಿನ ಗಾಂಧಿನಗರದ ಅಕ್ಷರಧಾಮ ದೇವಾಲಯದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಅಂದು ಇಡೀ ವಿಶ್ವವೇ ಗಾಂಧಿನಗರದತ್ತ ಆಘಾತದಿಂದ ನೋಡಿತ್ತು. ಇಂದು ಅದೇ ಪ್ರದೇಶ ರೊಬೊಟಿಕ್ ಶಸ್ತ್ರಚಿಕಿತ್ಸೆಯ ಮೂಲಕ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿದೆ.

ಗುಜರಾತ್ ಮೂಲದ ಹೃದಯಶಾಸ್ತ್ರಜ್ಞ ಡಾ. ತೇಜಸ್ ಪಟೇಲ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ ಮೆರೆದಿದ್ದಾರೆ. ಬುಧವಾರ ಅಹಮದಾಬಾದ್​ನಲ್ಲಿ ಪ್ರಪಂಚದ ಮೊದಲ ಟೆಲಿರೊಬೊಟಿಕ್ ಕೊರೊನರಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಅಪೆಕ್ಸ್ ಹಾರ್ಟ್ ಇನ್ಸ್ಟಿಟ್ಯೂಟ್ ಮುಖ್ಯ ಕಾರ್ಡಿಯಾಲಜಿಸ್ಟ್ ಆಗಿರುವ ತೇಜಸ್ ಪಟೇಲ್ ತಂತ್ರಜ್ಞಾನದ ಸಹಾಯದಿಂದ ಸುಮಾರು 32 ಕಿ.ಮೀ ದೂರದಲ್ಲಿರುವ ರೋಗಿಯ ಶಸ್ತ್ರ ಚಿಕಿತ್ಸೆ ನಡೆಸಿದರು. ಅಪೆಕ್ಸ್ ಆಸ್ಪತ್ರೆಯಲ್ಲಿ ಕ್ಯಾಥೆರೈಸೇಶನ್ ಲ್ಯಾಬೊರೇಟರಿಯಲ್ಲಿದ್ದ  ರೋಗಿಯ ಮೇಲೆ ಸ್ವಾಮಿನಾರಾಯಣ ಅಕ್ಷರಾಧಾಮ ದೇವಾಲಯದ ಕೇಂದ್ರದಿಂದ ಡಾ. ತೇಜಸ್ ಪೆರ್ಕ್ಯುಟನಿಯಸ್ ಕೊರೊನರಿ ಇಂಟರ್ವೆನ್ಶನ್ ಶಸ್ತ್ರಚಿಕಿತ್ಸೆ ನೀಡಿದರು.

ಕೆಲ ದಿನಗಳ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದ ವಯಸ್ಸಾದ ಮಹಿಳೆಯು ವೈದ್ಯಕೀಯ ಮೈಲುಗಲ್ಲಿಗೆ ಸಾಕ್ಷಿಯಾಗಲು ಒಪ್ಪಿಕೊಂಡಿದ್ದರು. ಅದರಂತೆ ಪದ್ಮಶ್ರಿ ಪ್ರಶಸ್ತಿ ವಿಜೇತರಾದ ಡಾ. ಪಟೇಲ್ ಶಸ್ತ್ರಚಿಕಿತ್ಸೆ ನಡೆಸಲು ಯುಎಸ್​ ಮೂಲದ ಕೊರಿಂಡಸ್ ತಂತ್ರಜ್ಞಾನವನ್ನು ಸ್ಥಾಪಿಸಿದ್ದರು. ಈ ಮೂಲಕ ರೊಬೊಟಿಕ್ ಸಿಸ್ಟಮ್ ಕಾರ್ಪತ್ ಜಿಎರ್​ಎಕ್ಸ್ ಬಳಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಹೃದಯ ಶಸ್ತ್ರ ಚಿಕಿತ್ಸೆಯಲ್ಲಿ ರೊಬೊಟ್ ಕಾರ್ಯವಿಧಾನವನ್ನು ಪರಿಚಯಿಸುತ್ತಿರುವ ಅಮೆರಿಕ ನಂತರದ ಮೊದಲ ಆಸ್ಪತ್ರೆ ಎಂಬ ಖ್ಯಾತಿ ಅಪೆಕ್ಸ್ ಹಾರ್ಟ್​ ಇನ್ಸ್ಟಿಟ್ಯೂಟ್ ಪಾಲಾಗಿದೆ.

ಇದನ್ನೂ ಓದಿ: 6400 ರೂ. ಬೆಲೆಯ ಔಷಧಿಯನ್ನು ಕೇವಲ 631 ರೂ.ನಲ್ಲಿ ಖರೀದಿಸಿ: ನಿಮ್ಮ ಹತ್ತಿರದ ಮೆಡಿಕಲ್ ಶಾಪ್​ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಈ ಸಿಸ್ಟಂಗಾಗಿ 1.5 ಮಿಲಿಯನ್ ಯುಸ್ಎಸ್ ಡಾಲರ್​ ಖರ್ಚು ಮಾಡಲಾಗಿದ್ದು, ಇಲ್ಲಿಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ ಮೂಲಕ ಶಬ್ದಗಳ ಸಹಾಯದಿಂದ ಕಾರ್ಡಿಯಾಲಜಿಸ್ಟ್ ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ಮಹತ್ವದ ಶಸ್ತ್ರ ಚಿಕಿತ್ಸೆಯಲ್ಲಿ ಡಾ. ಸಂಜಯ್ ಷಾ ಹಾಗೂ ಡಾ. ಪಟೇಲ್ ಪಾಲ್ಗೊಂಡಿದ್ದರು.
ಈ ತಂತ್ರಜ್ಞಾನವನ್ನು ಬಳಸಿ ನಾವು 32 ಕಿ.ಮೀ ದೂರದಿಂದ ಚಿಕಿತ್ಸೆಯನ್ನು ನೀಡಿದ್ದೇವೆ. ಶೀಘ್ರದಲ್ಲೇ ಇದರ ಸಹಾಯದಿಂದ 300 ಅಥವಾ  3 ಸಾವಿರ ಕಿ.ಮೀ ದೂರದಲ್ಲಿರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ ಒದಗಲಿದೆ. ಇದರಿಂದ ರೋಗಿಗಳು ದೂರದ ಆಸ್ಪತ್ರೆಗಳಿಗೆ ಹೋಗುವುದು ತಪ್ಪಲಿದ್ದು, ಮುಂಬರುವ ದಿನಗಳಲ್ಲಿ ಈ ಹೊಸ ತಂತ್ರಜ್ಞಾನದ ಸಹಾಯದಿಂದ ಶಸ್ತ್ರ ಚಿಕಿತ್ಸೆಯನ್ನು ನಾವು ಮುಂದುವರೆಸಲಿದ್ದೇವೆ ಎಂದು ಡಾ.ಪಟೇಲ್ ನ್ಯೂಸ್ 18 ಗೆ ತಿಳಿಸಿದರು.

Loading...

ವೈದ್ಯಕೀಯ ಲೋಕದ ಈ ಐತಿಹಾಸಿಕ ಕ್ಷಣಕ್ಕೆ ಡಾ.ತೇಜಸ್ ಪಟೇಲ್ ಅವರೊಂದಿಗೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ, ಅಕ್ಷರಧಾಮ ದೇವಾಲಯದ ಬ್ರಹ್ಮಚಾರಿ ಸ್ವಾಮಿ, ಈಶ್ವರಚರಣ್ ಸ್ವಾಮಿ ಸಾಕ್ಷಿಯಾದರು.

ಇದನ್ನೂ ಓದಿ: ವಾಟ್ಸ್​ಆ್ಯಪ್​ ಮೇಲೆ ನಿಗಾವಹಿಸಲಿದೆ ಪೊಲೀಸ್ ಇಲಾಖೆ..!

First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ