ಹಿಮದಲ್ಲಿ ಹೂತುಹೋಗಿದ್ದವನ ರಕ್ಷಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್

Indian Army Viral Video: ಜಮ್ಮು ಕಾಶ್ಮೀರದಲ್ಲಿ ಕೆಲ ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ. ಈ ಹಿಮಪಾತದಲ್ಲಿ ಸಿಲುಕಿದ್ದ ತರೀಖ್ ಇಕ್ಬಾಲ್ ಎಂಬ ವ್ಯಕ್ತಿ ಹಿಮದಲ್ಲೇ ಮುಚ್ಚಿಹೋಗಿದ್ದ. ಲಚ್ಚೀಪುರದ ಬಳಿ ಹಿಮದಲ್ಲಿ ಸಿಲುಕಿದ್ದ ಆತನ ಮೇಲೆ ಮುಚ್ಚಿಕೊಂಡಿದ್ದ ಹಿಮವನ್ನು ತೆಗೆದು ರಕ್ಷಿಸಿರುವ ಸೈನಿಕರ ವಿಡಿಯೋ ವೈರಲ್ ಆಗಿದೆ.

Sushma Chakre | news18-kannada
Updated:January 16, 2020, 10:24 AM IST
ಹಿಮದಲ್ಲಿ ಹೂತುಹೋಗಿದ್ದವನ ರಕ್ಷಿಸಿದ ಭಾರತೀಯ ಯೋಧರು; ವಿಡಿಯೋ ವೈರಲ್
ಹಿಮದಲ್ಲಿ ಸಿಲುಕಿದವನನ್ನು ರಕ್ಷಿಸಿದ ಸೈನಿಕರು
  • Share this:
ಗಡಿಯಲ್ಲಿ ನಿಂತು ದೇಶ ಕಾಯುವ ಸೈನಿಕರು ಯಾವುದೇ ಸ್ಥಳದಲ್ಲಿ ಯಾರಿಗೇ ಸಮಸ್ಯೆಯಾದರೂ ಅಲ್ಲಿಗೆ ಧಾವಿಸಿ ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ಹಿಮದಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ಹೆಗಲಲ್ಲಿ ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಸೈನಿಕರ ವಿಡಿಯೋ ವೈರಲ್ ಆಗಿತ್ತು. ಇದೇರೀತಿ, ಇನ್ನೊಂದು ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಹಿಮದಲ್ಲಿ ಮುಚ್ಚಿಹೋಗಿದ್ದ ವ್ಯಕ್ತಿಯೊಬ್ಬನನ್ನು ಕಾಪಾಡುವ ಮೂಲಕ ಯೋಧರು ಮಾನವೀಯತೆ ಮೆರೆದಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಕೆಲ ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ. ಈ ಹಿಮಪಾತದಲ್ಲಿ ಸಿಲುಕಿದ್ದ ತರೀಖ್ ಇಕ್ಬಾಲ್ ಎಂಬ ವ್ಯಕ್ತಿ ಹಿಮದಲ್ಲೇ ಮುಚ್ಚಿಹೋಗಿದ್ದ. ಲಚ್ಚೀಪುರದ ಬಳಿ ಹಿಮದಲ್ಲಿ ಸಿಲುಕಿದ್ದ ಆತನ ಮೇಲೆ ಮುಚ್ಚಿಕೊಂಡಿದ್ದ ಹಿಮವನ್ನು ತೆಗೆದು ರಕ್ಷಿಸಿರುವ ಸೈನಿಕರ ವಿಡಿಯೋ ವೈರಲ್ ಆಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ನಿನ್ನೆಯಷ್ಟೇ ಹಿಮಪಾತದ ನಡುವೆ ತುಂಬು ಗರ್ಭಿಣಿ ಶಮೀಮಾ ಎಂಬ ಮಹಿಳೆ ಸಿಕ್ಕಿಹಾಕಿಕೊಂಡಿದ್ದರು. ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ನಿರ್ಧರಿಸಿದ ಯೋಧರು ಆಕೆಯನ್ನು ಸ್ಟ್ರೆಚರ್​ನಲ್ಲಿ ಮಲಗಿಸಿಕೊಂಡು ಹಿಮದಲ್ಲಿ ಸಾಗಿ ಆಸ್ಪತ್ರೆಗೆ ಸೇರಿಸಿದ್ದರು. ಹಿಮದಲ್ಲಿ ಕಾಲು ಹುಗಿದು ನಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲೂ ಸುಮಾರು 4 ಗಂಟೆಗಳ ಕಾಲ ಹಿಮದಲ್ಲಿ ಗರ್ಭಿಣಿಯನ್ನು ಹೊತ್ತುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರು. ಅದಾದ ಕೆಲವೇ ನಿಮಿಷಗಳಲ್ಲಿ ಶಮೀಮಾಗೆ ಹೆರಿಗೆಯಾಗಿತ್ತು.

Our Army is known for its valour and professionalism. It is also respected for its humanitarian spirit. Whenever people have needed help, our Army has risen to the occasion and done everything possible!


Proud of our Army.

I pray for the good health of Shamima and her child. https://t.co/Lvetnbe7fQ

— Narendra Modi (@narendramodi) January 15, 2020ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, 'ನಮ್ಮ ದೇಶದ ಸೈನಿಕರು ತಮ್ಮ ವೃತ್ತಿಪರತೆ ಮತ್ತು ಸೇವಾ ಮನೋಭಾವಕ್ಕೆ ಹೆಸರಾದವರು. ಕೇವಲ ಗಡಿ ಕಾಯುವಲ್ಲಿ ಮಾತ್ರವಲ್ಲ ಮಾನವೀಯತೆ ವಿಚಾರದಲ್ಲೂ ನಮ್ಮ ಸೈನಿಕರನ್ನು ನಾವು ಗೌರವಿಸಲೇಬೇಕು. ಯಾರಿಗೆ, ಯಾವಾಗ ಸಹಾಯ ಬೇಕೆಂದರೂ ಅಲ್ಲಿಗೆ ಧಾವಿಸುವ ಸೈನಿಕರು ತಮ್ಮ ಕೈಲಾದ ಸಹಾಯ ಮಾಡುತ್ತಾರೆ. ನಮ್ಮ ಸೈನಿಕರ ಈ ಕಾರ್ಯವನ್ನು ನೋಡಿ ಹೆಮ್ಮೆಯೆನಿಸುತ್ತಿದೆ. ಸೈನಿಕರ ಸಮಯಪ್ರಜ್ಞೆಯಿಂದ ಯಾವುದೇ ಸಮಸ್ಯೆಯಿಲ್ಲದೆ ಮಗುವಿಗೆ ಜನ್ಮ ನೀಡಿರುವ ಶಮೀಮಾ ಮತ್ತು ಆಕೆಯ ಮಗುವಿಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್ ಮಾಡಿದ್ದರು.
Published by: Sushma Chakre
First published: January 16, 2020, 10:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading