• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ISRO: ಸ್ವಂತ ಉಪಗ್ರಹ ಪಡೆಯಲು ಭಾರತೀಯ ಸೇನೆ ನಿರ್ಧಾರ: ಇಸ್ರೋ ಜೊತೆ ₹3000 ಕೋಟಿಯ ಒಪ್ಪಂದಕ್ಕೆ ಸಹಿ

ISRO: ಸ್ವಂತ ಉಪಗ್ರಹ ಪಡೆಯಲು ಭಾರತೀಯ ಸೇನೆ ನಿರ್ಧಾರ: ಇಸ್ರೋ ಜೊತೆ ₹3000 ಕೋಟಿಯ ಒಪ್ಪಂದಕ್ಕೆ ಸಹಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇಸ್ರೋದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಇಲಾಖೆ "ವಾಯುಪಡೆಯ ಸಂಪರ್ಕ ಹಾಗೂ ಸಂವಹನ ಸಾಮರ್ಥ್ಯಗಳನ್ನು ಈ ಉಪಗ್ರಹದ ಸಹಾಯದಿಂದ ಮತ್ತಷ್ಟು ಪರಿಣಮಾಕಾರಿಯಾಗಿಸಬಹುದಾಗಿದೆ" ಎಂದು ತನ್ನ ಯೋಜನೆ ಬಗ್ಗೆ ತಿಳಿಸಿದೆ.

  • Share this:

ನವದೆಹಲಿ: ಸಂವಹನ ಸಾಮರ್ಥ್ಯವನ್ನು ಮತ್ತಷ್ಟು ಉತ್ತೇಜಿಸಲು ಸ್ವಂತ ಉಪಗ್ರಹವನ್ನು (Satellite) ಅಭಿವೃದ್ಧಿ ಪಡಿಸಿ ಕೊಡುವಂತೆ ರಕ್ಷಣಾ ಇಲಾಖೆ (Indian Army) ಇಸ್ರೋ (ISRO) ಜೊತೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಈ ಹಿಂದೆ ಸಂಪರ್ಕ ಜಾಲ ಒದಗಿಸಲು ಸೇನೆಗೆ ನೆರವಾಗಲೆಂದು ರಕ್ಷಣಾ ಇಲಾಖೆ ಜೊತೆ ಕೈಜೋಡಿಸಿ ಜಿಸ್ಯಾಟ್-7ಎ ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.


ಸ್ವಂತ ಉಪಗ್ರಹ ಪಡೆಯಲು ಸಜ್ಜಾದ ಸೇನೆ


ಭಾರತೀಯ ವಾಯುಸೇನೆ ಆಗಲಿ, ನೌಕಾಪಡೆಯಾಗಲಿ ಪ್ರಸ್ತುತ ಸೇನೆಗೆ ಮೀಸಲಾದ ಯಾವುದೇ ಉಪಗ್ರಹವನ್ನು ಹೊಂದಿರಲಿಲ್ಲ. ಹೀಗಾಗಿ ಎಲ್ಲದಕ್ಕೂ ಉಪಯೋಗವಾಗುವಂತೆ ₹3,000 ಕೋಟಿ ಮೌಲ್ಯದ GSAT 7B ಎಂಬ ಸ್ವಂತ ಉಪಗ್ರಹವನ್ನು ತನ್ನದಾಗಿಸಿಕೊಳ್ಳುವ ದೊಡ್ಡ ಯೋಜನೆಯನ್ನು ಇಲಾಖೆ ಕೈಗೆತ್ತಿಕೊಂಡಿದೆ.


ಬುಧವಾರ ಇಸ್ರೋದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ರಕ್ಷಣಾ ಇಲಾಖೆ "ವಾಯುಪಡೆಯ ಸಂಪರ್ಕ ಹಾಗೂ ಸಂವಹನ ಸಾಮರ್ಥ್ಯಗಳನ್ನು ಈ ಉಪಗ್ರಹದ ಸಹಾಯದಿಂದ ಮತ್ತಷ್ಟು ಪರಿಣಮಾಕಾರಿಯಾಗಿಸಬಹುದಾಗಿದೆ" ಎಂದು ತನ್ನ ಯೋಜನೆ ಬಗ್ಗೆ ತಿಳಿಸಿದೆ.


ಇದನ್ನೂ ಓದಿ: ISRO: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋಗೆ ಪ್ರಮುಖ ಯಶಸ್ಸು, SSLV-D2 ಉಡಾವಣೆ ಯಶಸ್ವಿ!


2026ಕ್ಕೆ ಸೇನೆಯ ಭಾಗವಾಗಲಿರುವ ಜಿಸ್ಯಾಟ್ 7B


ಐದು ಟನ್ ತೂಕದ ಭೂಸ್ಥಿರ ಉಪಗ್ರಹವನ್ನು ಇಸ್ರೋ ದೇಶೀಯವಾಗಿ ಅಭಿವೃದ್ಧಿಪಡಿಸಲಿದ್ದು, ಸೇನೆಯು 2026ರಲ್ಲಿ ಇಸ್ರೋ ವಿನ್ಯಾಸಗೊಳಿಸಿದ ಉಪಗ್ರಹವನ್ನು ಪಡೆಯುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸುಧಾರಿತ ಭದ್ರತಾ ವೈಶಿಷ್ಟ್ಯಗಳನ್ನು ಜಿಸ್ಯಾಟ್ 7B ಉಪಗ್ರಹ ಹೊಂದಿರಲಿದ್ದು, ನೆಲದ ಮೇಲೆ ನಿಯೋಜಿಸಲಾದ ಪಡೆಗಳ ಯುದ್ಧತಂತ್ರದ ಸಂವಹನ ಅಗತ್ಯತೆಗಳನ್ನು ಬೆಂಬಲಿಸುತ್ತದೆ ಮತ್ತು ವಾಯು ರಕ್ಷಣಾ ಶಸ್ತ್ರಾಸ್ತ್ರಗಳು, ಇತರ ಮಿಷನ್ ನಿರ್ಣಾಯಕ ಮತ್ತು ಅಗ್ನಿಶಾಮಕ ಬೆಂಬಲ ವೇದಿಕೆಗಳನ್ನು ಸಹ ಬೆಂಬಲಿಸುತ್ತದೆ ಎಂದು ಅಧಿಕಾರಿಗಳು ಹೊಸ ಉಪಗ್ರಹದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.


"ಸೇನೆಗಾಗಿ ಒಂದು ಮೀಸಲಾದ ಉಪಗ್ರಹವು ಬಹಳ ಹಿಂದಿನಿಂದಲೂ ಇದ್ದಂತಹ ಬೇಡಿಕೆಯಾಗಿತ್ತು. ಸೇನೆಯು ಇಲ್ಲಿಯವರೆಗೆ ವಾಯುಪಡೆಯ GSAT-7A ಉಪಗ್ರಹದ ಮೇಲೆ ಅವಲಂಬಿತವಾಗಿತ್ತು. ಮುಂದಿನ ದಿನಗಳಲ್ಲಿ GSAT 7B ಅನ್ನು ನಾವು ಬಳಸಬಹುದು" ಎಂದು ಏರ್ ಪವರ್ ಸ್ಟಡೀಸ್ ಕೇಂದ್ರದ ಮಹಾನಿರ್ದೇಶಕ ಏರ್ ಮಾರ್ಷಲ್ ಅನಿಲ್ ಚೋಪ್ರಾ (ನಿವೃತ್ತ) ಖುಷಿ ವ್ಯಕ್ತಪಡಿಸಿದರು.


3 ಲಕ್ಷ ಉದ್ಯೋಗ ಸೃಷ್ಟಿ


ಉಪಗ್ರಹದ ಹಲವು ಭಾಗಗಳು ಮತ್ತು ಉಪ-ಜೋಡಣೆಗಳು ಮತ್ತು ವ್ಯವಸ್ಥೆಗಳನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು) ಮತ್ತು ಸ್ಟಾರ್ಟ್-ಅಪ್‌ಗಳು ಸೇರಿದಂತೆ ಸ್ಥಳೀಯ ತಯಾರಕರಿಂದ ಪಡೆಯಲಾಗುವುದು, ಈ ಯೋಜನೆಯು ಮುಂದಿನ ಮೂರು ವರ್ಷಗಳಲ್ಲಿ ಸುಮಾರು 300,000 ಜನರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಸಚಿವಾಲಯ ಹೇಳಿದೆ.


ಇದನ್ನೂ ಓದಿ: ISRO Recruitment 2023: ಇಸ್ರೋದಲ್ಲಿ ಕೆಲಸ ಮಾಡಬೇಕಾ? ಬೆಂಗಳೂರಿನಲ್ಲೇ ಪೋಸ್ಟಿಂಗ್-ಈಗಲೇ Apply ಮಾಡಿ


ಮತ್ತೆರೆಡು ಮಹತ್ವದ ಒಪ್ಪಂದಗಳಿಗೆ ಸಹಿ


GSAT 7B ಒಪ್ಪಂದದ ಜೊತೆ ರಕ್ಷಣಾ ಇಲಾಖೆ ಸಶಸ್ತ್ರ ಪಡೆಗಳ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಚುರುಕುಗೊಳಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನೊಂದಿಗೆ ಸುಮಾರು ₹ 2,400 ಕೋಟಿ ಮೌಲ್ಯದ ಇತರ ಎರಡು ಒಪ್ಪಂದಗಳಿಗೆ ಸಹಿ ಹಾಕಿದೆ.


ಇವುಗಳಲ್ಲಿ ಮೊದಲನೆಯದು, ₹ 1,982 ಕೋಟಿ ಮೌಲ್ಯದ, ಪ್ರಾಜೆಕ್ಟ್ ಆಕಾಶತೀರ್ ಅನ್ನು ಕಾರ್ಯಗತಗೊಳಿಸುವುದು, ಇದು ಸ್ವಯಂಚಾಲಿತ ವಾಯು ರಕ್ಷಣಾ ನಿಯಂತ್ರಣ ಮತ್ತು ವರದಿ ಮಾಡುವ ವ್ಯವಸ್ಥೆಯಾಗಿದ್ದು ಅದು ಸೇನೆಯ ವಾಯು ರಕ್ಷಣಾ ಘಟಕಗಳನ್ನು ಸಮಗ್ರ ರೀತಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.


ಇದು ಭಾರತೀಯ ಸೇನೆಯ ಯುದ್ಧ ಪ್ರದೇಶಗಳಲ್ಲಿ ಕೆಳಮಟ್ಟದ ವಾಯುಪ್ರದೇಶದ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನೆಲ-ಆಧಾರಿತ ವಾಯು ರಕ್ಷಣಾ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.


BEL ನೊಂದಿಗೆ ₹412 ಕೋಟಿ ಮೌಲ್ಯದ ಎರಡನೇ ಒಪ್ಪಂದವು ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್‌ಗಳಿಗೆ ಸಾರಂಗ್ ಎಲೆಕ್ಟ್ರಾನಿಕ್ ಬೆಂಬಲ ವ್ಯವಸ್ಥೆಗಳಿಗಾಗಿ ನಿಯೋಜಿಸಲಾಗಿದೆ. ಒಟ್ಟಾರೆ ಈ ಮೂರು ಒಪ್ಪಂದಗಳು ಭಾರತೀಯ ಸೇನೆಗೆ ಮತ್ತಷ್ಟು ಬಲ ತುಂಬಲಿವೆ.

top videos
    First published: