ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ; ಗಡಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮ

ಜೂನ್​ 5ರಿಂದ ಇದುವರೆಗೂ ಎಲ್​ಓಸಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈ ಮೂಲಕ ಭಾರತದ ನಾಲ್ವರು ಯೋಧರು ಸಾವನ್ನಪ್ಪಿದಂತಾಗಿದೆ. ಗುಂಡಿನ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಹವಿಲ್ದಾರ್ ದೀಪಕ್ ಕರ್ಕಿ ನಂತರ ಸಾವನ್ನಪ್ಪಿದ್ದಾರೆ.

news18-kannada
Updated:June 22, 2020, 2:18 PM IST
ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ; ಗಡಿಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಜೂ. 22): ಲಡಾಖ್​ನಲ್ಲಿ ಚೀನಾ ಸೈನಿಕರ ಜೊತೆಗಿನ ಸಂಘರ್ಷದಲ್ಲಿ 10 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದರ ನಡುವೆ ಇಂದು ಜಮ್ಮು ಕಾಶ್ಮೀರದ ರಾಜೌರಿಯ ಎಲ್​ಓಸಿಯಲ್ಲಿ ಪಾಕಿಸ್ತಾನ ಕೂಡ ಉದ್ಧಟತನ ಪ್ರದರ್ಶಿಸಿದ್ದು, ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದೆ. ಈ ಘಟನೆಯಲ್ಲಿ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದಾರೆ.

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ ಮಾಡಿ ಪಾಕಿಸ್ತಾನ ಗಡಿ ನಿಯಂತ್ರಣಾ ರೇಖೆ (ಎಲ್​ಓಸಿ) ಬಳಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಜಮ್ಮು ಕಾಶ್ಮೀರದ ನೌಶೇರಾ ವಲಯದಲ್ಲಿ ಗುಂಡಿನ ದಾಳಿ ನಡೆದಿದ್ದು, ಭಾರತೀಯ ಸೈನಿಕ ಹುತಾತ್ಮರಾಗಿದ್ದಾರೆ. ಜೂನ್​ 5ರಿಂದ ಇದುವರೆಗೂ ಎಲ್​ಓಸಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಈ ಮೂಲಕ ಭಾರತದ ನಾಲ್ವರು ಯೋಧರು ಸಾವನ್ನಪ್ಪಿದಂತಾಗಿದೆ. ಗುಂಡಿನ ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಹವಿಲ್ದಾರ್ ದೀಪಕ್ ಕರ್ಕಿ ನಂತರ ಸಾವನ್ನಪ್ಪಿದ್ದಾರೆ.

Indian Army Soldier Havildar Dipak Karki Died in ceasefire violation by Pakistan at LOC Jammu Kashmir.
ಹುತಾತ್ಮ ಯೋಧ ಹವಿಲ್ದಾರ್ ದೀಪಕ್ ಕರ್ಕಿ


ಇದನ್ನೂ ಓದಿ: ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ


ಈ ಬಗ್ಗೆ ಭಾರತೀಯ ರಕ್ಷಣಾ ಇಲಾಖೆಯ ವಕ್ತಾರ ಮಾಹಿತಿ ನೀಡಿದ್ದು, ಪಾಕಿಸ್ತಾನ ಗಡಿ ನಿಯಮವನ್ನು ಉಲ್ಲಂಘನೆ ಮಾಡಿ, ಗುಂಡಿನ ದಾಳಿ ನಡೆಸಿದೆ. ಪೂಂಚ್, ರಾಜೌರಿ ಮುಂತಾದ ಕಡೆಗಳಲ್ಲಿ ಸೋಮವಾರ ಬೆಳಗ್ಗೆ ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಹವಿಲ್ದಾರ್ ದೀಪಕ್ ಕಾರ್ಕಿ ಎಂಬ ಭಾರತೀಯ ಯೋಧ ಸಾವನ್ನಪ್ಪಿದ್ದಾರೆ. ಅವರು ಬಹಳ ಧೈರ್ಯಶಾಲಿ, ಪ್ರಾಮಾಣಿಕ ಸೈನಿಕರಾಗಿದ್ದರು. ಅವರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.

 
First published: June 22, 2020, 2:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading