ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು (Army Day) ಆಚರಿಸಲಾಗುತ್ತದೆ. ಭಾರತದ ಮೊದಲ ಕಮಾಂಡರ್-ಇನ್-ಚೀಫ್, ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ (KM Cariappa) ಅವರಿಗೆ ಗೌರವ ಸಲ್ಲಿಸುವ ಸಂದರ್ಭದಲ್ಲಿ ಭಾರತೀಯ ಸೈನಿಕರ ಶೌರ್ಯ, ತ್ಯಾಗ ಹಾಗೂ ನಿಸ್ವಾರ್ಥ ಸೇವೆಯನ್ನು ಈ ದಿನ ಗುರುತಿಸಲಾಗುತ್ತದೆ. ಈ ವರ್ಷ 75 ನೇ ಭಾರತೀಯ ಸೇನಾ ದಿನಾಚರಣೆಯನ್ನು ಬೆಂಗಳೂರಿನಲ್ಲಿ (Bengaluru) ಆಚರಿಸಲಾಗುತ್ತಿದೆ ಹಾಗೂ ಇದೇ ಮೊದಲ ಬಾರಿಗೆ ದೇಶದ ರಾಜಧಾನಿ ದೆಹಲಿಯ (Delhi) ಹೊರಗೆ ಪರೇಡ್ ಅನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ (Chief of Army Staff of the Indian Army) ಮನೋಜ್ ಪಾಂಡೆ (Manoj Pande) ಭಾಗವಹಿಸಲಿದ್ದಾರೆ.
ಕರ್ನಾಟಕದಲ್ಲಿ ಮೊದಲ ಬಾರಿಗೆ ಸೇನಾ ದಿನ ಆಚರಣೆ
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಕಾರ್ಯಕಮವನ್ನು ಆಯೋಜಿಸಲಾಗುತ್ತಿದೆ. ಮೊದಲ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಕೆ ಎಂ ಕಾರಿಯಪ್ಪ ಅವರು 1949 ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್-ಇನ್-ಚೀಫ್ ಜನರಲ್ ಸರ್ ಫ್ರಾನ್ಸಿಸ್ ರಾಯ್ ಬೌಚರ್ ಅವರಿಂದ ಭಾರತೀಯ ಸೇನೆಯ ಅಧಿಪತ್ಯವನ್ನು ಪಡೆದರು. ಅದೇ ರೀತಿ ಜನರಲ್ ಕಾರಿಯಪ್ಪ ಭಾರತದ ಮೊದಲ ಕಮಾಂಡರ್-ಇನ್-ಚೀಫ್ ಹುದ್ದೆಯನ್ನಲಂಕರಿಸಿದರು.
ಇದನ್ನೂ ಓದಿ: Joshimath: ಉತ್ತರಾಖಂಡದಲ್ಲಿ ಜೋಶಿಮಠ ಮಾತ್ರವಲ್ಲ, ಈ ಪಟ್ಟಣಗಳೂ ಅಪಾಯದಲ್ಲಿವೆ!
ಹಾಗಾಗಿ ದೆಹಲಿಯಿಂದ ಹೊರಗೆ ಈ ಮಹೋನ್ನತ ಕಾರ್ಯಕ್ರಮವನ್ನು ಆಯೋಜಿಸಿದ ರಾಜ್ಯವಾಗಿ ಕೂಡ ಕರ್ನಾಟಕ ಕೀರ್ತಿ ಗಳಿಸಿದೆ ಎಂಬುದಾಗಿ ಸ್ವಾತಂತ್ರ್ಯ, ಪರೇಡ್ ಕಮಾಂಡರ್ ಮೇಜರ್ ಜನರಲ್ ರವಿ ಮುರುಗನ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಭಾರತೀಯ ಸೇನಾ ದಿನ 2023: ಕಾರ್ಯಕ್ರಮಗಳ ವಿವರ
ಮದ್ರಾಸ್ ಇಂಜಿನಿಯರಿಂಗ್ ಯುದ್ಧ ಸ್ಮಾರಕದಲ್ಲಿ ಮೇಜರ್ ಜನರಲ್ ಪಾಂಡೆ ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಹೂವಿನ ಹಾರವನ್ನು ಇರಿಸಿ ಗೌರವ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಾರೆ ಎಂದು ಮೇಜರ್ ಜನರಲ್ ಮುರುಗನ್ ತಿಳಿಸಿದ್ದಾರೆ.
ಮೆರವಣಿಗೆಯು ಆರ್ಮಿ ಸರ್ವಿಸ್ ಕಾರ್ಪ್ಸ್ ಮತ್ತು 5 ರೆಜಿಮೆಂಟಲ್ ಬ್ಯಾಂಡ್ಗಳನ್ನು ಒಳಗೊಂಡಿರುವ ಮಿಲಿಟರಿ ಬ್ಯಾಂಡ್ ಸೇರಿದಂತೆ 8 ಭೂಖಂಡಗಳಿಗೆ ಸಾಕ್ಷಿಯಾಗಲಿದೆ. ಮೆರವಣಿಗೆಗೆ ಸೇನಾ ವಾಯುಯಾನ ಧ್ರುವ್ ಮತ್ತು ರುದ್ರ ಹೆಲಿಕಾಪ್ಟರ್ಗಳು ಸಾಥ್ ನೀಡುತ್ತವೆ ಎಂದು ಮುರುಗನ್ ತಿಳಿಸಿದ್ದಾರೆ.
ಶಸ್ತ್ರಾಸ್ತ್ರ ಪ್ರದರ್ಶನ
ಸೇನೆಯ ಸಂಗ್ರಹದಲ್ಲಿರುವ ವಿವಿಧ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಈ ಸಮಯದಲ್ಲಿ ಪ್ರದರ್ಶಿಸಲಾಗುವುದು ಎಂದು ತಿಳಿಸಿರುವ ಮುರುಗನ್, ಕೆ9 ವಜ್ರ ಸ್ವಯಂ ಚಾಲಿತ ಬಂದೂಕುಗಳು, ಪಿನಾಕಾ ರಾಕೆಟ್ಗಳು, ಟಿ-90 ಟ್ಯಾಂಕ್ಗಳು, ಬಿಎಂಪಿ-2 ಪದಾತಿದಳದ ಯುದ್ಧ ವಾಹನ, ತುಂಗುಸ್ಕಾ ವಾಯು ರಕ್ಷಣಾ ವ್ಯವಸ್ಥೆ, 155 ಎಂಎಂ ಬೋಫೋರ್ಸ್ ಗನ್ಗಳು, ಲಘು ದಾಳಿ ವಾಹನಗಳು, ಸ್ವಾತಿ ರಾಡಾರ್ ಮತ್ತು ವಿವಿಧ ಆಕ್ರಮಣ ಆಯುಧಗಳು ಸೇರಿವೆ ಎಂದು ಮೇಜರ್ ರವಿ ಮುರುಗನ್ ಮಾಹಿತಿ ನೀಡಿದ್ದಾರೆ.
ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಗೆ ಆಹ್ವಾನ
ಕಾರ್ಯಕ್ರಮಕ್ಕೆ ಶಾಲೆಗಳು, ಕಾಲೇಜುಗಳ ವಿದ್ಯಾರ್ಥಿಗಳು, ಎನ್ಸಿಸಿ ಕೆಡೆಟ್ಗಳು ಮತ್ತು ಅನಾಥಾಶ್ರಮಗಳ ಮಕ್ಕಳನ್ನು ಸಹ ಆಹ್ವಾನಿಸಿರುವುದಾಗಿ ರವಿ ತಿಳಿಸಿದ್ದಾರೆ. ಇಲ್ಲಿಯವರೆಗೆ 8,000 ಕ್ಕೂ ಹೆಚ್ಚು ನಾಗರಿಕರು ಪ್ರಿ-ಈವೆಂಟ್ ಸಮಯದಲ್ಲಿ ಪೆರೇಡ್ ವೀಕ್ಷಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
Army Day Parade, 2023🇮🇳
Bengaluru !
Signifies formal taking over of Indian Army by 1st Indian Commander-in-Chief, Field Marshal KM Cariappa on 15th January, 1949
Choice of Bengaluru is apt tribute to Field Marshal hailing from Karnataka & valour/sacrifices of people from South pic.twitter.com/YcRt27AnRD
— Major Pradeep Shoury Arya., I.R.S. SHAURYA CHAKRA (@ShouryArya) January 14, 2023
ಸ್ವತಂತ್ರ ಭಾರತದ ಮೊದಲ ಕಮಾಂಡರ್-ಇನ್-ಚೀಫ್ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಅವರನ್ನು ಗುರುತಿಸಿ ಪ್ರತಿ ವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ಸೈನಿಕರಿಗೆ ಅರ್ಪಿಸಲಾಗಿದೆ ಎಂದು ರವಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮುಂದಿನ ಸಂಕ್ರಾಂತಿ ವೇಳೆಗೆ ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ! ಎಲ್ಲಿವರೆಗೆ ಬಂತು ರಾಮಮೂರ್ತಿಯ ಕೆತ್ತನೆ ಕಾರ್ಯ?
ಮೂಲತಃ ಬ್ರಿಟಿಷ್ ಇಂಡಿಯನ್ ಆರ್ಮಿ ಎಂದು ಕರೆಯಲ್ಪಡುವ ಭಾರತೀಯ ಸೇನೆಯು ಭಾರತೀಯ ಸ್ವಾತಂತ್ರವನ್ನು ಪಡೆದ ನಂತರ ರಾಷ್ಟ್ರೀಯ ಸೇನೆಯಾಗಿ ವಿಕಸನಗೊಂಡಿತು.
ದೇಶಕ್ಕಾಗಿ ನಿಸ್ವಾರ್ಥ ಸೇವೆ, ರಾಷ್ಟ್ರದ ಮೇಲಿನ ಪ್ರೀತಿ ಹಾಗೂ ಸಹೋದರತ್ವಕ್ಕೆ ಉತ್ತಮ ಉದಾಹರಣೆಯಾಗಿರುವ ಭಾರತದ ಸೈನಿಕರ ಸಾಧನೆಗಳನ್ನು ಈ ದಿನ ಸ್ಮರಿಸಲಾಗುತ್ತದೆ ಹಾಗೂ ಅವರಿಗೆ ಗೌರವ ನೀಡಲಾಗುತ್ತದೆ.
ಭಾರತೀಯ ಸೇನಾ ದಿನ 2023: ಸ್ಫೂರ್ತಿದಾಯಕ ವೀರ ಸೇನಾನಿಗಳ ಘೋಷವಾಕ್ಯಗಳು
ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಹಿಂತಿರುಗುತ್ತೇನೆ ಇಲ್ಲದಿದ್ದರೆ ಅದರಲ್ಲಿಯೇ ಸುತ್ತಿಕೊಂಡು ಮರಳುತ್ತೇನೆ, ಆದರೆ ಖಂಡಿತ ನಾನು ಮರಳುತ್ತೇನೆ: ಕ್ಯಾಪ್ಟನ್ ವಿಕ್ರಮ್ ಭಾತ್ರಾ
ಶತ್ರುಗಳು ನಮ್ಮಿಂದ ಕೇವಲ 50 ಗಜಗಳಷ್ಟು ದೂರದಲ್ಲಿದ್ದಾರೆ. ನಮ್ಮ ಸೈನಿಕ ಬಲವೂ ಹೆಚ್ಚಿದೆ. ಕೊನೆಯ ಸುತ್ತು ಹಾಗೂ ಕೊನೆಯ ಸೈನಿಕನವರೆಗೆ ನಾವು ಹೋರಾಡುತ್ತೇವೆ ಹಿಂದಕ್ಕೆ ಅಡಿ ಇಡುವ ಪ್ರಶ್ನೆ ಇಲ್ಲ: ಮೇಜರ್ ಸೋಮನಾಥ್ ಶರ್ಮ
ಲಿಖಿತ ಆದೇಶಗಳಿಲ್ಲದೆ ಹಿಂದಕ್ಕೆ ಬರುವ ಪ್ರಶ್ನೆ ಇಲ್ಲ ಹಾಗೂ ಇಂತಹ ಆದೇಶಗಳನ್ನು ಎಂದಿಗೂ ನೀಡಲಾಗುವುದಿಲ್ಲ: ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ
ಉತ್ತಮ ಸ್ನೇಹಿತರು ಮತ್ತು ಅತ್ಯಂತ ಕೆಟ್ಟ ಶತ್ರುಗಳು ಮಾತ್ರ ನಮ್ಮನ್ನು ಭೇಟಿ ಮಾಡುತ್ತಾರೆ: ಭಾರತೀಯ ಸೇನೆ
ಒಬ್ಬ ವ್ಯಕ್ತಿ ಸಾವಿಗೆ ಭಯಪಡುವುದಿಲ್ಲ ಎಂದು ಹೇಳಿದರೆ ಒಂದಾ ಆತ ಸುಳ್ಳು ಹೇಳುತ್ತಿದ್ದಾನೆ ಅಥವಾ ಆತನೊಬ್ಬ ಸೈನಿಕನಾಗಿರುತ್ತಾನೆ: ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೆಕ್ಷಾ
ಜಯಶಾಲಿಯಾಗಲು ನಾವು ಹೋರಾಡುತ್ತೇವೆ ಹಾಗೂ ಮುಕ್ತಾಯದೊಂದಿಗೆ ವಿಜಯಿಗಳಾಗಲು ಬಯಸುತ್ತೇವೆ ಏಕೆಂದರೆ ಯುದ್ಧದಲ್ಲಿ ರನ್ನರ್ ಅಪ್ಗಳಿಲ್ಲ: ಜನರಲ್ ಜೆಜೆ ಸಿಂಗ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ