14 ಸಾವಿರ ಅಡಿ ಎತ್ತರದ ಹಿಮ ಗಿರಿಯಲ್ಲಿ ಸಿಲುಕಿದ್ದ 111 ಪ್ರವಾಸಿಗರನ್ನು ರಕ್ಷಣೆ ಮಾಡಿದ ಸೇನಾ ಸಿಬ್ಬಂದಿ

ಹಿಮದಲ್ಲಿ ಸಿಲುಕಿದ್ದ ಪ್ರವಾಸಿಗರಿಗೆ ಸ್ಥಳೀಯರು ಸೈನಿಕರ ಮೂಲಕ ತಿಂಡಿ ಮತ್ತು ಟೀ ಪೂರೈಕೆ ಮಾಡಿ ಮಾನವಿಯತೆ ಮೆರೆದಿದ್ದಾರೆ.

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸೇನಾ ಸಿಬ್ಬಂದಿ.

ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಸೇನಾ ಸಿಬ್ಬಂದಿ.

 • Share this:
  ತವಾಂಗ್ (ಅರುಣಾಚಲ ಪ್ರದೇಶ): ಇಲ್ಲಿನ 14 ಸಾವಿರ ಅಡಿ ಎತ್ತರದ ಹಿಮಾವೃತ ಸೆಲಾ ಪಾಸ್ ಕಂದಕದ ನಡುವೆ ಸಿಲುಕಿದ್ದ 111 ಪ್ರವಾಸಿಗರನ್ನು ಸೇನಾ ಸಿಬ್ಬಂದಿ ಸತತ ಮೂರು ದಿನಗಳ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.

  ಹಿಮಚ್ಛಾದಿತ ಗಿರಿ ವೀಕ್ಷಿಸಲು ಶನಿವಾರ 111 ಪ್ರವಾಸಿಗರು 70 ವಾಹನಗಳಲ್ಲಿ ತೆರಳಿದ್ದರು. ಇಲ್ಲಿನ ಸೆಲಾ ಪಾಸ್​ ಬಳಿ ಬಂದಾಗ ಏಕಾಏಕಿ ಹಿಮ ಮಳೆ ಸುರಿದು ರಸ್ತೆ ಬಂದ್​ ಆಗಿವೆ. ಈ ವೇಳೆ ಉಷ್ಣಾಂಶ ಕೂಡ ಶೂನ್ಯ ಡಿಗ್ರಿ ತಲುಪಿತ್ತು. ಹಿಮದ ನಡುವೆ ಸಿಲುಕಿದ್ದ ಪ್ರವಾಸಿಗರು ಇದರಿಂದ ಕಂಗಾಲಾಗಿದ್ದರು.

  ಸೇನೆಯ ಎರಡು ತಂಡಗಳು ತಕ್ಷಣ ಕಾರ್ಯಾಚರಣೆ ಆರಂಭಿಸಿ ಅವರನ್ನು ರಕ್ಷಣೆ ಮಾಡಿವೆ. ಶನಿವಾರದಿಂದ ಆರಂಭವಾದ ರಕ್ಷಣಾ ಕಾರ್ಯಾಚರಣೆ ಎರಡು ದಿನ ರಾತ್ರಿ ಹಗಲು ಸತತವಾಗಿ ನಡೆದು, ಅಂತಿಮವಾಗಿ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

  ಇದನ್ನು ಓದಿ: ಹಬ್ಬಕ್ಕೆ ಗಂಡ ಹೊಸ ಬಟ್ಟೆ ಕೊಡಿಸಲಿಲ್ಲ ಎಂದು ಆರು ತಿಂಗಳ ಮಗುವನ್ನೇ ಹೊಡೆದು ಸಾಯಿಸಿದ ತಾಯಿ

  ಮಾನವಿಯತೆ ಮೆರೆದ ಸ್ಥಳೀಯರು

  ಹಿಮದಲ್ಲಿ ಸಿಲುಕಿದ್ದ ಪ್ರವಾಸಿಗರಿಗೆ ಸ್ಥಳೀಯರು ಸೈನಿಕರ ಮೂಲಕ ತಿಂಡಿ ಮತ್ತು ಟೀ ಪೂರೈಕೆ ಮಾಡಿ ಮಾನವಿಯತೆ ಮೆರೆದಿದ್ದಾರೆ.
  First published: