ಸೇನೆ ಸಂಪ್ರದಾಯಸ್ಥವಾಗಿದ್ದು, ಇಲ್ಲಿ ಸಲಿಂಗ ಪ್ರೇಮಕ್ಕೆ ಅವಕಾಶವಿಲ್ಲ; ಜ. ಬಿಪಿನ್​ ರಾವತ್​​

ನಾವು ದೇಶದ ಕಾನೂನಿಗಿಂತ ದೊಡ್ಡವರಲ್ಲ. ಆದರೆ, ಭಾರತೀಯ ಸೇನೆಗೆ ಸೇರಿದಾಗ ಅಲ್ಲಿ ನಿಮಗೆ ನೀಡಿರುವ ಕೆಲವು ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಿಲ್ಲ. ಕೆಲವು ವಿಷಯಗಳು ನಮಗೆ ಭಿನ್ನವಾಗಿರುತ್ತದೆ

Seema.R | news18
Updated:January 10, 2019, 4:49 PM IST
ಸೇನೆ ಸಂಪ್ರದಾಯಸ್ಥವಾಗಿದ್ದು, ಇಲ್ಲಿ ಸಲಿಂಗ ಪ್ರೇಮಕ್ಕೆ ಅವಕಾಶವಿಲ್ಲ; ಜ. ಬಿಪಿನ್​ ರಾವತ್​​
ಬಿಪಿನ್​ ರಾವತ್​​​​​​
Seema.R | news18
Updated: January 10, 2019, 4:49 PM IST
ನವದೆಹಲಿ (ಜ.10):  ಸೇನೆಯಲ್ಲಿ ಯಾವುದೇ ಕಾರಣಕ್ಕೂ ಸಲಿಂಗ ಪ್ರೇಮಕ್ಕೆ ಅವಕಾಶವನ್ನು ನೀಡುವುದಿಲ್ಲ ಎಂದು ಸೇನಾ ಮುಖಸ್ಥ ಜ. ಬಿಪಿನ್​ ರಾವತ್​ ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಹುಟ್ಟು ಹಾಕಿದೆ.

ಕಳೆದ ವರ್ಷವಷ್ಟೇ ಸಲಿಂಗಪ್ರೇಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್​ ತೀರ್ಪು ನೀಡಿದೆ. ಆದರೆ, ಸೇನಾ ಮುಖ್ಯಸ್ಥರು ಈ ಚಟುವಟಿಕೆಗೆ ಸೇನೆಯಲ್ಲಿ ಅವಕಾಶವಿಲ್ಲ ಎಂದು ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾವು ದೇಶದ ಕಾನೂನಿಗಿಂತ ದೊಡ್ಡವರಲ್ಲ. ಆದರೆ, ಭಾರತೀಯ ಸೇನೆಗೆ ಸೇರಿದಾಗ ಅಲ್ಲಿ ನಿಮಗೆ ನೀಡಿರುವ ಕೆಲವು ಸ್ವಾತಂತ್ರ್ಯವನ್ನು ಅನುಭವಿಸಲು ಸಾಧ್ಯವಿಲ್ಲ. ಕೆಲವು ವಿಷಯಗಳು ನಮಗೆ ಭಿನ್ನವಾಗಿರುತ್ತದೆ ಎಂದು ಅವರು ಹೇಳಿಕದರು.

ಸುಪ್ರೀಂ ಕೋರ್ಟ್​ ಪಂಚ ಸದಸ್ಯ ಪೀಠ ಸೆಕ್ಷನ್ 377ನ್ನು ತೆಗೆದುಹಾಕಿ ಸಲಿಂಗ ಪ್ರೇಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು.

ಇದನ್ನು ಓದಿ: ಕುತೂಹಲ ಮೂಡಿಸಿದ ಪ್ರಕಾಶ್ ರೈ-ಕೇಜ್ರಿವಾಲ್ ಭೇಟಿ; ರೈ ಬೆನ್ನಿಗೆ ಆಮ್ ಆದ್ಮಿ?

ಇನ್ನು ಸುಪ್ರೀಂಕೋರ್ಟ್​ ತೀರ್ಪಿನ ಹೊರತಾಗಿಯೂ ಸೇನೆಯಲ್ಲಿ ಸಲಿಂಗ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿರುವುದರ ಕುರಿತು ಮಾತನಾಡಿದ ಅವರು, ಸೇನೆ ತುಂಬಾ ಸಂಪ್ರದಾಯಿಕವಾದದ್ದು. ನಾವು ಇಲ್ಲಿ ಯಾವುದೇ ಕಾರಣಕ್ಕೆ ಇಂತಹ ಅಪರಾಧಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಇದೇ ವೇಳೆ ಅವರು ಸೇನೆ ಕುರಿತು ಮಾತನಾಡಿದ ಅವರು, ನಾವು ಚೀನಾ ಮತ್ತು ಪಾಕಿಸ್ತಾನ ಗಡಿಯಲ್ಲಿ ಬಹಳ ಎಚ್ಚರಿಕೆಯಿಂದ ಇದ್ದು, ಶಾಂತಿ ಕಾಪಾಡುವ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.
Loading...

First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ