Final Assault: ಭಾರತೀಯ ಸೇನಾ ಪಡೆಯಿಂದ ಉಗ್ರರ ಅಂತಿಮ ಬೇಟೆ: ಅಡಗಿ ಕುಳಿತವರ ವಿರುದ್ಧ ಅಂತಿಮ ಕಾರ್ಯಾಚರಣೆ

Army to go for final assault : ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿರುವ ಸೇನಾ ಪಡೆ ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿದೆ. ಉಗ್ರರ ವಿರುದ್ಧ ಅಂತಿಮ ಕಾರ್ಯಾಚರಣೆ ಯಾವುದೇ ಕ್ಷಣದಲ್ಲೂ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ.

ಸೋಮವಾರ ಕೂಂಬಿಂಗ್ ಕಾರ್ಯಚರಣೆ ನಡೆಸಿರುವ ಭಾರತೀಯ ಸೇನೆ.

ಸೋಮವಾರ ಕೂಂಬಿಂಗ್ ಕಾರ್ಯಚರಣೆ ನಡೆಸಿರುವ ಭಾರತೀಯ ಸೇನೆ.

  • Share this:
Army to go for final assault : ಜಮ್ಮು(Jammu) ಮತ್ತು ಕಾಶ್ಮೀರ(Kashmir)ದಲ್ಲಿ ಕಳೆದ 15 ದಿನಗಳಿಂದ ಉಗ್ರರ(Terrorist) ಅಟ್ಟಹಾಸ ಮಿತಿಮೀರಿದೆ. ಸಿಕ್ಕ ಸಿಕ್ಕವರನ್ನ ಗುಂಡಿಕ್ಕಿ ಕೊಂದು ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದರು. ಭಾರತೀಯ ಸೇನಾ(Army) ಪಡೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಡೆ ಕಾರ್ಯಾಚರಣೆ ನಡೆಸಿ ಉಗ್ರರ ಹುಟ್ಟಡಗಿಸಿದ್ದರು. ಕೆಲ ಉಗ್ರರು ಸೇನಾ ಪಡೆಯಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದರು. ಆದರೆ ಇಂದು ಜಮ್ಮು ಮತ್ತು ಕಾಶ್ಮೀರದ ಪೂಂಚ್​​(Poonch)ನ ಅರಣ್ಯಪ್ರದೇಶಗಳಲ್ಲಿ ಯೋಧರಿಗೆ ಹೆದರಿ ಕೆಲ ಉಗ್ರರು ಅಡಗಿ ಕೂತಿದ್ದಾರೆ. ಸೇನಾ ಪಡೆ ಅವರನ್ನು ಸದೆ ಬಡೆಯುವುದಕ್ಕೆ ಅಂತಿಮ ಕಾರ್ಯಾಚರಣೆ ಶುರು ಮಾಡಿದೆ. ಈಗಾಗಲೇ ಉಗ್ರರು ಅಡಗಿರುವ ಸ್ಥಳಗಳ(Places)ನ್ನು ಗುರುತಿಸಿ, ಸೇನಾ ಪಡೆ ಅವರನ್ನು ಸುತ್ತುವರೆದಿದೆ. ಸೇನಾ ಪಡೆಯ ಮಾತುಗಳನ್ನ ಕೇಳಿ ಶರಣಾದರೆ(surrender)ಅವರಿಗೆ ಉಳಿಗಾಲ. ಇಲ್ಲವಾದರೆ ಅವರನ್ನು ಸದೆ ಬಡೆಯಲು ಭಾರತೀಯ ಸೇನಾ ಪಡೆ ತುದಿಗಾಲಿನಲ್ಲಿ ನಿಂತಿದೆ. ಉಗ್ರರನ್ನು ಕೊಂದು ಮತ್ತೆ ಕಾಶ್ಮೀರದಲ್ಲಿ ಶಾಂತಿ(Peace) ನೆಲಸುವಂತೆ ಮಾಡಲು ಸಜ್ಜಾಗಿದ್ದಾರೆ.

ರಣಹೇಡಿಗಳಂತೆ ಅಡಗಿ ಕೂತಿರುವ ಉಗ್ರರು

ಕಾಶ್ಮೀರದ ಪೂಂಚ್​ ಅರಣ್ಯ ಪ್ರದೇಶದಲ್ಲಿ ನಾಲ್ಕರಿಂದ ಆರು ಮಂದಿ ಭಯೋತ್ಪಾದಕರು ಅಡಗಿ ಕುಳಿತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ವಿಶೇಷ ಸೇನಾ ಪಡೆ ಉಗ್ರರನ್ನು ಸುತ್ತುವರೆದಿದೆ. ಭಯೋತ್ಪಾದಕರ ಚಲನವಲನ ಪತ್ತೆ ಹಚ್ಚುವುದಕ್ಕಾಗಿ ಡ್ರೋನ್​ ಕ್ಯಾಮರಾಗಳನ್ನ ಬಳಸಲಾಗುತ್ತಿದೆ. ಎಲ್ಲ ಸಿದ್ಧತೆಗಳನ್ನ ಮಾಡಿಕೊಂಡಿರುವ ಸೇನಾ ಪಡೆ ಉಗ್ರರ ವಿರುದ್ಧ ತೊಡೆ ತಟ್ಟಿ ನಿಂತಿದೆ. ಉಗ್ರರ ವಿರುದ್ಧ ಅಂತಿಮ ಕಾರ್ಯಾಚರಣೆ ಯಾವುದೇ ಕ್ಷಣದಲ್ಲೂ ಆರಂಭವಾಗಬಹುದು ಎಂದು ಹೇಳಲಾಗುತ್ತಿದೆ. ಈ ಕಾರ್ಯಾಚರಣೆ  ಪೂರ್ಣಗೊಳ್ಳುವವರೆಗೂ ಮೆಂಧರ್​ನಲ್ಲಿರುವ ಸ್ಥಳೀಯರು ತಮ್ಮ ಮನೆ ಬಿಟ್ಟು ಹೊರಗೆ ಬಾರದಂತೆ ಆದೇಶ ನೀಡಲಾಗಿದೆ.

ಇದನ್ನು ಓದಿ : ಮತ್ತೆ ಕಾಶ್ಮೀರದಲ್ಲಿ ಭಯೋತ್ಪಾದಕರಿಂದ ದಾಳಿ; 5 ಯೋಧರು ಹುತಾತ್ಮ, ಇಬ್ಬರು ಉಗ್ರರ ಹತ್ಯೆ

ಪೂಂಚ್​ ಪ್ರದೇಶದಲ್ಲಿ ಗುಂಡಿನ ಮೊರೆತ

ಸಾರ್ವಜನಿಕರು ಮನೆಗಳಿಂದ ಹೊರ ಬಾರದಂತೆ ಸಂದೇಶ ರವಾನಿಸುತ್ತಿದ್ದಂತೆ, ಪೂಂಚ್​ ಅರಣ್ಯದಲ್ಲಿ ಅಡಗಿರುವ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿ ಕ್ರೌರ್ಯ ಮೆರೆದಿದ್ದಾರೆ. ಶಂಕಿತ ಸ್ಥಳಗಳಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ಆರಂಭಿಸಿದೆ. ಇದಕ್ಕೂ ಮುನ್ನ ಯಾವುದೇ ಭಯೋತ್ಪಾದಕರು ತಪ್ಪಿಸಿಕೊಳ್ಳಲಾಗದಂತೆ ಅಲ್ಲಿರುವ ಮುಖ್ಯ ರಸ್ತೆಗಳನ್ನ ಬ್ಯಾರಿಕೇಡ್​ ಹಾಕಿ ಬಂದ್​ ಮಾಡಲಾಗಿದೆ. ಇನ್ನೂ ಜಮ್ಮು- ರಾಜೌರಿ ಹೆದ್ದಾರಿಯಲ್ಲಿ ಮೆಂಧರ್​​ ಮತ್ತು ಥಾನಮಂಡಿ ನಡುವಿನ ಸಂಚಾರ ನಿರ್ಬಂಧ ಐದನೇ ದಿನವೂ ಮುಂದುವರೆದಿದೆ.

ಪೂಂಚ್​​ನಲ್ಲಿ ಸೇನಾ ಪಡೆ ಫುಲ್​ ಅಲರ್ಟ್​

ಕಳೆದ ಕೆಲ ದಿನಗಳಿಂದ ನಡೆದ ಅಟ್ಯಾಕ್​ ಹಾಗೂ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ಒಂಬತ್ತು ಯೋಧರು ಹುತಾತ್ಮರಾಗಿದ್ದಾರೆ. ಇನ್ನೂ ಗುಂಡಿನ ಚಕಮಕಿಯಲ್ಲಿ ಎಷ್ಟು ಉಗ್ರರು ಬಲಿಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿಲ್ಲ. ಭಯೋತ್ಪಾದಕರ ಯಾವುದೇ ಮೃತದೇಹ ಪತ್ತೆಯಾಗದ ಹಿನ್ನಲೆ ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. 8 ರಿಂದ 9 ಕಿ .ಮೀ ದಟ್ಟ ಅರಣ್ಯದಲ್ಲಿ ಬೃಹತ್​ ಕೂಂಬಿಂಗ್​ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನು ಓದಿ : ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಉಗ್ರರು ಫಿನಿಶ್; ನಾಲ್ಕು ದಿನಗಳ ನಂತರ ಮೃತ ಸೈನಿಕರ ದೇಹ ಪತ್ತೆ!

ನುಸುಳುಕೋರರಿಗೆ ಪಾಕ್​ ಹಿರಿಯ ಕಮಾಂಡೋಗಳಿಂದ ಟ್ರೇನಿಂಗ್​!

ಕಳೆದ 8 ದಿನಗಳಲ್ಲಿ ಗಡಿಯಲ್ಲಿ ಸೇನೆಯ ಕಣ್ಣು ತಪ್ಪಿಸಿ ಒಳನುಸುಳುವಲ್ಲಿ ಭಯೋತ್ಪಾದಕರು ಯಶಸ್ವಿಯಾಗಿದ್ದಾರೆ. ಈ ಉಗ್ರರಿಗೆಲ್ಲ ಪಾಕಿಸ್ತಾನ ಸೇನೆಯ ಹಿರಿಯ ಕಮಾಂಡೋಗಳು ತರಬೇತಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇನ್ನೂ ಈ ಉಗ್ರರ ಗುಂಪಿನಲ್ಲಿ ಪಾಕಿಸ್ತಾನ ಸೈನಿಕರು ಹಾಗೂ ಹಿರಿಯ ಕಮಾಂಡೋಗಳು ಇರಬಹುದು ಎಂದು ಸೇನಾ ಅಧಿಕಾರಿಯೊಬ್ಬರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೂಡಲೇ ಆ ಉಗ್ರರನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ.
Published by:Vasudeva M
First published: