"ನೀವೆಲ್ಲೇ ಇದ್ದರೂ, ನಾವು ನಿಮ್ಮನ್ನು ರಕ್ಷಿಸುತ್ತೇವೆ": ಯೋಧರ ಅಸಾಮಾನ್ಯ ರಕ್ಷಣಾ ಕಾರ್ಯಕ್ಕೆ ಸಲಾಂ!

Precilla Olivia Dias
Updated:August 24, 2018, 9:42 PM IST
Precilla Olivia Dias
Updated: August 24, 2018, 9:42 PM IST
ನ್ಯೂಸ್​ 18 ಕನ್ನಡ

ತಿರುವನಂತಪುರಂ(ಆ.24): ಕೇರಳದಲ್ಲುಂಟಾದ ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮುಂದೇನು ಎಂದು ತಿಳಿಯದೆ ಕಂಗಾಲಾಗಿದ್ದಾರೆ. ಈ ನಡುವೆ ಕೇರಳದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ಭಾರೀ ವೈರಲ್​ ಆಗಿದೆ. ಇದನ್ನು ನೋಡಿದರೆ ನಿಮ್ಮ ಕಣ್ಣುಗಳೂ ತೇವಗೊಳ್ಳುವುದು ಖಚಿತ. ಅಷ್ಟಕ್ಕೂ ಈ ವಿಡಿಯೋಲ್ಲೇನಿದೆ ಅಂತೀರಾ? ಇಲ್ಲಿದೆ ವಿವರ

ಕೇರಳದ ಬೀಭತ್ಸ ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಹಲವಾರು ಜನರು ಸ್ವಯಂ ಪ್ರೇರಿತರಾಗಿ ಸಹಾಯ ಮಾಡುತ್ತಿದ್ದಾರೆ. ಈ ನಡುವೆ ಹಲವಾರು ಮಾನವೀಯತೆ ಮೆರೆಯುವ ವಿಡಿಯೋಗಳು ನಮ್ಮ ಮನ ಕಲುಕಿದೆ. ಆದರೆ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಭಾರತೀಯ ಸೇನೆ ರಕ್ಷಣಾ ಕಾರ್ಯ ನಡೆಸಲು ಧಾವಿಸಿದೆ. ಇದೀಗ ವೈರಲ್​ ಆಗಿರುವ ವಿಡಿಯೋದಲ್ಲಿ ಪ್ರವಾಹದ ಮಧ್ಯೆ ಸಿಲುಕಿದ್ದ ವಿಕಲಚೇತನ ವ್ಯಕ್ತಿಯೊಬ್ಬರನ್ನು ಭಾರತೀಯ ಸೇನೆಯ ಯೋಧರೊಬ್ಬರು ತಮ್ಮ ಭುಜದ ಮೇಲೆ ಹೊತ್ತುಕೊಂಡೇ, ಏಣಿಯ ಮೂಲಕ ಇಳಿದು ರಕ್ಷಿಸಿದ್ದಾರೆ.

ಆದರೆ ಈ ಘಟನೆ ಕೇರಳದ ಯಾವ ಪ್ರದೇಶದಲ್ಲಿ ನಡೆದಿದ್ದು ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಕಮೆಂಟ್​ನಲ್ಲಿ ಸಿಕ್ಕ ಮಾಹಿತಿ ಅನ್ವಯ ಇವರು ಭಾರತೀಯ ಸೇನೆಯ ಗಡ್​ವಾಲ್​ ರೈಫಲ್ಸ್ ರೆಜಿಮೆಂಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರೆಂದು ತಿಳಿದು ಬಂದಿದೆ.


Loading...


Wherever you are #wewillsaveyou #havefaith #IndianArmy #OpMadad #Keralafloods2018


A post shared by Indian Army (@indianarmy.adgpi) on


ವಿಡಿಯೋಗೆ ನೀಡಿರುವ ತಲೆ ಬರಹದಲ್ಲಿ "ನೀವೆಲ್ಲೇ ಇದ್ದರೂ, ನಾವು ನಿಮ್ಮನ್ನು ರಕ್ಷಿಸುತ್ತೇವೆ" ಎಂದು ಬರೆದಿದ್ದಾರೆ.

ಸರಿ ಸುಮಾರು 48 ಗಂಟೆಗಳ ಹಿಂದೆ ಶೇರ್​ ಮಾಡಲಾದ ಈ ವಿಡಿಯೋವನ್ನು ಈವರೆಗೆ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
First published:August 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626