Jagannath Temple: ಯುಕೆಯ ಮೊದಲ ಜಗನ್ನಾಥ ದೇವಸ್ಥಾನಕ್ಕೆ 250 ಕೋಟಿ ದೇಣಿಗೆ ನೀಡಿದ ಭಾರತೀಯ ಬಿಲಿಯನೇರ್!

ಭಾರತೀಯ ಬಿಲಿಯನೇರ್ ಬಿಸ್ವನಾಥ್ ಪಟ್ನಾಯಕ್

ಭಾರತೀಯ ಬಿಲಿಯನೇರ್ ಬಿಸ್ವನಾಥ್ ಪಟ್ನಾಯಕ್

ಭಾರತೀಯ ಮೂಲದ ಬಿಲಿಯನೇರ್ ಲಂಡನ್​​ನಲ್ಲಿ ಯುಕೆಯ ಮೊದಲ ಜಗನ್ನಾಥ ದೇವಾಲಯದ ನಿರ್ಮಾಣಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 250 ಕೋಟಿ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.

  • Share this:

ಸಾಮಾನ್ಯವಾಗಿ ನಮ್ಮ ದೇಶದವರು ಬೇರೆ ದೇಶಗಳಲ್ಲಿ ನಮ್ಮ ದೇವಸ್ಥಾನಗಳನ್ನು ನಿರ್ಮಾಣ ಮಾಡುತ್ತಿದ್ದರೆ, ಅಲ್ಲಿ ದೇಣಿಗೆ ನೀಡುವುದನ್ನು ನಾವೆಲ್ಲಾ ನೋಡಿರುತ್ತೇವೆ ಮತ್ತು ಅದರ ಬಗ್ಗೆ ಕೇಳಿರುತ್ತೇವೆ ಕೂಡ. ಅದರಲ್ಲೂ ದೊಡ್ಡ ದೊಡ್ಡ ಬಿಸಿನೆಸ್ (Business) ಇರುವವರು ದೊಡ್ಡ ಮೊತ್ತದ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುತ್ತಾರೆ. ಹೀಗೆ ಇಲ್ಲೊಬ್ಬರು ಭಾರತೀಯ (Indian) ಮೂಲದ ಬಿಲಿಯನೇರ್ ಲಂಡನ್​​ನಲ್ಲಿ (London) ಯುಕೆಯ ಮೊದಲ ಜಗನ್ನಾಥ ದೇವಾಲಯದ (Jagannath Temple) ನಿರ್ಮಾಣಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 250 ಕೋಟಿ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.


ಯುಕೆಯಲ್ಲಿ ನಿರ್ಮಾಣವಾಗುತ್ತಿದೆಯಂತೆ ಮೊದಲ ಜಗನ್ನಾಥ ದೇವಸ್ಥಾನ


ಒಡಿಶಾ ಮೂಲದ ಬಿಸ್ವನಾಥ್ ಪಟ್ನಾಯಕ್ ಅವರು ದೇವಾಲಯವನ್ನು ನಿರ್ಮಿಸಲು ಕೆಲಸ ಮಾಡುವ ಬ್ರಿಟಿಷ್ ಚಾರಿಟಿಗೆ ದೊಡ್ಡ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.


ದೇವಾಲಯದ ನಿರ್ಮಾಣ ಕಾರ್ಯದ ಮೊದಲ ಹಂತವು ಮುಂದಿನ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಇದು ವಿದೇಶದಲ್ಲಿ ದೇವಾಲಯಕ್ಕೆ ನೀಡಿದ ಅತಿದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ. ಅಕ್ಷಯ ತೃತೀಯದಂದು ಯುಕೆಯಲ್ಲಿ ನಡೆದ ಮೊದಲ ಜಗನ್ನಾಥ ದೇವಸ್ಥಾನ ಸಮಾವೇಶದಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ಇಂಗ್ಲೆಂಡ್​​ನ ಚಾರಿಟಿ ಕಮಿಷನ್​ನಲ್ಲಿ ನೋಂದಾಯಿಸಲಾದ ಯುಕೆಯ ಶ್ರೀ ಜಗನ್ನಾಥ ಸೊಸೈಟಿ (ಎಸ್‌ಜೆಎಸ್) ತಿಳಿಸಿದೆ.


ಇದನ್ನೂ ಓದಿ: ಭಾರತದ ವಿಚಿತ್ರ, ವಿಶೇಷ, ವಿಶಿಷ್ಟ ಹಳ್ಳಿಗಳಿವು! ಈ ಗ್ರಾಮಗಳ ಕುತೂಹಲಕಾರಿ ಕಥೆ ಇಲ್ಲಿದೆ


ಯುಕೆಯಲ್ಲಿ ಜಗನ್ನಾಥ ದೇವಾಲಯವನ್ನು ಹೊಂದುವ ಕನಸನ್ನು ಸಾಧಿಸುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಕೆಲಸ ಮಾಡುವಂತೆ ಪಟ್ನಾಯಕ್ ಅಲ್ಲಿರುವ ಭಕ್ತ ಸಮುದಾಯವನ್ನು ವಿನಂತಿಸಿಕೊಂಡಿದ್ದಾರೆ ಮತ್ತು ತಮ್ಮ ಕೊಡುಗೆಯಿಂದ ಅನೇಕರನ್ನು ಪ್ರೇರೇಪಿಸಿದ್ದಾರೆ.


ದೇಣಿಗೆ ಹಣವನ್ನು ಮಂದಿರದ ನಿರ್ಮಾಣಕ್ಕೆ ಭೂಮಿ ಖರೀದಿಸುವ ಸಲುವಾಗಿ ಮೀಸಲಿಟ್ಟಿದ್ದಾರಂತೆ


250 ಕೋಟಿ ರೂಪಾಯಿಗಳಲ್ಲಿ 70 ಕೋಟಿ ರೂಪಾಯಿಗಳನ್ನು ಲಂಡನ್ ನ ಶ್ರೀ ಜಗನ್ನಾಥ ಮಂದಿರಕ್ಕಾಗಿ ಸುಮಾರು 15 ಎಕರೆ ಭೂಮಿಯನ್ನು ಖರೀದಿಸಲು ಮೀಸಲಿಡಲಾಗಿದೆ ಎಂದು ವರದಿ ತಿಳಿಸಿದೆ. "ಸೂಕ್ತ ಭೂಮಿಯನ್ನು ಗುರುತಿಸಲಾಗಿದ್ದು, ಪ್ರಸ್ತುತ ಖರೀದಿಯ ಅಂತಿಮ ಹಂತದಲ್ಲಿದೆ ಮತ್ತು ಮಂದಿರ ನಿರ್ಮಾಣಕ್ಕೆ ಅನುಮತಿ ಪಡೆಯಲು ಸ್ಥಳೀಯ ಸರ್ಕಾರಿ ಮಂಡಳಿಗೆ ಪೂರ್ವ ಯೋಜನಾ ಅರ್ಜಿಯನ್ನು ಸಹ ಈಗಾಗಲೇ ಸಲ್ಲಿಸಲಾಗಿದೆ" ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.


ಎಸ್‌ಜೆಎಸ್ ಅಧ್ಯಕ್ಷರಾದ ಡಾ. ಸಹದೇವ್ ಸ್ವೈನ್ ಅವರ ಪ್ರಕಾರ, ಈ ದೇವಾಲಯವು ಯುರೋಪಿನ ಜಗನ್ನಾಥ ಸಂಸ್ಕೃತಿಯ ಸಂಕೇತವಾಗುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಿಶ್ವದಾದ್ಯಂತದ ಸಾವಿರಾರು ಭಕ್ತರು ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯಾತ್ರಾ ಸ್ಥಳವಾಗಲಿದೆಯಂತೆ.


ಮಂದಿರ ನಿರ್ಮಾಣಕ್ಕೆ 250 ಕೋಟಿ ದೇಣಿಗೆ ನೀಡಿದ ಬಿಸ್ವನಾಥ್ ಪಟ್ನಾಯಕ್ ಯಾರು ಗೊತ್ತೇ?


ಬಿಸ್ವನಾಥ್ ಪಟ್ನಾಯಕ್ ಅವರು ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ವಾಹನಗಳು (ಇವಿ), ಹೈಡ್ರೋಜನ್ ಲೋಕೋಮೋಟಿವ್ ಗಳು ಇತ್ಯಾದಿಗಳಲ್ಲಿ ಹಣವನ್ನು ಹೂಡಿಕೆ ಮಾಡುವ ಫಿನ್ನೆಸ್ಟ್ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದಾರೆ.


ಬ್ಯಾಂಕರ್ ಆಗಿದ್ದ ವ್ಯಕ್ತಿ ನಂತರದಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದದ್ದು, ಇವರು ಎಂಬಿಎ, ಎಲ್ಎಲ್‌ಬಿ ಮತ್ತು ಅರ್ಥಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಹಲವಾರು ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ನಂತರ, ಪಟ್ನಾಯಕ್ 2009 ರಲ್ಲಿ ಈ ಉದ್ಯಮಕ್ಕೆ ಕಾಲಿಟ್ಟರಂತೆ.




ಹೆಲ್ತ್‌ಕೇರ್, ಫಿನ್ಟೆಕ್, ನವೀಕರಿಸಬಹುದಾದ ಇಂಧನದಿಂದ ಹಿಡಿದು ದುಬೈನಲ್ಲಿ ಚಿನ್ನದ ಸಂಸ್ಕರಣಾಗಾರ ಮತ್ತು ಬುಲಿಯನ್ ವ್ಯಾಪಾರದವರೆಗೆ ಪಟ್ನಾಯಕ್ ಅವರ ಹೂಡಿಕೆಗಳು ವೈವಿಧ್ಯಮಯ ಪೋರ್ಟ್ಫೋಲಿಯೋದಲ್ಲಿವೆ. ಪಟ್ನಾಯಕ್ ಇತ್ತೀಚೆಗೆ ಒಡಿಶಾದಲ್ಲಿ ಇವಿ-ಹೈಡ್ರೋಜನ್ ಟ್ರಕ್ ಮತ್ತು ಕಮರ್ಷಿಯಲ್ ಹೆವಿ ವೆಹಿಕಲ್ ಉತ್ಪಾದನಾ ಘಟಕದಲ್ಲಿ 500 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುವ ಯೋಜನೆಯನ್ನು ಸಹ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಪಟ್ನಾಯಕ್ ಅವರು ಫೋರ್ಬ್ಸ್ ನಿಯತಕಾಲಿಕದ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾರೆ.

First published: