Indian Army recruitment: ಭಾರತೀಯ ಸೇನೆಯ ಮಿಲಿಟರಿ ಪೊಲೀಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರಲಿದ್ದು, ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ಪರೀಕ್ಷೆ (CEE)ಯನ್ನು ಬರೆಯಬೇಕಾಗುತ್ತದೆ.

zahir | news18
Updated:April 25, 2019, 3:08 PM IST
Indian Army recruitment: ಭಾರತೀಯ ಸೇನೆಯ ಮಿಲಿಟರಿ ಪೊಲೀಸ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
@dnaindia.com
zahir | news18
Updated: April 25, 2019, 3:08 PM IST
ಭಾರತೀಯ ಸೇನಾ ವಿಭಾಗದ ಮಿಲಿಟರಿ ಪೊಲೀಸ್ ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ. ಈ ಬಾರಿ ನೇಮಕಾತಿಯಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಿದ್ದು, ಪೊಲೀಸ್ ಹಾಗೂ ಜನರಲ್ ಡ್ಯೂಟಿ ಹುದ್ದೆಗಳಿಗೆ ನೇಮಕ ನಡೆಯಲಿದೆ. ಈ ಹುದ್ದೆಗಳ ಅರ್ಜಿ ಪ್ರಕ್ರಿಯೆಯು ಆರಂಭವಾಗಿದ್ದು, ಸೇನೆಯ ಅಧಿಕೃತ ವೆಬ್​ಸೈಟ್ indianarmy.nic.in. ಭೇಟಿ ನೀಡುವ ಮೂಲಕ ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಸಬಹುದು.

ಆನ್​ಲೈನ್ ಅಪ್ಲಿಕೇಶನ್ ಇದೇ ಮೊದಲ ಬಾರಿ
ಮಹಿಳಾ ಮಿಲಿಟರಿ ಪೊಲೀಸ್ ನೇಮಕಾತಿಯ ಅರ್ಜಿ ಆಹ್ವಾನವನ್ನು ಇದೇ ಮೊದಲ ಬಾರಿ ಆನ್​ಲೈನ್ ಮೂಲಕ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆ ಆಫ್​ಲೈನ್​ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿತ್ತು. ಈ ಬಾರಿ ಆನ್​ಲೈನ್​ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಆಸಕ್ತರು ವೆಬ್​ಸೈಟ್​ ಮೂಲಕ ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ.ಆಯ್ಕೆ ಪ್ರಕ್ರಿಯೆ ಹೇಗೆ?
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರಲಿದ್ದು, ಅಭ್ಯರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ  (CEE)ಯನ್ನು ಬರೆಯಬೇಕಾಗುತ್ತದೆ. ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ದೈಹಿಕ ಪರೀಕ್ಷೆ (PET)ಯಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.
Loading...

ವಿದ್ಯಾರ್ಹತೆ ಮತ್ತು ವಯಸ್ಸು
ಶಿಕ್ಷಣ: ಕನಿಷ್ಠ 45% ಅಂಕಗಳೊಂದಿಗೆ 10 ನೇ ತರಗತಿ ಉತೀರ್ಣರಾಗಿರಬೇಕು. ಹಾಗೆಯೇ ಪ್ರತಿ ವಿಷಯದಲ್ಲೂ ಕನಿಷ್ಠ ಶೇ.33 ರಷ್ಟು ಅಂಕಗಳನ್ನು ಗಳಿಸಿರಬೇಕು.
ವಯಸ್ಸು: ಕನಿಷ್ಟ 17 ಮತ್ತು ಗರಿಷ್ಠ 21 ವರ್ಷದ ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ದೈಹಿಕ ಮಾನದಂಡ:
ಅಭ್ಯರ್ಥಿಗಳು ಎತ್ತರ ಕನಿಷ್ಠ 142 ಸೆಂ.ಮೀ ಇರಬೇಕು. ಹಾಗೆಯೇ ಅದಕ್ಕನುಗುಣವಾಗಿ ದೇಹದಾರ್ಢ್ಯವನ್ನು ಹೊಂದಿರಬೇಕು.

ಬೇಕಾದ ಅಗತ್ಯ ದಾಖಲೆಗಳು:
ಫೋಟೋ
ಅಡ್ಮಿಟ್ ಕಾರ್ಡ್
ಶೈಕ್ಷಣಿಕ ದಾಖಲೆಗಳು
NCC ಪ್ರಮಾಣಪತ್ರ
ನಿವಾಸ ಪ್ರಮಾಣಪತ್ರ
ಜಾತಿ ಪ್ರಮಾಣಪತ್ರ
ನಡತೆ ಪ್ರಮಾಣಪತ್ರ
ವರ್ಗ / ಜಾತಿ ಪ್ರಮಾಣಪತ್ರ
ಶಾಲಾ ನಡತೆ ಪ್ರಮಾಣಪತ್ರ

ಅರ್ಜಿ ಸಲ್ಲಿಸುವುದು ಹೇಗೆ?
ಮಹಿಳಾ ಮಿಲಟರಿ ಪೊಲೀಸ್ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು joinindianarmy.gov.in ವೆಬ್​ಸೈಟ್​ ತೆರಳಿ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲಿಗೆ ನಿಮ್ಮ ಖಾತೆಯನ್ನು ರಿಜಿಸ್ಟರ್ ಮಾಡಿ ಬಳಿಕ ಅಪ್ಲಿಕೇಶನ್ ತುಂಬಿಸಬೇಕಾಗುತ್ತದೆ. ಅರ್ಜಿ ಪ್ರಕ್ರಿಯೆಯು ಏಪ್ರಿಲ್ 25 ರಿಂದ ಆರಂಭವಾಗಿದ್ದು, ಜೂನ್​ 8 ರವರೆಗೆ ಅಪ್ಲಿಕೇಶನ್ ಸಲ್ಲಿಸಬಹುದು.
First published:April 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...