ಬ್ಯಾಕಿಂಗ್​​ ವ್ಯವಸ್ಥೆ ಸುರಕ್ಷಿತ, ಯಾವುದೇ ಭಯ ಬೇಡ: ಗ್ರಾಹಕರಿಗೆ ಆರ್​​ಬಿಐ ಸ್ಪಷ್ಟನೆ

ಪಿಎಂಸಿ ದೇಶದ ಆರು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದ್ದು, ಯಾವುದೇ ಶಾಖೆಯಲ್ಲೂ ಸಾಲ ಮಂಜೂರು ಅಥವಾ ಸಾಲ ನವೀಕರಣಕ್ಕೆ ಅವಕಾಶ ಇಲ್ಲದಂತಾಗಿತ್ತು.

news18-kannada
Updated:October 1, 2019, 8:36 PM IST
ಬ್ಯಾಕಿಂಗ್​​ ವ್ಯವಸ್ಥೆ ಸುರಕ್ಷಿತ, ಯಾವುದೇ ಭಯ ಬೇಡ: ಗ್ರಾಹಕರಿಗೆ ಆರ್​​ಬಿಐ ಸ್ಪಷ್ಟನೆ
ಪಿಎಂಸಿ ಬ್ಯಾಂಕ್​ ಮುಂದೆ ಜಮಾಯಿಸಿರುವ ಗ್ರಾಹಕರು
  • Share this:
ನವದೆಹಲಿ(ಅ.01): ಭಾರತದ ಬ್ಯಾಂಕಿಂಗ್ ವ್ಯವಸ್ಥೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭಾರತೀಯ ರಿಸರ್ವ್​​​ ಬ್ಯಾಂಕ್​​​ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಬ್ಯಾಂಕಿಗ್​​ ವ್ಯವಸ್ಥೆ ಸ್ಥಿರವಾಗಿದೆ. ಹಾಗಾಗಿ​ ಗ್ರಾಹಕರು ಆಂತಕಕ್ಕೀಡಾಗುವ ಅಗತ್ಯವಿಲ್ಲ ಎಂದು ಆರ್​​ಬಿಐ ಟ್ವೀಟ್​​ ಮೂಲಕ ತಿಳಿಸಿದೆ.

ಸಹಕಾರಿ ಬ್ಯಾಂಕ್​​ ಸೇರಿದಂತೆ ಕೆಲವು ಬ್ಯಾಂಕ್​​ಗಳ ಗ್ರಾಹಕರ ಖಾತೆಗಳ ಮೇಲೆ ಆರ್​​​ಬಿಐ ನಿರ್ಬಂಧ ಹೇರಲಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈಗಾಗಲೇ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​​ಗಳಲ್ಲಿ ಗ್ರಾಹಕರ ಖಾತೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಹಾಗೆಯೇ ಇಡೀ ದೇಶದ ಎಲ್ಲೆಡೆಯೂ ಬ್ಯಾಂಕ್​​ ಖಾತೆಗಳ ಮೇಲೆ ನಿರ್ಬಂಧ ಹೇರಲಿದ್ದಾರೆ ಎಂದು ಹೇಳಲಾಗಿತ್ತು.

ಇತ್ತೀಚೆಗೆ ಆರ್​​ಬಿಐ ಸಂಸ್ಥೆಯೂ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್​​ಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಆದ್ದರಿಂದ ಗ್ರಾಹಕರು ಆರು ತಿಂಗಳುಗಳ ಕಾಲ 10 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಸಾಧ್ಯವಾಗಿರಲಿಲ್ಲ.

ಇನ್ನು ಈ ಎಲ್ಲಾ ನಿರ್ಬಂಧಗಳ ನಡುವೆಯೂ ಸಹಕಾರಿ ಬ್ಯಾಂಕ್, ಆರ್​​ಬಿಐ ಮುಂದಿನ ಆದೇಶದವರೆಗೆ ತನ್ನ ದೈನಂದಿನ ವ್ಯವಹಾರ ಮುಂದುವರೆಸಬೇಕು ಎನ್ನಲಾಗಿತ್ತು. ಪಿಎಂಸಿ ದೇಶದ ಆರು ರಾಜ್ಯಗಳಲ್ಲಿ 137 ಶಾಖೆಗಳನ್ನು ಹೊಂದಿದ್ದು, ಯಾವುದೇ ಶಾಖೆಯಲ್ಲೂ ಸಾಲ ಮಂಜೂರು ಅಥವಾ ಸಾಲ ನವೀಕರಣಕ್ಕೆ ಅವಕಾಶ ಇಲ್ಲದಂತಾಗಿತ್ತು.

ಇದನ್ನೂ ಓದಿ: 19 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದ ಜಿಎಸ್​ಟಿ; ಸೆಪ್ಟೆಂಬರ್​ನಲ್ಲಿ 91,916 ಕೋಟಿ ರೂ.ಸಂಗ್ರಹ

ಮುಂಬೈ ಮೂಲದ ಈ ಸಹಕಾರಿ ಬ್ಯಾಂಕ್ ಹಣವನ್ನು ಎರವಲು ಪಡೆಯುವುದು ಮತ್ತು ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿದಂತೆ ಯಾವುದೇ ಹೊಣೆಗಾರಿಕೆಯನ್ನು ಹೊಂದುವಂತಿಲ್ಲ. ಸಹಕಾರಿ ಬ್ಯಾಂಕ್ ತನ್ನ ಯಾವುದೇ ಆಸ್ತಿ ಅಥವಾ ಸ್ವತ್ತುಗಳನ್ನು ವರ್ಗಾಯಿಸುವಂತಿಲ್ಲ ಮತ್ತು ಮಾರಾಟ ಮಾಡುವಂತಿಲ್ಲ. ಆರ್​​ಬಿಐ ನಿರ್ದೇಶನದ ಪ್ರತಿಯನ್ನು ಪ್ರತಿ ಖಾತೆದಾರನಿಗೂ ಕುಳುಹಿಸಬೇಕು ಮತ್ತು ಅದನ್ನು ಬ್ಯಾಂಕ್ ಮತ್ತು ಬ್ಯಾಂಕ್ ವೆಬ್ ಸೈಟ್ ನಲ್ಲೂ ಪ್ರದರ್ಶಿಸಬೇಕು ಎಂದು ಆದೇಶಿಸಲಾಗಿತ್ತು.
-----------
First published: October 1, 2019, 8:32 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading