ಲಡಾಖ್​ನಲ್ಲಿ ಭಾರತದ ಸೇನೆ ಮೇಲೆ ಚೀನಾ ಗುಂಡಿನ ದಾಳಿ; ಓರ್ವ ಅಧಿಕಾರಿ, ಇಬ್ಬರು ಸೈನಿಕರ ಸಾವು

ಗಾಲ್ವನ್ ​ ಕಣಿವೆ ಭಾಗದಲ್ಲಿ ನಿನ್ನೆ ರಾತ್ರಿ ಚೀನಾ ಹಾಗೂ ಭಾರತೀಯ ಸೇನೆ ಮುಖಾಮುಖಿ ಆಗಿದೆ. ಈ ವೇಳೆ ಚೀನಾ ಗುಂಡಿನ ದಾಳಿ ನಡೆಸಿದೆ. ಸೇನೆಯ ಹಿರಿಯ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಿಕ್ಕಿಂನಲ್ಲಿರುವ ಭಾರತ ಮತ್ತು ಚೀನಾದ ಗಡಿಭಾಗ

ಸಿಕ್ಕಿಂನಲ್ಲಿರುವ ಭಾರತ ಮತ್ತು ಚೀನಾದ ಗಡಿಭಾಗ

 • Share this:
  ಲಡಾಕ್​ (ಜೂ.16): ಗಡಿ ಭಾಗದಲ್ಲಿ ಭಾರತದ ವಿರುದ್ಧ ಹಗೆ ಸಾಧಿಸಲು ಚೀನಾ ಒಂದಿಲ್ಲೊಂದು ಕುಂತಂತ್ರವನ್ನು ಹೆಣೆಯುತ್ತಲೇ ಇದೆ. ಇತ್ತೀಚೆಗಷ್ಟೇ ಗಡಿ ಭಾಗದಲ್ಲಿ ಸೈನಿಕರನ್ನು ಹೆಚ್ಚಿಸುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ಚೀನಾ, ಈಗ ಗುಂಡಿನ ದಾಳಿ ನಡೆಸಿದೆ. ಈ ವೇಳೆ ಭಾರತೀಯ ಸೇನೆಯ ಓರ್ವ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ.

  ಗಾಲ್ವನ್ ​ ಕಣಿವೆ ಭಾಗದಲ್ಲಿ ನಿನ್ನೆ ರಾತ್ರಿ ಚೀನಾ ಹಾಗೂ ಭಾರತೀಯ ಸೇನೆ ಮುಖಾಮುಖಿ ಆಗಿದೆ. ಈ ವೇಳೆ ಚೀನಾ ಗುಂಡಿನ ದಾಳಿ ನಡೆಸಿದೆ. ಸೇನೆಯ ಹಿರಿಯ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಚೀನಾ ಹಾಗೂ ಭಾರತದ ಹಿರಿಯ ಸೇನಾ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.

  ಲಡಾಖ್​ನ ಪ್ಯಾಂಗೋಂಗ್ ಟ್ಸೋ ಸರೋವರದ ಬಳಿ ಇರುವ ಎಲ್​ಎಸಿ ಗಡಿಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಚೀನಾ ಸೈನಿಕರು ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆರೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರೂ ಕೂಡ ಪ್ರತಿರೋಧ ತೋರುತ್ತಿದ್ದಾರೆ. ಸರೋವರದ ಬಳಿಯ ಗಡಿಭಾಗದ ಒಂದು ಆಯಕಟ್ಟಿನ ಜಾಗದಲ್ಲಿ ಭಾರತ ರಸ್ತೆ ನಿರ್ಮಿಸುತ್ತಿದೆ. ಹಾಗೆಯೇ, ಗಾಲ್ವನ್ ಕಣಿವೆಯಲ್ಲಿ ಡರ್ಬುಕ್-ಶಯೋಕ್-ದೌಲತ್ ಬೇಗ್ ಓಲ್ಡೀ ರಸ್ತೆಯನ್ನು ಸಂಪರ್ಕಿಸುವ ಮತ್ತೊಂದು ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಇದು ಚೀನೀಯರ ಕೆಂಗಣ್ಣಿಗೆ ಕಾರಣವಾಗಿದೆ. ಈ ರಸ್ತೆ ನಿರ್ಮಾಣ ಕಾರ್ಯಕ್ಕೆ ಚೀನೀಯರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ.

  ಚೀನಾ 2,500 ಸೇನಾ ತುಕಡಿಗಳನ್ನ ನಿಯೋಜಿಸಿದೆ. ಮದ್ದುಗುಂಡು, ಶಸ್ತ್ರಾಸ್ತ್ರಗಳನ್ನ ಗಡಿಭಾಗದಲ್ಲಿ ಶೇಖರಿಸುತ್ತಿದೆ. ಭಾರತ ಕೂಡ ಹೆಚ್ಚುವರಿ ತುಕಡಿಗಳನ್ನು ಲಡಾಖ್ ಗಡಿಭಾಗಕ್ಕೆ ನಿಯೋಜಿಸುತ್ತಿದೆ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಎರಡೂ ದೇಶಗಳ ಮಧ್ಯೆ ಯುದ್ಧದ ಕಾರ್ಮೋಡ ಕವಿಯಬಹುದು ಎಂದು ಹಲವರು ಎಚ್ಚರಿಸಿದ್ದಾರೆ. ಕೊರೋನಾ ಸಂಕಷ್ಟದಲ್ಲಿರುವಾಗ ಸಣ್ಣ ಮಟ್ಟದ ಯುದ್ಧವೂ ದುಬಾರಿಯಾದೀತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
  First published: