ಫೇಸ್​ಬುಕ್, ಇನ್​ಸ್ಟಾಗ್ರಾಂ, ಪಬ್​ಜಿ ಸೇರಿ 89 ಆ್ಯಪ್​ಗಳನ್ನು ಡಿಲೀಟ್ ಮಾಡಿ; ಭಾರತೀಯ ಸೈನಿಕರಿಗೆ ಆದೇಶ

Indian Army: ಫೇಸ್​ಬುಕ್, ಇನ್​ಸ್ಟಾಗ್ರಾಂ, ಟಿಕ್​ಟಾಕ್, ಟ್ರೂಕಾಲರ್, ಹೈಕ್, ಪಬ್​ಜಿ, ಶೇರ್​ಇಟ್ ಸೇರಿದಂತೆ 89 ಆ್ಯಪ್​ಗಳನ್ನು ಮೊಬೈಲ್​ನಿಂದ ಡಿಲೀಟ್ ಮಾಡುವಂತೆ ಭಾರತೀಯ ಸೇನೆ ತನ್ನ ಸೈನಿಕರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಫೇಸ್​ಬುಕ್

ಫೇಸ್​ಬುಕ್

  • Share this:
ನವದೆಹಲಿ (ಜು. 9): ಖಾಸಗಿ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಕಾರಣಕ್ಕೆ ಚೀನಾದ 59 ಮೊಬೈಲ್ ಆ್ಯಪ್​ಗಳನ್ನು ಭಾರತ ಬ್ಯಾನ್ ಮಾಡಿತ್ತು. ಇದೀಗ ದೇಶ ಕಾಯುವ ಯೋಧರಿಂದಾಗಿ ಹಲವು ಮಾಹಿತಿಗಳು ಸೋರಿಕೆಯಾಗಬಹುದು ಎಂಬ ಕಾರಣಕ್ಕೆ ಫೇಸ್​ಬುಕ್, ಇನ್​ಸ್ಟಾಗ್ರಾಂ, ಟಿಕ್​ಟಾಕ್, ಟ್ರೂಕಾಲರ್, ಹೈಕ್, ಪಬ್​ಜಿ ಸೇರಿದಂತೆ 89 ಆ್ಯಪ್​ಗಳನ್ನು ಮೊಬೈಲ್​ನಿಂದ ಡಿಲೀಟ್ ಮಾಡುವಂತೆ ಭಾರತೀಯ ಸೇನೆ ತನ್ನ ಸೈನಿಕರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಬುಧವಾರ ಈ ಆದೇಶವನ್ನು ಹೊರಡಿಸಲಾಗಿದ್ದು, ಡೇಟಿಂಗ್ ಆ್ಯಪ್​ಗಳಾದ ಟಿಂಡರ್, ಕೋಚ್ ಸರ್ಫಿಂಗ್ ಹಾಗೂ ನ್ಯೂಸ್​ ಆ್ಯಪ್​ಗಳಾದ ಡೈಲಿ ಹಂಟ್ ಮುಂತಾದ ಆ್ಯಪ್​ಗಳನ್ನು ಕೂಡ ಮೊಬೈಲ್​ನಿಂದ ಡಿಲೀಟ್ ಮಾಡಲು ಸೂಚಿಸಲಾಗಿದೆ ಎಂದು ಎಎನ್​ಐ ವರದಿ ಮಾಡಿದೆ. ಜುಲೈ 15ಕ್ಕೂ ಮೊದಲು ತಮ್ಮ ಮೊಬೈಲ್‌ ಫೋನ್‌ನಲ್ಲಿರುವ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಖಾತೆ ಸೇರಿ 89 ಆ್ಯಪ್​ಗಳನ್ನು ಡಿಲೀಟ್‌ ಮಾಡುವಂತೆ ತನ್ನ ಸಿಬ್ಬಂದಿಗೆ ಭಾರತೀಯ ಸೇನೆ ಆದೇಶ ನೀಡಿದೆ.

ಇದನ್ನೂ ಓದಿ: Terror Attack: ಜಮ್ಮು-ಕಾಶ್ಮೀರದ ಬಿಜೆಪಿ ನಾಯಕ ಮತ್ತವರ ಕುಟುಂಬದವರನ್ನು ಹತ್ಯೆ ಮಾಡಿದ ಉಗ್ರರು


ಇದೀಗ ಸೈನಿಕರು ಬಳಸದಂತೆ ನಿಷೇಧ ಹೇರಲಾಗಿರುವ 89 ಆ್ಯಪ್​ಗಳಲ್ಲಿ ಭಾರತ ಈಗಾಗಲೇ ಬ್ಯಾನ್ ಮಾಡಿರುವ 59 ಚೀನೀ ಆ್ಯಪ್​ಗಳು ಕೂಡ ಸೇರಿವೆ. ಬಹುತೇಕ ಎಲ್ಲರೂ ಬಳಸುವ ಶೇರ್​ಇಟ್, ವಿ-ಚಾಟ್, ಎಂಐ ವಿಡಿಯೋ ಕಾಲ್, ಟಿಕ್​ಟಾಕ್​ ಆ್ಯಪ್​ಗಳನ್ನು ಕೂಡ ಬಳಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಆ್ಯಪ್​ಗಳ ಡಾಟಾ ಮೂಲಕ ಸೇನಾ ಸಿಬ್ಬಂದಿಯ ಖಾಸಗಿ ಮಾಹಿತಿ ಮಾತ್ರವಲ್ಲದೆ ದೇಶದ ಆಂತರಿಕ ಮಾಹಿತಿ ಕೂಡ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ಸರ್ಕಾರ ಈ ರೀತಿಯ ಕಟ್ಟೆಚ್ಚರ ವಹಿಸಿದೆ.
Published by:Sushma Chakre
First published: